ಗೂಗಲ್‌ ಕ್ರೋಮ್‌ ಬಳಸುವವರು ಕೂಡಲೇ ಹೊಸ ಅಪ್ಡೇಟ್‌ ಮಾಡಿರಿ ಎಂದ ಗೂಗಲ್‌!

|

ಗೂಗಲ್‌ ಕ್ರೋಮ್‌ ಬಳಕೆದಾರರ ನೆಚ್ಚಿನ ವೆಬ್‌ ಬ್ರೌಸರ್‌ ಎನಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗೂಗಲ್‌ ಕ್ರೋಮ್‌ ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿರುವುದು ಹೆಚ್ಚು ಸುದ್ದಿಯಾಗ್ತಿದೆ. ಇದೇ ಕಾರಣಕ್ಕೆ ಗೂಗಲ್‌ ತನ್ನ ಕ್ರೋಮ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಅಲ್ಲದೆ ಈ ಹೊಸ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡದಿರುವವರು ಡಿವೈಸ್‌ ಹ್ಯಾಕಿಂಗ್‌ಗೆ ಗುರಿಯಾಗಬಹುದು ಎಂದು ಹೇಳಲಾಗಿದೆ. ಜೊತೆಗೆ ಗೂಗಲ್‌ ಹೊಸ ಆವೃತ್ತಿಯನ್ನು ಎಮರ್ಜೆನ್ಸಿ ಅಪ್ಡೇಟ್‌ನಲ್ಲಿ ಬಿಡುಗಡೆ ಮಾಡಿರುವುದು ಬ್ರೌಸರ್‌ನಲ್ಲಿನ ಭದ್ರತಾ ಸಮಸ್ಯೆ ಗಂಭೀರವಾಗಿದೆ ಎಂಬದರ ಸುಳಿವು ನೀಡಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಕ್ರೋಮ್‌ ಬ್ರೌಸರ್‌ನಲ್ಲಿ ಎಮರ್ಜೆನ್ಸಿ ಅಪ್ಡೇಟ್‌ ಮಾಡಿದೆ. ಅಲ್ಲದೆ ಈ ಅಪ್ಡೇಟ್‌ ಅನ್ನು ಎಲ್ಲಾ ಬಳಕೆದಾರರು ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಹೇಳಿಕೊಂಡಿದೆ. ಗೂಗಲ್‌ ವಿಂಡೋಸ್‌, ಮ್ಯಾಕ್‌ ಮತ್ತು ಲಿನಕ್ಸ್‌ಗಾಗಿ ಕ್ರೋಮ್‌ ಆವೃತ್ತಿ 99.0.4844.84 ಅನ್ನು ಹೊರತಂದಿದೆ. ಇನ್ನು ಈ ಆವೃತ್ತಿಯು ಜಿರೋ-ಡೇ ಶೋಷಣೆ CVE-2022-1096 ಅನ್ನು ಕೇಂದ್ರೀಕರಿಸಿದ ಕೇವಲ ಒಂದು ಭದ್ರತಾ ಅಪ್ಡೇಟ್‌ ಅನ್ನು ಹೊಂದಿದೆ ಎಂದು ಗೂಗಲ್‌ ವಿವರಿಸಿದೆ. ಇನ್ನುಳಿದಂತೆ ಈ ಹೊಸ ಅಪ್ಡೇಟ್‌ನ ವಿಶೇಷತೆ ಏನು ಅ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಕಳೆದ ಕೆಲವು ತಿಂಗಳುಗಳಿಂದ ಗೂಗಲ್‌ ಕ್ರೋಮ್‌ ಹ್ಯಾಕರ್‌ಗಳ ದಾಳಿಗೆ ಸುಲಭವಾಗಿ ತುತ್ತಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಅಲ್ಲದೆ ಗೂಗಲ್‌ ಹೇಳಿಕೊಂಡಿರುವಂತೆ ಜಿರೋ-ಡೇ ದುರ್ಬಲತೆಯು ಕ್ರೋಮ್‌ನ ಜಾವಾಸ್ಕ್ರಿಪ್ಟ್ ಎಂಜಿನ್‌ನಲ್ಲಿದೆ. ಜೊತೆಗೆ ಬ್ರೌಸರ್‌ಗೆ ದುರುದ್ದೇಶಪೂರಿತ ಕೋಡ್ ಅನ್ನು ಇಂಜೆಕ್ಟ್ ಮಾಡಲು ಹ್ಯಾಕರ್‌ಗಳಿಂದ ಕೂಡ ಪ್ರಯತ್ನ ನಡೆಯುತ್ತಿದೆ. ಕ್ರೋಮಿಯಂ ಎಂಜಿನ್‌ನಲ್ಲಿ ದುರ್ಬಲತೆ ಇರುವುದರಿಂದ, ಇದು ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ನ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಗೂಗಲ್‌ ಕ್ರೋಮ್‌ ಅಪ್ಡೇಟ್‌ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ ಅಪ್ಡೇಟ್‌ ಮಾಡುವುದು ಹೇಗೆ?

ಗೂಗಲ್‌ ಕ್ರೋಮ್‌ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಕ್ರೋಮ್‌ ಮೆನುಗೆ ಹೋಗಿ. ಇದರಲ್ಲಿ ಗೂಗಲ್‌ ಕ್ರೋಮ್‌ ಕುರಿತು ಕ್ಲಿಕ್ ಮಾಡಿ. ನಿಮ್ಮ ಬ್ರೌಸರ್ ಆಟೋಮ್ಯಾಟಿಕ್‌ ಹೊಸ ಅಪ್ಡೇಟ್‌ಗಾಗು ಪರಿಶೀಲಿನೆ ನಡೆಸಲು ಪ್ರಾರಂಭಿಸುತ್ತದೆ. ಅಪ್ಡೇಟ್‌ ಕಂಡ ಕೂಡಲೇ ಆಟೋಮ್ಯಾಟಿಕ್‌ ಡೌನ್‌ಲೋಡ್ ಪ್ರಾರಂಭವಾಗುತ್ತದೆ. ಅಪ್ಡೇಟ್‌ ಡೌನ್‌ಲೋಡ್ ಮಾಡಿದ ನಂತರ ಮತ್ತು ಇನ್‌ಸ್ಟಾಲ್‌ ಮಾಡಿದ ನಂತರ, ಬದಲಾವಣೆಗಳು ಕಾರ್ಯರೂಪಕ್ಕೆ ಬರಲು ಬ್ರೌಸರ್ ಅನ್ನು ರಿಸ್ಟಾರ್ಟ್‌ ಮಾಡಬೇಕು. ನಿಮ್ಮ ಸಿಸ್ಟಂ ಅನ್ನು ರಿಸ್ಟಾರ್ಟ್‌ ಮಾಡಿದ ನಂತರ ಹೊಸ ಅಪ್ಡೇಟ್‌ ನಿಮಗೆ ಲಭ್ಯವಾಗಲಿದೆ.

ಎಮರ್ಜೆನ್ಸಿ

ಇನ್ನು ಇತ್ತೀಚಿಗೆ ಕೇಂದ್ರ ಐಟಿ ಸಚಿವಾಲಯದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೂಗಲ್ ಕ್ರೋಮ್ ಬ್ರೌಸರ್ ಬಳಕೆದಾರರಿಗೆ ಎಮರ್ಜೆನ್ಸಿ ಆಲರ್ಟ್‌ ನೀಡಿತ್ತು. ಗೂಗಲ್‌ ಕ್ರೋಮ್‌ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಹ್ಯಾಕರ್‌ಗಳು ಬಳಸಿಕೊಳ್ಳಬಹುದಾದ ಹಲವಾರು ದೋಷಗಳು ಪತ್ತೆಯಾಗಿದೆ. ಇದರಿಂದ ಹ್ಯಾಕರ್‌ಗಳು ವೈಯಕ್ತಿಕ ವಿವರಗಳಿಗೆ ಪ್ರವೇಶವನ್ನು ಪಡೆಯಬಹುದು. ಅಲ್ಲದೆ ಉದ್ದೇಶಿತ ಪಿಸಿಯಲ್ಲಿ ಸ್ನೂಪ್ ಮಾಡಲು ಮಾಲ್‌ವೇರ್ ಅನ್ನು ಸೇರಿಸಬಹುದು ಎಂದು ಹೇಳಿತ್ತು. ಈ ದೋಷವನ್ನು ಸರಿಪಡಿಸಲು ಗೂಗಲ್‌ ಕೂಡ ತ್ವರಿತವಾಗಿ ಹೊಸ ಅಪ್ಡೇಟ್‌ ಬಿಡುಗಡೆ ಮಾಡಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ.

ಗೂಗಲ್‌

ಇದಲ್ಲದೆ ನಿಮ್ಮ ಗೂಗಲ್‌ ಆಗಾಗ ಕೆಲವು ನಕಲಿ ವೆಬ್‌ಸೈಟ್‌ಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇವುಗಳನ್ನ ಕ್ಲಿಕ್‌ಮಾಡಿದರೆ ಹ್ಯಾಕರ್‌ಗಳ ದಾಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದರಿಂದ ಗೂಗಲ್‌ ಕ್ರೋಮ್‌ನಲ್ಲಿ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇನ್ನು ನೀವು ಗೂಗಲ್‌ ಕ್ರೋಮ್‌ನಲ್ಲಿ ವೆಬ್‌ಸೈಟ್‌ ಬ್ಲಾಕ್‌ ಮಾಡಬೇಕಾದರೆ ಮೊದಲು ಬ್ಲಾಕ್‌ಸೈಟ್ extension ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಾಗುತ್ತದೆ.

Best Mobiles in India

English summary
Google has rolled out new update users update their browser as soon as possible

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X