ಗೂಗಲ್ ಮ್ಯಾಪ್ ನಂಬಿದ ಕಾರು ಚಾಲಕ ಸೇರಿದ್ದು ಕಾಡು ಹಾದಿ!

|

ಪ್ರಸ್ತುತ ದಿನಗಳಲ್ಲಿ ಗೂಗಲ್ ಮ್ಯಾಪ್ ಇದ್ದರೆ ಸಾಕು ಯಾವುದೇ ಹೊಸ ಸ್ಥಳಕ್ಕೆ ಹೋದರು ಸುಲಭವಾಗಿ ದಾರಿಗಳನ್ನು ಕಂಡುಕೊಳ್ಳಬಹುದು. ಹೊಸ ಮಾರ್ಗದ ಕುರಿತಾಗಿ ಯಾರನ್ನು ಮಾಹಿತಿ ಕೇಳುವ ಅಗತ್ಯವೇ ಇಲ್ಲ. ಏಕೆಂದರೇ 'ಗೂಗಲ್ ಮ್ಯಾಪ್‌' ಅತ್ಯುತ್ತಮ ಮಾರ್ಗದರ್ಶಿ ಆಗಿ ಕೆಲಸ ಮಾಡುತ್ತಿದೆ ಎಂದರೇ ತಪ್ಪಾಗಲಾರದು. ಅಲ್ಲದೆ Google ಮ್ಯಾಪ್‌ ಬಳಸಿಕೊಂಡು ಪ್ರಯಾಣಿಸುವುದಾದರೆ ಸುಲಭವಾಗಿ ಸಂಚಾರ ಮಾಡಬಹುದಾಗಿದೆ. ಆದರೆ, ಗೂಗಲ್ ಮ್ಯಾಪ್ ಅನ್ನೇ ನಂಬಿ ಪ್ರಯಾಣಸಿದರೆ ಏನಾಗಲಿದೆ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿಯಾಗಿದೆ. ಗೂಗಲ್ ಮ್ಯಾಪ್ ಟೆಕ್ನಾಲಜಿ ಯನ್ನೇ ಫಾಲೋ ಮಾಡಿದ ಕಾರ್‌ ಡ್ರೈವರ್‌ ಕಾಡು ದಾರಿ ಸೇರಿರುವ ಘಟನೆ ನಡೆದಿದೆ.

ಗೂಗಲ್‌ ಮ್ಯಾಪ್

ಹೌದು, ಗೂಗಲ್‌ ಮ್ಯಾಪ್ ಬಳಸಿ ನೀವು ಯಾವುದೇ ಹೊಸ ಸ್ಥಳಕ್ಕೆ ಹೋಗಬೇಕಾದರೂ ದಾರಿ ಹುಡುಕುವುದು ಸುಲಭವಾಗಲಿದೆ. ಆದರೆ ಇದು ನಗರ ಪ್ರದೇಶಗಳಲ್ಲಿ ಸಾಕಷ್ಟು ಅನುಕೂಲಕರವಾಗಿದೆ. ಆದರೆ ದೂರದ ಪ್ರಯಾನ ಮಾಡುವಾಗ ಗೂಗಲ್‌ ಮ್ಯಾಪ್‌ ಟೆಕ್ನಾಲಜಿ ನಂಬಿದರೆ ಎಚ್ಚರಿಕೆ ವಹಿಸಬೇಕಾದ ಅಗತ್ಯ ಖಂಡಿತ ಇದ್ದೇ ಇರುತ್ತೆ. ಏಕೆಂದರೆ ಮಹರಾಷ್ಟ್ರದ ಪುಣೆಯಿಂದ ಜಬಲ್‌ಪುರಕ್ಕೆ ಪ್ರಯಾಣ ಬೆಳೆಸಿದ್ದ ಕಾರು ಚಾಲಕನೊಬ್ಬ ಗೂಗಲ್‌ ಮ್ಯಾಪ್‌ ನಂಬಿಕೊಂಡು ಕಾಡು ಸೇರಿದ್ದಾನೆ. ತಡ ರಾತ್ರಿಯಲ್ಲಿ ಕಾಡಿ ಕೆಸರಿನಲ್ಲಿ ಕಾರು ಸಿಲುಕಿಕೊಂಡು ಪಡಬಾರದ ಕಷ್ಟಪಟ್ಟಿದ್ದಾನೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್

ಗೂಗಲ್‌ ಮ್ಯಾಪ್‌ ಬಳಸಿ ಪ್ರಯಾಣ ಮಾಡುವಾಗ ಗೂಗಲ್‌ ಮ್ಯಾಪ್‌ನ ಸೂಚನೆಯ ಜೊತೆಗೆ ನಮ್ಮದೇ ಆದ ಎಚ್ಚರಿಕೆ ಇದ್ದರೆ ತುಂಬಾ ಒಳ್ಳೆಯದು. ಅದರಲ್ಲೂ ದೂರದ ಪ್ರಯಾಣ ಬೆಳೆಸುವಾಗ ಗೂಗಲ್‌ ಮ್ಯಾಪ್‌ ಒಂದನ್ನೇ ನಂಬಿಕೊಂಡು ಪ್ರಯಾಣ ಮಾಡುವುದು ಉತ್ತಮವಲ್ಲ. ಗೂಗಲ್‌ ಮ್ಯಾಪ್‌ ನಂಬಿ ದಾರಿ ತಪ್ಪಿದ ಘಟನೆಗಳು ಸಾಕಷ್ಟು ನಡೆದಿವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮಹಾರಾಷ್ಟ್ರದ ಪುಣೆ-ಜಬಲ್‌ಪುರ ಮಾರ್ಗದಲ್ಲಿ ನಡೆದಿದೆ. ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಸಿ ಪುಣೆಯಿಂದ ಜಬಲ್‌ಪುರಕ್ಕೆ ಪ್ರಯಾಣ ಆರಂಭಿಸಿ ಅದನ್ನೇ ಫಾಲೋ ಮಾಡಿಕೊಂಡು ಹೋದ ಕಾರು ಡ್ರೈವರ್‌ ಕಾಡಿನೊಳಗೆ ಬಂದಿಯಾಗಿದ್ದಾನೆ.

ಗೂಗಲ್‌ ಮ್ಯಾಪ್

ಈತ ಎಲ್ಲರಂತೆ ಗೂಗಲ್‌ ಮ್ಯಾಪ್‌ ಬಳಸಿ ತನ್ನ ಟಾಟಾ ಹ್ಯಾರಿಯರ್ ಕಾರಿನಲ್ಲಿ ಹೆತ್ತವರೊಂದಿಗೆ ಮಹಾರಾಷ್ಟ್ರದ ಪುಣೆಯಿಂದ ಮಧ್ಯಪ್ರದೇಶದ ಜಬಲ್ ಪುರಕ್ಕೆ ಪ್ರಯಾಣ ಶುರುಮಾಡಿದ್ದ, ಜಬಲ್ ಪುರ- ಪುಣೆಯಿಂದ ಸುಮಾರು 1,000 ಕಿ.ಮೀ ದೂರದಲ್ಲಿದೆ. ಇನ್ನು ಈ ಹಾದಿಯಲ್ಲಿ ಈ ಡ್ರೈವರ್‌ ಇದೇ ಮೊದಲ ಬಾರಿ ಪ್ರಯಾಣಿಸುತ್ತಿದ್ದು, ಗೂಗಲ್ ಮ್ಯಾಪ್ ಬಳಸಿ ಪ್ರಯಾಣ ಬೆಳೆಸಿದ್ದಾನೆ. ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ತೋರಿಸಿದ ಮಾರ್ಗದಲ್ಲಿ ನಾಗ್ಪುರ ಪುಣೆಯಿಂದ ಸುಮಾರು 700 ಕಿ.ಮೀ ದೂರದಲ್ಲಿದೆ. ರಾತ್ರಿ 11 ಘಂಟೆ ಸುಮಾರಿಗೆ ನಾಗ್ಪುರ ತಲುಪಬಹುದು ಎಂದು ತೋರಿಸಿದೆ. ಇದೇ ಕಾರಣಕ್ಕೆ ಆತ ಮ್ಯಾಪ್‌ ರೂಟ್‌ ಅನ್ನೇ ಬಳಸಿದ್ದಾನೆ.

ಗೂಗಲ್ ಮ್ಯಾಪ್

ಇದರಂತೆ ಗೂಗಲ್ ಮ್ಯಾಪ್ ಮುಖ್ಯ ರಸ್ತೆಯಿಂದ ಅಮರಾವತಿ ಕಡೆಗೆ ತಿರುವು ಪಡೆಯುವಂತೆ ತೋರಿಸಿದೆ. ಆದರೆ ಆ ದಾರಿಯಲ್ಲಿ ಸಾಗಿದಂತೆ ರಸ್ತೆ ಕಿರಿದಾಗಿದೆ. ಅಲ್ಲದೆ ಅದೇ ಮಾರ್ಗದಲ್ಲಿ ಸುಮಾರು 20 ಕಿ.ಮೀ ಪ್ರಯಾಣಿಸಿದ ನಂತರ ಸೇತುವೆಯೊಂದು ಮುರಿದು ಬಿದ್ದಿರುವುದು ಕಂಡುಬಂದಿದೆ. ನಂತರ ಸೇತುವೆಯ ಎಡಭಾಗದಲ್ಲಿದ್ದ ಮಾರ್ಗದ ಮೂಲಕ ಸಾಗಿದ್ದಾರೆ, ಆದರೆ ಕಾರು ಮುಂದೆ ಸಾಗುತ್ತಾ ಮುಂದೆ ಇದ್ದ ಕೆಸರಿನಲ್ಲಿ ಹೂತು ಹೋಗಿದೆ. ಕೆಸರಿನಿಂದ ಕಾರನ್ನು ಹೊರ ತೆಗೆಯಲು ಪ್ರಯತ್ನಿಸಿ ಸೋತ ಕಾರು ಡ್ರೈವರ್‌, ಎಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೆ ಕಾರಿನ ಹೆಡ್‌ಲ್ಯಾಂಪ್‌ಗಳು ಸಹ ಕೆಟ್ಟು ಹೋಗಿದ್ದು ಬೇರೆ ದಾರಿ ಕಾಣದೆ ಬೆಳಿಗ್ಗೆ 2.30ಕ್ಕೆ ಮೆಕಾನಿಕ್ ಒಬ್ಬರಿಗೆ ಕರೆ ಮಾಡಿದ್ದಾರೆ. ಮೆಕಾನಿಕ್ 70 ಮೈಲಿ ದೂರದಿಂದ ಬಂದು ಕಾರನ್ನು ರಿಪೇರಿ ಮಾಡಿದ್ದಾರೆ.

ಗೂಗಲ್ ಮ್ಯಾಪ್

ತಂತ್ರಜ್ಞಾನವನ್ನು ಬಳಸೋದು ಸರಿ, ಆದರೆ ತಮ್ಮ ಬುದ್ದಿಯನ್ನು ಬಳಸದೇ, ಕಣ್ಮುಚ್ಚಿ ತಂತ್ರಜ್ಞಾನವನ್ನು ಬಳಸಿದರೆ ಏನಾಗುತ್ತೆ ಎಂಬುವುದಕ್ಕೆ ಈ ಕೆಳಗಿನ ಘಟನೆಯೇ ನಿದರ್ಶನ. ಅದರಲ್ಲಿಯೂ ಗೂಗಲ್ ಮ್ಯಾಪ್ ಎಂದರೆ ನೂರಕ್ಕೆ ನೂರು ಪಕ್ಕಾ ಎನ್ನುವವರು ಹುಷಾರು.!

Best Mobiles in India

Read more about:
English summary
The road was a dark, narrow and not in good shape, but reliant on google, he took the leap of faith.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X