ಗೂಗಲ್‌ IO 2022: ಈ ವರ್ಷ ಏನೆಲ್ಲಾ ನಿರೀಕ್ಷಿಸಬಹುದು!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಪ್ರತಿವರ್ಷವೂ ಆನುಯಲ್‌ ಡೆವಲಪರ್‌ ಈವೆಂಟ್‌ ಸಮ್ಮೇಳನ ಗೂಗಲ್‌ IO ಅನ್ನು ನಡೆಸುತ್ತಾ ಬಂದಿದೆ. ಈ ವಾರ್ಷಿಕ ಸಮ್ಮೇಳನದಲ್ಲಿ ತಾನು ಹೊಸದಾಗಿ ಪರಿಚಯಿಸುವ ಡಿವೈಸ್‌ಗಳು, ಫೀಚರ್ಸ್‌ಗಳ ಬಗ್ಗೆ ಗೂಗಲ್‌ ಮಾಹಿತಿ ಹಂಚಿಕೊಳ್ಳಲಿದೆ. ಇದೇ ಈ ಕಾರಣಕ್ಕೆ ಗೂಗಲ್‌ IO ಈವೆಂಟ್‌ ಮೇಲೆ ಜಾಗತಿಕವಾಗಿ ಸಾಕಷ್ಟು ನಿರೀಕ್ಷೆಗಳು ಸೃಷ್ಟಿಯಾಗುತ್ತವೆ. ಸದ್ಯ ಇದೀಗ ಗೂಗಲ್‌ ಈ ವರ್ಷದ ಗೂಗಲ್‌ IO ಈವೆಂಟ್‌ ಡೇಟ್‌ ಅನ್ನು ಬಹಿರಂಗಪಡಿಸಿದೆ. ಗೂಗಲ್‌ IO 2022 ಇದೇ ಮೇ 11 ಮತ್ತು ಮೇ 12 ರಂದು ನಡೆಯಲಿದೆ ಎಂದು Alphabet CEO ಸುಂದರ್ ಪಿಚೈ ಘೋಷಿಸಿದ್ದಾರೆ.

ಗೂಗಲ್‌ನ

ಹೌದು, ಗೂಗಲ್‌ನ ಬಹುನಿರೀಕ್ಷಿತ ಗೂಗಲ್‌ IO 2022 ಮೇ ತಿಂಗಳಿನಲ್ಲಿ ನಡೆಯಲಿದೆ. ಕಳೆದ ಬಾವರ್ಷದಂತೆ ಈ ವರ್ಷವೂ ಕೂಡ ಗೂಗಲ್‌ IO 2022 ಸಂಪೂರ್ಣವಾಗಿ ಆನ್‌ಲೈನ್ ಈವೆಂಟ್‌ ಆಗಿರಲಿದೆ. ಆದರೆ ಈ ಸಮ್ಮೇಳನದ ಕೆಲವು ಭಾಗವನ್ನು ಸ್ಟ್ರೀಮ್ ಮಾಡುವ ಸಾಧ್ಯತೆಗಳಿವೆ. ಈ ಈವೆಂಟ್‌ ಶೋರ್‌ಲೈನ್ ಆಂಫಿಥಿಯೇಟರ್‌ನಿಂದ ಲೈವ್ ಆಗಲಿದೆ ಎನ್ನಲಾಗಿದೆ. ಹಾಗಾದ್ರೆ ಈ ವರ್ಷದ ಗೂಗಲ್‌ IO 2022ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

GoogleIO

ಸಾಕಷ್ಟು ನಿರೀಕ್ಷೆ ಸೃಷ್ಟಿಸಿರುವ ಈ ವರ್ಷದ #GoogleIO ಗಾಗಿ ನಾವು ಶೋರ್‌ಲೈನ್ ಆಂಫಿಥಿಯೇಟರ್‌ನಿಂದ ಲೈವ್ ಆಗಿ ಹಿಂತಿರುಗುತ್ತೇವೆ. ಮೇ 11-12 ರಂದು ಆನ್‌ಲೈನ್‌ನಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ" ಎಂದು ಸುಂದರ್‌ ಪಿಚೈ ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. ಆದರೆ ಈ ಈವೆಂಟ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಎಂಬುದರ ಬಗ್ಗೆ ಯಾವುದು ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ಕಳೆದ ವರ್ಷ ಗೂಗಲ್‌ IO ಈವೆಂಟ್‌ ಗಮನಿಸಿದರೆ ಈ ವರ್ಷದ ಈವೆಂಟ್‌ನಲ್ಲಿ ಆಂಡ್ರಾಯ್ಡ್‌ 13 ಬಗ್ಗೆ ಘೋಷಣೆಯಾಗುವ ಸಾಧ್ಯತೆಯನ್ನು ಹುಟ್ಟುಹಾಕಿದೆ.

ಗೂಗಲ್‌ IO 2022

ಗೂಗಲ್‌ IO 2022 ಸಮ್ಮೇಳನದ ಕೆಲವು ಭಾಗಗಳು ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ನಡೆಯುವುದರಿಂದ, ಗೂಗಲ್ ಸೀಮಿತ ಪ್ರೇಕ್ಷಕರನ್ನು ಇನ್ವೈಟ್‌ ಮಾಡಿದೆ. ಅಲ್ಲದೆ ಈ ವರ್ಷದ ಈವೆಂಟ್ ಅನ್ನು ಸೀಮಿತ ಪ್ರೇಕ್ಷಕರ ಮುಂದೆ ಲೈವ್‌ ಮಾಡಲಾಗುವುದು ಎನ್ನಲಾಗಿದೆ. ಅಲ್ಲದೆ ಇದು ಸಂಪೂರ್ಣವಾಗಿ ಉಚಿತ ಮತ್ತು ವಾಸ್ತವಿಕವಾಗಿ ಎಲ್ಲರಿಗೂ ಮುಕ್ತವಾಗಿರಲಿದೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ಇದರಲ್ಲಿ ಸೀಮಿತ ಪ್ರೇಕ್ಷಕರು ಅಂದರೆ ಮುಖ್ಯವಾಗಿ ಗೂಗಲ್‌ ಉದ್ಯೋಗಿಗಳು ಮತ್ತು ಕೆಲವು ಪಾಲುದಾರರನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಗೂಗಲ್‌ IO 2022 ನೋಂದಣಿಗಳು ಸಂಪೂರ್ಣ ಉಚಿತವಾಗಿದ್ದು, ಗೂಗಲ್ ಶೀಘ್ರದಲ್ಲೇ ನೋಂದಣಿಗಳ ಬಗ್ಗೆ ಘೋಷಿಸುವ ನಿರೀಕ್ಷೆಯಿದೆ.

ಗೂಗಲ್‌ IO 2022: ಏನನ್ನು ನಿರೀಕ್ಷಿಸಬಹುದು?

ಗೂಗಲ್‌ IO 2022: ಏನನ್ನು ನಿರೀಕ್ಷಿಸಬಹುದು?

ಗೂಗಲ್ ಕಳೆದ ತಿಂಗಳು ಆಂಡ್ರಾಯ್ಡ್ 13ರ ಮೊದಲ ಡೆವಲಪರ್ ಪ್ರಿವ್ಯೂ ಘೋಷಣೆ ಮಾಡಿರುವುದರಿಂದ ಈ ವರ್ಷದ ಗೂಗಲ್‌ IO 2022ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಲ್ಲದೆ ಗೂಗಲ್‌ ಆಂಡ್ರಾಯ್ಡ್‌ನಲ್ಲಿ ಸೇರ್ಪಡೆಯಾಗುವ ಹೊಸ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ ಇತ್ತೀಚಿನ ಆವೃತ್ತಿಯಾದ ಆಂಡ್ರಾಯ್ಡ್‌ 12 ನಲ್ಲಿರುವ ಸುಧಾರಣೆಗಳನ್ನು ರೂಪಿಸುವ ನಿರೀಕ್ಷೆಯಿದೆ. ಜೊತೆಗೆ ಆಂಡ್ರಾಯ್ಡ್ 12 ರ ಅಸ್ತಿತ್ವದಲ್ಲಿರುವ ಇನ್‌ಸ್ಟಾಲ್ ಬೇಸ್‌ನಂತಹ ಆಂಡ್ರಾಯ್ಡ್ ಕುರಿತು ಕೆಲವು ಪ್ರಮುಖ ಅಂಕಿಅಂಶಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.

ಲರ್ನಿಂಗ್‌

ಇನ್ನು ಸ್ಟಾರ್‌ಲೈನ್, ಮೆಷಿನ್‌ ಲರ್ನಿಂಗ್‌ ಮತ್ತು "ಬೂತ್‌ಗಳು" ಎಂಬ ವಿಶೇಷ ಟೂಲ್‌ಗಳ ಸಹಾಯದಿಂದ, ವೀಡಿಯೊ ಕರೆಯಲ್ಲಿ ಚಾಟ್ ಮಾಡಲು ಅನುಮತಿಸುವ ಜನರ 3D ರೆಂಡರ್‌ಗಳನ್ನು ಕ್ರಿಯೆಟ್‌ ಮಾಡಲಿದೆ. ಇದರಿಂದ ವೀಡಿಯೊ ಕರೆಗಳಲ್ಲಿ ಜನರು ನಿಮ್ಮ ಮುಂದೆಯೇ ಕುಳಿತಿರುವಂತೆ ಕಾಣಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರು ತಮ್ಮ ಹೈಪರ್-ರಿಯಲಿಸ್ಟಿಕ್ 3D ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಬಹುದು. ಆದ್ದರಿಂದ ಈ ವರ್ಷ ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Most Read Articles
Best Mobiles in India

Read more about:
English summary
Google IO 2022 dates announced: What to expect from Google IO 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X