ಹಳ್ಳಿಹಳ್ಳಿಗೂ ಅಂತರ್ಜಾಲ ಸಂಪರ್ಕ- ಗೂಗಲ್ ಜೊತೆಗೆ ಕೈಜೋಡಿಸಿದ ಬಿಎಸ್ಎನ್ಎಲ್

By Gizbot Bureau
|

ದೇಶದಾದ್ಯಂತ ತನ್ನ ವೈಫೈ ಫೂಟ್ ಪ್ರಿಂಟ್ ನ್ನು ವಿಸ್ತರಿಸುವ ಸಲುವಾಗಿ ಅಂತರ್ಜಾಲ ಪ್ರಮುಖ ದೈತ್ಯ ಎಂದು ಕರೆಸಿಕೊಳ್ಳುವ ಗೂಗಲ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವ ಬಗ್ಗೆ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತಿಳಿಸಿದೆ. ವೈಫೈ ಮೂಲಕ ಬಿಎಸ್ಎನ್ಎಲ್ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಗ್ರಾಹಕರು ಬಳಸುವುದಕ್ಕೆ ಈ ಹೊಸ ಹೆಜ್ಜೆ ನೆರವು ನೀಡುತ್ತದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.

ಹಳ್ಳಿಹಳ್ಳಿಗೂ ಅಂತರ್ಜಾಲ ಸಂಪರ್ಕ- ಗೂಗಲ್ ಜೊತೆಗೆ ಕೈಜೋಡಿಸಿದ ಬಿಎಸ್ಎನ್ಎಲ್

“ನಾವು ಹಲವು ಟೆಕ್ನಾಲಜಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದುತ್ತಿದ್ದೇವೆ ಮತ್ತು ಆ ಮೂಲಕ ನಮ್ಮ ಫ್ಲ್ಯಾಟ್ ಫಾರ್ಮ್ ನ್ನು ಅಪ್ ಗ್ರೇಡ್ ಮಾಡುತ್ತಿದ್ದೇವೆ ಮತ್ತು ಗ್ರಾಹಕರ ಅತೀ ವೇಗದ ಅಂತರ್ಜಾಲದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಹೆಜ್ಜೆ ಪ್ರಮುಖ ಪಾತ್ರ ವಹಿಸುತ್ತದೆ.” ಎಂದು ಬಿಎಸ್ಎನ್ಎಲ್ ನ ಡೈರೆಕ್ಟರ್(ಸಿಎಫ್ಎ) ಬೋರ್ಡ್ ನ ಶ್ರೀ ವಿವೇಕ್ ಬನ್ಝಾಲ್ ತಿಳಿಸಿದ್ದಾರೆ.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ

ಸರ್ಕಾರದ "ಡಿಜಿಟಲ್ ಇಂಡಿಯಾ" ಪ್ರಚಾರದ ಸಲುವಾಗಿ ಹಳ್ಳಿಗಳ ವೈಫೈ ಫೂಟ್ ಪ್ರಿಂಟ್ ನ್ನು ಕೂಡ ಹೆಚ್ಚಿಸಲು ಟೆಲಿಕಾಂ ಸಂಸ್ಥೆ ಕೆಲವು ನಿರ್ಧಿಷ್ಟ ಹೆಜ್ಜೆಗಳು ಇಡುತ್ತಿದೆ.

ಸಾರ್ವಜನಿಕ ವೈಫೈ

ಸಾರ್ವಜನಿಕ ವೈಫೈ

ಗೂಗಲ್ ಈ ಹಿಂದೆಯೇ ರೈಲ್ವೇಯ ರೋಲ್ ಔಟ್ ನ್ನು ಪೂರ್ಣಗೊಳಿಸಿರುವ ಬಗ್ಗೆ ಅನಾಲಿಸಿಸ್ ಮಾನ್ಸನ್ ಅಧ್ಯಯನ ತಿಳಿಸಿದೆ. ಸಾರ್ವಜನಿಕ ವೈಫೈ ಸುಮಾರು ಮಿಲಿಯನ್ ಹೊಸ ಬಳಕೆದಾರರನ್ನು2019 ರಲ್ಲಿ ತಲುಪಿದೆ. ಅದರಲ್ಲಿ ಅಂದಾಜು 100 ಮಿಲಿಯನ್ ಮಂದಿ ಹೆಚ್ಚುವರಿ 2 ರಿಂದ 3 ಬಿಲಿಯನ್ ನಷ್ಟನ್ನು ಪ್ರತಿ ವರಷಕ್ಕೆ ತಮ್ಮ ಹ್ಯಾಂಡ್ ಸೆಟ್ ನಲ್ಲಿ ಖರ್ಚು ಮಾಡಲು ಸಿದ್ಧರಿರುತ್ತಾರೆ.

ಇದೇ ಮೊತ್ತ ಸೆಲ್ಯೂಲರ್ ಮೊಬೈಲ್ ಬ್ರಾಡ್ ಬ್ಯಾಂಡ್ ಸೇವೆಗಳಲ್ಲೂ ಇರುತ್ತದೆ. ಇದರ ಫಲಿತಾಂಶವಾಗಿ ಸುಮಾರು ರೈಲ್ಟೆಲ್ ಸಹಭಾಗಿತ್ವದಲ್ಲಿ 400 ರೈಲ್ವೇ ನಿಲ್ದಾಣಗಳಲ್ಲಿ ಇಂಡೈರ್ ವೈಫೈ ನ್ನು ಸಾರ್ವಜನಿಕ ವೈಫೈ ನಲ್ಲಿ ವೇಗದ ವೈಫೈಯನ್ನು ನೀಡುವುದಕ್ಕೆ ಸಾಧ್ಯವಾಗಿದೆ. ಇದು ಪುಣೆಯಲ್ಲಿ 150 ಗೂಗಲ್ ಸ್ಟೇಷನ್ ಹಾಟ್ ಸ್ಪಾಟ್ ಗಳನ್ನು ನಿಯೋಜನೆ ಮಾಡುವ ನಿಟ್ಟಿನಲ್ಲಿ ರೈಲ್ ಟೆಲ್ ಮತ್ತು ಲಾರ್ಸೆನ್ ಮತ್ತು ಟರ್ಬ್ರೋ ಜೊತೆ ಒಪ್ಪಂದ ಮಾಡಿಕೊಂಡಿತ್ತು.

ಟೆಲಿಕಾಂ ಆಪರೇಟರ್

ಟೆಲಿಕಾಂ ಆಪರೇಟರ್

ಗೂಗಲ್ ಹಲವು ಸ್ಟೇಕ್ ಹೋಲ್ಡರ್ ಗಳ ಜೊತೆಗೆ ಮಾತುಕತೆ ನಡೆಸಿದ್ದು ಅದರಲ್ಲಿ ಟೆಲಿಕಾಂ ಆಪರೇಟರ್ ಗಳು ಮತ್ತು ಅಂತರ್ಜಾಲ ಸೇವಾ ಪ್ರೊವೈಡರ್ ಗಳು ಮತ್ತು ರಾಜ್ಯ ಸರ್ಕಾರಗಳು ಸೇರಿವೆ ಎಂಬುದಾಗಿ ಕಳೆದ ವರ್ಷವೇ ಇಟಿ ಟೆಲಿಕಾಂ ವರದಿ ತಿಳಿಸಿತ್ತು.

ಅನಾಲಿಸಿಸ್ ಮಾನ್ಸನ್ ಅಧ್ಯಯನದ ಪ್ರಕಾರವೇ ಹೇಳುವುದಾದರೆ ಸಾರ್ವಜನಿಕ ವೈಫೈ 40 ಮಿಲಿಯನ್ ಹೊಸ ಭಳಕೆದಾರರನ್ನು 2019 ರ ಅಂತ್ಯದೊಳಗೆ ತಲುಪಲಿದೆ ಮತ್ತು ಸುಮಾರು 100 ಮಿಲಿಯನ್ ಮಂದಿ ಹೆಚ್ಚುವರಿ 2 ರಿಂದ 3 ಬಿಲಿಯನ್ ವಾರ್ಷಿಕ ಮೊತ್ತವನ್ನು ಪಾವತಿ ಮಾಡಲು ತಯಾರಾಗುತ್ತಾರೆ. ಸೆಲ್ಯುಲರ್ ಮೊಬೈಲ್ ಬ್ರಾಡ್ ಬ್ಯಾಂಡ್ ಮತ್ತು ಹ್ಯಾಂಡ್ ಸೆಟ್ ಗಳ ಮೂಲಕ ಈ ಮೊತ್ತ ಪಾವತಿಯಾಗುತ್ತದೆ. ಆ ಮೂಲಕ ಭಾರತದಲ್ಲಿ ಅತೀ ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ಅನುಭವಿಸಬಹುದು ಮತ್ತು ಸಾರ್ವಜನಿಕವಾಗಿ ಇದು ಲಭ್ಯವಾಗುತ್ತದೆ.

ಒಟ್ಟಾರೆ ಆರ್ಥಿಕತೆಗೆ ಈ ಹೈ ಸ್ಪೀಡ್ ವೈಫೈಯಿಂದ ಉತ್ಪಾದಕತೆಗಳ ಸುಧಾರಣೆಗಳ ಜೊತೆಗೆ ಸಾರ್ವಜನಿಕ ವೈಫೈ 2017-19 ರ ಸಾಲಿನ ಜಿಡಿಪಿಗೆ ಲಾಭದಾಯಕವಾಗಲಿದೆ. ಅಂದಾಜು 2017-19 ರ ಸಾಲಿನಲ್ಲಿ 20 ಬಿಲಿಯನ್ ಡಾಲರ್ ಮತ್ತು ನಂತರ 10 ಬಿಲಿಯನ್ ಪ್ರತಿ ವರ್ಷವೂ ಅತ್ಯಧಿಕವಾಗಲಿದೆ ಎಂದು ಅಧ್ಯಯನವು ತಿಳಿಸುತ್ತಿದೆ.

Best Mobiles in India

Read more about:
English summary
Google Joins Hands With BSNL To Increase Wi-Fi Connectivity In Rural India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X