ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆಯನ್ನು ಸ್ಥಗಿತಗೊಳಿಸಿದ ಗೂಗಲ್ ಪ್ಲೇ ಮ್ಯೂಸಿಕ್!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಮ್ಯೂಸಿಕ್‌ ಪ್ರಿಯರಿಗಾಗಿ ಪರಿಚಯಿಸಿದ್ದ ಗೂಗಲ್‌ ಮ್ಯೂಸಿಕ್‌ ಸೇವೆಯನ್ನು ಸ್ಥಗಿತಗೊಳಿಸಿದೆ. ಮ್ಯೂಸಿಕ್‌ ಸ್ಟ್ರಿಮಿಂಗ್‌ ಸೇವೆ ನೀಡುತ್ತಿದ್ದ ಗೂಗಲ್‌ ಮ್ಯೂಸಿಕ್‌ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್‌ನಲ್ಲಿ ಕೆಲಸ ಮಾಡುವುದನ್ನು ಗೂಗಲ್ ಪ್ಲೇ ಮ್ಯೂಸಿಕ್ ಈಗ ನಿಲ್ಲಿಸಿದೆ. ಸದ್ಯ ಇದೀಗ ಬಳಕೆದಾರರು ಗೂಗಲ್‌ ಮ್ಯೂಸಿಕ್‌ ಅಪ್ಲಿಕೇಶನ್‌ ತೆರೆದ ನಂತರ, ಸ್ಪ್ಲಾಶ್ ಪುಟವು Google Play ಮ್ಯೂಸಿಕ್‌ ಇನ್ನು ಮುಂದೆ ಲಭ್ಯವಿಲ್ಲ ಎಂಬ ಸೂಚನೆ ನೀಡುತ್ತಿದೆ. ಅಲ್ಲದೆ ನಿಮ್ಮ ಡೇಟಾವನ್ನು ನಿರ್ವಹಿಸಿ ಅಥವಾ YouTube ಮ್ಯೂಸಿಕ್‌ಗೆ ವರ್ಗಾಯಿಸಲು ಬಳಕೆದಾರರಿಗೆ ಎರಡು ಆಯ್ಕೆಗಳನ್ನು ನೀಡಿದೆ.

 ಗೂಗಲ್‌ ಪ್ಲೇ ಮ್ಯೂಸಿಕ್‌

ಹೌದು, ಗೂಗಲ್‌ ತನ್ನ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ಗೂಗಲ್‌ ಪ್ಲೇ ಮ್ಯೂಸಿಕ್‌ ಇದಿನಿಂದ ವಿಶ್ವದಾದ್ಯಂತ ಸ್ಥಗಿತಗೊಂಡಿದೆ. ಪ್ಲೇ ಮ್ಯೂಸಿಕ್ ಜಗತ್ತಿನಾದ್ಯಂತ ವಿವಿಧ ಕ್ಲೈಂಟ್‌ಗಳನ್ನು ಬಳಸುವ ಕೆಲವೇ ಬಳಕೆದಾರರಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಸದ್ಯ ಈ ತಿಂಗಳ ಎಲ್ಲಾ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಗೂಗಲ್ ಪ್ಲೇ ಮ್ಯೂಸಿಕ್‌ಗೆ ಎಲ್ಲ ಬೆಂಬಲವನ್ನು ಕೊನೆಗೊಳಿಸಲಿದೆ.

ಗೂಗಲ್ ಪ್ಲೇ ಮ್ಯೂಸಿಕ್

ಗೂಗಲ್ ಪ್ಲೇ ಮ್ಯೂಸಿಕ್ ಅನ್ನು ಸ್ಟಾಪ್‌ ಮಾಡುವ ಮೂಲಕ ಯುಟ್ಯೂಬ್‌ ಮ್ಯೂಸಿಕ್‌ ಅನ್ನು ಇನ್ನಷ್ಟು ಜನಪ್ರಿಯತೆಗೊಳಿಸುವ ಕಾರ್ಯಕ್ಕೆ ಗೂಗಲ್‌ ಮುಮದಾಗಿದೆ. ಇನ್ನು ಮುಂದೆ ಗೂಗಲ್ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್‌ನಿಂದ ಸ್ಟ್ರೀಮ್ ಮಾಡಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ ಎಂದು ಗೂಗಲ್ ಈ ಹಿಂದೆಯೇ ಘೋಷಣೆ ಮಾಡಿತ್ತು. ಅಲ್ಲದೆ ಗೂಗಲ್ ಮೊದಲು ಆಗಸ್ಟ್ ಅಂತ್ಯದಲ್ಲಿ ಪ್ಲೇ ಮ್ಯೂಸಿಕ್‌ನಿಂದ ಮ್ಯೂಸಿಕ್‌ಅನ್ನು ಖರೀದಿಸುವುದು, ಫ್ರೀ- ಆರ್ಡರ್‌ ಮಾಡುವುದು, ಅಪ್‌ಲೋಡ್ ಮಾಡುವುದು ಮತ್ತು ಡೌನ್‌ಲೋಡ್ ಮಾಡುವುದನ್ನು ನಿಲ್ಲಿಸಿದೆ.

ಗೂಗಲ್‌ ಪ್ಲೇ ಮ್ಯೂಸಿಕ್

ಇನ್ನು ಗೂಗಲ್‌ ಈಗಾಗಲೇ ತನ್ನ ಗೂಗಲ್‌ ಪ್ಲೇ ಮ್ಯೂಸಿಕ್‌ ಪ್ಲೇ ಲಿಸ್ಟ್‌ಗಳು, ಅಪ್‌ಲೋಡ್‌ಗಳು, ಖರೀದಿಗಳು ಮತ್ತು ಇಷ್ಟಗಳಂತಹ ಎಲ್ಲಾ ಡೇಟಾವನ್ನು ಯೂಟ್ಯೂಬ್ ಮ್ಯೂಸಿಕ್‌ಗೆ ವರ್ಗಾಯಿಸಲು ಗೂಗಲ್ ಡಿಸೆಂಬರ್ ವರೆಗೆ ಬಳಕೆದಾರರಿಗೆ ಸಮಯವನ್ನು ನೀಡಿದೆ. ಸದ್ಯ ಈ ಗಡುವನ್ನು ಪೋಸ್ಟ್ ಮಾಡಿ, ಗೂಗಲ್ ಪ್ಲೇ ಮ್ಯೂಸಿಕ್ ಲೈಬ್ರರಿಗಳು ಇನ್ನು ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಬೆಂಬಲವನ್ನು ಕೊನೆಗೊಳಿಸುವ ಮೊದಲು Google ಇನ್ನೂ ಎಲ್ಲಾ ಬಳಕೆದಾರರಿಗೆ ಸೂಚಿಸಿದೆ. ಅಲ್ಲದೆ ಅವರ ಡೇಟಾವನ್ನು ವರ್ಗಾಯಿಸಲು ಅವರಿಗೆ ಸಲಹೆ ನೀಡಿದೆ.

ಗೂಗಲ್ ಪ್ಲೇ ಮ್ಯೂಸಿಕ್

ಗೂಗಲ್ ಪ್ಲೇ ಮ್ಯೂಸಿಕ್ ಬಳಕೆದಾರರು ತಮ್ಮ ಡೇಟಾವನ್ನು ಯೂಟ್ಯೂಬ್ ಮ್ಯೂಸಿಕ್ ವರ್ಗಾವಣೆ ಉಪಕರಣದ ಮೂಲಕ ವರ್ಗಾಯಿಸಬಹುದು. ಇದು ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಯೂಟ್ಯೂಬ್ ಮ್ಯೂಸಿಕ್‌ನಲ್ಲಿ ಖರೀದಿಸಿದ ಮತ್ತು ಅಪ್‌ಲೋಡ್ ಮಾಡಿದ ಮ್ಯೂಸಿಕ್‌ ಅನ್ನು ಡೌನ್‌ಲೋಡ್ ಮಾಡಲು ಬಳಕೆದಾರರು ಗೂಗಲ್ ಟೇಕ್‌ ಔಟ್‌ ಆಯ್ಕೆ ಮಾಡಬಹುದಾಗಿದೆ.

Most Read Articles
Best Mobiles in India

Read more about:
English summary
Google Play Music has stopped working for many users as the service is confirmed to shut down globally by this month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X