ಗೂಗಲ್‌ ಕ್ರೊಮ್‌ನ ಮ್ಯೂಸಿಕ್‌ ಕೇಳುವ ವಿಧಾನ ಬದಲಾವಣೆಗೆ ಮುಂದಾದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಗೂಗಲ್‌ನಲ್ಲಿ ನೀವು ವೀಡಿಯೊಗಳನ್ನು ನೋಡುವ ಮತ್ತು ಕ್ರೋಮ್‌ನಲ್ಲಿ ಸಂಗೀತವನ್ನು ಕೇಳುವ ವಿಧಾನವನ್ನು Google ಬದಲಾಯಿಸಲು ಮುಂದಾಗಿದೆ ಎಂದು ಹೇಳಲಾಗ್ತಿದೆ. ಇದರಿಂದ ಇನ್ಮುಂದೆ ನೀವು ಗೂಗಲ್‌ ಕ್ರೋಮ್‌ನಲ್ಲಿ ಟ್ಯಾಬ್‌ಗಳನ್ನು ಬದಲಾಯಿಸದೆ ಪ್ಲೇಬ್ಯಾಕ್ ಅನ್ನು ಕಂಟ್ರೋಲ್‌ ಮಾಡುವ ಅವಕಾಶ ಶೀಘ್ರದಲ್ಲೇ ನಿಮಗೆ ಲಭ್ಯವಾಗಲಿದೆ ಎಂದು ಹೇಳಲಾಗ್ತಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಗೂಗಲ್‌ ಕ್ರೋಮ್‌ನಲ್ಲಿ ಮ್ಯೂಸಿಕ್‌ ಅನ್ನು ಕೇಳುವ ವಿಧಾನವನ್ನ ಬದಲಾಯಿಸಲು ಮುಂದಾಗಿದೆ. ಇದಕ್ಕಾಗಿ ಗೂಗಲ್ ಕ್ರೋಮ್ ಶೀಘ್ರದಲ್ಲೇ ಹೊಸ ಪ್ಲೊಟಿಂಗ್‌ ಪ್ಯಾನೆಲ್‌ ಅನ್ನು ಪರಿಚಯಿಸಲಿದೆ. ಇದರಿಮದ ನೀವು ಯಾವುದಾದರು ಹಾಡು, ವೀಡಿಯೊ, ವಿಷಯವನ್ನು ಪ್ಲೇ ಮಾಡುವ ನಿರ್ದಿಷ್ಟ ಟ್ಯಾಬ್‌ಗೆ ಹೋಗುವ ಅವಶ್ಯಕತೆ ಇಲ್ಲ. ದಲಾಗಿ ನಿವು ಬಲಸುತ್ತಿರುವ ಟ್ಯಾಬ್‌ನಲ್ಲಿಯೇ ಪ್ಲೇ ಮಾಡಬಹುದು, ಇಲ್ಲವೇ ವಿರಾಮಗೊಳಿಸಲು ಬಹುದು ಎಂದು ಹೇಳಲಾಗ್ತಿದೆ. ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಪ್ರತಿಬಾರಿಯೂ ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ/. ಸದ್ಯ ಗೂಗಲ್‌ ಇದೀಗ ಫ್ಲೊಟಿಂಗ್‌ ಪ್ಯಾನೆಲ್‌ ಮೂಳಕ ಬಳಕೆದಾರರಿಗೆ ಇನ್ನಷ್ಟು ಅನುಕೂಲವನ್ನು ಮಾಡಿಕೊಡಲಿದೆ. ನೀವು ನಾವೆಲ್ಲ ಗೂಗಲ್‌ನಲ್ಲಿ ಯಾವುದಾದರು ಹೊಸ ಟ್ಯಾಬ್‌ ತೆರೆದುಕೊಂಡು ಕಾರ್ಯನಿರ್ವಹಿಸುವಾ ಜೊತೆಗ ಮ್ಯೂಸಿಕ್‌ ಸ್ವಾದ ಅನುಭವಿಸಬೇಕೆಂದು ಕೊಂಡರೆ ಅದಕ್ಕಾಗಿ ಇನ್ನೊಂದು ಟ್ಯಾಬ್‌ ತೆರೆಯುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ನೀವು ಈಗಾಗಲೇ ತೆರೆದಿರುವ ಗೂಗಲ್‌ ಟ್ಯಾಬ್‌ನಲ್ಲಿಯೇ ನೀವು ಬಯಸಿದ ಮ್ಯೂಸಿಕ್‌, ಇಲ್ಲವೇ ವಿಡಿಯೋ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಟ್ಯಾಬ್

ಅಷ್ಟೇ ಅಲ್ಲ ನೀವು ಈಗಾಗಲೇ ಬೇರೊಂದು ಟ್ಯಾಬ್‌ನಲ್ಲಿ ಮ್ಯೂಸಿಕ್‌ ಅಥವಾ ವಿಡಿಯೋ ಪ್ಲೇ ಮಾಡಿದ್ದು ಅದನ್ನು ನಿಲ್ಲಿಸಲು ಮತ್ತು ಮೀಡಿಯಾವನ್ನು ಸ್ಕಿಪ್‌ ಮಾಡಬೇಕಾದರೂ ಆ ಟ್ಯಾಬ್‌ಗೆ ಮರಳುವ ಅವಶ್ಯಕತೆ ಇಲ್ಲ. ಬದಲಿಗೆ ಇರುವ ಟ್ಯಾಬ್‌ನಲ್ಲಿ ನೀವು ಮೀಡಿಯಾ ಸ್ಕಿಪ್‌ ಮಾಡಲು ಇದು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ನೀವು ನೋಡುತ್ತಿರುವ ಅಥವಾ ಕೇಳುತ್ತಿರುವ ಮಾಧ್ಯಮವನ್ನು ನಿಯಂತ್ರಿಸಲು ನೀವು ಮಾಡುತ್ತಿರುವ ಕೆಲಸವನ್ನು ಬಿಟ್ಟು ಅದಕ್ಕಾಗಿ ಗಮನ ಹರಿಸುವ ಅವಶ್ಯಕತೆ ಇರುವುದಿಲ್ಲ.

ಫೀಚರ್ಸ್‌

ಇನ್ನು ಈ ವರ್ಷದ ಜೂನ್‌ನಲ್ಲಿ ಕ್ರೋಮ್ ಸ್ಟೋರಿಯಿಂದ ಮೊದಲ ಬಾರಿಗೆ ಈ ಫೀಚರ್ಸ್‌ ಅನ್ನು ಎಕ್ಸ್‌ಡಿಎ ಡೆವಲಪರ್‌ಗಳು ಗುರುತಿಸಿದ್ದಾರೆ. ಸದ್ಯ ಇದನ್ನು ಕ್ರೋಮ್ ಫ್ಲ್ಯಾಗ್ ಮೂಲಕ ಸಕ್ರಿಯಗೊಳಿಸಲು ಯಶಸ್ವಿಯಾಗಿದ್ದಾರೆ. ಈ ಫೀಚರ್ಸ್‌ಅನ್ನು ಸಕ್ರಿಯಗೊಳಿಸಿದಲ್ಲಿ, ಯಾವ ಟ್ಯಾಬ್ ಮಾಧ್ಯಮವನ್ನು ನಿಖರವಾಗಿ ನುಡಿಸುತ್ತಿದೆ ಎಂಬುದರ ಕುರಿತು ನೀವು ಗೊಂದಲಕ್ಕೀಡಾಗಬೇಕಾಗಿಲ್ಲ. ಅಲ್ಲದೆ ಯಾವ ಟ್ಯಾಬ್‌ನಲ್ಲಿ ವಿಡಿಯೋ ಪ್ಲೇ ಆಗುತ್ತಿದೆ ಅನ್ನೊದನ್ನ ಗುರುತಿಸಬಹುದು. ಇದಕ್ಕಾಗಿ ಬಳಕೆದಾರರು ಟ್ಯಾಬ್‌ನಲ್ಲಿ ಮೈಕ್ ಲೋಗೊವನ್ನು ನೋಡಬಹುದು.

Most Read Articles
Best Mobiles in India

English summary
Floating media controls on Chrome will let users stop and start media without having to open the concerned tab or search for controls on a page.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X