ಪ್ಲೇ ಸ್ಟೋರ್‌ನಲ್ಲಿ ಹೊಸ 'ಡೇಟಾ ಸೇಫ್ಟಿ' ವಿಭಾಗ ಪರಿಚಯಿಸಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ತನ್ನ ಹೊಸ ಮಾದರಿಯ ಫೀಚರ್ಸ್‌ಗಳ ಮೂಲಕ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಸದ್ಯ ಇದೀಗ ತನ್ನ ಪ್ಲೇ ಸ್ಟೋರ್‌ನಲ್ಲಿ ಹೊಸ ಡೇಟಾ ಸೇಫ್ಟಿ ಎನ್ನುವ ಹೊಸ ವಿಭಾಗವನ್ನು ಸೇರಿಸುತ್ತಿದೆ. ಇದರಲ್ಲಿ ಅಪ್ಲಿಕೇಶನ್ ಡೆವಲಪರ್‌ಗಳು ಬಳಕೆದಾರರಿಗೆ ಅಪ್ಲಿಕೇಶನ್‌ನ ಡೇಟಾ ಕಲೆಕ್ಷನ್‌ ಪ್ರ್ಯಾಕ್ಟಿಸ್‌ ಮತ್ತು ಬಳಕೆದಾರರ ಡೇಟಾವನ್ನು ಹೇಗೆ ಸುರಕ್ಷಿತವಾಗಿರಿಸಲಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಡೇಟಾ ಸೇಫ್ಟಿ ಎನ್ನುವ ಹೊಸ ವಿಭಾಗವನ್ನು ಪರಿಚಯಿಸಿದೆ. ಈ ವಿಭಾಗದಲ್ಲಿ ಬಳಕೆದಾರರಿಗೆ ಅಪ್ಲಿಕೇಶನ್‌ ಡೆವಲಪರ್‌ಗಳು ಡೇಟಾ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಈ ಮಾಹಿತಿಯನ್ನು ಭರ್ತಿ ಮಾಡಲು ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಜುಲೈ 20 ರವರೆಗೆ ಅವಕಾಶವನ್ನು ನೀಡಲಾಗಿದೆ. ಹಾಗಾದ್ರೆ ಗೂಗಲ್‌ ಪರಿಚಯಿಸಿರುವ ಹೊಸ ಡೇಟಾ ಸೇಫ್ಟಿ ವಿಭಾಗ ಬಳಕೆದಾರರಿಗೆ ಹೇಗೆ ಉಪಯುಕ್ತವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೊಸ ಡೇಟಾ ಸೇಫ್ಟಿ ವಿಭಾಗದ ಬಗ್ಗೆ ಮಾಹಿತಿ ನೀಡಿದೆ. ಈ ವಿಭಾಗದಲ್ಲಿ "ಬಳಕೆದಾರರು ತಮ್ಮ ಡೇಟಾವನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸುತ್ತಿದ್ದಾರೆ ಮತ್ತು ಡೆವಲಪರ್ ಬಳಕೆದಾರರ ಡೇಟಾವನ್ನು ಥರ್ಡ್‌ ಪಾರ್ಟಿಗಳೊಂದಿಗೆ ಶೇರ್‌ ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಸಾಧ್ಯವಾಗಲಿದೆ. ಅಲ್ಲದೆ ಯಾವುದೇ ಅಪ್ಲಿಕೇಶನ್ ಕಾರ್ಯನಿರ್ವಹಿಸಲು ನಿರ್ದಿಷ್ಟ ಪ್ರಕಾರದ ಡೇಟಾ ಅಗತ್ಯವಿದೆಯೇ ಅಥವಾ ಈ ಡೇಟಾ ಸ್ಟೋರೇಜ್‌ ಐಚ್ಛಿಕವಾಗಿದ್ದರೆ ಬಳಕೆದಾರರು ನೋಡಬಹುದು ಎಂದು ಗೂಗಲ್‌ ಬ್ಲಾಗ್‌, ಪೋಸ್ಟ್ ನಲ್ಲಿ ವಿವರಿಸಿದೆ.

ಡೇಟಾ ಸುರಕ್ಷತೆ ವಿಭಾಗದ ಉದ್ದೇಶ ಏನು?

ಡೇಟಾ ಸುರಕ್ಷತೆ ವಿಭಾಗದ ಉದ್ದೇಶ ಏನು?

* ಡೆವಲಪರ್ ಡೇಟಾವನ್ನು ಯಾವ ಉದ್ದೇಶಕ್ಕಾಗಿ ಸ್ಟೋರೇಜ್‌ ಮಾಡುತ್ತಿದ್ದಾರೆ ಎಂದು ತಿಳಿಯಬಹುದು.
* ಡೆವಲಪರ್ ಥರ್ಡ್‌ ಪಾರ್ಟಿಗಳೊಂದಿಗೆ ಡೇಟಾವನ್ನು ಶೇರ್‌ ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಸಾಧ್ಯವಾಗಲಿದೆ.
* ಅಪ್ಲಿಕೇಶನ್‌ನ ಸೆಕ್ಯುರಿಟಿ ಪ್ರಾಕ್ಟಿಸ್‌ ಬಗ್ಗೆ ಗೊತ್ತಾಗಲಿದೆ.
* ಪ್ಲೇ ಸ್ಟೋರ್‌ನಲ್ಲಿ ಮಕ್ಕಳಿಗಾಗಿ ಗೂಗಲ್‌ಪ್ಲೇ ನ ಫ್ಯಾಮಿಲಿಸ್‌ ಪಾಲಿಸಿ ನೀತಿಯನ್ನು ಅನುಸರಿಸಲಿದೆಯಾ ಎಂದು ತಿಳಿಯಬಹುದು.
* ಜಾಗತಿಕ ಭದ್ರತಾ ಮಾನದಂಡದ ವಿರುದ್ಧ ಡೆವಲಪರ್ ತಮ್ಮ ಸೆಕ್ಯುರಿಟಿ ಪ್ರಾಕ್ಟಿಸ್‌ ಅನ್ನು ಮೌಲ್ಯೀಕರಿಸಿದ್ದಾರೆಯೇ ಎಂದು ಗೊತ್ತಾಗಲಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಸುರಕ್ಷತೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಆಂಡ್ರಾಯ್ಡ್‌ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡುವುದಕ್ಕೆ ಗೂಗಲ್‌ ಮುಂದಾಗಿದೆ. ಈಗಾಗಿ ಗೂಗಲ್‌ ಪ್ಲೇ ಸ್ಟೋರ್‌ನ ನೀತಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದೆ. ಆಂಡ್ರಾಯ್ಡ್‌ನ ಆಕ್ಸೆಸಿಬಿಲಿಟಿ ನೀತಿಯನ್ನು ಅಪ್ಡೇಟ್‌ ಮಾಡಲಿದೆ. ಅದರಂತೆ ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ ಅನುಮತಿಸುವ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. ಇನ್ನು ರೆಕಾರ್ಡಿಂಗ್ ಅಪ್ಲಿಕೇಶನ್‌ಗೆ ಪ್ರವೇಶವಿಲ್ಲದೆ, ಲೋಕಲ್‌ ಕಾಲ್‌ ರೆಕಾರ್ಡಿಂಗ್ ಮಾಡುವುದಕ್ಕೆ ಇನ್ಮುಂದೆ ಸಾಧ್ಯವಾಗುವುದಿಲ್ಲ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೇ 11 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಗೂಗಲ್‌ ವಿವರಿಸಿದೆ.

ರೆಕಾರ್ಡಿಂಗ್

ಆದರೆ ಈ ಬದಲಾವಣೆಯಿಂದ ಅಂತರ್ನಿರ್ಮಿತ ಅಪ್ಲಿಕೇಶನ್‌ಗಳು ಪರಿಣಾಮ ಬೀರುವುದಿಲ್ಲ. ಅಂದರೆ ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಶಿಯೋಮಿ ಮತ್ತು ಒಪ್ಪೋ ಕಂಪನಿಗಳು ನೀಡುವ ಇನ್-ಬಿಲ್ಟ್ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ. ಸದ್ಯ ಈ ಬದಲಾವಣೆಗೆ ಸಂಬಂಧಿಸಿದಂತೆ, ಈ ನೀತಿಯನ್ನು ಗೂಗಲ್‌ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Google is adding a new ‘Data Safety’ section to its Play Store

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X