ಡೆಸ್ಕ್‌ಟಾಪ್‌ನಿಂದಲೇ ಡೈರೆಕ್ಟ್‌ ಕಾಲ್‌ ಮಾಡಿ..! ಗೂಗಲ್‌ನಿಂದ ಹೊಸ ಫೀಚರ್‌..!

By Gizbot Bureau
|

ವರ್ಷಗಳು ಕಳೆದಂತೆ ಗೂಗಲ್‌ ತನ್ನ ಆಪ್‌ಗಳು ಮತ್ತು ಸೇವೆಗಳು ಆನ್‌ಲೈನ್‌ ಪ್ಲ್ಯಾಟ್‌ಫಾರ್ಮ್‌ ಮತ್ತು ಸ್ಮಾರ್ಟ್‌ ಸಾಧನಗಳಲ್ಲಿ ಸರಳವಾಗಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿ ಕಂಡಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸರ್ಚ್‌ ಇಂಜಿನ್‌ ದೈತ್ಯ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈಗ ಅಂತದ್ದೆ ಮತ್ತೊಂದು ಹೆಜ್ಜೆ ಇಡಲು ಗೂಗಲ್‌ ಯೋಜಿಸುತ್ತಿದೆ. ಅದೇನೆಂದರೆ, ಡೆಸ್ಕ್‌ಟಾಪ್‌ನಲ್ಲಿ ತೋರಿಸಿರುವ ಸಂಖ್ಯೆಗೆ ಕರೆ ಮಾಡುವ ಸೌಲಭ್ಯವನ್ನು ನೀಡಲು ಗೂಗಲ್‌ ಮುಂದಾಗಿದೆ. ಉದಾಹರಣೆಗೆ, ಸದ್ಯ ನೀವು ಇ-ಮೇಲ್‌ನಲ್ಲಿ ಮೊಬೈಲ್‌ ಸಂಖ್ಯೆಯನ್ನು ನೋಡುತ್ತೀರಿ, ಆಗ ನಿಮ್ಮ ಸ್ಮಾರ್ಟ್‌ಫೋನ್‌ ಡಯಲರ್‌ನಲ್ಲಿ ಪ್ರತ್ಯೇಕವಾಗಿ ಡಯಲ್ ಮಾಡಿ ಕಾಲ್‌ ಮಾಡಬೇಕಿದೆ. ಆದರೆ, ಗೂಗಲ್‌ನ ಹೊಸ ಸೇವೆಯಿಂದ ಡೆಸ್ಕ್‌ಟಾಪ್‌ನಲ್ಲಿ ಕಾಲ್‌ ಮಾಡುವ ಕ್ರಮ ಬದಲಾಗಲಿದೆ.

ಕ್ರೋಮ್ ಬೇಟಾ ಆವೃತ್ತಿ 78

ಕ್ರೋಮ್ ಬೇಟಾ ಆವೃತ್ತಿ 78

ಕ್ರೋಮ್ ಬೇಟಾ ಆವೃತ್ತಿ 78ರ ಭಾಗವಾಗಿ, ಪರದೆಯಲ್ಲಿ ಕಂಡುಬರುವ ಸಂಖ್ಯೆಯ ಮೇಲೆ ರೈಟ್‌ ಕ್ಲಿಕ್ ಮಾಡಲು ಗೂಗಲ್ ಅವಕಾಶ ನೀಡುತ್ತಿದೆ. ರೈಟ್‌ ಕ್ಲಿಕ್‌ ಮಾಡಿದ ನಂತರ ಅಡ್ರೆಸ್‌ ಪಟ್ಟಿಯಲ್ಲಿ ನೀವು ಯಾವ ಸಾಧನಕ್ಕೆ ಸಂಖ್ಯೆಯನ್ನು ಕಳುಹಿಸಲು ಬಯಸುತ್ತೀರಿ ಎಂದು ಕೇಳುವ ಪ್ರಾಂಪ್ಟ್ ತೆರೆದುಕೊಳ್ಳುತ್ತದೆ.

ಡಿವೈಸ್‌ ಆಯ್ಕೆ ಮಾಡಿ

ಡಿವೈಸ್‌ ಆಯ್ಕೆ ಮಾಡಿ

ಪ್ರಾಂಪ್ಟ್‌ನಲ್ಲಿ ತೋರಿಸುವ ಡಿವೈಸ್‌ನ್ನು ಆಯ್ಕೆ ಮಾಡಬೇಕಾಗುತ್ತದೆ. ನೀವು ಡಿವೈಸ್‌ ಆಯ್ಕೆ ಮಾಡಿದ ನಂತರ, ಗೂಗಲ್‌ ಕ್ರೋಮ್‌ ಸಂಪರ್ಕ ಸಂಖ್ಯೆಯನ್ನು ಅಧಿಸೂಚನೆಯಂತೆ ನಿಮ್ಮ ಫೋನ್‌ಗೆ ಕಳುಹಿಸುತ್ತದೆ. ಮೊಬೈಲ್‌ಗೆ ಬಂ ನೊಟಿಫಿಕೇಷನ್‌ ಟ್ಯಾಪ್ ಮಾಡಿದರೆ, ನೇರವಾಗಿ ಡಯಲರ್ ಆಪ್‌ನಲ್ಲಿ ಸಂಖ್ಯೆ ಡಯಲ್‌ ಆಗಿ, ಕಾಲ್‌ ಮಾಡಲು ಸಿದ್ಧವಾಗುತ್ತದೆ.

ಹೈಪರ್‌ಲಿಂಕ್‌ ಇರಬೇಕು

ಹೈಪರ್‌ಲಿಂಕ್‌ ಇರಬೇಕು

ಗೂಗಲ್‌ನ ಹೊಸ ಫೀಚರ್‌ ಕ್ರೋಮ್‌ ಬೇಟಾ v78 ಆವೃತ್ತಿಯಲ್ಲಿ ಹೈಪರ್‌ಲಿಂಕ್ ಮಾಡಲಾದ ಫೋನ್ ಸಂಖ್ಯೆಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ನೀವು ಈಗಾಗಲೇ ಅದೇ ಆವೃತ್ತಿಯನ್ನು ಬಳಸುತ್ತಿದ್ದರೆ, ನಿಮ್ಮ ವಿಳಾಸ ಪಟ್ಟಿಯಲ್ಲಿ ಈ ಲಿಂಕ್ ಅನ್ನು ಹಾಕಿ. (chrome://flags/#click-to-call-context-menu-selected-text) ಮತ್ತು ಕರೆ ಮಾಡಲು ಫೀಚರ್‌ನ್ನು ಸಕ್ರಿಯಗೊಳಿಸಲು 'ಎನೆಬಲ್‌' ಆಯ್ಕೆಯನ್ನು ಕ್ಲಿಕ್‌ ಮಾಡಿ.

ಆಂಡ್ರಾಯ್ಡ್‌ 9, 10ರಲ್ಲಿ ಕಾರ್ಯ

ಆಂಡ್ರಾಯ್ಡ್‌ 9, 10ರಲ್ಲಿ ಕಾರ್ಯ

ಗೂಗಲ್‌ನ ಹೊಸ ಫೀಚರ್‌ ಆಂಡ್ರಾಯ್ಡ್ 9 ಮತ್ತು ಆಂಡ್ರಾಯ್ಡ್ 10 ಒಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಜೊತೆ ಗೂಗಲ್‌ ಇತ್ತೀಚೆಗೆ ಪಾಸ್‌ವರ್ಡ್ ಪರಿಶೀಲನೆ ವೈಶಿಷ್ಟ್ಯವನ್ನೂ ಸಹ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕ್ರೋಮ್ ಬ್ರೌಸರ್‌ಗೆ ಫೀಚರ್‌ನ್ನು ಸೇರಿಸಲಿದೆ. ಬಳಕೆದಾರರ ಪಾಸ್‌ವರ್ಡ್ ಸೋರಿಕೆಯಾಗಿದೆಯೇ ಅಥವಾ ಇತರ ಸಾಧನಗಳಲ್ಲಿ ಹೊಂದಾಣಿಕೆ ಆಗಿದೆಯಾ ಎಂಬುದನ್ನು ಫೀಚರ್‌ ಪರಿಶೀಲಿಸುತ್ತದೆ.

Best Mobiles in India

English summary
Google Might Soon Let You Send Phone Numbers From Desktop To Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X