ಗೂಗಲ್‌ನಿಂದ ಆಂಡ್ರಾಯ್ಡ್‌ 13 ಘೋಷಣೆ! ಫೀಚರ್ಸ್‌ ಹೇಗಿದೆ ಗೊತ್ತಾ?

|

ಟೆಕ್‌ ಜಗತ್ತಿನ ದಿಗ್ಗಜ ಗೂಗಲ್‌ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ತನ್ನ ವಾರ್ಷಿಕ ಸಮ್ಮೆಳನ ಗೂಗಲ್‌ I/O 2022 ವನ್ನು ಆಯೋಜಿಸಿದೆ. ಈಗಾಗಲೇ ಲೈವ್‌ ಆಗಿರುವ ಈ ಕಾರ್ಯಕ್ರಮದಲ್ಲಿ ಗೂಗಲ್‌ ಅನೇಕ ಫೀಚರ್ಸ್‌ಗಳು ಹಾಗೂ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಬಹು ನಿರೀಕ್ಷಿತ ಆಂಡ್ರಾಯ್ಡ್‌ 13 ಫೀಚರ್ಸ್‌ ಅನ್ನು ಘೋಷಣೆ ಮಾಡಿದೆ. ಇನ್ನು ಆಂಡ್ರಾಯ್ಡ್‌ 13ನಲ್ಲಿ ಪ್ರೈವೆಸಿ ಮತ್ತು ಸುರಕ್ಷತೆಗೆ ಹೆಚ್ಚಿನ ಅಪ್ಡೇಟ್‌ಗಳನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.

ಗೂಗಲ್‌ I/O 2022

ಹೌದು ಗೂಗಲ್‌ ತನ್ನ ಗೂಗಲ್‌ I/O 2022 ರಲ್ಲಿ ಹೊಸ ಆಂಡ್ರಾಯ್ಡ್‌ 13 ಫೀಚರ್ಸ್‌ಗಳನ್ನು ಪ್ರಕಟಿಸಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನುಭವವು ಹೆಚ್ಚು ಸುರಕ್ಷಿತ ಮತ್ತು ಪ್ರೈವೆಸಿ ಹೊಂದಿರುವುದನ್ನ ಖಚಿತಪಡಿಸುವ ಹೊಸ ಅಪ್ಡೇಟ್‌ಗಳ ಫೀಚರ್ಸ್‌ ಗುಂಪನ್ನು ಇದರಲ್ಲಿ ಪರಿಚಯಿಸಲಿದೆ. ಇನ್ನು ಆಂಡ್ರಾಯ್ಡ್ 13 ರೋಲ್‌ಔಟ್ ಈ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಆಂಡ್ರಾಯ್ಡ್‌ 13 ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌ 13

ಆಂಡ್ರಾಯ್ಡ್‌ 13

ಆಂಡ್ರಾಯ್ಡ್‌ 13 ಮುಖ್ಯವಾಗಿ ಪ್ರೈವೆಸಿ ಮತ್ತು ಸೆಕ್ಯುರಿಟಿಗೆ ಹೆಚ್ಚಿನ ಅದ್ಯತೆ ನೀಡಿದೆ. ಇದಕ್ಕಾಗಿ ಪ್ರೈವೆಸಿ ಮತ್ತು ಸುರಕ್ಷತೆಯ ಅಪ್ಡೇಟ್‌ಗಳನ್ನು ತರುವುದಕ್ಕೆ ಕೇಂದ್ರೀಕರಿಸಲಾಗಿದೆ ಎಂದು ಗೂಗಲ್‌ ಹೇಳಿದೆ. ಸದ್ಯ ಗೂಗಲ್‌ ತನ್ನ ಆಂಡ್ರಾಯ್ಡ್‌ 13 ಬೀಟಾ 1 ಮತ್ತು ಡೆವಲಪರ್ ಪ್ರಿವ್ಯೂನಲ್ಲಿ ಅಂತಹ ಕೆಲವು ಫೀಚರ್ಸ್‌ಗಳನ್ನು ತೋರಿಸಿದೆ. ಅದರಂತೆ ನೋಟಿಫಿಕೇಶನ್‌ಗಳನ್ನು ಪುಶ್‌ ಮಾಡುವ ಮೊದಲು ಅಪ್ಲಿಕೇಶನ್‌ಗಳು ಬಳಕೆದಾರರ ಅನುಮತಿಗಳನ್ನು ಪಡೆಯುವ ಅಗತ್ಯವಿದೆ. ಇನ್ನು ಸಂವಾದಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು, ನಿಮ್ಮ ಡಿಜಿಟಲ್ ಗುರುತನ್ನು ಸಂಗ್ರಹಿಸಲು ಹೊಸ ಮಾರ್ಗಗಳನ್ನು ಪರಿಚಯಿಸಲಿದೆ.

ಫೋನ್

ಇನ್ನು ರಿಚ್ ಕಮ್ಯುನಿಕೇಶನ್ ಸರ್ವಿಸಸ್ (RCS) ಎಂಬ ಹೊಸ ಮಾನದಂಡಕ್ಕೆ SMS ಟೆಕ್ಸ್ಟ್‌ ಮೆಸೇಜ್‌ ಅನ್ನು ಅಪ್‌ಗ್ರೇಡ್ ಮಾಡಲು ಕ್ಯಾರಿಯರ್‌ ಮತ್ತು ಫೋನ್ ತಯಾರಕರೊಂದಿಗೆ ಕೆಲಸ ಮಾಡುತ್ತಿದೆ ಎಂದು ಗೂಗಲ್‌ ಹೇಳಿದೆ. ಇದಲ್ಲದೆ ಉತ್ತಮ ಗುಣಮಟ್ಟದ ಫೋಟೋಗಳನ್ನು ಹಂಚಿಕೊಳ್ಳಲು, ಟೈಪಿಂಗ್ ಇಂಡಿಕೇಟರ್ಸ್‌ ಅನ್ನು ನೋಡಲು ಮತ್ತು ಗ್ರೂಪ್‌ ಕಮ್ಯೂನಿಕೇಶನ್‌ ನಡೆಸಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದಕ್ಕಾಗಿ ಆರ್‌ಸಿಎಸ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ ಮೂಲಕ ನಿಮ್ಮ ಸಂದೇಶಗಳಿಗೆ ಸುರಕ್ಷತೆಯನ್ನು ನೀಡಲಿದೆ.

ಗೂಗಲ್‌ ವ್ಯಾಲೇಟ್‌

ಗೂಗಲ್‌ ವ್ಯಾಲೇಟ್‌

ಆಂಡ್ರಾಯ್ಡ್‌ 13ನಲ್ಲಿ ಗೂಘಲ್‌ ವ್ಯಾಲೇಟ್‌ ಕೂಡ ಅಪ್ಡೇಟ್‌ ಪಡೆದುಕೊಳ್ಳಲಿದೆ. ಇದರಿಂದ ಶೀಘ್ರದಲ್ಲೇ ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಮೂಲಕ ಹೋಟೆಲ್ ಕೀಗಳು ಮತ್ತು ಕಚೇರಿ ಬ್ಯಾಡ್ಜ್‌ಗಳನ್ನು ಸೇವ್‌ ಮಾಡುವುದಕ್ಕೆ ಮತ್ತು ಪ್ರವೇಶಿಸುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಗೂಗಲ್‌ ವ್ಯಾಲೇಟ್‌ನಲ್ಲಿ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್‌ ಮತ್ತು ID ಗಳನ್ನು ಸ್ಟೋರೇಜ್‌ ಮಾಡುವುದಕ್ಕೆ ಗೂಗಲ್‌ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಹಾಗೇ ನೋಡಿದರೆ ಭಾರತದಲ್ಲಿ, ಈಗಾಗಲೇ ಡಿಜಿಲಾಕರ್ ಮತ್ತು ಎಂಪರಿವಾಹನ್‌ನಂತಹ ಅಪ್ಲಿಕೇಶನ್‌ಗಳಲ್ಲಿ ತಮ್ಮ ದಾಖಲೆಗಳನ್ನು ಸಂಗ್ರಹಿಸಲು ಸರ್ಕಾರವು ಬಳಕೆದಾರರಿಗೆ ಅವಕಾಶ ನೀಡಿದೆ.

ಸುರಕ್ಷತೆ ಮತ್ತು ತುರ್ತುಸ್ಥಿತಿ

ಸುರಕ್ಷತೆ ಮತ್ತು ತುರ್ತುಸ್ಥಿತಿ

ಇನ್ನು ಆಂಡ್ರಾಯ್ಡ್‌ 13 ಎಮರ್ಜೆನ್ಸಿ ಸಂದರ್ಭಗಳಲ್ಲಿ ಉಪಯುಕ್ತವಾಗುವಂತಹ ಹೊಸ ಫೀಚರ್ಸ್‌ಗಳನ್ನು ಸಹ ಪರಿಚಯಿಸಲಿದೆ. ಅಂದರೆ ನೀವು ಎಮರ್ಜೆನ್ಸಿ ಸಮಯದಲ್ಲಿ ಸಹಾಯಕ್ಕಾಗಿ ಕರೆ ಮಾಡಿದಾಗ ನಿಮ್ಮನ್ನು ಪತ್ತೆಹಚ್ಚಲು ELS ನಂತಹ ನಿರ್ಣಾಯಕ ಮೂಲಸೌಕರ್ಯವನ್ನು ಅಪ್ಡೇಟ್‌ ಮಾಡಿದೆ. ಈ ಫೀಚರ್ಸ್‌ ಅನ್ನು ಇತ್ತೀಚೆಗೆ ಬಲ್ಗೇರಿಯಾ, ಪರಾಗ್ವೆ, ಸ್ಪೇನ್ ಮತ್ತು ಸೌದಿ ಅರೇಬಿಯಾದಲ್ಲಿ ಪ್ರಾರಂಭಿಸಲಾಗಿದೆ. ಪ್ರಸ್ತುತ ಈ ಫೀಚರ್ಸ್‌ ವಿಶ್ವದಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಲಭ್ಯವಿದೆ. ಅಲ್ಲದೆ 25 ದೇಶಗಳಲ್ಲಿ ಈಗಾಗಲೇ ಭೂಕಂಪದ ಎಚ್ಚರಿಕೆಯನ್ನು ನೀಡುವ ಫೀಚರ್ಸ್‌ ಕೂಡ ಪರಿಚಯಿಸಲಾಗಿದೆ.

WearOS ನ್ಯೂ ಅಪ್ಡೇಟ್‌

WearOS ನ್ಯೂ ಅಪ್ಡೇಟ್‌

ಆಂಡ್ರಾಯ್ಡ್‌ 13 ಮೂಲಕ WearOSನಲ್ಲಿ ಹೊಸ ಅಪ್ಡೇಟ್‌ ಅನ್ನು ನೀಡಲಾಗುತ್ತಿದೆ. ಅದರಂತೆ ವಾಚ್ 4 ಸರಣಿಯಿಂದ ಪ್ರಾರಂಭವಾಗುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ಗಳಿಗೆ ಗೂಗಲ್ ಅಸಿಸ್ಟೆಂಟ್ ಫೀಚರ್ಸ್‌ ನೀಡಲಾಗ್ತಿದೆ. Wear OS ಗಾಗಿ ಗೂಗಲ್‌ ಅಸಿಸ್ಟೆಂಟ್‌ ಅನುಭವವನ್ನು ವೇಗವಾದ, ಹೆಚ್ಚು ನೈಸರ್ಗಿಕ ಧ್ವನಿ ಸಂವಹನಗಳೊಂದಿಗೆ ಸುಧಾರಿಸಲಾಗಿದೆ. ಇದಲ್ಲದೆ ಬಳಕೆದಾರರು ವಾಯ್ಸ್‌ -ಕಂಟ್ರೋಲ್‌ ನ್ಯಾವಿಗೇಷನ್ ಸೆಟ್‌ ಮಾಡುವ ಉಪಯುಕ್ತ ಫೀಚರ್ಸ್‌ಗಳನ್ನು ಕೂಡ ಪ್ರವೇಶಿಸಲು ಅವಕಾಸ ಸಿಗಲಿದೆ.

Best Mobiles in India

Read more about:
English summary
Android 13 is focused mainly on bringing updates to the privacy and security, and personalisation of devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X