ಜಿ-ಮೇಲ್‌ನ ಈ ಹೊಸ ಡಿಸೈನ್‌ ಈಗ ಎಲ್ಲರಿಗೂ ಕಡ್ಡಾಯ! ಅಂತಹದ್ದೇನಿದೆ?

|

ಗೂಗಲ್‌ ತನ್ನ ಜಿ-ಮೇಲ್‌ ಸೇವೆಯಲ್ಲಿ ಹೊಸ ಯೂಸರ್‌ ಇಂಟರ್‌ಫೇಸ್‌ ಅನ್ನು ಪರಿಚಯಿಸಿದೆ. ಇದರಿಂದ ಜಿ-ಮೇಲ್‌ನ ಡಿಸೈನ್‌ ಬದಲಾಗಲಿದ್ದು, ಎಲ್ಲಾ ಬಳಕೆದಾರರು ಇದನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ. ಅಲ್ಲದೆ ಈ ಹೊಸ ಯುಐ ಪ್ರಾರಂಭವಾದ ನಂತರ ಹಳೆಯ ಡಿಸೈನ್‌ಗೆ ಮರಳುವ ಆಯ್ಕೆಯನ್ನು ಬಳಕೆದಾರರು ಕಳೆದುಕೊಳ್ಳಿದ್ದಾರೆ ಎಂದು ಗೂಗಲ್‌ ಹೇಳಿದೆ. ಇನ್ನು ಈ ಹೊಸ ಯೂಸರ್‌ ಇಂಟರ್‌ಫೇಸ್‌ ಜಿ-ಮೇಲ್‌ ಡಿಸೈನ್‌ನಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ.

ಯೂಸರ್‌

ಹೌದು, ಜಿ-ಮೇಲ್‌ ಹೊಸ ಯೂಸರ್‌ ಇಂಟರ್‌ಫೇಸ್‌ ಪರಿಚಯಿಸಿದೆ. ಇದು ಜಿ-ಮೇಲ್‌ಗೆ ಇಂಟಿಗ್ರೇಟೆಡ್‌ ವ್ಯೂ ಅನ್ನು ಒದಗಿಸಲಿದೆ. ಇನ್ನು ಈ ಹೊಸ ಡಿಸೈನ್‌ನಲ್ಲಿ ಜಿ-ಮೇಲ್‌, ಗೂಗಲ್‌ ಮೀಟ್‌, ಗೂಗಲ್‌ ಚಾಟ್‌ ಮತ್ತು ಸ್ಪೇಸಸ್‌ ನಂತಹ ಗೂಗಲ್‌ ಅಪ್ಲಿಕೇಶನ್‌ಗಳನ್ನು ಒಂದೇ ಸ್ಥಳದಲ್ಲಿ ಇರಿಸಲಿದೆ. ನೀವು ಜಿ-ಮೇಲ್‌ ಬಳಸುವಾಗಲೂ ಗೂಗಲ್‌ನ ಇತರೆ ಅಪ್ಲಿಕೇಶನ್‌ಗಳಿಗೆ ಪ್ರವೇಶಿಸಲು ಸಾದ್ಯವಾಗಲಿದೆ. ಹಾಗಾದ್ರೆ ಜಿ-ಮೇಲ್‌ನ ಹೊಸ ಯುಐ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿ-ಮೇಲ್‌

ಇಂದಿನ ದಿನಗಳಲ್ಲಿ ಜಿ-ಮೇಲ್‌ ಅಕೌಂಟ್‌ ಅನ್ನು ಬಹುತೇಕ ಎಲ್ಲರೂ ಕೂಡ ಬಳಸುತ್ತಾರೆ. ಜಿ-ಮೇಲ್‌ ಬಳಸುವ ಬಳಕೆದಾರರು ಜಿ-ಮೇಲ್‌ ತೆರೆದಾಗ ಅದರ ಡಿಸೈನ್‌ನಲ್ಲಿ ಬದಲಾವಣೆ ಆಗಿರುವುದನ್ನು ಕಾಣಬಹುದಾಗಿದೆ. ಏಕೆಂದರೆ ಗೂಗಲ್‌ನ ಜಿ-ಮೇಲ್‌ ಇದೀಗ ಹೊಸ ಯುಐ ಪಡೆದುಕೊಂಡಿದೆ. ಇದರಿಂದ ಗೂಗಲ್‌ನ ಎಲ್ಲಾ ವಿಭಿನ್ನ ಅಪ್ಲಿಕೇಶನ್‌ಗಳಿಗೆ ಜಿ-ಮೇಲ್‌ ಮೂಲಕ ಸುಲಭವಾಗಿ ಪ್ರವೇಶಿಸಬಹುದಾಗಿದೆ. ಈ ಯೂಸರ್‌ ಇಂಟರ್‌ಫೇಸ್‌ ಮೂಲಕ ಸುಲಭ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಶೀಘ್ರದಲ್ಲೇ, ಬಳಕೆದಾರರು ಜಿ-ಮೇಲ್‌ನ ಹಳೆಯ ಡಿಸೈನ್‌ಗೆ ಹಿಂತಿರುಗುವ ಆಯ್ಕೆಯನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

 ಜಿ-ಮೇಲ್‌

ಜಿ-ಮೇಲ್‌ನ ಹೊಸ UI ಬಳಕೆದಾರರಿಗೆ ಜಿ-ಮೇಲ್‌ ಥೀಮ್, ಇನ್‌ಬಾಕ್ಸ್ ಪ್ರಕಾರವನ್ನು ಬದಲಾಯಿಸುವ ಆಯ್ಕೆಯನ್ನು ನೀಡಲಿದೆ. ಅಲ್ಲದೆ ಎಲ್ಲಾ ವಿಭಿನ್ನ ಅಪ್ಲಿಕೇಶನ್‌ಗಳಿಗೆ ಸುಲಭ ಪ್ರವೇಶವನ್ನು ನೀಡಲಿದೆ. ಇದು ತ್ವರಿತ ಸೆಟ್ಟಿಂಗ್ಸ್‌ ಅನ್ನು ಕೂಡ ಪಡೆದಿರುವುದರಿಂದ ಬದಲಾವಣೆಗಳನ್ನು ಸುಲಭವಾಗಿ ಮಾಡಬಹುದು. ಇನ್ನು ಹೊಸ UI ಜಿ-ಮೇಲ್‌ನ ಡೀಫಾಲ್ಟ್ ವಿನ್ಯಾಸವಾಗಿದ್ದು, ವಿಂಡೋದ ಎಡಭಾಗದಲ್ಲಿರುವ ಜಿ-ಮೇಲ್‌, ಚಾಟ್‌, ಸ್ಪೇಸಸ್‌ ಮತ್ತು ಮೀಟ್‌ ಆಯ್ಕೆಯನ್ನು ಸಂಯೋಜಿಸಲಿದೆ. ಚಾಟ್‌ ಅನ್ನು ಆನ್‌ ಮಾಡಿದ ಜಿ-ಮೇಲ್‌ ಬಳಕೆದಾರರು ಇವುಗಳನ್ನು ಕಾಣಬಹುದಾಗಿದೆ.

ಯುಐ

ಇದಲ್ಲದೆ ಈ ಹೊಸ ಯುಐ ತ್ವರಿತ ಸೆಟ್ಟಿಂಗ್‌ಗಳ ಹೊರತಾಗಿಯೂ ಸೈಡ್ ಪ್ಯಾನೆಲ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀಡಲಿದೆ. ಇದರಿಂದ ಬಳಕೆದಾರರು ಡೀಫಾಲ್ಟ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಬಹುದು. ಜೊತೆಗೆ ತ್ವರಿತ ಪ್ರವೇಶಕ್ಕಾಗಿ ಪ್ರಮುಖ ಅಪ್ಲಿಕೇಶನ್‌ಗಳನ್ನು ಸೇರಿಸಬಹುದು. ಈ ಸೆಟ್ಟಿಂಗ್ಸ್‌ಗಳನ್ನು ಬಳಸಿಕೊಂಡು ಬಳಕೆದಾರರು ವಿಂಡೋದ ಎಡಭಾಗದಲ್ಲಿ ಟಾಗಲ್ ಮಾಡಲು ಇಷ್ಟಪಡುವ ಅಪ್ಲಿಕೇಶನ್‌ಗಳ ನಡುವೆ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ.

ಗೂಗಲ್‌

ಇನ್ನು ಗೂಗಲ್‌ ಜಿ-ಮೇಲ್‌ನ ಹೊಸ ಡಿಸೈನ್‌ ಮೂಲಕ ಸೈಡ್ ಪ್ಯಾನೆಲ್‌ನಲ್ಲಿ ಬಳಕೆದಾರರು ಗೂಗಲ್‌ ಜಿ-ಮೇಲ್‌, ಚಾಟ್‌, ಸ್ಪೇಸಸ್‌ ಮತ್ತು ಮೀಟ್‌ ಸಂಯೋಜನೆಯನ್ನು ಕಾಣಬಹುದು. ಅಲ್ಲದೆ, ಹೊಸ ವಿನ್ಯಾಸದಲ್ಲಿ ಚಾಟ್ ಆಯ್ಕೆಯು ಜಿ-ಮೇಲ್‌ನ ಎಡಭಾಗದಲ್ಲಿ ಲಭ್ಯವಾಗಲಿದೆ. ಆದ್ದರಿಂದ ಬಳಕೆದಾರರು ಇನ್ಮುಂದೆ ಜಿ-ಮೇಲ್‌ನ ಬಲಭಾಗದಲ್ಲಿ ಚಾಟ್ ಅನ್ನು ಕಾನ್ಫಿಗರ್ ಮಾಡುವ ಆಯ್ಕೆಯನ್ನು ಹೊಂದಿರುವುದಿಲ್ಲ ಎಂದು ಗೂಗಲ್‌ ಹೇಳಿಕೊಂಡಿದೆ.

ಇಂಟರ್‌ಫೇಸ್‌

ಜಿ-ಮೇಲ್‌ನ ಹೊಸ ಯೂಸರ್‌ ಇಂಟರ್‌ಫೇಸ್‌ ಮೂಲಕ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ. ಜಿ-ಮೇಲ್‌ ಬಳಕೆ ಮಾಡುವಾಗ ನೀವು ಮೀಟಿಂಗ್‌ ಮಾಡುವುದಕ್ಕೆ ಗೂಗಲ್‌ ಮೀಟ್‌ ಬಳಸಬಹುದು. ಅಷ್ಟೇ ಅಲ್ಲ ಚಾಟ್‌, ಸ್ಪೇಸಸ್‌ ಅನ್ನು ಕೂಡ ಬಳಸುವುದಕ್ಕೆ ಸುಲಭ ಅವಕಾಶ ಸಿಗಲಿದೆ. ಇದರಿಂದ ಇನ್ಮುಂದೆ ಗೂಗಲ್‌ನ ಜಿ-ಮೇಲ್‌ ನಿಮಗೆ ಕೇವಲ ಮೇಲ್‌ ಮಾಡುವುದಕ್ಕೆ ಮಾತ್ರವಲ್ಲ ಗೂಗಲ್‌ನ ಹಲವು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆದುಕೊಳ್ಳಲು ಅವಕಾಶ ನೀಡಲಿದೆ.

Best Mobiles in India

Read more about:
English summary
Google is making the New Gmail design now mandatory for all

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X