Subscribe to Gizbot

ಮಾರುಕಟ್ಟೆಗೆ ಗೂಗಲ್ ಸ್ಮಾರ್ಟ್ ಸ್ಪೀಕರ್ ಗಳು: ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ...!

Posted By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್ ಸ್ಪೀಕರ್ ಗಳ ಅಬ್ಬರವು ಜೋರಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅಮೆಜಾನ್ ತನ್ನ ಇಕೋ ಸ್ಮಾರ್ಟ್ ಸ್ಪೀಕರ್ ಗಳನ್ನು ಬಿಡುಗಡೆ ಮಾಡಿದ್ದು, ಮೂರು ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಈ ಸ್ಪೀಕರ್ ಗಳು ಅಲೆಕ್ಸಾದೊಂದಿಗೆ ಕಾರ್ಯನಿರ್ವಹಿಸಲಿವೆ. ಇದೇ ಮಾದರಿಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಹ ತನ್ನ ಸ್ಮಾರ್ಟ್ ಸ್ಪೀಕರ್ ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ.

ಮಾರುಕಟ್ಟೆಗೆ ಗೂಗಲ್ ಸ್ಮಾರ್ಟ್ ಸ್ಪೀಕರ್ ಗಳು: ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ...!

ಗೂಗಲ್ ತನ್ನ ಗೂಗಲ್ ಹೋಮ್ ಮತ್ತು ಹೋಮ್ ಮಿನಿ ಸ್ಮಾರ್ಟ್ ಸ್ಪೀಕರ್ ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದ್ದು, ಇದು ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಲಾಂಚ್ ಆಗಲಿದೆ. ಈ ಎರಡು ಸಾಧನಗಳು ಅಮೆಜಾನ್ ಸ್ಮಾರ್ಟ್ ಸ್ಪೀಕರ್ ಗಳಿಗೆ ನೇರವಾಗಿ ಸ್ಪರ್ಧೆಯನ್ನು ನೀಡುತ್ತವೆ. ಅಲ್ಲದೆ ಗೂಗಲ್ ಅಸಿಸ್ಟೆಂಟ್ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿವೆ.

ಗೂಗಲ್ ಈ ಹಿಂದೆಯೂ ತನ್ನ ಸ್ಮಾರ್ಟ್ ಫೋನ್ ಅನ್ನು ಫ್ಲಿಪ್ ಕಾರ್ಟ್ ಎಕ್ಸ್ ಕ್ಲೂಸಿವ್ ಆಗಿ ಪರಿಚಯ ಮಾಡಿತ್ತು, ಇದೇ ಮಾದರಿಯಲ್ಲಿ ಈ ಬಾರಿಯೂ ಸಹ ಫ್ಲಿಪ್ ಕಾರ್ಟಿನಲ್ಲಿ ತನ್ನ ಸ್ಮಾರ್ಟ್ ಸ್ಪೀಕರ್ ಅನ್ನು ಮಾರಾಟ ಮಾಡಲಿದೆ. ಈಗಾಗಲೇ ಈ ಹೋಮ್ ಸ್ಮಾರ್ಟ್ ಸ್ಪೀಕರ್ ರಿಜಿಸ್ಟರೇಷನ್ ಶರುವಾಗಿದೆ.

ಈ ಸ್ಮಾರ್ಟ್ ಸ್ಪೀಕರ್ ಗಳು ನಿಮ್ಮ ಮನೆಯ ಸ್ಮಾರ್ಟ್ ವಸ್ತುಗಳನ್ನು ನಿಯಂತ್ರಿಸುತ್ತವೆ. ಅಲ್ಲದೇ ನಿಮ್ಮ ಆಜ್ಙೆಗಳನ್ನು ಪಾಲಿಸುವುದರೊಂದಿಗೆ ನಿಮ್ಮ ಮನರಂಜನೆಯ ಸಾಧನವಾಗಿಯೂ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್ ಸ್ಪೀಕರ್ ಗಳು ಬ್ಲೂಟೂತ್ ಮತ್ತು ವೈ-ಫೈ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಭಾರತದಲ್ಲಿ ಲಾಂಚ್ ಆಗಿದೆ ಮಿ ಗಿಫ್ಟ್ ಕಾರ್ಡ್ ಯೋಜನೆ : ಬಳಕೆ ಹೇಗೆ?

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಸ್ಪೀಕರ್ ಗಳಿಂತ ಗೂಗಲ್ ಸ್ಮಾರ್ಟ್ ಸ್ಪೀಕರ್ ಭಿನ್ನವಾಗಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲಿದೆ. ಇದನ್ನು ಮನೆಯಲ್ಲಿ ಒಂದು ಕಡೆಯಲ್ಲಿ ಇಟ್ಟರೆ ಸಾಕು ನೀವು ಎಲ್ಲಿಯೇ ನಿಂತು ಮಾತನಾಡಿದರೂ ಸಹ ಅದಕ್ಕೆ ಕೇಳಿಸುತ್ತವೆ.ಒಟ್ಟಿನಲ್ಲಿ ನಿಮ್ಮ ಮನೆಯನ್ನು ಸ್ಮಾರ್ಟ್ ಮಾಡುವ ಕನಸಿಗೆ ಗೂಗಲ್ ಹೋಮ್ ಸಹಾಯ ಮಾಡಲಿದೆ.

English summary
Google Home and Home Mini could be Flipkart exclusive products. The Home Mini speaker has a 40mm driver for 360-degree sound and supports Bluetooth and dual-band Wi-Fi.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot