ಬಳಕೆದಾರರೇ ಎಚ್ಚರ, Incognito ಮೋಡ್ ನಲ್ಲಿಯೂ ನಿಮ್ಮ ಮಾಹಿತಿ ಟ್ರ್ಯಾಕ್‌ ಆಗಬಹುದು!

|

ಗೂಗಲ್‌ನ ಕ್ರೋಮ್‌ನಲ್ಲಿ ಸರ್ಚ್‌ ಮಾಡಿದ ಮಾಹಿತಿ ಬೇರೆಯವರಿಗೆ ತಿಳಿಯಬಾರದೆಂಬ ಕಾರಣಕ್ಕೆ ಹೆಚ್ಚಿನ ಜನರು Incognito ಮೋಡ್‌ ಅನ್ನು ಬಳಸುತ್ತಾರೆ. ಏಕೆಂದರೆ Incognito ಮೋಡ್‌ ನಲ್ಲಿ ಬ್ರೌಸ್‌ ಮಾಡಿದ್ದರೆ ಯಾವುದೇ ಹಿಸ್ಟರಿ ಉಳಿಯುವುದಿಲ್ಲ, ಮಾಹಿತಿ ಟ್ರ್ಯಾಕ್‌ ಆಗುವುದಲ್ಲ ಅನ್ನೊದು ಎಲ್ಲರ ನಂಬಿಕೆ. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ Incognito ಮೋಡ್‌ನಲ್ಲಿಯೂ ಸಹ ಗೂಗಲ್‌ ನಿಮ್ಮ ಮಾಹಿತಿಯನ್ನ ಟ್ರ್ಯಾಕ್‌ ಆಗಬಹುದು ಎಂಬ ಪ್ರಶ್ನೆ ಎಂದಿದೆ.

ಗೂಗಲ್‌ ಕ್ರೋಮ್‌

ಹೌದು, ಗೂಗಲ್‌ ಕ್ರೋಮ್‌ ನಲ್ಲಿ Incognito ಮೋಡ್‌ನಲ್ಲಿ ಸರ್ಚ್‌ ಮಾಡುವ ಬಳಕೆದಾರರು ಗಮನಿಲೇಬೇಕಾದ ಸುದ್ದಿ ಇದು. Incognito ಮೋಡ್‌ನಲ್ಲಿ ನಿಜವಾಗಿಯೂ ಗೂಗಲ್‌ ನಿಮ್ಮ ಮಾಹಿತಿಯನ್ನು ಟ್ರ್ಯಾಕ್‌ ಮಾಡುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಲೇಬೇಕಿದೆ. ಈ ವಿಂಡೋದಲ್ಲಿ ಬ್ರೌಸಿಂಗ್ ಮಾಡಿದ್ದರೆ ಹಿಸ್ಟರಿ ಉಳಿಯುವುದಿಲ್ಲ ಮತ್ತು ನಿಮ್ಮ ಯಾವುದೇ ಡೇಟಾಗಳು ಸೇವ್ ಆಗುವುದಿಲ್ಲ ಅನ್ನೊದು ಎಲ್ಲರ ನಂಬಿಕೆ. ಆದರೆ ಇದು ಸುಳ್ಳು ಇರಬಹುದಾ ಎನ್ನುವ ಪ್ರಶ್ನೆ ಎದಿದ್ದೆ. ಅಷ್ಟಕ್ಕೂ ಈಗ ಸೃಷ್ಟಿಯಾಗಿರುವ ಸಮಸ್ಯೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Chrome

ನೀವು Chrome ನಲ್ಲಿ ಬ್ರೌಸ್ ಮಾಡುವಾಗ ನಿಮ್ಮ ಆನ್‌ಲೈನ್ ಗೌಪ್ಯತೆಯನ್ನು ರಕ್ಷಿಸಲು Incognito ಮೋಡ್ ಉತ್ತಮ ಎನ್ನುವುದು ಎಲ್ಲರ ನಂಬಿಕೆ. ಆದರೆ Incognito ಮೋಡ್‌ನಲ್ಲಿಯೂ ಸಹ ಬಳಕೆದಾರರ ಮಾಹಿತಿ ಟ್ರ್ಯಾಕ್‌ ಆಗಲಿದೆಯಂತೆ. ಇದೇ ವಿಚಾರವಾಗಿ ಮೂವರು ಬಳಕೆದಾರರು ಗೂಗಲ್‌ ವಿರುದ್ದ ಯುಎಸ್ ನಲ್ಲಿ ಮೊಕದ್ದಮೆ ಹೂಡಿದ್ದರು. ಇದೇ ಕಾರಣಕ್ಕೆ ಯುಎಸ್ ಜಿಲ್ಲಾ ನ್ಯಾಯಾಧೀಶ ಲೂಸಿ ಕೊಹ್ "ಬಳಕೆದಾರರು ಖಾಸಗಿ ಬ್ರೌಸಿಂಗ್ ಮೋಡ್‌ನಲ್ಲಿರುವಾಗ ಗೂಗಲ್ ಆಪಾದಿತ ದತ್ತಾಂಶ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಗೂಗಲ್ ಬಳಕೆದಾರರಿಗೆ ತಿಳಿಸಿಲ್ಲ" ಎಂದು ವಿವರಿಸಿದ್ದಾರೆ.

Chrome ನ ಸಮಸ್ಯೆ ಏನು?

Chrome ನ ಸಮಸ್ಯೆ ಏನು?

ಗೂಗಲ್ ಖಾಸಗಿ ಬ್ರೌಸಿಂಗ್ ಮೋಡ್ ಅನ್ನು ‘Incognito ಮೋಡ್' ಎಂದು ಕರೆಯುತ್ತದೆ, ಅದು ತನ್ನ ಬಳಕೆದಾರರಿಗೆ ಬ್ರೌಸಿಂಗ್ ಹಿಸ್ಟರಿ, ಸ್ಟೋರೇಜ್‌, ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್ ಮಾಡುವಂತಹ ಆನ್‌ಲೈನ್ ಚಟುವಟಿಕೆಗಳಿಲ್ಲದೆ ಇಂಟರ್ನೆಟ್ ಬ್ರೌಸ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಆದಾಗ್ಯೂ, ಕಂಪನಿಯು ಬಳಕೆದಾರರ ಕೆಲವು ಆನ್‌ಲೈನ್ ನಡವಳಿಕೆಯನ್ನು ಟ್ರ್ಯಾಕ್ ಮಾಡುತ್ತದೆ ಎಂದು ಬ್ರೌಸರ್‌ನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸುತ್ತದೆ. "ನೀವು ಪ್ರತಿ ಬಾರಿ ಹೊಸ Incognito ಮೋಡ್ ಟ್ಯಾಬ್‌ ಅನ್ನು ತೆರೆದಾಗ ನಾವು ಸ್ಪಷ್ಟವಾಗಿ ಹೇಳುವಂತೆ, ವೆಬ್‌ಸೈಟ್‌ಗಳು ನಿಮ್ಮ ಬ್ರೌಸಿಂಗ್ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ" ಎಂದು ಗೂಗಲ್ ಪುನರುಚ್ಚರಿಸಿದೆ.

ಥರ್ಡ್‌ ಪಾರ್ಟಿ

ಸದ್ಯ ತನ್ನ ದೊಡ್ಡ ಬಳಕೆದಾರ ಮೂಲವನ್ನು ಸಮಾಧಾನಪಡಿಸಲು, ಕಂಪನಿಯು ತನ್ನ ಕ್ರೋಮ್ ಬ್ರೌಸರ್‌ನಿಂದ ಥರ್ಡ್‌ ಪಾರ್ಟಿ ಕುಕೀಗಳನ್ನು ಹೊರಹಾಕುವುದಾಗಿ ಘೋಷಿಸಿದೆ. ಈ ಕುಕೀಗಳಲ್ಲಿ ಒಂದನ್ನು ಹಂತಹಂತವಾಗಿ ಹೊರಹಾಕಲಾಗಿದೆ, ಇದು ವ್ಯಕ್ತಿಗಳು ಇಂಟರ್‌ನೆಟ್‌ ಬ್ರೌಸ್ ಮಾಡುವಾಗ ಅವುಗಳನ್ನು ಪತ್ತೆಹಚ್ಚಲು ಪರ್ಯಾಯ ಗುರುತಿಸುವಿಕೆಗಳನ್ನು ರಚಿಸುವುದಿಲ್ಲ ಅಥವಾ ಅದರ ಇತರ ಯಾವುದೇ ಉತ್ಪನ್ನಗಳಲ್ಲಿ ಡೇಟಾವನ್ನು ಬಳಸುವುದಿಲ್ಲ ಎಂದು ಹೇಳಿದೆ.

Best Mobiles in India

English summary
Google Might Have To Pay A Hefty Fine If It Tracks Users In Incognito Mode.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X