Subscribe to Gizbot

ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!

Written By:

ವಿಶ್ವದ ಟೆಕ್ ದಿಗ್ಗಜ ಗೂಗಲ್‌ನಲ್ಲಿ ಕೆಲಸ ಪಡೆಯುವ ಆಸೆಯೇ?..ಅದೂ ಕೂಡ ಬೆಂಗಳೂರಿನಲ್ಲಿಯೇ ಕೆಲಸ ಬೇಕೆ? ಹಾಗಿದ್ದರೆ ತಡ ಯಾಕೆ?..ಈಗಲೇ ಗೂಗಲ್ ಕೆಲಸಗಳಿಗಾಗಿ ಅರ್ಜಿ ಸಲ್ಲಿಸಿ.!! ಹೌದು, ಗೂಗಲ್‌ನಲ್ಲಿ ಕೆಲಸ ಬೇಕು ಎನ್ನುವ ತಂತ್ರಜ್ಞರಿಗೆ ಸಿಹಿ ಸುದ್ದಿ ಇದಾಗಿದ್ದು, ನಗರದಲ್ಲಿ ಹಲವು ಹುದ್ದೆಗಳಿಗೆ ಗೂಗಲ್ ತೆರೆದುಕೊಂಡಿದೆ!!

ಟೆಕ್ನಿಕಲ್ ಸಲ್ಯೂಷನ್ ಇಂಜಿನಿಯರ್, ಸಲ್ಯೂಷನ್ ಆಕ್ಟಿಟೆಕ್ಟ್ ಮತ್ತು ಸೇಲ್ಸ್‌ ಎಕ್ಸಿಕ್ಯೂಟಿವ್‌ನಂತಹ ಹಲವು ಹುದ್ದೆಗಳು ಬೆಂಗಳೂರಿನಲ್ಲಿ ಖಾಲಿ ಇವೆ ಹಾಗಾದರೆ, ಗೂಗಲ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ಯಾವ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಗೂಗಲ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಲವು ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ.! https://careers.google.com ಮೂಲಕ ಬೆಂಗಳೂರಿನಲ್ಲಿರುವ ಗೂಗಲ್ ಕೆಲಸಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.!!

ಸಲ್ಯೂಷನ್ ಆರ್ಕಿಟೆಕ್ಟ್. ಗೂಗಲ್ ಕ್ಲೌಡ್!!

ಸಲ್ಯೂಷನ್ ಆರ್ಕಿಟೆಕ್ಟ್. ಗೂಗಲ್ ಕ್ಲೌಡ್!!

ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ಸ್ ಪದವಿ ಮತ್ತು ಸಲ್ಯೂಷನ್ ಆರ್ಕಿಟೆಕ್ಟ್ ಅಥವಾ ಡೆವಲಪರ್ ಆಗಿ 5 ವರ್ಷದ ಕಾರ್ಯನಿರ್ವಹಣೆ ಅನುಭವ ಹೊಂದಿರುವವರು ಸಲ್ಯೂಷನ್ ಆರ್ಕಿಟೆಕ್ಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.! ಪೂರ್ತಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ!!

ಟೆಕ್ನಿಕಲ್ ಸಲ್ಯೂಷನ್ ಇಂಜಿನಿಯರ್!!

ಟೆಕ್ನಿಕಲ್ ಸಲ್ಯೂಷನ್ ಇಂಜಿನಿಯರ್!!

ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ಸ್ ಪದವಿ ಮತ್ತು ಟೆಕ್ನಿಕಲ್ ಸಲ್ಯೂಷನ್ ಬಗ್ಗೆ 8 ವರ್ಷಗಳ ಪ್ರಾಕ್ಟಿಕಲ್ ಎಕ್ಸ್‌ಪೀರಿಯನ್ಸ್ ಹೊಂದಿರುವವರಿಗೆ ಟೆಕ್ನಿಕಲ್ ಸಲ್ಯೂಷನ್ ಇಂಜಿನಿಯರ್ ಹುದ್ದೆ ಲಭ್ಯವಿದೆ.!! ಪೂರ್ತಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ!!

ಸೇಲ್ಸ್ ಎಕ್ಸಿಕ್ಯೂಟಿವ್. ಗೂಗಲ್ ಕ್ಲೌಡ್

ಸೇಲ್ಸ್ ಎಕ್ಸಿಕ್ಯೂಟಿವ್. ಗೂಗಲ್ ಕ್ಲೌಡ್

ಕಂಪ್ಯೂಟರ್ ಸೈನ್ಸ್ಅಥವಾ ಬಿಎ / ಬಿಎಸ್ ಪದವಿ ಪಡೆದು ವ್ಯವಹಾರ ಅಥವಾ ಮಾರ್ಕೆಟಿಂಗ್‌ನಲ್ಲಿ 10 ವರ್ಷ ಎಕ್ಸ್ಪೀರಿಯನ್ಸ್ ಹೊಂದಿರುವವರಿಗೆ ಗೂಗಲ್ ಕ್ಲೌಡ್ ವಿಭಾಗದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆ ತೆರೆದಿದೆ.!! ಪೂರ್ತಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ!!

ಪಾರ್ಟ್‌ನರ್ ಸಕ್ಸೆಸ್ ಮ್ಯಾನೆಜರ್!!

ಪಾರ್ಟ್‌ನರ್ ಸಕ್ಸೆಸ್ ಮ್ಯಾನೆಜರ್!!

B2B ಸೇಲ್ಸ್‌ನಲ್ಲಿ 8 ವರ್ಷಗಳ ಅನುಭವ ಹಾಗೂ ಕ್ಲೌಡ್ ಫ್ಲಾರ್ಟ್ ಫಾರ್ಮ್‌ನಲ್ಲಿ ಹೆಚ್ಚಿನ ಅನುಭವ ಹೊಂದಿರುವವರಿಗಾಗಿ ಪಾರ್ಟ್‌ನರ್ ಸಕ್ಸೆಸ್ ಮ್ಯಾನೆಜರ್ ಹುದ್ದೆ ಲಭ್ಯವಿದೆ. ಮ್ಯಾನೆಜಿಂಗ್ ಪಾರ್ಟ್‌ನರ್ ಬ್ಯಸಿನೆಸ್‌ನಲ್ಲಿ ಅನುಭವವಿದ್ದರೂ ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.!! ಪೂರ್ತಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ!!

ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೆಜರ್!!

ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೆಜರ್!!

ಕಂಪ್ಯೂಟರ್ ಸೈನ್ಸ್ ಅಥವಾ ಅದಕ್ಕೆ ಸಮನಾದ ತಾಂತ್ರಿಕ ಪದವಿ ಪಡೆದಿರುವ ಹಾಗೂ SDLC ಮೊಬೈಲ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಮತ್ತು ಟೆಸ್ಟ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಕ್ಸ್‌ಪೀರಿಯನ್ಸ್ ಹೊಂದಿರುವವರಿಗಾಗಿ ಟೆಕ್ನಿಕಲ್ ಪ್ರೋಗ್ರಾಮ್ ಮ್ಯಾನೆಜರ್ ಹುದ್ದೆ ಲಭ್ಯವಿದೆ.!! ಪೂರ್ತಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The US-based search engine giant, Google has invited eligible candidates. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot