ಗೂಗಲ್‌ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್‌ ಅನಾವರಣ! ಇದರ ವಿಶೇಷತೆ ಹೇಗಿದೆ ಗೊತ್ತಾ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಮ್ಯಾಪ್‌ ಸೇವೆ ಕೂಡ ಸೇರಿದೆ. ಗೂಗಲ್‌ ಮ್ಯಾಪ್‌ ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಅನುಕೂಲಕರವಾಗಿದೆ. ಇದೇ ಕಾರಣಕ್ಕೆ ಗೂಘಲ್‌ ಮ್ಯಾಪ್‌ನಲ್ಲಿ ಅನೇಕ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಇದೀಗ ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದರ ಪ್ರಯುಕ್ತ ಗೂಗಲ್‌ ಮ್ಯಾಪ್‌ ಮೊಬೈಲ್‌ನಲ್ಲಿ ಹಿಸ್ಟಾರಿಕಲ್‌ ಸ್ಟ್ರೀಟ್‌ ವ್ಯೂ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ಅಲ್ಲದೆ ಹೊಸ ಕ್ಯಾಮೆರಾವನ್ನು ಕೂಡ ಅನಾವರಣಗೊಳಿಸಿದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ ಸ್ಟ್ರೀಟ್‌ ವ್ಯೂ ವಾರ್ಷಿಕೋತ್ಸವವನ್ನು ಆಚರಣೆ ಮಾಡ್ತಿದೆ. ಇದಕ್ಕಾಗಿ ಮೊಬೈಲ್‌ನಲ್ಲಿ ಹೊಸ ಫೀಚರ್ಸ್‌ ಸೇರ್ಪಡೆ ಮಾಡಿದೆ. ಅಲ್ಲದೆ ಹಿಸ್ಟಾರಿಕಲ್‌ ಸ್ಟ್ರೀಟ್‌ ವ್ಯೂಗಾಗಿ ಹೊಸ ಕ್ಯಾಮೆರಾವನ್ನು ಪರಿಚಯಿಸಿದೆ. ಸದ್ಯ ಗೂಗಲ್‌ ಮ್ಯಾಪ್‌ 100 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 220 ಶತಕೋಟಿ ಚಿತ್ರಗಳನ್ನು ಒಳಗೊಂಡಿರುವ ಐಕಾನಿಕ್ ಸ್ಟ್ರೀಟ್ ವ್ಯೂ ಫೀಚರ್ಸ್‌ ಅನ್ನು ಮೊಬೈಲ್‌ನಲ್ಲಿ ಸೇರ್ಪಡೆ ಮಾಡಿದೆ. ಹಾಗಾದ್ರೆ ಐಕಾನಿಕ್‌ ಸ್ಟ್ರೀಟ್‌ ವ್ಯೂ ಫೀಚರ್ಸ್‌ ವಿಶೇಷತೆ ಏನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮ್ಯಾಪ್‌ ಪರಿಚಯಿಸಿರುವ ಹೊಸ ಸ್ಟ್ರೀಟ್‌ ವ್ಯೂ ಫೀಚರ್ಸ್‌ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಈ ಹೊಸ ಅಪ್ಡೇಟ್‌ ಮೂಲಕ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರು ಗೂಗಲ್‌ ಮ್ಯಾಪ್ಸ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಿಂದಿನ ವರ್ಷಗಳ ಐತಿಹಾಸಿಕ ಸ್ಟ್ರೀಟ್ ವ್ಯೂ ಚಿತ್ರಗಳನ್ನು ನೋಡಬಹುದು. ಇದಲ್ಲದೆ ಹೆಚ್ಚಿನ ಸ್ಟ್ರೀಟ್‌ ವ್ಯೂ ಡೇಟಾವನ್ನು ಸಂಗ್ರಹಿಸಲು ಗೂಗಲ್ ಹೊಸ ಕ್ಯಾಮೆರಾವನ್ನು ಸಹ ಅನಾವರಣಗೊಳಿಸಿದೆ. ಈ ಹೊಸ ಡಿವೈಸ್‌ 15 ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿದೆ.

ಗೂಗಲ್‌

ಇನ್ನು ಗೂಗಲ್‌ ಮುಂದಿನ ವರ್ಷದಿಂದ ಗೂಗಲ್‌ನ ಸ್ಟ್ರೀಟ್ ವ್ಯೂ ಕಾರುಗಳು ಮತ್ತು ಟ್ರೆಕ್ಕರ್ ಬ್ಯಾಕ್‌ಪ್ಯಾಕ್‌ಗಳನ್ನು ಪರಿಚಯಿಸಲಿದೆ. ಇನ್ನು ಈ ಸ್ಟ್ರೀಟ್‌ ವ್ಯೂ ಫೀಚರ್ಸ್‌ ಬಗ್ಗೆ ಗೂಗಲ್‌ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ವಿವರಣೆ ನೀಡಿದೆ. ಸ್ಟ್ರೀಟ್‌ ವ್ಯೂ ಫೀಚರ್ಸ್‌ ಅಪ್ಡೇಟ್‌ ಮಾಡಲಾಗಿದೆ. ಇದು ಗೂಗಲ್‌ ಮ್ಯಾಪ್ಸ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಿಂದಿನ ವರ್ಷಗಳ ಐತಿಹಾಸಿಕ ಸ್ಟ್ರೀಟ್‌ ವ್ಯೂ ಚಿತ್ರಗಳನ್ನು ಅನ್ವೇಷಿಸಲು ಬಳಕೆದಾರರಿಗೆ ಅನುವು ಮಾಡಿಕೊಡಲಿದೆ. ಇದರಿಂದ ಸ್ಟ್ರೀಟ್‌ ವ್ಯೂ ಚಿತ್ರಣವನ್ನು ವೀಕ್ಷಿಸುವಾಗ, ಬಳಕೆದಾರರು ಆ ಸ್ಥಳಗಳ ಬಗ್ಗೆ ಕುರಿತಾದ ವಿವರಗಳನ್ನು ನೋಡುವುದಕ್ಕೆ ಫೋಟೋದಲ್ಲಿ ಎಲ್ಲಿ ಬೇಕಾದರೂ ಟ್ಯಾಪ್ ಮಾಡಬಹುದಾಗಿದೆ.

ಪೋರ್ಟಬಲ್

ಇದಲ್ಲದೆ ಲೋ-ಮ್ಯಾಪ್ ಮಾಡಲಾದ ಪ್ರದೇಶಗಳ ಉತ್ತಮ-ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಕಂಪನಿಯು ಹೊಸ ಪೋರ್ಟಬಲ್ ಕ್ಯಾಮೆರಾವನ್ನು ಅನಾವರಣ ಮಾಡಿದೆ. ಇನ್ನು ಈ ಹೊಸ ಕ್ಯಾಮರಾ ಹೊಂದಾಣಿಕೆಯ ವಿನ್ಯಾಸವನ್ನು ಹೊಂದಿದೆ. ಇದು 15 ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿದ್ದು, ಮಾಡ್ಯುಲರ್ ವಿನ್ಯಾಸ ಮತ್ತು ಗ್ರಾಹಕೀಕರಣದ ಆಯ್ಕೆಗಳೊಂದಿಗೆ ಬರುತ್ತದೆ. ಇದನ್ನು ಯಾವುದೇ ವಾಹನಕ್ಕೆ ಲಗತ್ತಿಸಬಹುದು ಮತ್ತು ಮೊಬೈಲ್ ಸಾಧನದಿಂದಲೇ ಕಾರ್ಯನಿರ್ವಹಿಸಬಹುದು.

ಕಾರ್‌ಗಳು

ಇನ್ನು ಈ ಹೊಸ ಸ್ಟ್ರೀಟ್ ವ್ಯೂ ಕ್ಯಾಮೆರಾವು ಗೂಗಲ್‌ನ ಪ್ರಸ್ತುತ ಸ್ಟ್ರೀಟ್ ವ್ಯೂ ಕಾರ್‌ಗಳು ಮತ್ತು ಟ್ರೆಕ್ಕರ್ ಬ್ಯಾಕ್‌ಪ್ಯಾಕ್‌ಗಳೊಂದಿಗೆ ಕುಳಿತುಕೊಂಡು ಬಳಕೆದಾರರಿಗೆ ದೂರದ ದ್ವೀಪಗಳಂತಹ ಪ್ರದೇಶಗಳ ಉತ್ತಮ ಗುಣಮಟ್ಟದ ಚಿತ್ರಗಳನ್ನು ಗುರುತಿಸಲು ಸಹಾಯ ಮಾಡಲಿದೆ. ಅಲ್ಲದೆ ಗೂಗಲ್‌ ಬಳಕೆದಾರರಿಗೆ ತಮ್ಮ ವಾಹನವನ್ನು ಪ್ರತಿನಿಧಿಸುವ ಚೆವ್ರಾನ್ ಐಕಾನ್ ಅನ್ನು ನ್ಯಾವಿಗೇಷನ್ ಮೋಡ್‌ನಲ್ಲಿರುವಾಗ ಸ್ಟ್ರೀಟ್ ವ್ಯೂ ಕಾರಿಗೆ ಕಸ್ಟಮೈಸ್ ಮಾಡಲು ಅನುಮತಿಸುತ್ತದೆ.

Best Mobiles in India

Read more about:
English summary
Android and iOS users can look at Street View images from previous years on the Google Maps mobile app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X