ಸುಳ್ಳು ಸುದ್ದಿ ಉತ್ತೇಜಿಸುವ ವೆಬ್‌ಸೈಟ್‌ಗಳಿಂದ ಜಾಹೀರಾತು ನಿಷೇದಿಸಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕೋವಿಡ್ -19 ಬಗ್ಗೆ ಇಲ್ಲ ಸಲ್ಲದ ಪಿತೂರಿ ಸಿದ್ಧಾಂತಗಳನ್ನು ಉತ್ತೇಜಿಸುವ ಜಾಹಿರಾತುಗಳನ್ನ ವೆಬ್‌ಸೈಟ್‌ಗಳಿಂದ ನಿರ್ಬಂಧಿಸುವುದಾಗಿ ಹೇಳಿದೆ. ವೆಬ್‌ಸೈಟ್‌ಗಳ ನಿಯಮಗಳನ್ನು ಮೀರುವ ವೆಬ್ ಪಬ್ಲಿಷರ್‌ ಮತ್ತು ಜಾಹೀರಾತುದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಗೂಗಲ್‌ ಹೇಳಿದೆ. ಸದ್ಯ ಗೂಗಲ್‌ ಜಾಹಿರಾತುಗಳ ಮೂಲಕ ಸಂಪಾದನೆಗೆ ಮುಂದಾಗುವ ವೆಬ್‌ ಪಬ್ಲಿಷರ್‌ಗಳು ಮೂಲಾದಾರವಿಲ್ಲದ ಜಾಹಿರಾತುಗಳನ್ನ ಉತ್ತೇಜಿಸುವ ಕೆಲಸ ಮಾಡುವುನ್ನ ಪತ್ತೆ ಹಚ್ಚಲು ಗೂಗಲ್‌ ಮುಂದಾಗಿದೆ.

ಗೂಗಲ್‌

ಹೌದು, ಸರ್ಚ್‌ ಇಂಜಿನ್‌ ದೈತ್ಯ ಎಂದೆನಿಸಿಕೊಂಡಿರುವ ಗೂಗಲ್‌ ಕಂಪನಿಯು ಈಗಾಗಲೇ ಆನ್‌ಲೈನ್‌ನಲ್ಲಿ ಹಾನಿಕಾರಕ ಆರೋಗ್ಯ ಹಕ್ಕುಗಳ ವಿರುದ್ಧ ನೀತಿಯನ್ನು ಹೊಂದಿದೆ. ಅಲ್ಲದೆ ಕೋವಿಡ್‌-19 ನಂತಹ ಸಾಂಕ್ರಾಮಿಕ ರೋಗದ ಬಗ್ಗೆ ಇಲ್ಲಸಲ್ಲದ ಮಾಹಿತಿ ನೀಡುವ ಹಾಗೂ ಇದನ್ನೇ ಬಂಡವಾಳವಾಗಿಸಿಕೊಂಡು ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದ 200 ದಶಲಕ್ಷಕ್ಕೂ ಹೆಚ್ಚಿನ ಜಾಹೀರಾತುಗಳನ್ನು ತೆಗೆದುಹಾಕಿದೆ. ಕೊರೋನಾ ವೈರಸ್ ಬಗ್ಗೆ ತಪ್ಪು ಮಾಹಿತಿ ಮತ್ತು ಪಿತೂರಿ ಸಿದ್ಧಾಂತಗಳನ್ನು ಪ್ರಕಟಿಸುವ ವೆಬ್‌ಸೈಟ್‌ಗಳಿಗೆ ಕಂಪನಿಯು ಈ ವರ್ಷ ಸುಮಾರು 19 ಮಿಲಿಯನ್ ಜಾಹೀರಾತು ಆದಾಯವನ್ನು ನೀಡುತ್ತಿತ್ತು ಅನ್ನೊದು ಬಹಿರಂಗವಾಗಿದೆ.

ಗೂಗಲ್‌

ಇನ್ನು ವೈಜ್ಞಾನಿಕ ಒಮ್ಮತಕ್ಕೆ ವಿರುದ್ಧವಾದ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಅಪಾಯಕಾರಿ ವಿಷಯವನ್ನು ಪ್ರಕಟಿಸುವ ಪ್ರಕಾಶಕರ ವಿರುದ್ದ ಕ್ರಮ ಕೈಗೊಳ್ಳುವ ಮಾತನ್ನು ಗೂಗಲ್‌ ಹೇಳಿದೆ. ಅಲ್ಲದೆ ಗೂಘಲ್‌ ಜಾಹಿರಾತು ನಿಯಮಗಳಿಗೆ ವಿರುದ್ದವಾಗಿ ನಡೆಯುವ ವೆಬ್‌ಸೈಟ್‌ಗಳನ್ನ ಕಿತ್ತುಹಾಕುವುದಾಗಿದೆ. ಸದ್ಯ ಗೂಗಲ್‌ ಹಾನಿಕಾರಕ ಆರೋಗ್ಯ ಹಕ್ಕುಗಳ ನೀತಿಗಳನ್ನು ವಿಸ್ತರಿಸುವ ಮೂಲಕ ನಾವು ಹೆಚ್ಚುವರಿ ಸುರಕ್ಷತೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿಕೊಂಡಿದೆ. ಇದಲ್ಲದೆ ಕಂಪನಿಯು ಶುಕ್ರವಾರ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಗಳ ಪ್ರಕಾರ, ಹೊಸ ಆರೋಗ್ಯ ವಿಧಾನವು ಪ್ರಮುಖ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ "ಅಧಿಕೃತ ವೈಜ್ಞಾನಿಕ ಒಮ್ಮತಕ್ಕೆ ವಿರುದ್ಧವಾದ" ವಿಷಯವನ್ನು ನಿಷೇಧಿಸುತ್ತದೆ.

ಗೂಗಲ್

ಪ್ರಸ್ತುತ ಕೊರೋನಾದಂತಹ ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈಜ್ಞಾನಿಕ ಒಮ್ಮತವಿಲ್ಲದ ಸಿದ್ಧಾಂತಗಳನ್ನು ಪ್ರಕಟಿಸುವುದಕ್ಕೆ ನಿಷೇದ ಹೇರಲಾಗಿದೆ. ಇದನ್ನೇ ಬಂಡವಾಳಗಿರಿಸಿಕೊಂಡಿರುವ ಕೆಲ ವೆಬ್‌ಸೈಟ್‌ಗಳು ವಂಚನೆ ಮಾಡುತ್ತಿವೆ. ಜೊತೆಗೆ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ಪಿತೂರಿಗಳನ್ನು ಶಾಶ್ವತಗೊಳಿಸುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೂಗಲ್ ಹೇಳಿದೆ. ಈ ನೀತಿಯನ್ನು ಪದೇ ಪದೇ ಅಥವಾ ಅತಿಯಾಗಿ ಉಲ್ಲಂಘಿಸುವ ಸೈಟ್‌ಗಳನ್ನು ಗೂಗಲ್ ಜಾಹೀರಾತು ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದನ್ನು ನಿಷೇಧಿಸಬಹುದು ಎಂದು ಕಂಪನಿ ತಿಳಿಸಿದೆ.

ಗೂಗಲ್

ಸದ್ಯ ಕೊರೋನಾ ವೈರಸ್‌ ವಿರುದ್ದ ನಂಬಲು ಅರ್ಹವಲ್ಲದ ಸುದ್ದಿಯನ್ನ ಆಗಲಿ. ಅಥವಾ ಜಾಹಿರಾತುಗಳನ್ನಾಗಲಿ ಯಾವುದೇ ವೇಬ್‌ಸೈಟ್‌ಗಳು ಪ್ರಕಟಿಸುವಂತಿಲ್ಲ. ಒಂದು ವೇಳೆ ಇದನ್ನ ಮಿರಿ ಪ್ರಕಟಿಸಿಸದರೆ ಗೂಗಲ್ ಅಂತಹವರ ಯಾವುದೇ ಕ್ರಮಕ್ಕೂ ಮುಂದಾಗಲಿದೆ. ಇನ್ನು ಗೂಗಲ್‌ ಒಡೆತನದ ಯೂಟ್ಯೂಬ್ ಈಗಾಗಲೇ ಕೋವಿಡ್ -19ಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಮತ್ತು ಪಿತೂರಿ ಸಿದ್ಧಾಂತಗಳನ್ನ ಪ್ರಕಟಿಸಿ ಹಣಗಳಿಕೆ ಮಾಡುವ ವೆಬ್‌ಸೈಟ್‌ಗಳನ್ನ ಈಗಾಗಲೇ ನಿಷೇಧಿಸಿದೆ.

Best Mobiles in India

English summary
The company already has a policy against harmful health claims online, and it has removed more than 200 million ads that were trying to take advantage of the mayhem caused by the pandemic.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X