ಗೂಗಲ್ ಮ್ಯಾಪ್‌ನ ಈ ಫೀಚರ್ಸ್‌ ನಿಮಗೆ ತುಂಬಾ ಉಪಯುಕ್ತವಾಗಲಿದೆ

|

ಸರ್ಚ್ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಹಲವು ಹೊಸ ಫಿಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಇದೀಗ ತನ್ನ ಗೂಗಲ್‌ ಮ್ಯಾಪ್‌ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್‌ವ್ಯೂ AR ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ನೀವು ಜನದಟ್ಟಣೆಯ ಪ್ರದೇಶದಲ್ಲಿರುವಾಗಲೂ ನಿಮಗೆ ಅನೇಕ ಕಾಲುದಾರಿಗಳು, ಕಟ್ಟಡಗಳು ಮತ್ತು ಪ್ರವೇಶದ್ವಾರಗಳು ಒಂದಕ್ಕೊಂದು ಹತ್ತಿರದಲ್ಲಿದ್ದಾಗಲೂ ನೀವು ತಲುಪಬೇಕಾದ ನಿಖರವಾದ ಸ್ಥಳವನ್ನು ಗುರುತಿಸಲು ಸಹಾಯ ಮಾಡಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಗೂಗಲ್‌ ಮ್ಯಾಪ್‌ ಲೈವ್ ವ್ಯೂ AR ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ನೀವು ತಲುಪಬೇಕಾದ ಸ್ಥಳ ಎಂತಹುದೇ ಕಿರಿದಾದ ಜಾಗದಲ್ಲಿದ್ದರೂ ಇದರಿಂದ ನಿಖರವಾಗಿ ತಲುಪಬಹುದಾಗಿದೆ. ನೀವು ಕೆಲವೊಮ್ಮೆ ಕೆಲವು ಮಾರ್ಗಗಳನ್ನ ಜಿಪಿಎಸ್ ಸಹಾಯದಿಂದ ಹುಡುಕುತ್ತಿರುವಾಗಲೂ ನಿಖರವಾಗಿ ಗುರುತಿಸುವುದು ಕಷ್ಟ. ಆದಾಗ್ಯೂ, ಈ ಹೊಸ ಗೂಗಲ್ ಲೈವ್ ವ್ಯೂ AR ಫೀಚರ್ಸ್‌ ಈ ಸಮಸ್ಯೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಹಾಗಾದ್ರೆ ಲೈವ್ ವ್ಯೂ AR ಫೀಚರ್ಸ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ಗೂಗಲ್ ನಕ್ಷೆಗಳ ಲೈವ್ ವ್ಯೂ ಎಆರ್ ಫೀಚರ್ಸ್‌ ಫೋನ್ ಮತ್ತು ಬಳಕೆದಾರರಿಗೆ ಬಳಕೆದಾರರು ಎಲ್ಲಿ ನಿಂತಿದ್ದಾರೆ ಮತ್ತು ಅವರು ಯಾವ ದಿಕ್ಕಿನ ಕಡೆಗೆ ನೊಡುತ್ತಿದ್ದಾರೆ ಅನ್ನುವುದನ್ನ ತಿಳಿಯಲು ಸಹಾಯ ಮಾಡುತ್ತದೆ. ಇನ್ನು ಈ ಹೊಸ ಫೀಚರ್ಸ್‌ನ ಬಳಕೆ ಗೂಗಲ್ ನಕ್ಷೆಗಳ ಲೈವ್ ವ್ಯೂ ವಾಕಿಂಗ್ ಡೈರೆಕ್ಷನ್‌ ಅನ್ನೇ ಹೋಲುತ್ತದೆ. ಜೊತೆಗೆ ಇದು ನಿಮ್ಮ ಫೋನ್‌ನ ಕ್ಯಾಮೆರಾ ಮೂಲಕ AR ಅನ್ನು ಬಳಸುವ ಮೂಲಕ ಬಳಕೆದಾರರು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಾರೆಯೇ ಎಂದು ಗುರುತಿಸಲು ಸಹ ಇದು ಅನುಮತಿಸುತ್ತದೆ.

ಲೈವ್ ವ್ಯೂ AR

ಲೈವ್ ವ್ಯೂ AR ಅನ್ನು ಬಳಸಲು, ನೀವು ಮ್ಯಾಪ್‌ನಲ್ಲಿ ಕಾಣುವ ನೀಲಿ ಸ್ಥಾನದ ಚುಕ್ಕೆ ಟ್ಯಾಪ್ ಮಾಡಿ ಮತ್ತು ಲೈವ್ ವ್ಯೂ AR ಆಯ್ಕೆಯನ್ನು ಆರಿಸಬೇಕು. ಇನ್ನು ಈ ಆಯ್ಕೆಯು ಸದ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಇದಲ್ಲದೆ, ಇದು Google ಸ್ಟ್ರೀಟ್ ವ್ಯೂ ಬೆಂಬಲಿಸುವ ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನು ನೀವು ಈ ಫೀಚರ್ಸ್‌ ಅನ್ನು ಪಡೆದುಕೊಳ್ಳಬೇಕಾದರೆ ಗೂಗಲ್‌ಮ್ಯಾಪ್‌ ಅನ್ನು ಅಪ್ಡೇಟ್‌ ಮಾಡಬೇಕು.ಇದಲ್ಲದೆ ಗೂಗಲ್‌ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಇನ್ನು ಹೊಸ ಮಾದರಿಯ ನಿರ್ಧಾರವನ್ನು ತೆಗೆದುಕೊಂಡಿದೆ.ಅದೆನೆಂದರೆ ಯುರೋಪಿನ ಬಳಕೆದಾರರಿಗೆ ಇತರ ದೇಶಗಳಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳನ್ನು ನೋಡಲು ಅನುಮತಿಸುತ್ತಿದೆ. ಈ ಕ್ರಮದಿಂದ, ಜನರು ತಮ್ಮ ಸ್ಥಳದಲ್ಲಿ ನಿರ್ಬಂಧಿಸಲಾದ ಅಪ್ಲಿಕೇಶನ್‌ಗಳನ್ನು ಅನ್ಲಾಕ್ ಮಾಡಲು VPN ಅಥವಾ ಇತರ ಸೇವೆಗಳನ್ನು ಅವಲಂಬಿಸುವ ಅವಶ್ಯಕತೆ ಕಂಡುಬರುವುದಿಲ್ಲ.

ಅಪ್ಲಿಕೇಶನ್

ಈ ಹೊಸ ನಿರ್ಧಾರದಿಂದಾಗಿ, ಯುರೋಪಿನ ಜನರು ತಮ್ಮ ಪ್ರದೇಶದ ಹೊರಗೆ ಲಭ್ಯವಿರುವ ಪುಸ್ತಕಗಳು, ಚಲನಚಿತ್ರಗಳು ಮತ್ತು ಅಪ್ಲಿಕೇಶನ್‌ಗಳನ್ನು ನೋಡಬಹುದು. ಆದಾಗ್ಯೂ, ಗೂಗಲ್ ತನ್ನ ಸಾಮರ್ಥ್ಯವನ್ನು ನಿರ್ಬಂಧಿಸಿದೆ, ಕೇವಲ ಅಪ್ಲಿಕೇಶನ್ ಅನ್ನು ನೋಡಲು ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಅವರು ಇನ್ನೂ ಈ ಅಪ್ಲಿಕೇಶನ್‌ಗಳನ್ನು ಅಥವಾ ಅವರ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಯಾವುದೇ ವಿಷಯವನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.

Best Mobiles in India

English summary
Google Maps’ Live View AR feature helps both the phone and the user understand where exactly the user is standing and the direction they face.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X