ಗೂಗಲ್‌ನಿಂದ ಎರಡನೇ ತಲೆಮಾರಿನ ಗೂಗಲ್‌ ನೆಸ್ಟ್‌ಹಬ್‌ ಬಿಡುಗಡೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ತನ್ನ ವಿಶೇಷ ಸೇವೆಗಳ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಸದ್ಯ ಇದೀಗ ಗೂಗಲ್ ತನ್ನ ಎರಡನೇ ತಲೆಮಾರಿನ ನೆಸ್ಟ್ ಹಬ್ ಸ್ಮಾರ್ಟ್ ಡಿಸ್‌ಪ್ಲೇಯನ್ನು ಪರಿಚಯಿಸಿದೆ. ಇದು ವ್ಯಕ್ತಿಯ ನಿದ್ರೆಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಈ ಗೂಗಲ್ ನೆಸ್ಟ್ ಹಬ್ ತನ್ನ ಬಳಕೆದಾರರ ನಿದ್ರೆಯನ್ನು ಪತ್ತೆಹಚ್ಚಲು ಕಂಪನಿಯ ಲೋ-ಎನರ್ಜಿ ರಾಡಾರ್ ಟೆಕ್ನಾಲಜಿಯನ್ನು ಒಳಗೊಂಡಿದೆ.

ಗೂಗಲ್‌

ಹೌದು, ಗೂಗಲ್‌ ಎರಡನೇ ತಲೆಮಾರಿನ ಗೂಗಲ್‌ ನೆಸ್ಟ್‌ ಹಬ್‌ ಅನ್ನು ಬಿಡಗಡೆ ಮಾಡಿದೆ. ಇದರ ಫೀಚರ್ಸ್‌ ಸಂಪೂರ್ಣವಾಗಿ ಐಚ್ಛಿಕವಾಗಿದೆ. ಅಲ್ಲದೆ ಈ ಸ್ಮಾರ್ಟ್ ಡಿಸ್‌ಪ್ಲೇನಲ್ಲಿ ಯಾವುದೇ ಕ್ಯಾಮೆರಾ ಇಲ್ಲ. ಆದರೂ ಸೋಲಿಯಿಂದ ಸೆರೆಹಿಡಿಯಲಾದ ಡೇಟಾವನ್ನು ನಿಖರವಾಗಿ ಟ್ರ್ಯಾಕ್ ಮಾಡಲು, ಈ ಡಿವೈಸ್‌ನಲ್ಲಿ ಡೆಡಿಕೇಟೆಡ್‌ ಮೆಷಿನ್‌ ಲರ್ನಿಂಗ್‌ ಚಿಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ನೆಸ್ಟ್‌ ಹಬ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್‌ನ ಎರಡನೇ ತಲೆಮಾರಿನ ಈ ಹೊಸ ಗೂಗಲ್ ನೆಸ್ಟ್ ಹಬ್ ಅನ್ನು ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿದೆ. ಇದರ ಪ್ಲಾಸ್ಟಿಕ್ ಮ್ಯಾಕಾನಿಕಲ್‌ ಪಾರ್ಟ್ಸ್‌ ಗಳೊಂದಿಗೆ 54% ಮರುಬಳಕೆಯ ನಂತರದ ಗ್ರಾಹಕ ಪ್ಲಾಸ್ಟಿಕ್ ಅನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಇನ್ನು ಈ ಡಿವೈಸ್‌ ಕ್ಯಾಮೆರಾ ಪ್ರೀ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಆಪ್ಟ್-ಇನ್ ಸ್ಲೀಪ್ ಸೆನ್ಸಿಂಗ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಲ್ಲಿರುವ ಸ್ಲೀಪ್ ಸೆನ್ಸಿಂಗ್ ಫಿಚರ್ಸ್‌ ಮೋಷನ್ ಸೆನ್ಸ್ ಅನ್ನು ಡಿಸ್‌ಪ್ಲೇಗೆ ಹತ್ತಿರವಿರುವ ವ್ಯಕ್ತಿಯ ಚಲನೆ ಮತ್ತು ಉಸಿರಾಟದ ಆಧಾರದ ಮೇಲೆ ಹೇಗೆ ನಿದ್ರಿಸುತ್ತಿದೆ ಎಂಬುದನ್ನು ವಿಶ್ಲೇಷಿಸುತ್ತದೆ. ಕೆಮ್ಮು ಮತ್ತು ಗೊರಕೆಯಂತಹ ತೊಂದರೆಗಳು, ಕೋಣೆಯಲ್ಲಿನ ಬೆಳಕು ಮತ್ತು ತಾಪಮಾನ ಬದಲಾವಣೆಗಳನ್ನು ಈ ಫೀಚರ್ಸ್‌ ಆಟೋಮ್ಯಾಟಿಕ್‌ ಆಗಿ ಪತ್ತೆ ಮಾಡುತ್ತದೆ.

ಬಾಸ್

ಇನ್ನು ಈ ಹೊಸ ನೆಸ್ಟ್ ಹಬ್ ಮೊದಲ ತಲೆಮಾರಿನ ಮಾದರಿಯಂತೆಯೇ ಆಡಿಯೊ ಶ್ರೇಣಿಯನ್ನು ಹೊಂದಿದೆ. ಆದರೆ ಮೂಲಕ್ಕಿಂತ 50% ಹೆಚ್ಚು ಬಾಸ್ ನೀಡುತ್ತದೆ ಎಂದು ಹೇಳಲಾಗಿದೆ. ಯೂಟ್ಯೂಬ್ ಮ್ಯೂಸಿಕ್, ಸ್ಪಾಟಿಫೈ, ಆಪಲ್ ಮ್ಯೂಸಿಕ್ ಮತ್ತು ಪಂಡೋರಾದಂತಹ ಸೇವೆಗಳನ್ನು ಬಳಸಿಕೊಂಡು ಬಳಕೆದಾರರು ಮ್ಯೂಸಿಕ್‌, ಪಾಡ್‌ಕಾಸ್ಟ್‌ಗಳು ಮತ್ತು ಆಡಿಯೊಬುಕ್‌ಗಳನ್ನು ಸ್ಟ್ರೀಮ್ ಮಾಡಬಹುದಾಗಿದೆ. ಬಳಕೆದಾರರು ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್‌ನಂತಹ ಸೇವೆಗಳಿಂದ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ಇದರಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ.

ಗೆಸ್ಚರ್‌

ಇದು ತ್ವರಿತ ಗೆಸ್ಚರ್‌ಗಳ ಬೆಂಬಲದೊಂದಿಗೆ ಬರುತ್ತದೆ. ಇದನ್ನು ಪ್ಲೇ, ವಿರಾಮಗೊಳಿಸಲು ಮತ್ತು ಹೆಚ್ಚಿನ ಕಾರ್ಯಗಳಿಗೆ ಬಳಸಬಹುದು. "ಹೇ ಗೂಗಲ್, ನಾನು ಹೇಗೆ ಮಲಗಿದೆ?" ಎಂದು ಹೇಳುವ ಮೂಲಕ ಬಳಕೆದಾರರು ನಿದ್ರೆಯ ಡೇಟಾವನ್ನು ಪ್ರವೇಶಿಸಬಹುದಾಗಿದೆ. ನೀವು ನೆಸ್ಟ್ ಹಬ್ ಅನ್ನು ಗೂಗಲ್ ಫಿಟ್ ಅಪ್ಲಿಕೇಶನ್‌ಗೆ ಕನೆಕ್ಟ್‌ ಮಾಡಬಹುದಾಗಿದೆ. ಇನ್ನು ಈ ಎರಡನೇ ತಲೆಮಾರಿನ ಗೂಗಲ್ ನೆಸ್ಟ್ ಹಬ್‌ನ ಬೆಲೆ $ 99.99 (ಅಂದಾಜು 7,250 ರೂ.)ಆಗಿದೆ. ಇದು ಪ್ರಸ್ತುತ ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಫ್ರಾನ್ಸ್, ಯುಕೆ ಮತ್ತು ಯುಎಸ್‌ನಲ್ಲಿ ಕಂಪನಿಯ ಅಧಿಕೃತ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಇದನ್ನು ಚಾರ್ಕೋಲ್, ಮಿಸ್ಟ್ ಮತ್ತು ಸ್ಯಾಂಡ್ ಕಲರ್ ಆಯ್ಕೆಗಳಲ್ಲಿ ಸಾಧನವನ್ನು ಮೊದಲೇ ಆರ್ಡರ್ ಮಾಡಬಹುದು. ಇದು ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಕಂಪೆನಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Best Mobiles in India

English summary
Google Next Second Generation Launched with opt-in sleep sensing feature.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X