ಹೊಸ ವಿನ್ಯಾಸದಲ್ಲಿ ಲಭ್ಯವಾಗಲಿದೆ ಗೂಗಲ್ ಪೇ ಅಪ್ಲಿಕೇಶನ್‌!

|

ಗೂಗಲ್ ತನ್ನ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗೂಗಲ್ ಪೇ ಅನ್ನು ರಿ ಡಿಸೈನ್‌ ಮಾಡಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸದಾಗಿ ಮರುವಿನ್ಯಾಸಗೊಳಿಸಲಾಗಿದ್ದು, ಜನರು ಮತ್ತು ವ್ಯವಹಾರಗಳೊಂದಿಗಿನ ನಿಮ್ಮ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು, ನೀವು ಹಣವನ್ನು ಸೇವ್‌ ಮಾಡುವುದಕ್ಕೆ ಮತ್ತು ನಿಮ್ಮ ಖರ್ಚಿನ ಬಗ್ಗೆ ಇನ್‌ಸೈಟ್ಸ್‌ ಸಹಾಯ ಮಾಡಲು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಎಂದು ಟೆಕ್ ದೈತ್ಯ ಹೇಳಿದೆ.

ಗೂಗಲ್‌ ಪೇ

ಹೌದು, ಗೂಗಲ್‌ ತನ್ನ ಡಿಜಿಟಲ್‌ ಪೇಮೆಂಟ್‌ ಆಪ್‌ ಗೂಗಲ್‌ ಪೇ ಅನ್ನು ರಿ ಡಿಸೈನ್‌ ಮಾಡಿದೆ. ಸದ್ಯ ಹಳೆಯ Google Pay ಅಪ್ಲಿಕೇಶನ್ ನಿಮ್ಮ ಬ್ಯಾಂಕ್ ಕಾರ್ಡ್ ವಿವರಗಳನ್ನು ಮತ್ತು ಮುಖಪುಟದಲ್ಲಿಯೇ ಇತ್ತೀಚಿನ ವಹಿವಾಟುಗಳನ್ನು ತೋರಿಸುತ್ತದೆ. ಹೊಸ ಅಪ್ಲಿಕೇಶನ್ ವಹಿವಾಟುಗಳನ್ನು ನಿಭಾಯಿಸುವುದಲ್ಲದೆ ನಿಮ್ಮ ದೈನಂದಿನ ಖರ್ಚನ್ನು ಪರಿಶೀಲಿಸಲು ಸಹ ಅನುಮತಿಸುತ್ತದೆ. ಹೊಸ ಗೂಗಲ್ ಪೇ ಅಪ್ಲಿಕೇಶನ್ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದರ ಜೊತೆಗೆ ಸಂದೇಶ ಕಳುಹಿಸುವ ಸಾಧನದಂತೆ ವರ್ತಿಸುತ್ತದೆ. ಇನ್ನುಳಿದಂತೆ ಈ ರಿ ಡಿಸೈನ್‌ ಗೂಗಲ್‌ ಪೇ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Google Pay

ಇನ್ನು ಹೊಸದಾಗಿ ರಿ ಡಿಸೈನ್‌ ಗೊಳಿಸಲಾದ Google Pay ಅಪ್ಲಿಕೇಶನ್ ನೀವು ಹೆಚ್ಚಾಗಿ ಹಣವನ್ನು ವಿನಿಮಯ ಮಾಡಿಕೊಳ್ಳುವ ಜನರು ಅಥವಾ ಕಂಟ್ಯಾಕ್ಟ್‌ಗಳನ್ನು ನೋಡಲು ಅನುಮತಿಸುತ್ತದೆ. ಅಲ್ಲದೆ ಹಿಂದಿನ ವಹಿವಾಟಿನ ವಿವರಗಳನ್ನು ಚಾಟ್ ತರಹದ ಬಬಲ್ಸ್‌ ರೂಪದಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ನೀವು ಈಗ ಕಂಟ್ಯಾಕ್ಟ್‌ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದೇ ಚಾಟ್ ಬಾಕ್ಸ್‌ನಲ್ಲಿ, ಪಾವತಿಸಲು, ಹಣವನ್ನು ವಿನಂತಿಸಲು ಅಥವಾ ಬಿಲ್ ಅನ್ನು ವಿಭಜಿಸಲು ನಿಮಗೆ ಆಯ್ಕೆಗಳು ಸಹ ಸಿಗುತ್ತವೆ.

ಗೂಗಲ್ ಪೇ

ಇದಲ್ಲದೆ ಗೂಗಲ್ ಪೇ ಸಹ ಗ್ರೂಪ್‌ ಚಾಟ್ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಗುಂಪಿನಲ್ಲಿರುವ ಎಲ್ಲರೂ ಸ್ಪ್ಲಿಟ್‌ ಬಿಲ್‌ಗೆ ಯಾರು ಕೊಡುಗೆ ನೀಡಿದ್ದಾರೆ ಮತ್ತು ಯಾರು ಮಾಡಿಲ್ಲ ಎಂಬುದನ್ನು ನೀವು ನೋಡಲು ಸಾಧ್ಯವಾಗುತ್ತದೆ. ಇನ್ನು ಈ ಫೀಚರ್ಸ್‌ ಸ್ಪ್ಲಿಟ್‌ವೈಸ್, ಬಿಲ್ ಸ್ಪ್ಲಿಟ್‌ ಮತ್ತು ಹಣ ನಿರ್ವಹಣಾ ಅಪ್ಲಿಕೇಶನ್‌ನಂತೆ ಹೆಚ್ಚು ಕಡಿಮೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಗ್ರೂಪ್‌ ಔಟಿಂಗ್‌ಗೆ ಪಾವತಿಸಿದೆ ದೂರವಿರಲು ಪ್ರಯತ್ನಿಸುವ ಸಂಪರ್ಕಗಳನ್ನು ಗುರುತಿಸಲು ಸಹ ನಿಮಗೆ ಅನುಮತಿಸುತ್ತದೆ.

ಗೂಗಲ್ ಪೇ

ಇನ್ನು ಗೂಗಲ್ ಪೇ ಪ್ಲಾಟ್‌ಫಾರ್ಮ್‌ಗೆ ಸೇರಿರುವ ಮತ್ತೊಂದು ಅತ್ಯಂತ ಆಸಕ್ತಿದಾಯಕ ಫೀಚರ್ಸ್‌ ಹೊಸ ಹಣಕಾಸು ನಿರ್ವಹಣಾ ವ್ಯವಸ್ಥೆ. ಮೂಲಭೂತವಾಗಿ, ಬಳಕೆದಾರರು ಅವನ / ಅವಳ ಬ್ಯಾಂಕ್ ಕಾರ್ಡ್ ಅನ್ನು ಅಪ್ಲಿಕೇಶನ್‌ಗೆ ಸಂಪರ್ಕಿಸಿದರೆ ಅವರು ಖರ್ಚು ಪ್ರವೃತ್ತಿಗಳು ಮತ್ತು ಒಳನೋಟಗಳನ್ನು ನೋಡಲು ಸಾಧ್ಯವಾಗುತ್ತದೆ. ಅಲ್ಲದೆ ನಿರ್ದಿಷ್ಟ ತಿಂಗಳಿಗೆ ಅವರ ಖರ್ಚು ಹೆಚ್ಚು ಎಂದು ಅರ್ಥಮಾಡಿಕೊಳ್ಳಬಹುದು. ನೀವು ಶಾಪಿಂಗ್ ಅಥವಾ ಡಿನ್ನರ್ ಅಥವಾ ಪಿಜ್ಜಾಗಳಿಗಾಗಿ ಹೆಚ್ಚು ಖರ್ಚು ಮಾಡುತ್ತಿದ್ದರೆ ಗೂಗಲ್ ಪೇ ಸಹ ನಿಮ್ಮನ್ನು ಎಚ್ಚರಿಸುತ್ತದೆ. ಮುಂದಿನ ತಿಂಗಳುಗಳಲ್ಲಿ ಈ ಹೆಚ್ಚುವರಿ ಖರ್ಚುಗಳನ್ನು ಕಡಿತಗೊಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಹಣ

ನೀವು ತಪ್ಪು ವ್ಯಕ್ತಿಗೆ ಹಣವನ್ನು ಕಳುಹಿಸುವಾಗ ನಿಮ್ಮನ್ನು ಎಚ್ಚರಿಸುವಂತಹ ಕೆಲವು ಇಂಟರ್‌ಬಿಲ್ಟ್‌ ಪ್ರೊಟೆಕ್ಷನ್‌ ಫೀಚರ್ಸ್‌ಗಳನ್ನು ಸಹ ಕಂಪನಿಯು ಅಭಿವೃದ್ಧಿಪಡಿಸಿದೆ. ನಿಮ್ಮ ಒಟ್ಟಾರೆ ಡಿಜಿಟಲ್ ಪಾವತಿ ಅನುಭವವನ್ನು ಕಸ್ಟಮೈಸ್ ಮಾಡಲು ಇದು ಗೌಪ್ಯತೆ ನಿಯಂತ್ರಣಗಳ ಗುಂಪನ್ನು ಸಹ ನೀಡುತ್ತದೆ. ಹೆಚ್ಚುವರಿಯಾಗಿ, ಗೂಗಲ್ ಪೇ ನಿಮ್ಮ ಎಲ್ಲಾ ಇತ್ತೀಚಿನ ಚಟುವಟಿಕೆಗಳನ್ನು ಸಹ ತೋರಿಸುತ್ತದೆ ಮತ್ತು ರಿವಾರ್ಡ್ ಕಾರ್ಡ್‌ಗಳು ಮತ್ತು ಕೊಡುಗೆಗಳಿಗೆ ತ್ವರಿತ ಪ್ರವೇಶವನ್ನು ಒದಗಿಸುತ್ತದೆ.

Best Mobiles in India

English summary
Google has completely redesigned its digital payment app Google Pay for both iOS as well as Android users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X