ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಪರಿಚಯಿಸಿದ ಗೂಗಲ್‌!

|

ಗೂಗಲ್‌ ತನ್ನ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಕಾಲಕಾಲಕ್ಕೆ ಅಪ್ಡೇಟ್‌ ಮಾಡುತ್ತಲೇ ಬಂದಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ತನ್ನ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಅನ್ನು ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸಿದೆ. ಜಾಗತಿಕವಾಗಿ ಅಂದಾಜು 250 ಮಿಲಿಯನ್‌ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ ಕಾರ್ಯ ಆರಂಭಿಸಿದೆ. ಇದು ಅಧಿಸೂಚನೆ ಅನುಮತಿಗಳು, ಅಪ್ಲಿಕೇಶನ್ ಭಾಷೆಯ ಆದ್ಯತೆಗಳ ವಿಚಾರದಲ್ಲಿ ಸಾಕಷ್ಟು ಅಪ್ಡೇಟ್‌ ಆಗಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಆಂಡ್ರಾಯ್ಡ್ 13 ಗೋ ಎಡಿಷನ್‌ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಬಿಡುಗಡೆ ಮಾಡಿದೆ. ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಪರೇಟಿಂಗ್‌ ಸಿಸ್ಟಂ ಕಾರ್ಯನಿರ್ವಹಿಸಲಿದೆ. ಇನ್ನು ಈ ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಹೊಂದಿನ ಒಎಸ್‌ಗಳಿಗಿಂತ ಭಿನ್ನವಾದ ಅಪ್ಡೇಟ್‌ಗಳನ್ನು ಪಡೆದಿದೆ. ಇದು ದೀರ್ಘ ಬ್ಯಾಟರಿ ಬಾಳಿಕೆ, ವೇಗವಾದ ಅಪ್ಲಿಕೇಶನ್ ಲಾಂಚ್‌ ಮತ್ತು ಸುಲಭವಾದ ಅಪ್ಲಿಕೇಶನ್ ಶೇರ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದ್ರೆ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಮೂಲಕ ಗೂಗಲ್‌ ಪ್ಲೆ ಸಿಸ್ಟಮ್ ಅಪ್ಡೇಟ್‌ಗಳನ್ನು ತರುತ್ತಿದೆ. ಇದರಿಂದ ಬಜೆಟ್ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ನಿಯಮಿತವಾಗಿ ಸ್ವೀಕರಿಸಬಹುದಾಗಿದೆ. ಇನ್ನು ಗೂಗಲ್‌ ಪ್ಲೇ ಸಿಸ್ಟಂ ಅಪ್ಡೇಟ್‌ ಮೂಲಕ ಬಳಕೆದಾರರು ವೇಗವಾದ ಡೌನ್‌ಲೋಡ್‌ ಸಾಮರ್ಥ್ಯ ದೊರೆಯಲಿದೆ. ಅಲ್ಲದೆ ಗೂಗಲ್‌ ಪ್ಲೇ ಮೂಲಕ ಬೆಂಬಲಿತ ಡಿವೈಸ್‌ಗಳಿಗೆ ನಿರ್ಣಾಯಕ ಸಾಫ್ಟ್‌ವೇರ್ ಮತ್ತು ಸೆಕ್ಯುರ್‌ ಅಪ್ಡೇಟ್‌ಗಳನ್ನು ನೀಡುವುದಕ್ಕೆ ಸಾಧ್ಯವಾಗಲಿದೆ.

ಆಂಡ್ರಾಯ್ಡ್‌

ಇನ್ನು ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ನಿಂದಾಗಿ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್‌ ಸಾಮರ್ಥ್ಯಕ್ಕೆ ಯಾವುದೇ ತೊಂದರೆಯಾಗದಂತೆ ಅಪ್ಡೇಟ್‌ಗಳನ್ನು ಸರಳಗೊಳಿಸಲಾಗಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ. ಇನ್ನು ಆಂಡ್ರಾಯ್ಡ್ 13 ಗೋ ಆವೃತ್ತಿಯು ಹೊಸ 'ಡಿಸ್ಕವರ್' ರೂಪದಲ್ಲಿ 'ಬಿಲ್ಟ್-ಇನ್ ಇಂಟೆಲಿಜೆನ್ಸ್' ನೊಂದಿಗೆ ಬರುತ್ತದೆ. ಇದು ಆರ್ಟಿಕಲ್ಸ್‌ ಮತ್ತು ಇತರ ಕಂಟೆಂಟ್‌ ಕ್ಯುರೇಟೆಡ್ ಲಿಸ್ಟ್‌ ಅನ್ನು ನೋಡುವುದಕ್ಕೆ ಹೋಮ್ ಸ್ಕ್ರೀನ್‌ನಿಂದ ಬಲಕ್ಕೆ ಸ್ವೈಪ್ ಮಾಡಲು ಅವಕಾಶ ಸಿಗಲಿದೆ.

ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ ವಿಶೇಷತೆ ಏನು?

ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ ವಿಶೇಷತೆ ಏನು?

ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ನ ಪ್ರಮುಖ ಫಿಚರ್ಸ್‌ ಎಂದರೆ ಇದರಲ್ಲಿ ಮೆಟೀರಿಯಲ್ ಯು ಥೀಮ್ ಆಯ್ಕೆಯಾಗಿದೆ. ಇನ್ನು ಮೆಟೀರಿಯಲ್ ಯು ಗೂಗಲ್‌ನ ಏಕೀಕೃತ ವಿನ್ಯಾಸ ಭಾಷೆಯಾಗಿದೆ. ಇದರಿಂದ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಒಎಸ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ವಿಶೇಷ ವಿನ್ಯಾಸದ ಥೀಮ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದರಿಂದ ನಿಮ್ಮ ವಾಲ್‌ಪೇಪರ್‌ನೊಂದಿಗೆ ಬಣ್ಣದ ಸ್ಕೀಮ್ ಅನ್ನು ಕಸ್ಟಮೈಸ್ ಮಾಡಬಹುದಾಗಿದೆ. ಇದರಲ್ಲಿ ನಿಮ್ಮ ವಾಲ್‌ಪೇಪರ್ ಚಿತ್ರವನ್ನು ನೀವು ಹೊಂದಿಸಿದಾಗ, ಇದಕ್ಕೆ ಅನುಗುಣವಾದ ನಾಲ್ಕು ಬಣ್ಣದ ಯೋಜನೆಗಳನ್ನು ಕಾಣಬಹುದು.

ಆಂಡ್ರಾಯ್ಡ್‌

ಇದಲ್ಲದೆ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಆಪರೇಟಿಂಗ್ ಸಿಸ್ಟಮ್ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ನೋಟಿಫಿಕೇಶನ್‌ಗಳಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಇನ್ನು ಆಂಡ್ರಾಯ್ಡ್ 13 ಗೋ ಆವೃತ್ತಿಗೆ ಕನಿಷ್ಠ 2GB RAM ಮತ್ತು 16 GB ಫ್ಲ್ಯಾಷ್ ಸ್ಟೋರೇಜ್‌ ಅಗತ್ಯವಿದೆ ಎಂದು ಹೇಳಲಾಗಿದೆ. ಇದು ಆಂಡ್ರಾಯ್ಡ್ 11 ಗೋ ಆವೃತ್ತಿ ಮತ್ತು ಆಂಡ್ರಾಯ್ಡ್ 12 ಗೋ ಎಡಿಷನ್ ಓಎಸ್‌ಗಳ 1GB RAM ಅಗತ್ಯಕ್ಕಿಂತ ಹೆಚ್ಚನದ್ದಾಗಿದೆ. ಸದ್ಯ ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಆಂಡ್ರಾಯ್ಡ್ 13 ಗೋ ಎಡಿಷನ್ ಓಎಸ್ ಮುಂದಿನ ವರ್ಷ ಅಂದರೆ 2023 ರಲ್ಲಿ ಎಲ್ಲಾ ಆಂಡ್ರಾಯ್ಡ್‌ ಬೆಂಬಲಿತ ಸ್ಮಾರ್ಟ್‌ಫೋನ್‌ಗಳಲ್ಲಿ ಬರಲಿದೆ ಎಂದು ಗೂಗಲ್‌ ಹೇಳಿದೆ.

Best Mobiles in India

English summary
Google Launched Android 13 Go Edition for budget smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X