ಹೊಸ ಮಾದರಿಯಲ್ಲಿ ಬರಲಿದೆ ಗೂಗಲ್‌ನ ಇಂಟರ್‌ಪ್ರಿಟರ್‌ ಮೋಡ್‌ !

|

ಇಂದಿನ ಡಿಜಿಟಲ್‌ ಜಗತ್ತಿನಲ್ಲಿ ಯಾವುದೇ ಮಾಹಿತಿ ಬೇಕಾದ್ರೂ ಮೊದಲು ನೆನಪಾಗೋದೇ ಗೂಗಲ್‌. ಅಷ್ಟರ ಮಟ್ಟಿಗೆ ಗೂಗಲ್‌ ಬಳಕೆದಾರರ ಸ್ನೇಹಿಯಾಗಿ ಮಾರ್ಪಾಡಾಗಿದೆ. ಸದ್ಯ ಯಾವಾಗಲೂ ಗ್ರಾಹಕರ ಹಿತವನ್ನೇ ಬಯಸುವ ಗೂಗಲ್‌ ತನ್ನ ಬಳಕೆದಾರರಿಗೆ ಸೂಕ್ತ ಫಿಚರ್ಸ್‌ಗಳನ್ನ ಆಗಾಗ ಪರಿಚಯಿಸುತ್ತಲೇ ಬಂದಿದ್ದು, ಇದೀಗ ಮತ್ತೊಂದು ಫೀಚರ್ಸ್ ಅನ್ನ ಪರಿಚಯಿಸಿದೆ, ಈ ಫೀಚರ್ಸ್ ಎಲ್ಲಾ ಗೂಗಲ್‌ ಬಳಕೆದಾರರಿಗೆ ಇಷ್ಟವಾಗದೇ ಇರೋದಿಲ್ಲ.

ತಂತ್ರಜ್ಞಾನ

ಹೌದು, ತಂತ್ರಜ್ಞಾನ ಮುಂದುವರೆದಂತೆ ಮಾಹಿತಿಗಳ ಕಣಜ ಅನಿಸಿಕೊಂಡಿರೋ ಗೂಗಲ್‌ ಆಪ್ಲೀಕೇಶನ್‌ ದಿನದಿಂದ ದಿನಕ್ಕೆ ಇನ್ನಷ್ಟು ಸ್ಮಾರ್ಟ್‌ ಆಗುತ್ತಿದೆ. ಗೂಗಲ್‌ ಇದೀಗ ಇಂಟರ್‌ಪ್ರಿಟರ್ ಮೋಡ್ ಅಸಿಸ್ಟೆಂಟ್ ಸಿಇಎಸ್ 2019 ಅನ್ನ 2020 ರ ಜನವರಿಯಲ್ಲಿ ಪರಿಚಯಿಸುತ್ತಿದೆ . ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ನೈಜ ಭಾಷೆಯನ್ನ ಭಾಷಾಂತರಿಸುವ ಫೀಚರ್ಸ್ ಅನ್ನ ಗೂಗಲ್‌ ಪರಿಚಯಿಸಲಿದೆ.

ಫೀಚರ್ಸ್

ಸದ್ಯ ಈ ಫೀಚರ್ಸ್ ನಿಂದಾಗಿ ಯಾವುದೇ ಭಾಷೆಗೆ ಭಾಷಾಂತರಿಸಲು ಬಳಕೆದಾರನು ತನ್ನ ಸ್ಥಳೀಯ ಅಥವಾ ತಿಳಿದಿರುವ ಭಾಷೆಯಲ್ಲಿ ಮಾತನಾಡಬಹುದು, ಮತ್ತು ಗೂಗಲ್‌ ಅಸಿಸ್ಟೆಂಟ್ ಅದನ್ನು ಸೆಕೆಂಡುಗಳಲ್ಲಿ ಬಳಕೆದಾರ ಬಯಸಿದ ಭಾಷೆಯಲ್ಲಿ ಅನುವಾದಿಸಿಕೊಡುತ್ತದೆ. ಈ ಫೀಚರ್ಸ್‌ನಿಂದಾಗಿ ಭಾಷಾಂತರ ಬಯಸುವವರು ಕೇವಲ ಗೂಗಲ್‌ ಅಸಿಸ್ಟೆಂಟ್‌ ನಲ್ಲಿ ಮಾತಾಡಿದ್ರೆ ಸಾಕು ಅದು ಬಳಕೆದಾರ ಆಯ್ಕೆ ಮಾಡಿದ ಭಾಷೆಗೆ ಮಾಹಿತಿ ಅನುವಾದಗೊಂಡು ಡಿಸ್‌ಪ್ಲೇ ಮೇಲೆ ಗೂಗಲ್‌ ಅಸಿಸ್ಟೆಂಟ್‌ ಧ್ವನಿ ರೂಪದಲ್ಲಿ ಉತ್ತರ ನೀಡುತ್ತದೆ.

ಗೂಗಲ್‌

ಹಾಗೇ ನೋಡಿದ್ರೆ ಇಂದು ಗೂಗಲ್‌ನ ಇಂಟರ್ಪ್ರಿಟರ್ ಮೋಡ್ ಫೀಚರ್ಸ್ ಈಗಾಗ್ಲೆ ವಿಶ್ವದ ಎಲ್ಲೆಡೆ ಗಮನಸೆಳೆಯುತ್ತಿದೆ. ಇದೀಗ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಬರುವ ಈ ಹೊಸ ಫೀಚರ್ಸ್ ಇನ್ನಷ್ಟು ಅನುಕೂಲ ಮಾಡಿಕೊಡಲಿದೆ. ನೀವು ಜಗತ್ತಿನ ಯಾವುದೇ ಭಾಷೆಯನ್ನ ಮಾತನಾಡಿ ಅದರ ಅನುವಾಧಕ್ಕೆ ಸಹಾಯ ಕೇಳಿದ್ರೆ ಸಾಕು ಈ ಫೀಚರ್ಸ್‌ ಸಹಾಯ ಮಾಡುತ್ತದೆ. ಉದಾಹರಣೆಗೆ "ಹೇ ಗೂಗಲ್, ನನಗೆ ಕನ್ನಡ ಭಾಷೆಯಲ್ಲಿ ಮಾತನಾಡಲು ಸಹಾಯ ಮಾಡಿ" ಎಂದು ಹೇಳಿದರೆ ಸಾಕು ಗೂಗಲ್ ಅಸಿಸ್ಟೆಂಟ್ ಸ್ಮಾರ್ಟ್ ಪ್ರತ್ಯುತ್ತರಗಳನ್ನು ನೀಡುತ್ತದೆ, ಜೊತೆಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಬೇಕಾಗುವ ಅವಕಾಶ ನೀಡುವ ಸಲಹೆಗಳನ್ನು ನೀಡುತ್ತದೆ.

ಭಾಷೆ

ಇನ್ನು ಬಳಕೆದಾರನು ಹೇಳಿದ ಭಾಷೆಗೆ ಅನುವಾದಿಸಿದ ಮೇಲೆ ಅದು ಪ್ರತಿ ಭಾಷೆಗೆ ಎರಡು ಮೈಕ್‌ಗಳನ್ನು ಪ್ರದರ್ಶಿಸುತ್ತದೆ. ಬಳಕೆದಾರರು ಒಂದು ಸಮಯದಲ್ಲಿ ಒಂದು ಮೈಕ್ ಆಯ್ಕೆ ಮಾಡಬಹುದು ಮತ್ತು ಕೀಬೋರ್ಡ್ ಮೋಡ್ ಆಯ್ಕೆ ಸಹ ಇದೆ, ಅದು ಭಾಷಾಂತರಿಸಲು ಟೈಪ್ ಮಾಡಲು ಅವಕಾಶವನ್ನು ಕಲ್ಪಿಸಿದೆ. ಸದ್ಯ ಈ ವೈಶಿಷ್ಟ್ಯವನ್ನು ಗೂಗಲ್ ಅನುವಾದದ ಮೇಲೆ ರೂಪಿಸಲಾಗಿದ್ದು ಇದು ಪ್ರತ್ಯೇಕ ಅಪ್ಲಿಕೇಶನ್‌ನಂತೆ ಲಭ್ಯವಿದೆ.

ಅಸಿಸ್ಟೆಂಟ್

ಇನ್ನು ಈ ವೈಶಿಷ್ಟ್ಯವು ಈಗಾಗಲೇ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದನ್ನು ಐಒಎಸ್‌ನಲ್ಲಿ ಬಳಸಲು, ಆಪ್ ಸ್ಟೋರ್‌ನಿಂದ ಇತ್ತೀಚಿನ ಗೂಗಲ್ ಅಸಿಸ್ಟೆಂಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಇಂಟರ್‌ಪ್ರಿಟರ್ ಮೋಡ್ 44 ಭಾಷೆಗಳಲ್ಲಿ ಭಾಷಾಂತರಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ.

Best Mobiles in India

Read more about:
English summary
Google announced Interpreter Mode for Google Assistant at CES 2019 in January this year. A month later, it was rolled out for select devices, including Google Home speakers, select smart speakers, and Smart Displays with Google Assistant support. Now, the real-time translation feature is arriving for Android and iOS users finally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X