ಗೂಗಲ್‌ನಿಂದ ಮಹತ್ವಾಕಾಂಕ್ಷಿ ಯೋಜನೆ; 1,000 ಭಾಷೆ ಬೆಂಬಲಿಸುವ AI ಮಾಡೆಲ್‌ಗೆ ಸಿದ್ಧತೆ

|

ಗೂಗಲ್‌ ಇತರೆ ಕಂಪೆನಿಗಳಿಂತ ಭಿನ್ನವಾಗಿ ಗ್ರಾಹಕರಿಗೆ ಸೇವೆ ನೀಡುತ್ತಾ ಬರುತ್ತಿದೆ. ಈ ಕಾರಣಕ್ಕಾಗಿಯೇ ಗೂಗಲ್ ಎಲ್ಲಾ ಕಂಪೆನಿಗಳಿಗೂ ಒಂದು ಕೈ ಮೇಲೆಯೇ ಇದೆ. ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಗೂಗಲ್‌ ಮಾಹಿತಿ ನೀಡಿದೆ. ಅದುವೇ 1,000 ಜಾಗತಿಕ ಭಾಷೆಗಳನ್ನು ಬೆಂಬಲಿಸುವ AI ಯುನಿವರ್ಸಲ್ ಸ್ಪೀಚ್ ಮಾಡೆಲ್.

ಗೂಗಲ್‌

ಹೌದು, ಗೂಗಲ್‌ ತನ್ನ ಇತರೆ ಸೇವೆಗಳ ಜೊತೆಗೆ ಈ ಯೂನಿವರ್ಸಲ್ ಸ್ಪೀಚ್ ಮಾಡೆಲ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಈಗಾಗಲೇ ಗೂಗಲ್‌ ಈ ಸಂಬಂಧ ಕೆಲವು ಮಹತ್ವದ ಕೆಲಸಗಳನ್ನು ಮಾಡಲು ಮುಂದಾಗಿದೆ. ಅದರಂತೆ 400 ಕ್ಕೂ ಹೆಚ್ಚು ಭಾಷೆಗಳಲ್ಲಿ ತರಬೇತಿ ಪಡೆದಿರುವ ಯುನಿವರ್ಸಲ್ ಸ್ಪೀಚ್ ಮಾಡೆಲ್ (USM) ಅನ್ನು ಅಭಿವೃದ್ಧಿಪಡಿಸಿದ್ದು, ಇದು ಸ್ಪೀಚ್ ಮಾಡೆಲ್‌ನಲ್ಲಿ ಕಂಡುಬರುವ ಅತಿ ದೊಡ್ಡ ಭಾಷಾ ವ್ಯಾಪ್ತಿಯಾಗಿರಲಿದೆ.

 AI ಸ್ಪೀಚ್ ಮಾಡೆಲ್‌

ಇನ್ನು ವಿಶ್ವದ 1,000 ಕ್ಕೂ ಹೆಚ್ಚು ಮಾತನಾಡುವ ಅಥವಾ ಜನಪ್ರಿಯ ಭಾಷೆಗಳನ್ನು ಬೆಂಬಲಿಸುವ ಹೊಸ AI ಸ್ಪೀಚ್ ಮಾಡೆಲ್‌ ಅನ್ನು ಅಭಿವೃದ್ಧಿಪಡಿಸಲು ಗೂಗಲ್‌ ಮುಂದಾಗಿದೆ. ಹಾಗೆಯೇ ವಿಶ್ವಾದ್ಯಂತ ಸಹಾಯಕವಾಗುವ ತಂತ್ರಜ್ಞಾನಗಳನ್ನು ಸ್ಕೇಲಿಂಗ್ ಮಾಡಲು ಚರ್ಚಿಸಲಾಗುತ್ತಿದೆ ಎಂದು ಗೂಗಲ್‌ನ ಹಿರಿಯ ವಿಪಿ ಜೆಫ್ ಡೀನ್ ಅವರು ಬ್ಲಾಗ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಯುನಿವರ್ಸಲ್ ಸ್ಪೀಚ್ ಮಾಡೆಲ್

ಈ ಗುರಿಯಯನ್ನು ತಲುಪುವತ್ತ ಮೊದಲ ಹೆಜ್ಜೆಯಾಗಿ ಕಂಪೆನಿಯು ಯುನಿವರ್ಸಲ್ ಸ್ಪೀಚ್ ಮಾಡೆಲ್ (USM) ಅನ್ನು ಅಭಿವೃದ್ಧಿಪಡಿಸಿದೆ. ಈ ಯುನಿವರ್ಸಲ್ ಸ್ಪೀಚ್ ಮಾಡೆಲ್ 400 ಕ್ಕೂ ಹೆಚ್ಚು ಭಾಷೆಗಳಲ್ಲಿ ತರಬೇತಿ ಪಡೆದಿದೆ. ಹಾಗೆಯೇ ಇದು ಸ್ಪೀಚ್ ಮಾಡೆಲ್‌ನಲ್ಲಿ ಕಂಡುಬರುವ ಅತಿದೊಡ್ಡ ಭಾಷಾ ಕವರೇಜ್ ಆಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಇನ್ನಷ್ಟು ವಿಸ್ತರಿಸುವ ಕೆಲಸವನ್ನೂ ಸಹ ಮಾಡಲಾಗುತ್ತಿದೆ. ಈ ಮೂಲಕ ಜಗತ್ತಿನಾದ್ಯಂತ ಗೂಗಲ್‌ ಸಮುದಾಯಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಜಗತ್ತಿನಲ್ಲಿ 7,000 ಕ್ಕೂ ಹೆಚ್ಚು ಭಾಷೆ ಬಳಕೆ

ಜಗತ್ತಿನಲ್ಲಿ 7,000 ಕ್ಕೂ ಹೆಚ್ಚು ಭಾಷೆ ಬಳಕೆ

ಜಗತ್ತಿನಲ್ಲಿ ಸರಿಸುಮಾರು 7,000 ಕ್ಕೂ ಹೆಚ್ಚು ಭಾಷೆಯಲ್ಲಿ ಜನರು ಮಾತನಾಡುತ್ತಾರೆ. ಆದರೆ ಕೆಲವು ಭಾಷೆಗಳು ಮಾತ್ರ ಇಂದು ಆನ್‌ಲೈನ್‌ನಲ್ಲಿ ಬಳಕೆಯಲ್ಲಿವೆ. ಇದಕ್ಕೆ ಪ್ರಮುಖ ಕಾರಣ ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಹೇಗೆ ಸಂವಹನ ನಡೆಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ಪೀಚ್‌ ಮಾಡೆಲ್ ತರಬೇತಿಯಲ್ಲಿ ಬಳಸಲಾಗುವ ಸಾಂಪ್ರದಾಯಿಕ ವಿಧಾನಗಳು ವಿಫಲವಾಗಿದೆಎಂದಿದ್ದಾರೆ.

 ಸಾಂಪ್ರದಾಯಿಕ ಮಾಡೆಲ್‌

ಹಾಗೆಯೇ ಸಾಂಪ್ರದಾಯಿಕ ಮಾಡೆಲ್‌ಗಳು ಕೆಲವು ನ್ಯೂನತೆಗಳನ್ನು ಹೊಂದಿವೆ ಎಂದಿದ್ದಾರೆ. ಈ ಕಾರಣಕ್ಕಾಗಿಯೇ ಪ್ರಪಂಚದ ಮಾಹಿತಿಯು ಎಲ್ಲಾ ಕಡೆ ಪ್ರವೇಶ ಪಡೆಯುವಂತೆ ಮಾಡಲು 1,000 ಭಾಷೆಗಳ ಮಾಡೆಲ್ ಅನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಸಮುದಾಯದ ಶತಕೋಟಿ ಜನರು ಡಿಜಿಟಲ್ ಜಗತ್ತನ್ನು ಪ್ರವೇಶ ಮಾಡಬಹುದು ಎಂಬುದು ಗೂಗಲ್‌ನ ಆಶಯ ಎಂದು ವಿಪಿ ಜೆಫ್ ಡೀನ್ ಹೇಳಿದ್ದಾರೆ.

ಸಮಯ ತೆಗೆದುಕೊಳ್ಳಬಹುದು

ಸಮಯ ತೆಗೆದುಕೊಳ್ಳಬಹುದು

ಈ ದೊಡ್ಡ ಯೋಜನೆಯು ಪ್ರಪಂಚದಾದ್ಯಂತ ವಿಸ್ತಾರವಾಗುವುದರಿಂದ ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಇದರ ನಡುವೆ ಗೂಗಲ್ ಈಗಾಗಲೇ ತನ್ನ ದಾರಿಯಲ್ಲಿ ಸಾಗುತ್ತಿದೆ. ಗೂಗಲ್‌ ಇತ್ತೀಚೆಗೆ ಆಫ್ರಿಕಾದ ಸಂಶೋಧಕರು ಮತ್ತು ಸಂಸ್ಥೆಗಳೊಂದಿಗೆ ಕೈಜೋಡಿದ್ದು, 9 ಆಫ್ರಿಕಾದ ಭಾಷೆಗಳಿಗೆ ಧ್ವನಿ ಟೈಪಿಂಗ್ ಅನ್ನು ಪ್ರಾರಂಭ ಮಾಡಿದೆ. ಹಾಗೆಯೇ ಪ್ರಾದೇಶಿಕ ಭಾಷೆಗಳು ಮತ್ತು ಉಪ ಭಾಷೆಗಳಲ್ಲಿ ಆಡಿಯೊ ಮಾಡೆಲ್‌ಗಳನ್ನು ಸಂಗ್ರಹಿಸುವ ಉದ್ದೇಶದಿಂದ ದಕ್ಷಿಣ ಏಷ್ಯಾದ ಸ್ಥಳೀಯ ಸರ್ಕಾರಗಳು, ಎನ್‌ಜಿಒಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಗೂಗಲ್‌ ಕೆಲಸ ಮಾಡುತ್ತಿದೆ.

ಈ ಕೆಲಸಕ್ಕೆ ಕೈ ಹಾಕಿರುವುದು ಗೂಗಲ್‌ ಒಂದೇ ಅಲ್ಲ

ಈ ಕೆಲಸಕ್ಕೆ ಕೈ ಹಾಕಿರುವುದು ಗೂಗಲ್‌ ಒಂದೇ ಅಲ್ಲ

ಈ ರೀತಿಯ ಹೊಸ AI ಭಾಷಾ ಮಾಡೆಲ್ ಅನ್ನು ಆವಿಷ್ಕರಿಸುವ ಕೆಲಸ ಮಾಡುತ್ತಿರುವುದು ಗೂಗಲ್‌ ಮಾತ್ರವಲ್ಲ. ಬದಲಾಗಿ, ಮೊಜಿಲ್ಲಾ ಕಾಮನ್ ವಾಯ್ಸ್ ಸಹಭಾಗಿತ್ವದ ಮೂಲಕ ಎನ್ವಿಡಿಯಾ (Nvidia) ಸಹ ಹೊಸ ಸ್ಪೀಚ್ AI ಎಕೋಸಿಸ್ಟಮ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನುಳಿದಂತೆ ಅಮೆಜಾನ್ ಅಲೆಕ್ಸಾ ಹಾಗೂ ಗೂಗಲ್ ಹೋಮ್‌ನಂತಹ ಸ್ಟ್ಯಾಂಡರ್ಡ್ ವಾಯ್ಸ್ ಅಸಿಸ್ಟೆಂಟ್‌ಗಳು ವಿಶ್ವದ ಮಾತನಾಡುವ ಭಾಷೆಗಳಲ್ಲಿ 1 % ಗಿಂತಲೂ ಕಡಿಮೆ ಭಾಷೆ ಬಳಕೆ ಮಾಡುತ್ತಿವೆ. ಹೀಗಾಗಿ ಸ್ಪೀಚ್ AI ನಲ್ಲಿ ಹೊಸ ಭಾಷೆಗಳ ಸೇರ್ಪಡೆಯನ್ನು ಮತ್ತಷ್ಟು ಸುಧಾರಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಇವು ಮುಂದಾಗಿವೆ.

Best Mobiles in India

English summary
Google has been serving customers differently than other companies. Forum Google Announces About AI Model Supporting 1,000 Global Languages.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X