ಭಾರತದಲ್ಲಿ 100 ಕ್ಕೂ ಹೆಚ್ಚಿನ ಆನ್‌ಲೈನ್‌ ಲೋನ್‌ ಆಪ್‌ ತೆಗೆದು ಹಾಕಿದ ಗೂಗಲ್‌!

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಲೋನ್‌ ಅಪ್ಲಿಕೇಶನ್‌ಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಆನ್‌ಲೈನ್‌ ಲೋನ್‌ ಹೆಸರಲ್ಲಿ ಸಾಕಷ್ಟು ಮೋಸ ನಡೆಯುತ್ತಿರುವುದರ ಬಗ್ಗೆ ಕೂಡ ವರದಿ ಆಗುತ್ತಲೇ ಇದೆ. ಗ್ರಾಹಕರಿಂದ ದಾಖಲೆಗಳನ್ನು ಪಡೆದು ಸಾಲ ನೀಡುವ ಮೂಲಕ ಹೆಚ್ಚಿನ ಬಡ್ಡಿ ವಸೂಲಿ ಮಾಡುವುದಲ್ಲದೆ, ಇತರರಿಗೆ ಸಂದೇಶ ಕಳುಹಿಸಿ ಕಿರಿಕಿರಿ ನೀಡುತ್ತಿವೆ. ಇಂತಹ ಮೋಸದ ಜಾಲದಲ್ಲಿರುವ ಲೋನ್‌ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಭಾರತ ಸರ್ಕಾರ ಸೂಚಿಸಿದ ನಂತರ, ಗೂಗಲ್ ಸುಮಾರು 100 ಕ್ಕೂ ಹೆಚ್ಚಿನ ಇನ್ಸಟಂಟ್‌ ಲೋನ್‌ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಲೋನ್‌

ಹೌದು, ಇನ್ಸಟಂಟ್‌ ಲೋನ್‌ ಹೆಸರಿನಲ್ಲಿ ಆನ್‌ಲೈನ್‌ ಲೋನ್‌ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಫ್ರಾಡ್‌ ಮಾಡುತ್ತಿದ್ದ ಅಪ್ಲಿಕೇಶನ್‌ಗಳಿಗೆ ಗೂಗಲ್‌ ಪ್ಲೇ ಸ್ಟೋರ್‌ ಗೇಟ್‌ಪಾಸ್‌ ನೀಡಿದೆ. ನಕಲಿ ಲೋನ್‌ ಅಪ್ಲಿಕೇಸನ್‌ಗಳು ಗ್ರಾಹಕರ ವೈಯಕ್ತಿಕ ದತ್ತಾಂಶ ಸಂಗ್ರಹಣೆ ಮತ್ತು ಅದರ ದುರುಪಯೋಗದಲ್ಲಿ ಭಾಗಿಯಾಗಿವೆ. ಇನ್ನು ಇತ್ತೀಚಿಗಷ್ಟೇ ಗ್ರಾಹಕರ ಡೇಟಾವನ್ನು ಬಳಸಿಕೊಂಡು ಬೆದರಿಕೆ ಹಾಕುತ್ತಿದ್ದ, ಜನರನ್ನು ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಸಾಲಗಳನ್ನು ಮರುಪಡೆಯಲು ಇತರ ದಬ್ಬಾಳಿಕೆ ಮಾಡುತ್ತಿದ್ದ ಆಪ್‌ಗಳ ಮೇಲೆ ಗೂಗಲ್‌ಪ್ಲೇ ಸ್ಟೋರ್‌ ಕ್ರಮ ತೆಗೆದುಕೊಂಡಿದೆ. ಗೂಗಲ್‌ಪ್ಲೇ ಸ್ಟೋರ್‌ ಈ ಕ್ರ ತೆಗೆದುಕೊಳ್ಳಲು ಕಾರಣವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಣ

ನಿಮಗೆ ಕ್ಷಣಾರ್ಧದಲ್ಲಿ ಹಣ , ಯಾವುದೇ ಮೂಲ ದಾಖಲೆಳ ಅಗತ್ಯವಿಲ್ಲ ಎಂದು ಆನ್‌ಲೈನ್‌ ಜಾಹಿರಾತು ನೀಡಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ಅಪ್ಲಿಕೇಸನ್‌ಗಳ ಬಗ್ಗೆ ಗೂಗಲ್‌ ಕ್ರಮ ತೆಗೆದುಕೊಂಡಿದೆ. ಅಷ್ಟೇ ಅಲ್ಲ ಗ್ರಾಃಕರಿಗೆ ಸಾಲ ನೀಡಿ ಅವರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಲೋನ್‌ ಆಪ್‌ಗಳನ್ನು ಸಹ ಕಿತ್ತೊಗೆದಿದೆ. ಇತ್ತೀಚಿನ ದಿನಗಳಲ್ಲಿ ತಮ್ಮ ನೀತಿಗಳು ಮತ್ತು ನಿಯಂತ್ರಕ ಚೌಕಟ್ಟನ್ನು ಉಲ್ಲಂಘಿಸುವಂತಹ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಲಭ್ಯತೆಯ ಬಗ್ಗೆ ಕಾನೂನು ಜಾರಿ ಮಾಡಲು ಗೂಗಲ್‌ಗೆ ಐಟಿ ಸಚಿವಾಲಯ ತಿಳಿಸಿತ್ತು. ಇದರ ಕ್ರಮವಾಗಿ ಗೂಗಲ್‌ ಕ್ರಮ ಕೈಗೊಂಡಿದೆ.

ಲೋನ್‌

ಇಂತಹ ನಕಲಿ ಲೋನ್‌ ಅಪ್ಲಿಕೇಶನ್‌ಗಳ ವಿರುದ್ಧ ದೃಡ ನಿಲುವನ್ನು ತೆಗೆದುಕೊಂಡ ಗೂಗಲ್, ಡಿಸೆಂಬರ್ 2020 ರಿಂದ ಜನವರಿ 20, 2021 ರವರೆಗೆ ಸುಮಾರು 100 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಗೂಗಲ್‌ನ ಅಪ್ಲಿಕೇಶನ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಈ ಕೆಲವು ಇನ್ಸಟಂಟ್‌ ಲೋನ್‌ ಅಪ್ಲಿಕೇಶನ್‌ಗಳಿಂದ ವಂಚನೆಗಳು ಮತ್ತು ದುಷ್ಕೃತ್ಯಗಳ ವಿರುದ್ಧ ಹಲವಾರು ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸಿರುವುದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರ

ಅಲ್ಲದೆ ದೇಶದಲ್ಲಿ ಅನ್ವಯವಾಗುವ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ಅಪ್ಲಿಕೇಶ್‌ಗಳನ್ನು ಮಾತ್ರ ಗೂಗಲ್‌ಪ್ಲೇ ಹೊಂದಿರಬೇಕೆಂದು ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ಗೂಗಲ್‌ ಕ್ರಮ ಕೈ ಗೊಳ್ಳಲು ಮುಂದಾಗಿದೆ. ಇದಲ್ಲದೆ ಮನಿ ಲೆಂಡಿಂಗ್ ಆಕ್ಟ್ ನಂತಹ ಸೂಕ್ತ ಶಾಸನಬದ್ಧ ನಿಬಂಧನೆಗಳ ಅಡಿಯಲ್ಲಿ ರಾಜ್ಯ ಸರ್ಕಾರಗಳಿಂದ ನಿಯಂತ್ರಿಸಲ್ಪಡುವ ಬ್ಯಾಂಕುಗಳು, ಆರ್‌ಬಿಐನಲ್ಲಿ ನೋಂದಾಯಿಸಲಾದ ಎನ್‌ಬಿಎಫ್‌ಸಿಗಳು ಮತ್ತು ಇತರ ಸಂಸ್ಥೆಗಳಿಂದ ಕಾನೂನುಬದ್ಧ ಸಾರ್ವಜನಿಕ ಸಾಲ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ. ಆದರಿಂದ ಇಂತಹ ನಿರ್ಲಜ್ಜ ಚಟುವಟಿಕೆಗಳಿಗೆ ಬಲಿಯಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಆನ್‌ಲೈನ್ / ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಾಲ ನೀಡುವ ಕಂಪನಿ / ಸಂಸ್ಥೆಯ ಹಿಂದಿನ ಅಂಶಗಳನ್ನು ಪರಿಶೀಲಿಸುವಂತೆ ಕೋರಲಾಗಿದೆ ಎಂದು ಆರ್‌ಬಿಐ ಹೇಳಿದೆ.

Best Mobiles in India

English summary
Google has removed about 100 fraud instant loan apps from the Google Play Store.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X