ಕ್ಯಾಬ್‌ ಚಾಲಕರ ವಂಚನೆಗೆ ಗೂಗಲ್ ಮ್ಯಾಪ್ಸ್ ಬ್ರೇಕ್..!

By Gizbot Bureau
|

ದಿನಕ್ಕೊಂದು ಅಪ್‌ಡೇಟ್‌ಗಳನ್ನು ನೀಡುತ್ತಿರುವ ಗೂಗಲ್‌ ಮ್ಯಾಪ್‌ ನಮ್ಮ ಪ್ರಯಾಣದ ದಾರಿಯನ್ನು ಸುಲಭವನ್ನಾಗಿಸಿದೆ. ಎರಡು ಸ್ಥಳಗಳ ನಡುವಿನ ಅಂತರ, ರೆಸ್ಟೊರೆಂಟ್‌ ಬುಕ್‌, ಸಾರ್ವಜನಿಕ ಸಾರಿಗೆಯ ಮಾಹಿತಿಯಂಥ ಅನೇಕ ಫೀಚರ್‌ಗಳನ್ನು ತನ್ನ ಬಳಕೆದಾರರಿಗೆ ನೀಡಿರುವ ಗೂಗಲ್‌ ಮ್ಯಾಪ್ಸ್‌, ಈಗ ಹೊಸ ಮತ್ತು ಉಪಯುಕ್ತ ಫೀಚರ್‌ನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ.

ಕ್ಯಾಬ್‌ ಚಾಲಕರ ವಂಚನೆಗೆ ಗೂಗಲ್ ಮ್ಯಾಪ್ಸ್ ಬ್ರೇಕ್..!

ಸದ್ಯ ನೀವು ಕ್ಯಾಬ್‌ನಲ್ಲಿ ಹೋಗುವಾಗ ನಿಮ್ಮ ರೂಟ್‌ ಬದಲಾದರೆ ತಕ್ಷಣ ನಿಮಗೆ ಗೂಗಲ್‌ ಮ್ಯಾಪ್ಸ್‌ ಎಚ್ಚರಿಕೆಯನ್ನು ನೀಡುವ ಹೊಸ ಫೀಚರ್‌ ತರುತ್ತಿದೆ. ಹೇಗಿರುತ್ತೆ ಹೊಸ ಫೀಚರ್..? ಎಂಬುದನ್ನು ಮುಂದೆ ಓದಿ.

ಕ್ಯಾಬ್‌ ಮೋಸಕ್ಕೆ ತೆರೆ

ಕ್ಯಾಬ್‌ ಮೋಸಕ್ಕೆ ತೆರೆ

ನೀವು ಎಲ್ಲಿಗಾದರೂ ಕ್ಯಾಬ್‌ನಲ್ಲಿ ಹೋಗುತ್ತೀರಿ. ನಗರಕ್ಕೆ ನೀವು ಹೊಸಬರಾಗಿದ್ದು, ಮಾರ್ಗಗಳ ಪರಿಚಯ ನಿಮಗಿರುವುದಿಲ್ಲ. ಆಗ, ಕ್ಯಾಬ್ ಚಾಲಕರು ನಿಮ್ಮನ್ನು ಯಾಮಾರಿಸುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಹೋಗುವ ಸ್ಥಳಕ್ಕೆ ಸುತ್ತಿ ಬಳಸಿ ಹೋಗಿ ಹೆಚ್ಚು ದುಡ್ಡನ್ನು ನೀಡುವಂತೆ ಮಾಡುತ್ತಾರೆ. ಭಾರತವಷ್ಟೇ ಅಲ್ಲದೇ ವಿಶ್ವದ ಬೇರೆ ಬೇರೆ ಪ್ರದೇಶಗಳಲ್ಲಿ ಗ್ರಾಹಕರಿಗೆ ಈ ರೀತಿಯ ವಂಚನೆ ನಡೆಯುತ್ತಿರುತ್ತದೆ. ಅದಕ್ಕಾಗಿಯೇ ಗೂಗಲ್ ಮ್ಯಾಪ್ಸ್‌ ಹೊಸ ಆಯ್ಕೆಯನ್ನು ತಂದಿದ್ದು, ಗ್ರಾಹಕರಿಗೆ ಉಪಕಾರಿ ಆಗಲಿದೆ.

ಬೇರೆ ಕೆಲಸಗಳನ್ನು ನಿರ್ವಹಿಸಬಹುದು

ಬೇರೆ ಕೆಲಸಗಳನ್ನು ನಿರ್ವಹಿಸಬಹುದು

ಮೊದಲೆಲ್ಲಾ ರೂಟ್‌ ಎಲ್ಲಿ ಬದಲಾಗುತ್ತೋ ಅಂತ ಯೋಚನೆ ಮಾಡುತ್ತಾ ಯಾವಾಗಲೂ ಗೂಗಲ್‌ ಮ್ಯಾಪ್ಸ್‌ನ್ನು ನೋಡುತ್ತಾ ಕೂರಬೇಕಿತ್ತು. ಆದರೆ, ಈಗ ಹೊಸ ಫೀಚರ್‌ನಿಂದ ನೀವು ನಿಮ್ಮ ಮೊಬೈಲ್‌ನಲ್ಲಿ ಬೇರೆ ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ಮಾರ್ಗ ಬದಲಾವಣೆಯಾದರೆ ನಿಮಗೆ ಅಲರ್ಟ್ ಸಂದೇಶ ಬರುವುದರಿಂದ ಯಾವುದೇ ಚಿಂತೆ ಮಾಡಬೇಕಿಲ್ಲ.

ಸ್ಟೇ ಸೇಫರ್

ಸ್ಟೇ ಸೇಫರ್

ನೀವು ಈ ಫೀಚರ್ ಬಳಸಲು ಮಾಡಬೇಕಿರುವುದು ಇಷ್ಟೇ. ನ್ಯಾವಿಗೇಷನ್ ಡೈರೆಕ್ಷನ್ ನೋಡುವಾಗ ಸ್ಟೇ ಸೇಫರ್ ಆಯ್ಕೆಯನ್ನು ಮೆನುವಿನಲ್ಲಿ ಆಯ್ಕೆ ಮಾಡಿಕೊಳ್ಳಿ. ನಂತರ ಆಫ್‌ ರೂಟ್‌ ಅಲರ್ಟ್ ಅನ್ನು ಆಯ್ಕೆ ಮಾಡಿ, ನ್ಯಾವಿಗೇಷನ್ ಪ್ರಾರಂಭವಾಗುವ ಮುಂಚೆಯಿಂದಲೇ ಎನೆಬಲ್ ಮಾಡಿಕೊಳ್ಳಬೇಕು. ಚಾಲಕ ಏನಾದ್ರೂ ಮಾರ್ಗ ಬಿಟ್ಟು 500 ಮೀ. ಬೇರೆ ಮಾರ್ಗದಲ್ಲಿ ಹೋದ್ರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಲರ್ಟ್ ಬರುತ್ತದೆ.

ಐಒಎಸ್‌ನಲ್ಲಿ ಈ ಫೀಚರ್ ಇಲ್ಲ

ಐಒಎಸ್‌ನಲ್ಲಿ ಈ ಫೀಚರ್ ಇಲ್ಲ

ಗೂಗಲ್‌ ಮ್ಯಾಪ್ಸ್‌ನ ಹೊಸ ಫೀಚರ್‌ ಐಒಎಸ್‌ ಡಿವೈಸ್‌ಗಳಲ್ಲಿ ಇಲ್ಲ. ಸ್ಟಾರ್ಟ್‌ ಮತ್ತು ಸ್ಟೆಪ್ಸ್‌ ಆಯ್ಕೆಗಳು ಮಾತ್ರ ನಿಮಗೆ ಕಾಣಸಿಗುತ್ತವೆ. ಸ್ಟೇ ಸೇಫರ್ ಎಂಬ ಆಯ್ಕೆ ನಿಮಗೆ ಕಾಣುವುದಿಲ್ಲ. ಅದಲ್ಲದೇ ಗೂಗಲ್‌ ಈ ಫೀಚರ್‌ನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದು ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, ಸ್ವಲ್ಪ ದಿನಗಳಲ್ಲಿಯೇ ಗ್ರಾಹಕರ ಬಳಕೆಗೆ ದೊರೆಯುತ್ತದೆ.

Best Mobiles in India

Read more about:
English summary
Google Maps Will Alert If Your Taxi Goes Off Route

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X