ಭಾರತದಲ್ಲಿ ಈಗ 'ಟಿಕ್‌ ಟಾಕ್' ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

|

ಜನಪ್ರಿಯ ವಿಡಿಯೋ ಸಾಮಾಜಿಕ ಜಾಲತಾಣ ಆಪ್‌ ಆಗಿ ಗುರುತಿಸಿಕೊಮಡಿದ್ದ ಚೀನಾ ಮೂಲದ ಟಿಕ್ ಟಾಪ್ ಮೊಬೈಲ್ ಆಪ್ ಅನ್ನು ಗೂಗಲ್ ಸಂಸ್ಥೆ ಬ್ಲಾಕ್ ಮಾಡಿದೆ. ಟಿಕ್‌ ಟಾಕ್ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಟಿಕ್‌ ಟಾಕ್ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಗೂಗಲ್ ಕ್ರಮ ಕೈಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಸಂಸ್ಥೆ ತಾನು ಇಲ್ಲಿನ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವದಾಗಿ ತಿಳಿಸಿದೆ.

ಹೌದು, ಇತ್ತೀಚಿಗಷ್ಟೇ ಮದ್ರಾಸ್ ಹೈಕೋರ್ಟ್ ಟಿಕ್‌ ಟಾಕ್ ಆಪ್ ಅನ್ನು ನಿಷೇಧಿಸಬೇಕು ಎಂದು ಆದೇಶಿಸಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ನಿರ್ದೇಶನ ನೀಡಿತ್ತು. ಇದಾಗ ನಂತರ ಕೇಂದ್ರ ಸರ್ಕಾರ ಗೂಗಲ್ ಮತ್ತು ಆಪಲ್ ಕಂಪೆನಿಗಳಿಗೆ ಪತ್ರ ಬರೆದು ಟಿಕ್ ಟಾಕ್ ಆಪ್ ಅನ್ನು ನಿಷೇಧಿಸಲು ಸೂಚಿಸಿತ್ತು ಎಂದು ತಿಳಿದುಬಂದಿದೆ. ಹಾಗಾಗಿ, ಗೂಗಲ್ ಸಂಸ್ಥೆ ಚೀನಾ ಮೂಲದ ಟಿಕ್ ಟಾಪ್ ಮೊಬೈಲ್ ಆಪ್ ಅನ್ನು ಭಾರತದ ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಭಾರತದಲ್ಲಿ ಈಗ 'ಟಿಕ್‌ ಟಾಕ್' ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

ಅಶ್ಲೀಲ, ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು ಇರುವುದರಿಂದ ಟಿಕ್ ಟಾಕ್ ಆಪ್ ಅನ್ನು ನಿಷೆಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ನೀಡಿದ ದೂರಿನ ಮೇಲೆ ಟಿಕ್‌ ಟಾಕ್ ಅನ್ನು ನಿಷೇಧಿಸಲಾಗಹಿದೆ. ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್ ಕಿರುಬಕರನ್ ಹಾಗೂ ನ್ಯಾಯಮೂರ್ತಿ ಎಸ್ ಸುಂದರ್ ಸೇರಿದ ವಿಭಾಗ ಪೀಠವು ಇಂತಹದೊಂದು ಮಹತ್ತರ ಆದೇಶವನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಹೊರಡಿಸಿದ್ದಾರೆ.

ಟಿಕ್ ಟಾಕ್‌ನಲ್ಲಿ ಅಶ್ಲೀಲ ಹಾಗೂ ಅಸಭ್ಯ ವೀಡಿಯೋಗಳು ಇವೆ. ಇಂತಹ ಆಪ್‌ಗಳು ಯುವಕರ ಭವಿಷ್ಯ ಹಾಗೂ ಮಕ್ಕಳ ಮನೋಭಾವ ಹಾಳು ಮಾಡುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದು, ಕೇಂದ್ರ ಸರ್ಕಾರ ಟಿಕ್ ಟಾಕ್ ಡೌನ್‌ಲೋಡ್ ಮಾಡುವುದನ್ನು ತಡೆಯಬೇಕಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಇದರಿಂದಾಗಿ ವಿಶ್ವದ್ಯಾಂತ 50 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದು, ಭಾರತದಲ್ಲೇ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್‌ಗೆ ಕಂಟಕ ಎದುರಾಗಿದೆ.

ಭಾರತದಲ್ಲಿ ಈಗ 'ಟಿಕ್‌ ಟಾಕ್' ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

ಈ ಟಿಕ್‌ಟಾಕ್ ಆಪ್‌ಗಳಲ್ಲಿನ ವಿಡಿಯೋಗಳನ್ನು ನೋಡಿ ಕೆಲವರು ಎಂಜಾಯ್ ಮಾಡುತ್ತಿದ್ದರೆ, ಹಲವರು ಆಪ್‌ನಲ್ಲಿನ ಕೆಲ ವಿಶೇಷ ಫೀಚರ್ಸ್‌ಗಳಿಗೆ ಮನಸೂತು ತಾವೂ ವಿಡಿಯೋ ಮಾಡುತ್ತಿದ್ದಾರೆ. ಲೈಕ್ಸ್, ಕಮೆಂಟ್, ಶೇರ್‌ಗಳ ಲೆಕ್ಕಾಚಾರ ಹಾಕುತ್ತಾ ತಮ್ಮದೇ ಆದ ಫ್ಯಾಂಟಸಿ ಜಗತ್ತನ್ನು ಸೃಷ್ಟಿಸಿಕೊಂಡಿರುವವರು ಅದರ ಗೀಳಿಗೆ ಬಿದ್ದಿದ್ದಾರೆ. ಟಿಕ್‌ ಟಾಕ್ ಗೀಳಿಗೆ ಒಳಗಾದವರು ಒಂದೇ ಕ್ಷಣದಲ್ಲಿ ಅದರಿಂದ ಹೊರ ಬರಲು ಸಾಧ್ಯವಿಲ್ಲ. ಹಂತಹಂತವಾಗಿ ಅದರಿಂದ ದೂರಾಗಬೇಕು ಎಂದು ಸಹ ಹೇಳಲಾಗಿದೆ.

ಓದಿರಿ: 'ಗ್ಯಾಲಕ್ಸಿ ಎಂ20' ಖರೀದಿಸಲು ಪ್ರೀ ಬುಕ್ ಮಾಡಲು ಅವಕಾಶ!!

Best Mobiles in India

English summary
The Tamil Nadu court had on April 3 asked the federal government to ban TikTok, saying it encouraged pornography and made child users vulnerable to sexual predators. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X