ಈ ಪ್ರತಿಷ್ಠಿತ ಟೆಕ್ ಸಂಸ್ಥೆಗಳಲ್ಲಿ ಸಂಬಳ ಜಾಸ್ತಿ, ಆದ್ರೆ ಈ ಕೆಲಸ ಮಾಡುವಂತಿಲ್ಲ!

|

ಉನ್ನತ ಶಿಕ್ಷಣ ಪಡೆದು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿಕೊಳ್ಳವವರು ಒಂದೆಡೆ ಆದರೆ, ಇನ್ನು ಕೆಲವರು ಇಲ್ಲಿ ಕಲಿತು ವಿದೇಶದಲ್ಲಿ ದೊಡ್ಡ ಸ್ಯಾಲರಿ ಹುದ್ದೆ ಪಡೆಯಲು ಯತ್ನಿಸುತ್ತಾರೆ. ಅದರಲ್ಲಿಯೂ ವಿಶ್ವದ ಟೆಕ್ ಸಂಸ್ಥೆಗಳಾದ ಗೂಗಲ್, ಫೇಸ್‌ಬುಕ್, ಅಮೆಜಾನ್ ಕಂಪನಿಗಳಲ್ಲಿ ಕೆಲಸ ಸಿಗಲಿ ಎಂದು ಪ್ರಯತ್ನಿಸುವವರು ಇದ್ದಾರೆ. ಏಕೆಂದರೇ ಈ ದೈತ್ಯ ಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಸಿಗುವ ಸೌಲಭ್ಯಗಳು ಹೆಚ್ಚಿರುತ್ತವೆ ಅಂತಾ ಗೊತ್ತು. ಆದರೆ ಅಲ್ಲಿಯ ರೂಲ್ಸ್‌ ಹೇಗಿರುತ್ತವೆ ಗೊತ್ತಾ?

ಗೂಗಲ್, ಫೇಸ್‌ಬುಕ್, ಅಮೆಜಾನ್

ಹೌದು, ಗೂಗಲ್, ಫೇಸ್‌ಬುಕ್, ಅಮೆಜಾನ್ ಕಂಪನಿಗಳಲ್ಲಿನ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಸ್ಯಾಲರಿ ಸಿಗುತ್ತೆ ಜೊತೆಗೆ ಹೆಚ್ಚುವರಿ ಇತರೆ ಸೌಲಭ್ಯಗಳ ಅನುಕೂಲಗಳಿರುತ್ತವೆ. ಹೀಗಾಗಿ ಇಂತಹ ಸಂಸ್ಥೆಗಳಲ್ಲಿ ನೌಕರಿಗೆ ಸೇರುವ ಕನಸು ಎಲ್ಲರಲ್ಲಿಯೂ ಇದ್ದೆ ಇರುತ್ತದೆ. ಆದರೆ ಈ ಟೆಕ್ ಸಂಸ್ಥೆಗಳಲ್ಲಿಯೂ ಇತರೆ ಸಂಸ್ಥೆಗಳಲ್ಲಿರುವಂತೆ ಕೆಲವು ನಿರ್ಬಂಧಗಳು, ನಿಯಮಗಳು ಇವೆ. ಪ್ರತಿಯೊಬ್ಬ ಉದ್ಯೋಗಿಯು ನಿಯಮಗಳ ಪಾಲನೆ ಮಾಡುವುದು ಕಡ್ಡಾಯ. ಈ ಟೆಕ್ ಕಂಪನಿಗಳಲ್ಲಿ ಯಾವೆಲ್ಲಾ ಕೆಲಸ ಮತ್ತು ಚಟುವಟಿಕೆಗಳಿಗೆ ನಿ‍ಷೇಧ ಇದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಇಲ್ಲ

ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಇಲ್ಲ

ಇ-ಕಾಮರ್ಸ್‌ ದೈತ್ಯ ಅಮೆಜಾನ್ ಸಂಸ್ಥೆಯಲ್ಲಿ ಉದ್ಯೋಗಿಗಳು ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮಾಡುವುದನ್ನು ಬ್ಯಾನ್ ಮಾಡಲಾಗಿದೆ. ಅದರ ಬದಲಾಗಿ ಆರು ಪುಟಗಳ ಮೆಮೊ ಬರೆಯುವುದಂತೆ. ಈ ವಿಷಯವನ್ನು ಅಮೆಜಾನ್ ಸ್ಥಾಪಕ ಜೆಫ್‌ ಬೆನೊಜ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗೂಗಲ್ ಡಾಕ್ಯುಮೆಂಟ್ಸ್‌ ಬ್ಯಾನ್‌

ಗೂಗಲ್ ಡಾಕ್ಯುಮೆಂಟ್ಸ್‌ ಬ್ಯಾನ್‌

ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿ ಗೂಗಲ್ ಸಂಸ್ಥೆಯ ಡಾಕ್ಯುಮೆಂಟ್ಸ್‌ ಫೈಲ್ ಬಳಕೆಯನ್ನು ಸಂಪೂರ್ಣವಾಗಿ ನಿ‍ಷೇಧಿಸಿಲ್ಲ. ಬದಲಿಗೆ ಬಳಕೆಯಲ್ಲಿ ನಿಯಂತ್ರಣ ಮಾಡಿದೆ. ಅಗತ್ಯ ಸಂದರ್ಭದಲ್ಲಿ ಗೂಗಲ್ DOC ಬಳಸಬಹುದಾಗಿದೆ.

ರಾಜಕೀಯ ಮಾತಾಡೊ ಹಾಗಿಲ್ಲ

ರಾಜಕೀಯ ಮಾತಾಡೊ ಹಾಗಿಲ್ಲ

ಟೆಕ್ ದೈತ್ಯ ಗೂಗಲ್ ಸಂಸ್ಥೆಯಲ್ಲಿ ರಾಜಕೀಯ ಮಾತುಕತೆ ನಡೆಸುವುದು ಬ್ಯಾನ್ ಮಾಡಲಾಗಿದೆ. ಕೆಲಸದ ವೇಳೆ ರಾಜಕೀಯ ಚರ್ಚೆಗಳಿಗೆ, ಟೀಕೆ ಟಿಪ್ಪಣಿಗಳಿಗೆ ಅವಕಾಶ ಇಲ್ಲ. ರಾಜಕೀಯ ವಿಷಯದ ಚರ್ಚೆಗೆ ಅಂತ್ಯ ಎನ್ನುವುದೆ ಇರಲ್ಲ. ಮಾತಾಡಿದಷ್ಟು ಬೆಳೆಯುತ್ತ ಹೋಗುತ್ತದೆ. ಅದಕ್ಕೆ ಗೂಗಲ್ ಕೆಲಸದ ವೇಳೆ ರಾಜಕೀಯ ಮಾತುಕಥೆಗೆ ಪೂರ್ಣವಿರಾಮ ಹಾಕಿದೆ.

ಐಫೋನ್ ಬಳಕೆ ಇಲ್ಲ

ಐಫೋನ್ ಬಳಕೆ ಇಲ್ಲ

ವಿಶ್ವದ ಅತೀ ಜನಪ್ರಿಯ ಸಾಮಾಜಿಕ ತಾಣ ಫೇಸ್‌ಬುಕ್‌ ಸಂಸ್ಥೆಯ ಉದ್ಯೋಗಿಗಳು ಐಫೋನ್ ಬಳಕೆ ಮಾಡುವುದನ್ನು ಬ್ಯಾನ್ ಮಾಡಿದೆ. ಐಫೋನ್‌ ಬದಲಿಗೆ ಆಂಡ್ರಾಯ್ಡ್ ಓಎಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಳಸಲು ಪ್ರೋತ್ಸಾಹಿಸಿದೆ. ಇದಕ್ಕೆ ನಿಖರ ಕಾರಣ ತಿಳಿಸಿಲ್ಲ. ಆದರೆ ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್‌ಬರ್ಗ್ ಮತ್ತು ಆಪಲ್ ಸಿಇಓ ಟಿಮ್ ಕುಕ್ ನಡುವೆ ಇರುವ ದ್ವೇಷವೇ ಇದಕ್ಕೆ ಕಾರಣ ಎನ್ನುವ ಮಾತುಗಳಿವೆ.

ಗ್ರಾಮರ್ ಆಪ್ ಬಳಕೆ ಇಲ್ಲ

ಗ್ರಾಮರ್ ಆಪ್ ಬಳಕೆ ಇಲ್ಲ

ಮೈಕ್ರೋಸಾಫ್ಟ್‌ ಸಂಸ್ಥೆಯು ಗ್ರಾಮರ್‌ಲಿ-Grammarly ಅಪ್ಲಿಕೇಶನ್ ಅನ್ನು ಕೆಲಸದ ವೇಳೆ ಬಳಕೆ ಮಾಡದಂತೆ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ. ಆದರೆ ಅದ್ಯಾವ ಕಾರಣಕ್ಕೆ ಮೈಕ್ರೋಸಾಫ್ಟ್‌ ಕಂಪನಿಯು ಈ ನಿರ್ಧಾರ ಮಾಡಿದೆಯೊ ಗೊತ್ತಿಲ್ಲ. ಒಟ್ಟಿನಲ್ಲಿ ಗ್ರಾಮರ್ ಆಪ್ ಬಳಕೆ ಮಾಡುವಂತಿಲ್ಲ ಎಂದಿದೆ.

ಪೆನ್‌ಡ್ರೈವ್‌ ಮತ್ತು ಎಸ್‌ಡಿ ಕಾರ್ಡ್ ಬ್ಯಾನ್

ಪೆನ್‌ಡ್ರೈವ್‌ ಮತ್ತು ಎಸ್‌ಡಿ ಕಾರ್ಡ್ ಬ್ಯಾನ್

ಪ್ರತಿಷ್ಠಿತಿ IBM ಸಂಸ್ಥೆಯು ಬಾಹ್ಯ ಮೆಮೊರಿ ಸಂಗ್ರಹ ಸಾಧನಗಳಾದ ಪೆನ್‌ಡ್ರೈವ್‌ ಮತ್ತು ಎಸ್‌ಡಿ ಕಾರ್ಡ್ ಬಳಕೆಯನ್ನು ಬ್ಯಾನ್ ಮಾಡಿದೆ. ಹೀಗಾಗಿ ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ಹೆಚ್ಚುವರಿ ಮೆಮೊರಿ ಸಂಗ್ರಹ ಸಾಧನಗಳನ್ನು ಬಳಕೆ ಮಾಡುವಂತಿಲ್ಲ.

ಟೆಲಿಗ್ರಾಂ ಆಪ್ ಬ್ಯಾನ್

ಟೆಲಿಗ್ರಾಂ ಆಪ್ ಬ್ಯಾನ್

ಜನಪ್ರಿಯ ಉಬರ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಕೆಲಸ ಮಾಡುವಾಗ ಟೆಲಿಗ್ರಾಂ ಆಪ್‌ ಅನ್ನು ಬಳಕೆ ಮಾಡಬಾರದೆಂದು ಹೇಳಿದೆ. ಕಳೆದ ಕೆಲ ವರ್ಷಗಳ ಹಿಂದೆ ಉಬರ್ ಸಿಒಓ ದಾರಾ ಖೋಸ್ರೋಶಾಹಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಸ್ಲ್ಯಾಕ್ ಆಪ್ ಬ್ಯಾನ್‌

ಸ್ಲ್ಯಾಕ್ ಆಪ್ ಬ್ಯಾನ್‌

ಮೈಕ್ರೋಸಾಫ್ಟ್‌ ಕಂಪನಿಯು ಸ್ಲ್ಯಾಕ್ ಆಪ್‌ನ ಉಚಿತ ಆವೃತ್ತಿಯನ್ನು ಬಳಕೆ ಮಾಡುವುದನ್ನು ಬ್ಯಾನ್ ಮಾಡಿದೆ. ಹೀಗಾಗಿ ಮೈಕ್ರೋಸಾಫ್ಟ್‌ ಸಂಸ್ಥೆಯ ಉದ್ಯೋಗಿಗಳು ಸ್ಲ್ಯಾಕ್ ಅಪ್ಲಿಕೇಶನ್ ಉಚಿತ ಆವೃತ್ತಿಯನ್ನು ಬಳಕೆ ಮಾಡುವಂತಿಲ್ಲ.

Best Mobiles in India

English summary
These Few Things that employees at Google, Facebook, Amazon and other companies are banned from doing.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X