ನಾಳೆಯಿಂದ ಜಾರಿಗೆ ಬರಲಿದೆ ಗೂಗಲ್‌ನ ಹೊಸ ನೀತಿ! ಏನೆಲ್ಲಾ ಬದಲಾಗಲಿದೆ ಗೊತ್ತಾ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ನೀತಿಯಲ್ಲಿ ಬದಲಾವಣೆಗೆ ಮುಂದಾಗಿದೆ. ಈ ಹೊಸ ಬದಲಾವಣೆ ನಾಳೆಯಿಂದ (ಮೇ.11) ಜಾರಿಗೆ ಬರಲಿದೆ. ಈ ಬದಲಾವಣೆಗಳ ಭಾಗವಾಗಿ, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲು ಮುಂದಾಗಿದೆ. ಅಂದರೆ ಇನ್ಮುಂದೆ ಆಂಡ್ರಾಯ್ಡ್‌ ಸ್ಮಾರ್ಟ್‌ಫನ್‌ಗಳಲ್ಲಿ ಕಾಲ್‌ ರೆಕಾರ್ಡಿಂಗ್‌ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ.

ಗೂಗಲ್‌

ಹೌದು, ಗೂಗಲ್‌ ನಾಳೆಯಿಂದ ತನ್ನ ಪ್ಲೇ ಸ್ಟೋರ್‌ನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ. ಆದರೆ ಈ ಹೊಸ ನೀತಿಯನ್ನು ಹೇಗೆ ಕಾರ್ಯಗತಗೊಳಿಸಲು ಗೂಗಲ್‌ ಪ್ಲಾನ್‌ ಮಾಡಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಅಂದರೆ, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಿದೆಯಾ ಅಥವಾ ಪ್ಲಾಟ್‌ಫಾರ್ಮ್‌ನಿಂದ ತಮ್ಮ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಡೆವಲಪರ್‌ಗಳನ್ನು ಕೇಳುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇನ್ನುಳಿದಂತೆ ಗೂಗಲ್‌ ಪ್ಲೇ ಸ್ಟೋರ್‌ನ ಹೊಸ ನಿಯಮಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪ್ಲೇ ಸ್ಟೋರ್‌

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೊಸ ನೀತಿಗಳನ್ನು ಜಾರಿ ಮಾಡಲಿದೆ. ಇದಕ್ಕಾಗಿ ಈಗಾಗಲೇ ಗೂಗಲ್‌ ಕಾಲ್‌ ರೆಕಾರ್ಡಿಂಗ್‌ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಿದೆ. ಅದರಂತೆ "ಆಕ್ಸೆಸಿಬಿಲಿಟಿ API ಅನ್ನು ವಿನ್ಯಾಸಗೊಳಿಸಲಾಗಿಲ್ಲ ಮತ್ತು ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ಗಾಗಿ ವಿನಂತಿಸಲಾಗುವುದಿಲ್ಲ" ಎಂದು ಕಂಪನಿಯು ಬದಲಾವಣೆಯನ್ನು ಘೋಷಿಸುವ ಬೆಂಬಲ ಪುಟದಲ್ಲಿ ಬರೆದಿದೆ. ಇನ್ನು ಕಂಪನಿಯು ತನ್ನ ಎಲ್ಲಾ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಹೊಸ ಬದಲಾವಣೆಯನ್ನು ಅರ್ಥಮಾಡಿಕೊಳ್ಳವುದಕ್ಕೆ ಕಳೆದ ತಿಂಗಳು ತಿಳಿಸಿತ್ತು.

ಗೂಗಲ್‌

ಇನ್ನು ಮೇ 11 ರಿಂದ ಗೂಗಲ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುತ್ತಿದೆ. ಹಾಗಂತೆ ಎಲ್ಲಾ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಪ್ಲಾಟ್‌ಫಾರ್ಮ್‌ನಿಂದ ಬ್ಯಾನ್‌ ಆಗುವುದಿಲ್ಲ. ಅಂದರೆ ಒನ್‌ಪ್ಲಸ್‌, ಶಿಯೋಮಿ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳು ನೀಡುವ ಇಂಟರ್‌ಬಿಲ್ಟ್‌ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಬ್ಯಾನ್‌ ಆಗುವುದಿಲ್ಲ. ಇದಲ್ಲದೆ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸ್ವಂತ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಸಹ ಲಭ್ಯವಿರುತ್ತದೆ.

ಟ್ರೂ ಕಾಲರ್‌

ಇದಲ್ಲದೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಕೂಡ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಸ್ಟಾಪ್‌ ಮಾಡಲಿದೆ. ನಿಮಗೆಲ್ಲಾ ತಿಳಿದಿರುವಂತೆ ಟ್ರೂಕಾಲರ್‌ ಅಪ್ಲಿಕೇಶನ್‌ನಲ್ಲಿ ಕಾಲ್‌ ರೆಕಾರ್ಡಿಂಗ್ ಎಲ್ಲರಿಗೂ ಫ್ರೀ ಆಗಿದೆ. ಅನುಮತಿ-ಆಧಾರಿತ ಮತ್ತು ಬಳಕೆದಾರರು ಗೂಗಲ್‌ ಆಕ್ಸೆಸಿಬಿಲಿಟಿ API ಬಳಸಿಕೊಂಡು ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು ಅಗತ್ಯವಿದೆ ಎಂದು ಟ್ರೂಕಾಲರ್ ತಿಳಿಸಿದೆ. ಟ್ರೂ ಕಾಲರ್‌ ಈಗಾಗಲೇ ಗ್ರಾಹಕರ ಬೇಡಿಕೆಯಂತೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದೀಗ ಗೂಗಲ್‌ ಡೆವಲಪರ್ ಪ್ರೋಗ್ರಾಂ ನೀತಿಗಳ ಪ್ರಕಾರ,ಇನ್ಮುಂದೆ ಟ್ರೂ ಕಾಲರ್‌ ಕಾಲ್‌ ರೆಕಾರ್ಡಿಂಗ್ ಅನ್ನು ಸ್ಟಾಪ್‌ ಮಾಡಲಿದೆ.

ಟ್ರೂ ಕಾಲರ್‌

ಇನ್ನು ಟ್ರೂ ಕಾಲರ್‌ ಮೊದಲ ಪಕ್ಷದ ಡಯಲರ್ ಅಪ್ಲಿಕೇಶನ್‌ಗಳು ಮತ್ತು ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಗೂಗಲ್‌ ಡಯಲರ್ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಫೋನ್ ಕರೆಗಳನ್ನು ರೆಕಾರ್ಡ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆಯನ್ನು ಒದಗಿಸಲು ಮತ್ತು ಜಾಗತಿಕವಾಗಿ ಕರೆ ರೆಕಾರ್ಡಿಂಗ್ ಕಾನೂನುಗಳನ್ನು ಅನುಸರಿಸಲು ಗೂಗಲ್‌ ಈ ಹೊಸ ಬದಲಾವಣೆ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ನಾಳೆಯಿಂದ ಜಾರಿಗೆ ಬರುವ ಗೂಗಲ್‌ನ ಹೊಸ ನೀತಿ ಇನ್ನು ಎನೆಲ್ಲಾ ಬದಲಾವಣೆ ತರಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

Read more about:
English summary
As per reports, all third-party call recording apps will stop working on Google's Android OS starting May 11.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X