ಆಂಡ್ರಾಯ್ಡ್‌ ಬಳಕೆದಾರರ ಗೌಪ್ಯತೆ ಕಾಪಾಡಲು ಹೊಸ ಪ್ಲಾನ್‌ ರೂಪಿಸಿದ ಗೂಗಲ್‌!

|

ಗೂಗಲ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಪ್ಲಾನ್‌ ಪ್ರಕಟಿಸಿದೆ. ಆಂಡ್ರಾಯ್ಡ್‌ ಬಳಕೆದಾರರು ಎದುರಿಸುತ್ತಿರುವ ಪ್ರೈವೆಸಿ ಸಮಸ್ಯೆಯನ್ನು ಬಗೆಹರಿಸಲು ಹೊಸ ಹೆಜ್ಜೆಯನ್ನು ಇಟ್ಟಿದೆ. ಇದಕ್ಕಾಗಿ ಈಗಾಗಲೇ ಆಪಲ್‌ ಸಿಸ್ಟಂನಲ್ಲಿ ಪರಿಚಯಿಸಿರುವ ಹೊಸ ವ್ಯವಸ್ಥೆಯನ್ನು ಆಂಡ್ರಾಯ್ಡ್‌ನಲ್ಲಿ ಪರಿಚಯಿಸಲು ಮುಂದಾಗಿದೆ. ಇದರಿಂದ ಬಳಕೆದಾರರ ಪ್ರೈವೆಸಿ ಮತ್ತು ಜಾಹೀರಾತಗಳಲ್ಲಿ ಸಮತೋಲನವನ್ನು ಕಾಪಾಡಬಹುದು ಎಂದು ಹೇಳಲಾಗಿದೆ. ಸದ್ಯ ಗೂಗಲ್‌ ಆಂಡ್ರಾಯ್ಡ್‌ನಲ್ಲಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಅನ್ನು ಅಭಿವೃದ್ಧಿಪಡಿಸಲು ಗೂಗಲ್‌ ಮಲ್ಟಿ-ಇಯರ್‌ ಪ್ಲಾನ್‌ ಘೋಷಣೆ ಮಾಡಿದೆ.

ಗೂಗಲ್‌

ಹೌದು, ಗೂಗಲ್‌ ಆಂಡ್ರಾಯ್ಡ್‌ನಲ್ಲಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್‌ ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರಿಂದ ಆಂಡ್ರಾಯ್ಡ್‌ನಲ್ಲಿ ಹೆಚ್ಚಿನ ಪ್ರೈವೇಟ್‌ ಆಡ್‌ ಸಲ್ಯೂಶನ್ಸ್‌ ಅನ್ನು ಕಾಣಬಹುದಾಗಿದೆ. ಸದ್ಯ ಈ ಟೆಕ್ನಿಕಲ್‌ ಸಲ್ಯೂಶನ್‌ ಗೂಗಲ್‌ನಲ್ಲಿ ಹೇಗೆ ಕಾಣಿಸಲಿದೆ ಅನ್ನೊದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಖಾಸಗಿ ಬಳಕೆದಾರರ ಡೇಟಾ ಮತ್ತು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳೊಂದಿಗೆ ಡೇಟಾ ಶೇರ್‌ ಮಾಡುವುದನ್ನು ಗೂಗಲ್‌ ಲಿಮಿಟ್‌ ಮಾಡಲಿದೆ. ಹಾಗಾದ್ರೆ ಗೂಗಲ್‌ ಜಾರಿಗೊಳಿಸಲಿರುವ ಹೊಸ ಯೋಜನೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನಲ್ಲಿ ಜಾಹಿರಾತು ವಿಭಾಗದಲ್ಲಿ ಹೊಸ ಪ್ಲಾನ್‌ ತರುತ್ತಿದೆ. ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಈಗಾಗಲೇ ಅಸ್ತಿತ್ವದಲ್ಲಿರುವ ಜಾಹೀರಾತು ಐಡಿ ವ್ಯವಸ್ಥೆಯು ಮರೆಯಾಗುವ ಸಾಧ್ಯತೆಯಿದೆ. ಆಡ್‌ ಐಡಿ ಎಂದರೆ ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ಗಳ ಭಾಗವಾಗಿ "ಗೂಗಲ್‌ ಪ್ಲೇ ಸೇವೆಯಿಂದ ಒದಗಿಸಲಾದ ಜಾಹೀರಾತಿಗಾಗಿ ನೀಡುವ ಐಡಿಯಾಗಿದೆ. ಇದು ಬಳಕೆದಾರ ರಿ ಸೆಟ್‌ ಮಾಡಬಹುದಾದ ID ಆಗಿದೆ. ಪ್ರಸ್ತುತ, ಈ ಐಡಿ ಆಸಕ್ತಿ ಆಧಾರಿತ ಜಾಹೀರಾತು ಅಥವಾ ಜಾಹೀರಾತುಗಳ ವೈಯಕ್ತೀಕರಣ ದಿಂದ ಹೊರಗುಳಿಯಲು ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಅನುಮತಿಸುತ್ತದೆ.

ಬಳಕೆದಾರರ

ಇದು ಬಳಕೆದಾರರ ಗೌಪ್ಯತೆಯನ್ನು ಉತ್ತಮವಾಗಿ ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್ ಹೇಳಿದೆ. ಉಚಿತ ವಿಷಯ ಮತ್ತು ಸೇವೆಗಳಿಗೆ ಪ್ರವೇಶ ನೀಡುವ ಬಳಕೆದಾರರು ಅಪಾಯಕ್ಕೆ ಸಿಲುಕದಂತೆ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ನಿಮಗೆ ಸೂಕ್ತ ಮಾರ್ಗದರ್ಶನ ನೀಡಲಿದೆ. ಜೊತೆಗೆ ಈ ಸಲ್ಯೂಶನ್‌ ಥರ್ಡ್‌ ಪಾಟಿ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವುದನ್ನು ಮಿತಿಗೊಳಿಸುತ್ತದೆ. ಅಲ್ಲದೆ ಜಾಹೀರಾತು ಐಡಿ ಸೇರಿದಂತೆ ಕ್ರಾಸ್-ಅಪ್ಲಿಕೇಶನ್ ಐಡೆಂಟಿಟಿ ಇಲ್ಲದೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಪ್ರೈವೆಸಿ

ಇನ್ನು ಈ ವರ್ಷಾಂತ್ಯದ ವೇಳೆಗೆ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಬೀಟಾ ವರ್ಷನ್‌ ಅನ್ನು ಪ್ರಾರಂಭಿಸಲು ಗೂಗಲ್‌ ಪ್ಲಾನ್‌ ಮಾಡಿದೆ. ಇದರ ಆರಂಭಿಕ ಪ್ರಸ್ತಾಪಗಳನ್ನು ವೀಕ್ಷಿಸಲು ಮತ್ತು ಆಂಡ್ರಾಯ್ಡ್ ಡೆವಲಪರ್ ಸೈಟ್‌ನಲ್ಲಿ ರೆಸ್ಪಾನ್ಸ್‌ ಶೇರ್‌ ಮಾಡಲು ಡೆವಲಪರ್‌ಗಳನ್ನು ಇನ್ವೈಟ್‌ ಮಾಡಿರುವುದಾಗಿ ಗೂಗಲ್‌ ಹೇಳಿಕೊಂಡಿದೆ. ಇನ್ನು ಈ ಹೊಸ ಪ್ಲಾನ್‌ನಲ್ಲಿ ಬಳಕೆದಾರರು ತಮ್ಮ ಮಾಹಿತಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಕೊಳ್ಳಲು ಅವಕಾಶ ಸಿಗಲಿದೆ. ಆದರೆ ಈ ಹೊಸ ಸಲ್ಯೂಶನ್‌ ಪೂರ್ಣವಾಗಿ ಲಭ್ಯವಾಗಲು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರಿಂದ ಕನಿಷ್ಠ ಮುಂದಿನ ಎರಡು ವರ್ಷಗಳ ಕಾಲ ಈಗಾಗಲೇ ಲಭ್ಯವಿರುವ ಆಡ್‌ ಪ್ಲಾಟ್‌ಫಾರ್ಮ್‌ ಫೀಚರ್ಸ್‌ಗಳನ್ನು ಬೆಂಬಲಿಸಲು ಗೂಗಲ್‌ ಪ್ಲಾನ್‌ ಮಾಡಿದೆ.

ಜಾಹಿರಾತು

ಜಾಹಿರಾತುಗಳು ವೈಯಕ್ತಿಕ ಮಾಹಿತಿಗೆ ಪ್ರವೇಶ ಪಡೆಯದಂತೆ ಮತ್ತು ಲಾಗಿಂಗ್ ಕ್ಲಿಕ್‌ಗಳನ್ನು ಬೆಂಬಲಿಸುವ ಡಿವೈಸ್‌ಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿಯೂ ಗೂಗಲ್‌ ಪ್ಲಾನ್‌ ಮಾಡಿದೆ. ಇದಕ್ಕಾಗಿ ಸ್ನಾಪ್‌ ಮತ್ತು Activision Blizzard ನಂತಹ ಅಪ್ಲಿಕೇಶನ್ ತಯಾರಕರೊಂದಿಗೆ ಕೆಲಸ ಮಾಡುವುದಕ್ಕೆ ಮುಂದಾಗಿದೆ. ಇದರಿಂದ 2023 ರ ಅಂತ್ಯದ ವೇಳೆಗೆ ತನ್ನ ಕ್ರೋಮ್ ಬ್ರೌಸರ್‌ನಲ್ಲಿ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ತೆಗೆದುಹಾಕಲು ಗೂಗಲ್‌ ಸಿದ್ಧತೆ ನಡೆಸಿದೆ.

Best Mobiles in India

English summary
google privacy sandbox will soon be available for android to balance between user privacy and ads

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X