ಗೂಗಲ್ ಮ್ಯಾಪ್‌ನ ಈ ಹೊಸ ಫೀಚರ್ಸ್‌ ನಿಮಗೆ ಜೀವ ರಕ್ಷಕವಾಗಬಲ್ಲದು!

|

ಸರ್ಚ್‌ ಇಂಜಿನ್‌ ದೈತ್ಯ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಇದೀಗ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ನಿಮಗೆಲ್ಲಾ ತಿಳಿದಿರುವ ಹಾಗೇ ಗೂಗಲ್‌ ಪರಿಚಯಿಸಿರುವ ಗೂಗಲ್‌ ಮ್ಯಾಪ್‌ ಸಾಕಷ್ಟು ಅನುಕೂಲಕರವಾಗಿದೆ. ಇದೀಗ ಇದೇ ಗೂಗಲ್‌ ಮ್ಯಾಪ್‌ನಲ್ಲಿ ಹೊಸದೊಂದು ಫೀಚರ್ಸ್‌ ಅನ್ನು ಗೂಗಲ್‌ ಪರಿಚಯಿಸಿದೆ. ಇದು ಬಳಕೆದಾರರಿಗೆ ಜೀವ ರಕ್ಷಕವಾಗಿರಲಿದೆ ಎಂದು ಸಹ ಹೇಳಲಾಗ್ತಿದೆ.

ಗೂಗಲ್‌

ಹೌದು, ಜಗತ್ತಿನಲ್ಲಿಯೇ ಸರ್ಚ್‌ ಇಂಜಿನ್‌ ದೈತ್ಯ ಎನಿಸಿಕೊಂಡಿರುವ ಗೂಗಲ್‌ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗುತ್ತಿದೆ. ತನ್ನ ಗೂಗಲ್‌ ಮ್ಯಾಪ್‌ನಲ್ಲಿಯೀಊ ಹಲವು ಫಿಚರ್ಸ್‌ ಪರಿಚಯಿಸಿರುವ ಗೂಗಲ್‌ ಇದೀಗ ಡ್ರಾಯಿಡ್ ಲೈಫ್ ವೆಬ್‌ಸೈಟ್ ಮೂಲಕ ಟ್ರಾಫಿಕ್ ದೀಪಗಳನ್ನು ತೋರಿಸುವ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಅನ್ನು ನಿಯಮಿತ ವೀಕ್ಷಣೆಯಲ್ಲಿ ಮಾತ್ರ ಕಾಣಬಹುದಾಗಿದೆ. ಆದರೆ ಕೆಲವರು ಇದನ್ನು ನ್ಯಾವಿಗೇಷನ್ ಮೋಡ್‌ನಲ್ಲಿಯೂ ಕಾಣಬಹುದಾಗಿದೆ. ಸದ್ಯ ಇದೀಗ ಇವುಗಳನ್ನು ಸಾಮಾನ್ಯವಾಗಿ ಅಡ್ಡಹಾದಿಯಲ್ಲಿ ಕಾಣಬಹುದಾಗಿದೆ. ಅಷ್ಟಕ್ಕೂ ಈ ಫೀಚರ್ಸ್ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮ್ಯಾಪ್‌ನಲ್ಲಿ ಪರಿಚಯಿಸಲಾಗಿರುವ ಈ ಫೀಚರ್ಸ್‌, ಐಕಾನ್‌ಗಳು ಗುರುತಿಸಲು ಸ್ವಲ್ಪ ಚಿಕ್ಕದಾಗಿದೆ. ಇದರಿಂದ ನಿವು ತಲುಪಬೇಕಾದ ರಸ್ತೆಯ ಮೇಲೆ ನೀವು ಸಾಗುವಾಗ ಮುಂದಿನ ಕ್ರಾಸ ಯಾವುದು ಅನ್ನೊದನ್ನ ತ್ವರಿತವಾಗಿ ಕಾನುವಂತೆ ಮಾಡಲಿದೆ. ಸಣ್ಣ ಐಕಾನ್‌ಗಳ ಮೂಲಕ ಈ ಫೀಚರ್ಸ್‌ ಅನ್ನು ಕೇಂದ್ರೀಕರಿಸಬಹುದಾಗಿದ್ದು, ಇದಕ್ಕೆ ಯಾವುದೇ ಸೂಚಕಗಳಿಲ್ಲ ಎಂದು ಸಹ ಉಲ್ಲೇಖಿಸಲಾಗಿದೆ. ಇನ್ನು ಆಡಿಯೊ ನ್ಯಾವಿಗೇಷನ್ ಸಹ ಇದು ನಿಮಗೆ ಕಾನಸಿಗುವುದಿಲ್ಲ. ಆದರೆ ತಿರುವಿನಂತಹ ಸ್ಥಳಗಳಲ್ಲಿ ನಿಮಗೆ ಎಚ್ಚರಿಸುವ ಕೆಲಸವನ್ನು ಮಾಡಲಿದೆ.

ಗೂಗಲ್‌ ಮ್ಯಾಪ್

ಇದಲ್ಲದೆ ಟ್ರಾಫಿಕ್ ಲೈಟ್‌ಗಳನ್ನ ನೋಡಲು ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ನಲ್ಲಿ ನೀವು ಟ್ರಾಫಿಕ್ ಲೇಯರ್ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಇದರಿಂದ ನೀವು ಸಾಗುತ್ತಿರುವ ಮಾರ್ಗದಲ್ಲಿ ಟ್ರಾಪಿಕ್‌ ಸಿಗ್ನಲ್‌ ಬಿದ್ದರೆ ನೀವು ನಿಮ್ಮ ಚಾಲನೆಯನ್ನ ನಿದಾನಗೊಳಿಸುವುದಕ್ಕೆ ಸುಲಭವಾಗಲಿದೆ. ಆಂದರೆ ಈ ಫೀಚರ್ಸ್‌ನಿಂದಾಗಿ ಚಾಲನೆಯಲ್ಲಿರುವ ವ್ಯಕ್ತಿಗೆ ಆ ಮಾಗ್ದ ಪ್ರತಿಯೊಂದು ಆಪ್ಡೇಟ್‌ ಕೂಡ ದೊರೆಯಲಿದೆ. ಇದರಿಂದಾಗಿ ಆತನಿಗೆ ಹೇಗೆ ಸಾಗಬೇಕು ಯಾವ ಬಗೆಯಲ್ಲಿ ಎಚ್ಚರಿದಿಂದಿರಬೇಕು ಅನ್ನುವುದು ತಿಳಿಯುವುದರಿಂದ ಇದು ಬಹಳ ಉಪಯುಕ್ತವಾಗಲಿದೆ.

ಗೂಗಲ್‌ ಮ್ಯಾಪ್

ಸದ್ಯ ಈ ಹೊಸ ಫೀಚರ್ಸ್‌ ಅನ್ನು ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್ ಆವೃತ್ತಿ 10.44.3 ರಲ್ಲಿ ಗುರುತಿಸಲಾಗಿದೆ. ಗೂಗಲ್ ನಕ್ಷೆಗಳು ಆಪಲ್ ನಕ್ಷೆಗಳಿಗಿಂತ ಹಿಂದುಳಿದಿರುವ ಅಪರೂಪದ ನಿದರ್ಶನಗಳಲ್ಲಿ ಇಂತಹ ಫಿಚರ್ಸ್‌ ಕೂಡ ಒಂದಾಗಿದೆ. ಈಗಾಗಲೇ ಐಫೋನ್ ತಯಾರಕ ಕಳೆದ ವರ್ಷ ಐಒಎಸ್ 13 ರೊಂದಿಗೆ ತನ್ನ ಆಪಲ್ ನಕ್ಷೆಗಳ ಅಪ್ಲಿಕೇಶನ್‌ನಲ್ಲಿ ಟ್ರಾಫಿಕ್ ದೀಪಗಳನ್ನು ತೋರಿಸಲು ಮತ್ತು ಚಿಹ್ನೆಗಳನ್ನು ನಿಲ್ಲಿಸಲು ಈ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಗೂಗಲ್‌ ಮ್ಯಾಪ್‌ ನ ಪಟ್ಟಿಯಲ್ಲಿ ಹೊಸ ಸರ್ಚ್ ಬಾರ್, ಬೇ ವೀಲ್ಸ್ ಏಕೀಕರಣ, ಮೊದಲ ಮೈಲಿ ಸಾರಿಗೆ ಮಾಹಿತಿ, ಹೊಸ ಪ್ಲೇಸ್ ಕಾರ್ಡ್ ಯಂತಹ ಫಿಚರ್ಸ್‌ಗಳು ಪರಿಚಿತವಾಗುವ ನಿರೀಕ್ಷೆ ಇದೆ.

Most Read Articles
Best Mobiles in India

English summary
The traffic lights icons can be seen on the crossroads in Google Maps. For some, its showing in the regular view while others can see it during navigation.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X