ಗ್ರೂಪ್‌ ವೀಡಿಯೊ ಕಾಲಿಂಗ್‌ ಸಂಖ್ಯೆಯ ಮಿತಿಯನ್ನು ಹೆಚ್ಚಿಸಿದ ಗೂಗಲ್ ಡ್ಯುಯೊ!

|

ಲಾಕ್‌ಡೌನ್‌ ಸಮಯದಲ್ಲಿ ಗ್ರೂಪ್‌ ಕಾಲಿಂಗ್‌ ವೀಡಿಯೋ ಆಪ್‌ಗಳಿಗೆ ಬಾರಿ ಜನಪ್ರಿಯತೆಯನ್ನ ಪಡೆದುಕೊಂಡಿವೆ. ಸದ್ಯ ಕೊವೀಡ್‌-19 ಹಾವಳಿಯಿಂದಾಗಿ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫಮ್‌ ಹೋಮ್‌ ಕಾರ್ಯನಿರ್ವಹಿಸಲು ಹೇಳಿವೆ. ಇದೇ ಕಾರಣಕ್ಕೆ ಗ್ರೂಪ್ ವೀಡಿಯೊ ಕಾಲಿಂಗ್‌ ಆಪ್‌ಗಳು ತಮ್ಮ ಪ್ರಸಿದ್ಧಿಯನ್ನ ಪಡೆದುಕೊಳ್ಳುತ್ತಿವೆ. ಸದ್ಯ ವೀಡಿಯೋ ಕಾನ್ಫರೆನ್ಸಿಂಗ್‌ ಆಪ್‌ಗಳ ನಡುವೆ ಫೈಪೋಟಿ ನಡೆಯುತ್ತಲೇ ಇದೆ. ಸದ್ಯ ಇತ್ತೀಚಿಗೆ ಮೀಟ್ ವೀಡಿಯೊ ಕಾನ್ಫರೆನ್ಸಿಂಗ್ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದೀಗ ಗೂಗಲ್‌ ಡ್ಯುವೋ ಕೂಡ ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಗೂಗಲ್‌ ಡ್ಯುಯೊ

ಹೌದು, ಗೂಗಲ್‌ ಡ್ಯುಯೊ ಸದ್ಯ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಗೂಗಲ್ ಡ್ಯುಯೊ ವೆಬ್‌ನಲ್ಲಿ 32 ಮಂದಿ ಗ್ರೂಪ್‌ ಕಾಲಿಂಗ್‌ ವಿಡಿಯೋ ಬೆಂಬಲಿಸುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಮೂಲಕ ವೀಡಿಯೋ ಕಾಲಿಂಗ್‌ನಲ್ಲಿ ಭಾಗವಹಿಸಬಹುದಾದ ಸಂಖ್ಯೆಯ ಮಿತಿ ಜಾಸ್ತಿಯಾಗಿದೆ. ಇದರಿಂದ ಬಳಕೆದಾರರು ತಮ್ಮ ಸ್ನೆಹಿತರು, ಬಂದು ಬಳಗದವರ ಜೊತೆ ಇನ್ನು ಹೆಚ್ಚಿನ ಜನರ ಜೊತೆ ಏಕಕಾಲದಲ್ಲಿ ಬೆರೆಯಲು ಸಾಧ್ಯವಾಗಲಿದೆ. ಇನ್ನು ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೀಡಿಯೋ

ಸದ್ಯ ಕೆಲವು ತಿಂಗಳುಗಳಿಂದ ಗ್ರೂಪ್‌ ವೀಡಿಯೋ ಕಾಲಿಂಗ್‌ ಆಪ್‌ಗಳಿಗೆ ಭಾರಿ ಬೇಡಿಕೆ ಇದೆ. ಅಲ್ಲದೆ ಈ ಆಪ್‌ಗಳು ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿವೆ. ಇದೀಗ ಗೂಗಲ್‌ ಡ್ಯುವೋ ತನ್ನ ವೀಡಿಯೋ ಕಾಲಿಂಗ್‌ ಫೀಚರ್ಸ್‌ನಲ್ಲಿ 12 ಮಂದಿ ಭಾಗವಹಿಸುವವರಿಂದ 32 ಮಂದಿ ಭಾಗವಹಿಸಬಹುದಾದ ಅವಕಾಶವನ್ನ ನೀಡಿದೆ. ಅಲ್ಲದೆ ಕಳೆದ ಮಾರ್ಚ್‌ನಲ್ಲಿ, ಗ್ರೂಪ್‌ ಕಾಲ್‌ ಮಿತಿಯು ಎಂಟು ಮಂದಿಗೆ ಮಾತ್ರ ಸೀಮಿತವಾಗಿತ್ತು. ನಂತರ COVID-19 ಶುರುವಾದ ನಂತರ ಅಗತ್ಯಕ್ಕೆ ಅನುಗುಣವಾಗಿ ಗ್ರೂಪ್‌ ಕರೆಗಳಲ್ಲಿ ಭಾಗವಹಿಸವವರ ಸಂಖ್ಯೆಯನ್ನ ವಿಸ್ತರಣೆ ಮಾಡಿದೆ.

ಗ್ರೂಪ್‌ ಕಾಲಿಂಗ್

ಇನ್ನು ಗ್ರೂಪ್‌ ಕಾಲಿಂಗ್‌ ಸಂಖ್ಯೆಯ ಮಿತಿಯನ್ನ ಹೆಚ್ಚಿಸುವುದಕ್ಕಾಗಿ ಟೈಲ್ಡ್ UI ಆನ್‌ಲೈನ್ ಪ್ರತಿ ವಿಂಡೋದ ಮೂಲೆಗಳನ್ನು ಸುತ್ತುವಂತೆ ಮಾಡಲಾಗಿದೆ. ಅಲ್ಲದೆ ಪೋಟೋ ಮತ್ತು ಲೊಕೇಶನ್‌ ತೊರಿಸುವಂತೆ ವ್ಯವಸ್ತೆ ಮಾಡಲಾಗಿದೆ. ಅಲ್ಲದೆ ಕಾಲಿಂಗ್‌ನಲ್ಲಿ ಭಾಗವಹಿಸುವವರ ಫೇಸ್‌ಗಳನ್ನ ಏರಿಳಿಕೆ ಜೊತೆಗೆ ಮತ್ತು ನೀವು ಸ್ಕ್ರಾಲ್ ಮಾಡಬಹುದಾಗಿದೆ. ಜೊತೆಗೆ ಈ ಫೀಚರ್ಸ್‌ ಅನ್ನು ಪಡೆಯಬೇಕಾದರೆ ಮೊದಲು ನೀವು ನಿಮ್ಮ Google ಖಾತೆಯೊಂದಿಗೆ ಡ್ಯುಯೊಗೆ ಸೈನ್ ಇನ್ ಮಾಡುವ ಅಗತ್ಯವಿದೆ. ಇದಕ್ಕಾಗಿ ಕೇವಲ ಫೋನ್ ಸಂಖ್ಯೆ ಮಾತ್ರವಲ್ಲ ಮತ್ತು ಪ್ರಸ್ತುತ "ಕರೆ ಪ್ರಾರಂಭಿಸು" ಗುಂಡಿಯ ಕೆಳಗೆ "ಗುಂಪನ್ನು ರಚಿಸಿ" ಟ್ಯಾಪ್ ಮಾಡಬೇಕಿರುತ್ತದೆ.

ಗೂಗಲ್

ಅಲ್ಲದೆ ಆಂಡ್ರಾಯ್ಡ್ ಮತ್ತು ಐಒಎಸ್ ಕ್ಲೈಂಟ್‌ಗಳಂತೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಈ ಫೀಚರ್ಸ್‌ ಬೆಂಬಲಿಸುತ್ತಿರುವುದರಿಂದ ತೆರೆಮರೆಯಲ್ಲಿ, ಗೂಗಲ್ ಹೊಸ ವೆಬ್‌ಆರ್‌ಟಿಸಿ ಎಪಿಐ ಅನ್ನು ನಿಯಂತ್ರಿಸುತ್ತಿದೆ. ಸದ್ಯ duo.google.com ಅನ್ನು ಈಗ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರೋಗ್ರೆಸ್ಸಿವ್ ವೆಬ್ ಅಪ್ಲಿಕೇಶನ್‌ನಂತೆ ಉಳಿಸಬಹುದಾಗಿದ್ದು. ಈ ವೆಬ್‌ಸೈಟ್ ಈಗಾಗಲೇ ಹೊಸ ನೊಟೀಪೀಕೇಶನ್‌ಗಳನ್ನು ಬೆಂಬಲಿಸುತ್ತದೆ.

Best Mobiles in India

English summary
Google Duo rolling out web group calls with up to 32 people, adds online PWA video.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X