ಇಂಡಿಯನ್ಸ್‌ಗಾಗಿಯೇ ಗೂಗಲ್‌ ಮ್ಯಾಪ್ಸ್‌ನಲ್ಲಿ ಹೊಸ ಫೀಚರ್ಸ್‌..!

By Gizbot Bureau
|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಗೂಗಲ್‌ ಮ್ಯಾಪ್ಸ್‌ನ ಭಾರತೀಯ ಬಳಕೆದಾರರಿಗೆ ಮೂರು ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ಮರುವಿನ್ಯಾಸಿತ ಭಾರತ ಪ್ರೇರಿತ 'ಎಕ್ಸ್‌ಪ್ಲೋರ್‌' ಟ್ಯಾಬ್‌, ಹೊಸ 'ಫಾರ್‌ ಯೂ' ಅನುಭವ ಮತ್ತು 'ಆಫರ್ಸ್‌' ಎಂಬ ಮೂರು ಹೊಸ ವೈಶಿಷ್ಟ್ಯಗಳು ಬಳಕೆದಾರರು ತಮ್ಮ ಇಷ್ಟದ ಪ್ರದೇಶಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತವೆ. ಮತ್ತು ಈ ಮೂರು ಫೀಚರ್ಸ್‌ ಬಳಕೆದಾರರ ಅಭಿರುಚಿಗೆ ತಕ್ಕಂತೆ ಸಲಹೆಗಳನ್ನು ನೀಡುವುದು ವಿಶೇಷವಾಗಿದೆ. ಆಗಿದ್ದರೆ, ಆ ಫೀಚರ್ಸ್‌ಗಳ ಬಗ್ಗೆ ಒಂದಿಷ್ಟು ವಿವರ ಮುಂದೆ ನೋಡಿ.

'ಎಕ್ಸ್‌ಪ್ಲೋರ್‌'

'ಎಕ್ಸ್‌ಪ್ಲೋರ್‌'

ಎಕ್ಸ್‌ಪ್ಲೋರ್‌ ಟ್ಯಾಬ್‌ನಲ್ಲಿ ಒಂದೇ ಟ್ಯಾಪ್‌ ಮೂಲಕ ನಿಮ್ಮ ಪ್ರದೇಶದಲ್ಲಿ ಸಿಗುವ ಊಟ, ಕಾರ್ಯಕ್ರಮ, ಸ್ಥಳಗಳ ಬಗ್ಗೆ ಗೂಗಲ್‌ ಮ್ಯಾಪ್ಸ್‌ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ಭಾರತದಲ್ಲಿ ಗೂಗಲ್‌ ಮ್ಯಾಪ್‌ನೊಂದಿಗೆ ಸಂವಹನ ನಡೆಸುವ ವಿಧಾನವನ್ನು ಆಧರಿಸಿ, ಏಳು ಹೊಸ ಶಾರ್ಟ್‌ಕಟ್‌ಗಳನ್ನು ಎಕ್ಸ್‌ಪ್ಲೋರ್‌ ಟ್ಯಾಬ್‌ಗೆ ಸೇರಿಸಲಾಗಿದೆ. ರೆಸ್ಟೋರೆಂಟ್‌, ಪೆಟ್ರೋಲ್ ಬಂಕ್‌, ಎಟಿಎಂ,ಆಫರ್ಸ್‌, ಶಾಪಿಂಗ್, ಹೋಟೆಲ್‌ ಮತ್ತು ರಸಾಯನಶಾಸ್ತ್ರಜ್ಞರು ಎಂಬ ಶಾರ್ಟ್‌ಕಟ್‌ಗಳು ಎಕ್ಸ್‌ಪ್ಲೋರ್‌ ಟ್ಯಾಬ್‌ಗೆ ಸೇರಿವೆ. ಯಂತ್ರ ಕಲಿಕೆ ಬಳಸಿಕೊಂಡು ಪ್ರತಿ ನಗರದಲ್ಲಿ ಶಾರ್ಟ್‌ಕಟ್‌ಗಳಿಗೆ ಸಂಬಂಧಿಸಿದಂತೆ ಉನ್ನತ ಸಲಹೆಗಳನ್ನು ಗೂಗಲ್ ಮ್ಯಾಪ್ಸ್‌ ಸ್ವಯಂಚಾಲಿತವಾಗಿ ಗುರುತಿಸುತ್ತದೆ.

'ಎಕ್ಸ್‌ಪ್ಲೋರ್‌ ನಿಯರ್‌ಬೈ'

'ಎಕ್ಸ್‌ಪ್ಲೋರ್‌ ನಿಯರ್‌ಬೈ'

ಎಕ್ಸ್‌ಪ್ಲೋರ್‌ ನಿಯರ್‌ಬೈ ಬಾಣ ಟ್ಯಾಪ್‌ ಮಾಡುವ ಮೂಲಕ ಬಳಕೆದಾರರು ತಮ್ಮ ನಗರದ ಜನಪ್ರಿಯ ನೆರೆಹೊರೆಗಳನ್ನು ಅನ್ವೇಷಿಸಬಹುದು. ನಿಮ್ಮ ನಗರವಷ್ಟೇ ಅಲ್ಲದೇ, ಭಾರತದ ಇತರ ನಗರಗಳ ಬಗ್ಗೆ ಮಾಹಿತಿ ಪಡೆಯಬಹುದು. ನೀವು ಯಾವುದಾದರೂ ನಗರಕ್ಕೆ ಪ್ರಯಾಣಿಸುವ ಮೊದಲು ಆ ನಗರದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇದು ಸುಲಭದ ಮಾರ್ಗ.

'ಫಾರ್‌ ಯೂ'

'ಫಾರ್‌ ಯೂ'

ಫಾರ್‌ ಯೂ ಟ್ಯಾಬ್‌ ಹೊಸ ರೆಸ್ಟೋರೆಂಟ್‌, ಟ್ರೆಂಡಿಂಗ್ ಸ್ಥಳ ಹಾಗೂ ಅವರ ಆಸಕ್ತಿಗಳಿಗೆ ಅನುಗುಣವಾಗಿ ವೈಯಕ್ತಿಕಗೊಳಿಸಿದ ಶಿಫಾರಿತ ಮಾಹಿತಿಯನ್ನು ಬಳಕೆದಾರರಿಗೆ ನೀಡುತ್ತದೆ. ಈ ಫೀಚರ್‌ 'ಯೂವರ್‌ ಮ್ಯಾಚ್‌' ಸ್ಕೋರ್ ಬಳಸುತ್ತದೆ, ಬಳಕೆದಾರರು ರೆಸ್ಟೋರೆಂಟ್‌ಗಳಿಗೆ ನೀಡಿದ ರೇಟಿಂಗ್‌, ಇಷ್ಟಪಟ್ಟ ಆಹಾರ ಪದಾರ್ಥ, ಭೇಟಿ ನೀಡಿ ಸ್ಥಳಗಳ ಆಧಾರದ ಮೇಲೆ ಗೂಗಲ್‌ ಮ್ಯಾಪ್ಸ್ ಯಂತ್ರ ಕಲಿಕೆಯೊಂದಿಗೆ ಲಕ್ಷಾಂತರ ಸ್ಥಳಗಳನ್ನು ನಮ್ಮ ಮುಂದಿಡುತ್ತದೆ.

ಮೊದಲ ಬಾರಿಗೆ ಈ ಫೀಚರ್‌ ಪ್ರಾರಂಭವಾದಾಗ ಬಳಕೆದಾರರು ಆಸಕ್ತಿ ಹೊಂದಿರುವ ಸ್ಥಳಗಳನ್ನು ಆಯ್ಕೆ ಮಾಡಬಹುದಾಗಿತ್ತು, ನಂತರ ಆ ಪ್ರದೇಶದದ ಬಗ್ಗೆ ಹೆಚ್ಚು ಸೂಕ್ತವಾದ ಶಿಫಾರಸುಗಳನ್ನು ಪಡೆಯಬಹುದಾಗಿತ್ತು. ಬಳಕೆದಾರರು ಈಗ ವ್ಯವಹಾರಗಳನ್ನು ಫಾಲೋ ಮಾಡಬಹುದು ಮತ್ತು ಸಂಬಂಧಿತ ಅಪ್‌ಡೇಟ್, ಕಾರ್ಯಕ್ರಮಗಳ ಸುದ್ದಿ ಪಡೆಯಬಹುದು. ಮತ್ತು ಫಾರ್‌ ಯೂ ಟ್ಯಾಬ್‌ನಲ್ಲಿ ಪೋಸ್ಟ್‌ ಮಾಡಿದ ಟಾಪ್‌ ಕೊಡುಗೆಗಳನ್ನು ಪಡೆಯಬಹುದಾಗಿದೆ. ಗ್ರಾಹಕರು ಅನುಸರಿಸುವ ವ್ಯಾಪಾರಿಗಳನ್ನು ಆಧರಿಸಿ ಇತರ ವ್ಯವಹಾರಗಳನ್ನು ಶಿಫಾರಸು ಮಾಡುತ್ತದೆ.

ಆಫರ್ಸ್‌

ಆಫರ್ಸ್‌

ಮೇಲಿನ ಮೂರು ಫೀಚರ್‌ಗಳ ಜತೆ ಗೂಗಲ್‌ ಮ್ಯಾಪ್ಸ್‌ ಭಾರತದಲ್ಲಿ ಆಫರ್ಸ್‌ ವಿಭಾಗವನ್ನು ಕೂಡ ಪ್ರಾರಂಭಿಸುತ್ತಿದೆ. ಭಾರತದ ಪ್ರಮುಖ 11 ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಚೆನ್ನೈ, ಕೋಲ್ಕತ್ತಾ, ಗೋವಾ, ಅಹಮದಾಬಾದ್, ಜೈಪುರ್, ಚಂಡೀಗಡ ಮತ್ತು ಹೈದರಾಬಾದ್‌ನ ರೆಸ್ಟೋರೆಂಟ್‌ಗಳಲ್ಲಿರುವ ಡೀಲ್‌ಗಳನ್ನು ಕಂಡುಕೊಳ್ಳಬಹುದು ಮತ್ತು ಆಫರ್‌ಗಳನ್ನು ಪಡೆಯಬಹುದು.

Best Mobiles in India

English summary
Google Maps Brings In New Feature To Discover Local Places

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X