ಗೂಗಲ್‌ ಕ್ರೋಮ್‌ ಬಳಕೆದಾರರೇ ಎಚ್ಚರ? ಗೂಗಲ್‌ ನೀಡಿದ ವರದಿಯಲ್ಲಿ ಏನಿದೆ ಗೊತ್ತಾ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ. ಗೂಗಲ್‌ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ ಗೂಗಲ್‌ ಕ್ರೋಮ್‌ ಬಳಸುವ ಬಳಕೆದಾರರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ ಎನ್ನಲಾಗ್ತಿದೆ. ಗೂಗಲ್‌ ಕ್ರೋಮ್‌ ನಲ್ಲಿ ಹ್ಯಾಕಿಂಗ್‌ಗೆ ಕಾರಣವಾಗುವ ಹಲವಾರು ದೋಷಗಳು ಪತ್ತೆಯಾಗಿರುವುದರಿಂದ ಬಳಕೆದಾರರಿಗೆ ಬೆದರಿಕೆಗಳು ಬರುತ್ತಿವೆ ಎನ್ನಲಾಗಿದೆ. ಈ ದೋಷಗಳನ್ನು ವಿವರಿಸುವ ಬ್ಲಾಗ್ ಪೋಸ್ಟ್ ಅನ್ನು ಗೂಗಲ್‌ ಬಿಡುಗಡೆ ಮಾಡಿದೆ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ನಲ್ಲಿನ ದೋಷದಿಂದಾಗಿ ಬಳಕೆದಾರರು ಹ್ಯಾಕರ್ಸ್‌ಗಳ ಕಡೆಯಿಂದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಕ್ರೋಮ್‌ನಲ್ಲಿ ಕಾಣಿಸಿಕೊಂಡಿರುವ ಹಲವು ಸಮಸ್ಯೆಗಳನ್ನು ಇನ್ನೂ ಪರಿಹರಿಸದ ಕಾರಣ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಹೇಳಲಾಗ್ತಿದೆ. ಇನ್ನು ಗೂಗಲ್‌ ಕ್ರೋಮ್ ಬ್ಲಾಗ್ ಪೋಸ್ಟ್‌ನಲ್ಲಿ ಗೂಗಲ್ 30 ರೀತಿಯ ದುರ್ಬಲತೆಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಏಳು 'ಹೈ' ಬೆದರಿಕೆಗಳು ಎಂದು ವರ್ಗೀಕರಿಸಲಾಗಿದೆ. ಇನ್ನುಳದಿಂತೆ ಗೂಗಲ್‌ ನೀಡಿದ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌

ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಅನೇಕ ಹೈ ರಿಸ್ಕ್‌ಗಳನ್ನು ಪತ್ತೆ ಹೆಚ್ಚಲಾಗಿದೆ. ಇದರಿಂದ ಬಳಕೆದಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗೂಗಲ್‌ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿಕೊಂಡಿದೆ. ಈಗಾಗಲೇ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ದೋಷಗಳನ್ನು ಗುರುತಿಸಲಾಗಿದೆ. ಸದ್ಯ ಈ ಹೈ ರಿಸ್ಕ್‌ಗಳಿಂದ ಬಳಕೆದಾರರನ್ನು ರಕ್ಷಿಸುವುದಕ್ಕಾಗಿ ಬಗ್ ವಿವರಗಳು ಮತ್ತು ಲಿಂಕ್‌ಗಳ ಪ್ರವೇಶವನ್ನು ಬಹುಪಾಲು ಬಳಕೆದಾರರು ಅಪ್ಡೇಟ್‌ ಮಾಡುವ ತನಕ ಪ್ರವೇಶಿದಂತೆ ತಡೆಯಲು ಗೂಗಲ್ ಮುಂದಾಗಿದೆ.

ಬಳಕೆದಾರರು ಏನು ಮಾಡಬೇಕು?

ಬಳಕೆದಾರರು ಏನು ಮಾಡಬೇಕು?

ಗೂಗಲ್ ಈಗಾಗಲೇ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದೆ. ಅಲ್ಲದೆ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್‌ಗಾಗಿ ಹೊಸ ಅಪ್ಡೇಟ್‌ ಈಗಾಗಲೇ ಹೊರಬರುತ್ತಿದೆ ಎಂದು ಗೂಗಲ್‌ ಹೇಳಿಕೊಂಡಿದೆ. ಒಂದು ವೇಳೆ ನಿಮ್ಮ ಬ್ರೌಸರ್ ಸ್ವಯಂಚಾಲಿತವಾಗಿ ಅಪ್ಡೇಟ್‌ ಆಗದಿದ್ದರೆ, ಅದನ್ನು ನೀವು ಹಸ್ತಚಾಲಿತವಾಗಿ ಅಪ್ಡೇಟ್‌ ಮಾಡಬೇಕಾಗಬಹುದು. ಹಾಗಾದ್ರೆ ನೀವು ಹಸ್ತಚಾಲಿತವಾಗಿ ಅಪ್ಡೇಟ್‌ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್‌ ಕ್ರೋಮ್‌ ಬ್ರೌಸರ್ ಅನ್ನು ಅಪ್ಡೇಟ್‌ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ ಬ್ರೌಸರ್ ಅನ್ನು ಅಪ್ಡೇಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸಿಸ್ಟಂನಲ್ಲಿ ಕ್ರೋಮ್‌ ಬ್ರೌಸರ್‌ ತೆರೆಯಿರಿ.
ಹಂತ:2 ನಂತರ ಬ್ರೌಸರ್‌ನ ಬಲ ಮೂಲೆಗೆ ಹೋಗಿ ಮತ್ತು ಮೂರು ಅಡ್ಡ ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
ಹಂತ:3 ಇದೀಗ ನೀವು ಡ್ರಾಪ್-ಡೌನ್ ಮೆನುವನ್ನು ಕಾಣಬಹಿದಿ.
ಹಂತ:4 ಈ ಮೆನುವಿನಲ್ಲಿ ಸೆಟ್ಟಿಂಗ್ಸ್‌ ಆಯ್ಕೆ ಮಾಡಿ
ಹಂತ:5 ನೀವು ಸೆಟ್ಟಿಂಗ್ಸ್‌ನಲ್ಲಿ ನಮೂದಿಸಿದ ನಂತರ, ನೀವು ಹೆಲ್ಪ್‌ ಮತ್ತು ಆಬೌಟ್‌ ಗೂಗಲ್‌ ಕ್ರೋಮ್‌ ಕ್ಲಿಕ್‌ ಮಾಡಬೇಕಾಗುತ್ತದೆ
ಹಂತ:6 ನಂತರ ಕ್ರೋಮ್ ಯಾವುದೇ ಬಾಕಿ ಇರುವ ಅಪ್ಡೇಟ್‌ ಅನ್ನು ಡೌನ್‌ಲೋಡ್ ಮಾಡಲಿದೆ.
ಹಂತ:7 ನೀವು ಅಪ್ಡೇಟ್‌ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ, ಸಿಸ್ಟಂ ಅನ್ನು ಶಟ್‌ಡೌನ್‌ ಮಾಡಿ ನಂತರ ತೆರೆಯಬೇಕಾಗುತ್ತದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೊಸ ಡೇಟಾ ಸೇಫ್ಟಿ ವಿಭಾಗದ ಬಗ್ಗೆ ಮಾಹಿತಿ ನೀಡಿದೆ. ಈ ವಿಭಾಗದಲ್ಲಿ "ಬಳಕೆದಾರರು ತಮ್ಮ ಡೇಟಾವನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸುತ್ತಿದ್ದಾರೆ ಮತ್ತು ಡೆವಲಪರ್ ಬಳಕೆದಾರರ ಡೇಟಾವನ್ನು ಥರ್ಡ್‌ ಪಾರ್ಟಿಗಳೊಂದಿಗೆ ಶೇರ್‌ ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಸಾಧ್ಯವಾಗಲಿದೆ. ಅಲ್ಲದೆ ಯಾವುದೇ ಅಪ್ಲಿಕೇಶನ್ ಕಾರ್ಯನಿರ್ವಹಿಸಲು ನಿರ್ದಿಷ್ಟ ಪ್ರಕಾರದ ಡೇಟಾ ಅಗತ್ಯವಿದೆಯೇ ಅಥವಾ ಈ ಡೇಟಾ ಸ್ಟೋರೇಜ್‌ ಐಚ್ಛಿಕವಾಗಿದ್ದರೆ ಬಳಕೆದಾರರು ನೋಡಬಹುದು ಎಂದು ಗೂಗಲ್‌ ಬ್ಲಾಗ್‌, ಪೋಸ್ಟ್ ನಲ್ಲಿ ವಿವರಿಸಿದೆ.

Most Read Articles
Best Mobiles in India

English summary
Google Chrome users are under threat according to new information revealed by the search giant

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X