ನೀವಿರುವ ಪ್ರದೇಶದ ಗಾಳಿಯ ಗುಣಮಟ್ಟ ಹೇಗಿದೆ ಎಂದು ತಿಳಿಸಲಿದೆ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ಈ ತಿಂಗಳ ಆರಂಭದಲ್ಲಿ, ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಫ್ಲ್ಯಾಷ್‌ಲೈಟ್ ರಿಮೈಂಡರ್ಸ್‌, ಅಪ್ಡೇಟೆಡ್‌ ಸೌಂಡ್ ಆಂಪ್ಲಿಫೈಯರ್ ಅಪ್ಲಿಕೇಶನ್ ಮತ್ತು ರಿಯಲ್ ಟೋನ್ ಫಿಲ್ಟರ್‌ ನಂತಹ ಫೀಚರ್ಸ್‌ ಪರಿಚಯಿಸಿದೆ. ಇವುಗಳ ಜೊತೆಗೆ ಏರ್ ಕ್ವಾಲಿಟಿ ಅಲರ್ಟ್ ಎಂಬ ಫೀಚರ್ಸ್‌ ಅನ್ನು ಕೂಡ ಸೇರ್ಪಡೆ ಮಾಡಿದೆ. ಇದು ಹೆಸರೇ ಸೂಚಿಸುವಂತೆ ಬಳಕೆದಾರರಿಗೆ ಅವರ ಪ್ರಸ್ತುತ ಸ್ಥಳದ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರಿಗೆ ತಾವಿರುವ ಪ್ರದೇಶದ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವ ಫೀಚರ್ಸ್‌ ಪರಿಚಯಿಸಿದೆ. ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ. ಈ ಫೀಚರ್ಸ್‌ ಮೂಲಕ ನೀವು ನಿಮ್ಮ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ, ನೀವು ಉಸಿರಾಡುತ್ತಿರುವ ಗಾಳಿಯು ಎಷ್ಟು ಆರೋಗ್ಯಕರವಾಗಿದೆ ಅನ್ನೊದನ್ನು ಅಳೆಯಲಿದೆ. ಹಾಗಾದ್ರೆ ಗೂಗಲ್‌ ಏರ್‌ ಕ್ವಾಲಿಟಿ ಆಲರ್ಟ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಇದೀಗ ನೀವಿರುವ ಪ್ರದೇಶದ ಏರ್‌ ಕ್ವಾಲಿಟಿ ಇಂಡೆಕ್ಸ್‌ ಅನ್ನು ನೀಡಲಿದೆ. ಇದರಿಂದ ನೀವು ಉಸಿರಾಡುವ ಗಾಳಿಯು ಎಷ್ಟು ಆರೋಗ್ಯಕರವಾಗಿದೆ ಎನ್ನುವ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ. ಗೂಗಲ್‌ ಮ್ಯಾಪ್‌ನಲ್ಲಿ ನೀವು ಸಂಚರಿಸುವ ಪ್ರದೇಶದ ಏರ್‌ ಕ್ವಾಲಿಟಿ ಹೇಗಿದೆ ಅನ್ನೊದನ್ನ ತಿಳಿಯಬಹುದಾಗಿದೆ. ಇನ್ನು ಈ ಮಾಹಿತಿಯು US ನಲ್ಲಿನ ಪರಿಸರ ಸಂರಕ್ಷಣಾ ಏಜೆನ್ಸಿ ಸೇರಿದಂತೆ ವಿಶ್ವಾಸಾರ್ಹ ಸರ್ಕಾರಿ ಏಜೆನ್ಸಿಗಳಿಂದ ಬರಲಿದೆ. ಸರ್ಕಾರಿ ಏಜೆನ್ಸಿಗಳ ಜೊತೆಗೆ, ಗೂಗಲ್‌ PurpleAir ನಿಂದ ಗಾಳಿಯ ಗುಣಮಟ್ಟದ ಮಾಹಿತಿಯನ್ನು ತೋರಿಸುತ್ತದೆ, ಇದು ಕಡಿಮೆ-ವೆಚ್ಚದ ಸೆನ್ಸಾರ್‌ ನೆಟ್‌ವರ್ಕ್ ಆಗಿದ್ದು,ಪರಿಸ್ಥಿತಿಗಳ ಹೆಚ್ಚಿನ ಹೈಪರ್‌ಲೋಕಲ್ ನೋಟವನ್ನು ನೀಡಲಿದೆ.

ಏರ್‌ ಕ್ವಾಲಿಟಿ ಆಲರ್ಟ್‌ ಅನ್ನು ಬಳಸುವುದು ಹೇಗೆ?

ಏರ್‌ ಕ್ವಾಲಿಟಿ ಆಲರ್ಟ್‌ ಅನ್ನು ಬಳಸುವುದು ಹೇಗೆ?

ಗೂಗಲ್‌ನ ಏರ್‌ ಕ್ವಾಲಿಟಿ ಆಲರ್ಟ್‌ ಫೀಚರ್ಸ್‌ ಬಳಸಬೇಕಾದರೆ ನೀವು ಗೂಗಲ್‌ ಮ್ಯಾಪ್‌ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮ್ಯಾಪ್‌ ಡಿಟೇಲ್ಸ್‌ ಅಡಿಯಲ್ಲಿ ಏರ್ ಕ್ವಾಲಿಟಿ ಆಯ್ಕೆಯನ್ನು ಟ್ಯಾಪ್‌ ಮಾಡಿದೆ.

ವೈಲ್ಡ್‌ಫೈರ್‌ ಆಲರ್ಟ್‌

ವೈಲ್ಡ್‌ಫೈರ್‌ ಆಲರ್ಟ್‌

ಇನ್ನು ಏರ್‌ಕ್ವಾಲಿಟಿಗೆ ಸಂಬಂಧಿಸಿದ ಮಾಹಿತಿಯನ್ನು ತೋರಿಸುವುದರ ಜೊತೆಗೆ, ಗೂಗಲ್‌ ಮ್ಯಾಪ್‌ನಲ್ಲಿ ಕಾಡ್ಗಿಚ್ಚುಗಳ ಮಾಹಿತಿಯನ್ನು ಸಹ ತಿಳಿಯಬಹುದಾಗಿದೆ. ನೀವಿರುವ ಪ್ರದೇಶದಕ್ಲಿ ಯಾವುದಾದರು ಕಾಡ್ಗಿಚ್ಚು ಸಂಭವಿಸಿದೆಯಾ ಅನ್ನೊದರ ವಿವರಗಳನ್ನು ತಿಳಿಯಲು ಗೂಗಲ್‌ ಮ್ಯಾಪ್‌ನಲ್ಲಿ ವೈಲ್ಡ್‌ಫೈರ್‌ ಆಲರ್ಟ್‌ ಅನ್ನು ಆನ್ ಮಾಡಬೇಕಾಗುತ್ತದೆ. ಇನ್ನು ಈ ಎರಡೂ ಫೀಚರ್ಸ್‌ಗಳು ಶೀಘ್ರದಲ್ಲೇ US ನಲ್ಲಿ ಲಭ್ಯವಿರುತ್ತವೆ. ಆದರೆ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಈ ಫೀಚರ್ಸ್‌ಗಳು ಯಾವಾಗ ಲಭ್ಯವಾಗಲಿವೆ ಅನ್ನೊದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಪಿಕ್ಸೆಲ್‌ ಫೋನ್‌ಗಳು ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಎರಡು ಆಕರ್ಷಕ ಫಿಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಎರಡು ಫೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರ ಕೆಮ್ಮು ಮತ್ತು ಮತ್ತು ಗೊರಕೆಗಳನ್ನು ಟ್ರ್ಯಾಕ್ ಮಾಡಲು ಮುಂದಾಗಿದೆ ಎನ್ನಲಾಗಿದೆ.ಗೂಗಲ್ ಹೆಲ್ತ್ ಸ್ಟಡೀಸ್ ಅಪ್ಲಿಕೇಶನ್‌ನ ಇತ್ತೀಚಿನ ಅಪ್‌ಡೇಟ್‌ನ ಎಪಿಕೆ ಟಿಯರ್‌ಡೌನ್‌ನಲ್ಲಿ ಈ ಫೀಚರ್ಸ್‌ಗಳನ್ನು ಅಭಿವೃದ್ಧಿ ಪಡಿಸುತ್ತಿರುವುದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇನ್ನು ಈ ಹೊಸ ಫೀಚರ್ಸ್‌ಗಳು 'ಸ್ಲೀಪ್ ಆಡಿಯೋ ಕಲೆಕ್ಷನ್' ಅಧ್ಯಯನದ ಒಂದು ಭಾಗವಾಗಿದ್ದು, ಸದ್ಯಕ್ಕೆ ಗೂಗಲ್‌ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದೆ

Best Mobiles in India

English summary
google map gets new feature called Air Quality alert

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X