ವಿಶ್ವ ಭೂಮಿಯ ದಿನದ ಪ್ರಯುಕ್ತ ಗೂಗಲ್‌ನಿಂದ ವಿಶೇಷ ಡೂಡಲ್‌ ಗೌರವ!

|

ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ವಿಶೇ‍ಷ ದಿನಗಳಂದು ತನ್ನ ಡೂಡಲ್‌ ಮೂಲಕ ವಿಶೇಷ ಗೌರವವನ್ನು ನೀಡುತ್ತಾ ಬಂದಿದೆ. ವಿಶೇಷ ದಿನಗಳ ಮಹತ್ವ, ಅದರ ಹಿನ್ನೆಲೆ ಎಲ್ಲವನ್ನು ಸಾರುವ ಡೂಡಲ್‌ ಮೂಲಕ ಆ ದಿನದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ಸದ್ಯ ಇಂದು ವಿಶ್ವ ಭೂಮಿಯ ದಿನವನ್ನು ಆಚರಣೆ ಮಾಡುತ್ತಿರುವುದರಿಂದ ಗೂಗಲ್‌ ಡೂಡಲ್‌ ಮೂಲಕ ವಿಶ್ವ ಭೂಮಿಯ ದಿನಕ್ಕೆ ಗೌರವ ಸೂಚಿಸಿದೆ. ಇನ್ನು ಈ ಭಾರಿಯ ಗೂಗಲ್‌ ಡೂಡಲ್‌ನಲ್ಲಿ ಹವಾಮಾನ ಬದಲಾವಣೆ ಹೇಗೆಲ್ಲಾ ಆಗುತ್ತಿದೆ ಎಂಬುದನ್ನು ಸೂಚಿಸುವ ಪ್ರಯತ್ನ ಮಾಡಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಡೂಡಲ್‌ ಮೂಲಕ ವಿಶ್ವ ಭೂಮಿಯ ದಿನದ ಆಚರಣೆಯ ಶುಭಾಶಯ ಕೋರಿದೆ. ಪ್ರಸ್ತುತ ದಿನಗಳಲ್ಲಿ ಭೂಮಿಯ ಮೇಲಿನ ಹವಾಮಾನ ಬದಲಾವಣೆಯ ಸವಾಲನ್ನು ಸೂಚಿಸುವ ರೀತಿಯಲ್ಲಿ ಡೂಡಲ್‌ ಅನ್ನು ವಿನ್ಯಾಸಗೊಳಿಸಿದೆ. ಅಲ್ಲದೆ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಭೂಮಿಯ ಮೇಲಿನ ಜೀವರಾಶಿ ಇನ್ನು ಹೆಚ್ಚು ಸಮರ್ಥನೀಯವಾಗಿ ಬದುಕ ಬೇಕಾದರೆ ನಾವೆಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸುವುದು ಅವಶ್ಯಕ ಎನ್ನುವ ಸಂದೇಶವನ್ನು ಸಾರಿದೆ. ಹಾಗಾದ್ರೆ ಗೂಗಲ್‌ ಡೂಡಲ್‌ನಲ್ಲಿ ಏನೆಲ್ಲಾ ಸಂದೇಶವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಪ್ರಿಲ್‌ 22

ಪ್ರತಿವರ್ಷ ಏಪ್ರಿಲ್‌ 22 ರಂದ ವಿಶ್ವದಲ್ಲೆಡೆ ವಿಶ್ವ ಭೂಮಿಯ ದಿನವನ್ನು ಆಚರಣೆ ಮಡಲಾಗುತ್ತಿದೆ. ಬದಲಾಗುತ್ತಿರುವ ಆಧುನಿಕ ಜಗತ್ತಿನ ಕಾರಣದಿಂದಾಗಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಎಂದಿಗಿಂತ ಭೂಮಿಯ ವಾತಾವರಣವನ್ನು ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಹವಾಮಾನ ವೈಪ್ಯರಿತ್ಯ ಹೆ್ಚಾದಂತೆ ಸಕಲ ಜೀವರಾಶಿಗಳಿಗೂ ಆಪತ್ತು ತಪ್ಪಿದ್ದಲ್ಲ. ಆದರಿಂದ ಭೂಮಿಯ ಮೇಲಿನ ವಾತಾವರಣದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆಧುನಿಕತೆ ಬದಲಾದಂತೆ ಹೇಗೆಲ್ಲಾ ಹವಾಮಾನ ಬದಲಾಗಿದೆ ಎಂದು ಸೂಚಿಸುವ ಪ್ರಯತ್ನವನ್ನು ಈ ಭಾರಿಯ ಗೂಗಲ್‌ ಡೂಡಲ್‌ನಲ್ಲಿ ತಿಳಿಸಿಲಾಗಿದೆ.

ಗೂಗಲ್‌

ಇಂದಿನ ಗೂಗಲ್‌ ಡೂಡಲ್ ವಿವಿಧ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯ ಪ್ರಭಾವವನ್ನು ಹೇಗೆ ಕಾಣಬಹುದು ಎನ್ನುವುದನ್ನ ಪ್ರದರ್ಶಿಸಿದೆ. ಇದಕ್ಕಾಗಿ ಗೂಗಲ್‌ ಅರ್ಥ್ ಟೈಮ್‌ಲ್ಯಾಪ್ಸ್ ಮತ್ತು ಇತರ ಮೂಲಗಳಿಂದ ರಿಯಲ್‌ ಟೈಂಲ್ಯಾಪ್ಸ್‌ ಇಮೇಜ್‌ ಅನ್ನು ಬಳಸಿದೆ. ದಿನವಿಡೀ, ಡೂಡಲ್ ಚಿತ್ರಗಳು ಭೂಮಿಯ ವಿವಿಧ ಸ್ಥಳಗಳನ್ನು ಪ್ರತಿನಿಧಿಸುತ್ತಾ ಬದಲಾಗುತ್ತವೆ. ಅಲ್ಲದೆ ವರ್ಷಗಳು ಕಳೆದಂತೆ ಈ ಪ್ರದೇಶಗಳಲ್ಲಿ ಜಾಗತಿಕ ತಾಪಮಾನ ಏರಿಕೆಯ ಪ್ರಭಾವ ಹೇಗಿದೆ ಅನ್ನೊದನ್ನ ಸೂಚಿಸುತ್ತವೆ.

ಗೂಗಲ್‌

ಗೂಗಲ್‌ ಡೂಡಲ್‌ನಲ್ಲಿ ಸೂಚಿಸಿರುವ ಪ್ರತಿ ಚಿತ್ರವು ಕೂಡ ಒಂದು ಸಮಯದಲ್ಲಿ ಹಲವಾರು ಗಂಟೆಗಳ ಕಾಲ ಮುಖಪುಟದಲ್ಲಿ ಉಳಿಯಲಿದೆ. ಇನ್ನು ಇಂದಿನ ಡೂಡಲ್ ಆಫ್ರಿಕಾದ ಮೌಂಟ್ ಕಿಲಿಮಂಜಾರೋ ಶಿಖರದಲ್ಲಿ ಹಿಮನದಿ ಹೇಗೆ ಕರಗಿದೆ, ಗ್ರೀನ್‌ಲ್ಯಾಂಡ್‌ನ ಸೆರ್ಮರ್‌ಸೂಕ್ ಗ್ಲೇಸಿಯರ್ ರಿಟ್ರೀಟ, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಮತ್ತು ಜರ್ಮನಿಯ ಹಾರ್ಜ್ ಫಾರೆಸ್ಟ್‌ಗಳಲ್ಲಿ ಪ್ರಸ್ತುತ ಹೇಗೆಲ್ಲಾ ಬದಲಾವಣೆ ನಡೆದಿದೆ ಎನ್ನುವ ರಿಯಲ್‌ ಇಮೇಜ್‌ ಅನ್ನು ಪ್ರದರ್ಶಿಸುತ್ತಿದೆ.

ಪರಿಸರ

ಇದಲ್ಲದೆ ಕಾಲಾನಂತರದಲ್ಲಿ ಬೆಚ್ಚಗಿನ ತಾಪಮಾನವು ಹೇಗೆ ಹವಾಮಾನದ ಮಾದರಿಗಳನ್ನು ಬದಲಾಯಿಸುತ್ತಿದೆ. ಪ್ರಕೃತಿಯ ಸಾಮಾನ್ಯ ಸಮತೋಲನದಲ್ಲಿ ನಾಗರೀಕ ಸಮಾಜ ಹೇಗೆ ಮಾಲಿನ್ಯವನ್ನುಂಟು ಮಾಡಿದೆ. ಇದು ಮನುಷ್ಯರಿಗೆ ಮತ್ತು ಭೂಮಿಯ ಮೇಲಿನ ಎಲ್ಲಾ ರೀತಿಯ ಜೀವಗಳಿಗೆ ಅನೇಕ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ಸೂಚಿಸಲಿದೆ. ಅದರಂತೆ ವಿಶ್ವ ಭೂಮಿಯ ದಿನದ ಮಹತ್ವ ಏನು, ಪರಿಸರ ಸಂರಕ್ಷಣೆಗೆ ನಾವೆಲ್ಲಾ ಬೆಂಬಲ ನೀಡುವ ಪ್ರತಿಜ್ಞೆಮಾಡಬೇಕಿದೆ. ಸದ್ಯ ಇಂದು ನಡೆಯುತ್ತಿರುವ ವಿಶ್ವ ಭೂಮಿಯ ದಿನದ ಆಚರಣೆ 52 ನೇ ವಾರ್ಷಿಕೋತ್ಸವ ಆಗಿದೆ.

Most Read Articles
Best Mobiles in India

English summary
Google Doodle For Earth Day Has A Message For Us All

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X