ಗೂಗಲ್‌ ಪ್ಲೇ ಪಾಯಿಂಟ್‌ ಪರಿಚಯಿಸಿದ ಗೂಗಲ್‌: ಇದರ ಪ್ರಯೋಜನವೇನು?

|

ಗೂಗಲ್‌ ಕಂಪೆನಿ ಜಗತ್ತಿನ ಮಾಹಿತಿಯನ್ನು ನೀಡುವುದಕ್ಕಷ್ಟೇ ಅಲ್ಲದೆ ಗ್ಯಾಜೆಟ್‌ಗಳ ತಯಾರಿಕೆ ವಿಭಾಗದಲ್ಲೂ ಭಾರೀ ಹೆಸರು ಪಡೆದಿದೆ. ಅದರಲ್ಲೂ ಗೂಗಲ್ ಕಂಪೆನಿಯ ಯೂಟ್ಯೂಬ್‌, ಗೂಗಲ್‌ ಟ್ರಾನ್ಸ್‌ಲೇಶನ್‌ ಹಾಗೂ ಗೂಗಲ್‌ ಮ್ಯಾಪ್‌ ಸೇರಿದಂತೆ ಓರ್ವ ವ್ಯಕ್ತಿಗೆ ಏನೆಲ್ಲಾ ಅವಶ್ಯಕತೆಯ ಕಂಟೆಂಟ್‌ ಬೇಕೋ ಅದನ್ನೆಲ್ಲಾ ಬಹುಪಾಲು ಗೂಗಲ್‌ ಪೂರೈಸುತ್ತಾ ಬರುತ್ತಿದೆ. ಈಗ ಅಧಿಕೃತ ಆಪ್‌ ಡೌನ್‌ಲೋಡರ್‌ ಆದ ಗೂಗಲ್‌ ಪ್ಲೇ ಸ್ಟೋರ್‌ಗೂ ಹೊಸ ಫೀಚರ್ಸ್‌ ನೀಡಿದೆ.

ಗೂಗಲ್‌

ಹೌದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ ಪ್ಲೇ ಪಾಯಿಂಟ್‌ ಆಯ್ಕೆಯನ್ನು ನೀಡಲಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಳಕೆದಾರರ ಸಕ್ರಿಯತೆಯನ್ನು ಹೆಚ್ಚಿಗೆ ಮಾಡುವ ಉದ್ದೇಶದಿಂದ ಗೂಗಲ್‌ ಈ ನಿರ್ಧಾರ ಮಾಡಿದೆ. ಹಾಗೆಯೇ ಇದು ಜಾಗತಿಕವಾಗಿ ಕೆಲವು ದೇಶಗಳಿಗೆ ಅನ್ವಯ ಆಗಲಿದೆಯಂತೆ. ಈ ವೇದಿಕೆಯಲ್ಲಿ ಚಂದಾದಾರರಾಗಲು ಹಾಗೂ ಅಪ್ಲಿಕೇಶನ್‌ಗಳನ್ನು ಖರೀದಿ ಗಳಿಸಿಕೊಂಡ ಪಾಯಿಂಟ್‌ಗಳನ್ನು ಬಳಸಬಹುದು ಎಂದು ಗೂಗಲ್‌ ತಿಳಿಸಿದೆ. ಹಾಗೆಯೇ ಇದರಲ್ಲಿ ರಿಡೀಮ್‌ ಆಯ್ಕೆಯನ್ನೂ ಸಹ ನೀಡಲಾಗಿದೆ. ಹಾಗಿದ್ರೆ ಮತ್ಯಾಕೆ ತಡ ಇದರಿಂದ ಅಂಕ ಗಳಿಸುವುದು ಹೇಗೆ?, ಅಂಗಳಿಂದ ಏನೆಲ್ಲಾ ಪ್ರಯೋಜನ ಇದೆ ಎಂಬುದನ್ನು ಈ ಲೇಖನದಿಂದ ತಿಳಿಯಿರಿ.

ಪಾಯಿಂಟ್‌ ಗಳಿಕೆ ಹೇಗೆ?

ಪಾಯಿಂಟ್‌ ಗಳಿಕೆ ಹೇಗೆ?

ಗೂಗಲ್ ಪ್ಲೇ ಪಾಯಿಂಟ್‌ಗಳನ್ನು ಪಡೆದುಕೊಳ್ಳಲು ಪ್ರಮುಖ ಮಾರ್ಗ ಎಂದರೆ ಪ್ಲೇಸ್ಟೋರ್‌ ಆಪ್‌ನಲ್ಲಿನ ನಮ್ಮ ಕಾರ್ಯಚಟುವಟಿಕೆಗಳು. ಇದರಲ್ಲಿ ನಾವು ಎಷ್ಟು ಸಕ್ರಿಯರಾಗಿರುತ್ತೇವೆಯೋ ಅಷ್ಟು ಪಾಯಿಂಟ್‌ ಹಾಗೂ ಬಹುಮಾನವನ್ನು ಗಳಿಸಬಹುದಾಗಿದೆ. ಈ ಫೀಚರ್ಸ್‌ ಪ್ರಪಂಚದ 28 ದೇಶಗಳಲ್ಲಿ ಲಭ್ಯ ಇರಲಿದೆ. ಹಾಗೆಯೇ ಮುಂದಿನ ವಾರದಲ್ಲಿ ಇದು ಭಾರತದ ಬಳಕೆದಾರರಿಗೆ ತಲುಪಲಿದೆ.

ರಿವಾರ್ಡ್ ಫೀಚರ್‌

ರಿವಾರ್ಡ್ ಫೀಚರ್‌

ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ ಡೌನ್‌ಲೋಡ್‌, ಗೇಮ್‌ಗಳ ಡೌನ್‌ಲೋಡ್ ಮತ್ತು ಚಂದಾದಾರಿಕೆ ಪ್ರಕ್ರಿಯೆಯನ್ನು ನಡೆಸುವಾಗ ಬಳಕೆದಾರರು ಅಂಕಗಳನ್ನು ಗಳಿಸಬಹುದಾಗಿದೆ. ಹಾಗೆಯೇ ಇದರಲ್ಲಿ ರಿವಾರ್ಡ್ ಪ್ರೋಗ್ರಾಂನ ಬ್ರೊನ್ಜ್, ಸಿಲ್ವರ್, ಗೋಲ್ಡ್ ಹಾಗೂ ಪ್ಲಾಟಿನಂ ಎಂಬ ನಾಲ್ಕು ಹಂತಗಳು ಇದ್ದು, ಈ ಹಂತಗಳನ್ನು ದಾಟುವ ಪ್ರತಿ ಬಳಕೆದಾರರು ವಿಭಿನ್ನ ಪರ್ಕ್ಸ್ ಮತ್ತು ಬಹುಮಾನಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಪಾಯಿಂಟ್‌ಗಳನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾ ಹೋಗುತ್ತಿದ್ದಂತೆ ಹೆಚ್ಚಿನ ಬಹುಮಾನ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಪಾಯಿಂಟ್‌

ಈ ಗೂಗಲ್‌ ಪ್ಲೇ ಪಾಯಿಂಟ್‌ ಅನ್ನು ಸ್ಥಳೀಯ ಡೆವಲಪರ್‌ಗಳಿಗೆ ಜಾಗತಿಕ ನೆಲೆಯನ್ನು ಒದಗಿಸಿಕೊಡುವ ಉದ್ದೇಶದಿಂದ ನೀಡಲಾಗುತ್ತಿದೆ. ಈ ಮೂಲಕ ಬಳಕೆದಾರರನ್ನು ಹೆಚ್ಚಿಗೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಗೂಗಲ್‌ ತನ್ನ ಪ್ರಕಟಣೆಯಲ್ಲಿ ಉಲ್ಲೆಖಿಸಿದೆ.

ಗೇಮಿಂಗ್‌ ಆಪ್‌ ಜೊತೆ ಪಾಲುದಾರಿಕೆ

ಗೇಮಿಂಗ್‌ ಆಪ್‌ ಜೊತೆ ಪಾಲುದಾರಿಕೆ

ಜಾಗತಿಕ ಕಂಪೆನಿಗಳಾದ ಮಿನಿಕ್ಲಿಪ್ ನ 8 ಬಾಲ್ ಪೂಲ್, TG INCಯ ಎವೊನಿ: ದಿ ಕಿಂಗ್ಸ್ ರಿಟರ್ನ್(Evoy: The King's Return) ಹಾಗೂ ಸ್ಥಳೀಯ ಸ್ಟುಡಿಯೋಗಳ ಗೇಮಿಂಗ್‌ ವಿಭಾಗದಲ್ಲಿ ಗೇಮ್‌ಶನ್‌(Gametion) ನ ಲುಡೋ ಕಿಂಗ್‌, ಪ್ಲೇ ಸಿಂಪಲ್‌ ಗೇಮ್‌ ನ ವರ್ಡ್‌ ಟ್ರಿಪ್‌ ಗೇಮ್‌ ಆಪ್‌ಗಳ ಜೊತೆಗೆ ಪಾಲುದಾರಿಕೆ ಪಡೆಯಲಾಗಿದೆ ಎಂದು ಗೂಗಲ್‌ ತಿಳಿಸಿದೆ. ಇದರ ಜೊತೆಗೆ ಟ್ರೂಕಾಲರ್‌ ಮತ್ತು Wysa ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿಗೆ ಜನಪ್ರಿಯಗೊಳಿಸಲು ಗೂಗಲ್‌ ಪ್ಲೇ ಮುಂದಾಗಿದೆಯಂತೆ.

ಪಾಯಿಂಟ್ಸ್‌ ಪಡೆಯಲು ಹಣ ಪಾವತಿಸಬೇಕೆ?

ಪಾಯಿಂಟ್ಸ್‌ ಪಡೆಯಲು ಹಣ ಪಾವತಿಸಬೇಕೆ?

ಗೂಗಲ್‌ ಪ್ಲೇ ಪಾಯಿಂಟ್ಸ್ ಪಡೆಯಬೇಕು ಎಂದರೆ ನೀವು ಯಾವುದೆ ಹಣ ನೀಡಬೇಕಿಲ್ಲ. ಇದು ಉಚಿತವಾಗಿದೆ ಎಂದು ಗೂಗಲ್‌ ತಿಳಿಸಿದೆ. ಹಾಗೆಯೇ ಮಾಸಿಕ ಶುಲ್ಕ ಅಥವಾ ಇನ್ನಿತರೆ ಶುಲ್ಕವೂ ಇದರಲ್ಲಿ ಅನ್ವಯಿಸುವುದಿಲ್ಲ. ಜೊತೆಗೆ ಬಳಕೆದಾರರು ಮೊದಲ ವಾರದಲ್ಲಿ ಐದು ಬಾರಿ ಪ್ಲೇ ಪಾಯಿಂಟ್‌ಗಳನ್ನು ಗಳಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.

ಪಾಯಿಂಟ್‌ ಚೆಕ್‌ ಮಾಡುವುದು ಹೇಗೆ?

ಪಾಯಿಂಟ್‌ ಚೆಕ್‌ ಮಾಡುವುದು ಹೇಗೆ?

ನೀವು ಈ ಸೌಲಭ್ಯವನ್ನು ಪಡೆಯಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇ ಸ್ಟೋರ್‌ ಆಪ್‌ ಅನ್ನು ಓಪನ್‌ ಮಾಡಿ. ನಂತರ ಆಪ್‌ನ ಬಲಭಾಗದಲ್ಲಿ ಕಾಣುವ ನಿಮ್ಮ ಪ್ರೊಫೈಲ್‌ ಮೇಲೆ ಕ್ಲಿಕ್‌ ಮಾಡಿ ಇದಾದ ಬಳಿಕ ಅಲ್ಲೇ ಕಾಣಿಸುವ ಪ್ಲೇ ಪಾಯಿಂಟ್‌ ಮೇಲೆ ಟ್ಯಾಪ್‌ ಮಾಡಿದರೆ ಎಷ್ಟು ಪಾಯಿಂಟ್‌ ಗಳಿಸಿದ್ದೀರಿ ಎಂಬ ಮಾಹಿತಿ ಲಭ್ಯವಾಗಲಿದೆ.

Best Mobiles in India

English summary
Google Play Points Features Launched in India, Users Can Now Learn Redeemable Points for Every Download.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X