ಮುಂದಿನ ವರ್ಷದಿಂದ ಸ್ಟ್ರೀಟ್ ವ್ಯೂ ಸ್ಥಗಿತ: ಗೂಗಲ್‌

|

ಗೂಗಲ್‌ ಕಂಪೆನಿ ಸ್ಮಾರ್ಟ್‌ ಡಿವೈಸ್‌ ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಸಹಾಯಕವಾಗಿದೆ. ಇದರಲ್ಲಿ ಸರ್ಚ್‌ ಇಂಜಿನ್‌ ಮೂಲಕ ಮಾಹಿತಿ, ಗೂಗಲ್‌ ಆಪ್‌ಗಳು, ಗೂಗಲ್ ಪಿಕ್ಸೆಲ್‌ ಫೋನ್‌, ಗೂಗಲ್ ವಾಚ್‌ ಸೇರಿದಂತೆ ಇನ್ನಿತರೆ ವಿಧದಲ್ಲಿ ಗೂಗಲ್‌ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಆದರೆ, ಬಳಕೆದಾರರಿಗೆ ಆಕರ್ಷಕ ಅನುಭವ ನೀಡುತ್ತಿದ್ದ ಸ್ಟ್ರೀಟ್ ವ್ಯೂ ಆಪ್‌ ಅನ್ನು ಗೂಗಲ್‌ ಸ್ಥಗಿತಗೊಳಿಸಲು ಮುಂದಾಗಿದೆ. ಗೂಗಲ್‌ನಿಂದ ಈ ಸುದ್ದಿ ಹೊರಬಿದ್ದಿದ್ದು, ಈ ಸೇವೆ ಇನ್ಮುಂದೆ ಲಭ್ಯ ಇರುವುದಿಲ್ಲ ಎನ್ನಲಾಗಿದೆ.

 ಸ್ಟ್ರೀಟ್ ವ್ಯೂ

ಹೌದು, ಮುಂದಿನ ವರ್ಷ ಆಂಡ್ರಾಯ್ಡ್‌ನಲ್ಲಿ ಸ್ಟ್ರೀಟ್ ವ್ಯೂ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ಗೂಗಲ್ ಮುಂದಾಗಿದೆ. ಈ ಸ್ಟ್ರೀಟ್ ವ್ಯೂ ಗೂಗಲ್ ಮ್ಯಾಪ್‌ ಮತ್ತು ಗೂಗಲ್ ಅರ್ಥ್‌ ಮೂಲಕ ಕೆಲಸ ಮಾಡುವ ಫೀಚರ್ಸ್‌ ಆಗಿದೆ. ಇದರಲ್ಲಿ ಪ್ರಪಂಚದ ಅನೇಕ ಬೀದಿಗಳನ್ನು ಬೆರಗುಗೊಳಿಸುವ ಹಾಗೆ ತೋರಿಸುತ್ತಿತ್ತು. ಇದನ್ನ ಮೊದಲು 2007 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಹಲವಾರು ನಗರಗಳಲ್ಲಿ ಆರಂಭಿಸಲಾಗಿತ್ತು. ತದನಂತರ ವಿಶ್ವಾದ್ಯಂತ ವಿಸ್ತರಣೆ ಮಾಡಲಾಗಿತ್ತು.

ಮಾರ್ಚ್ 31, 2023 ಕೊನೇ ದಿನ

ಮಾರ್ಚ್ 31, 2023 ಕೊನೇ ದಿನ

ಈ ಬಗ್ಗೆ 9To5 ಗೂಗಲ್‌ ವರದಿ ಮಾಡಿದೆ. ಈ ವರದಿ ಪ್ರಕಾರ ಟೆಕ್ ದೈತ್ಯ ಗೂಗಲ್‌ ಈ ಸ್ಟ್ರೀಟ್ ವ್ಯೂ ಸ್ಥಗಿತಗೊಳಿಸುವ ಸಂಬಂಧ ಹಲವಾರು ಸಂದೇಶಗಳನ್ನು ಸಿದ್ಧಪಡಿಸಿಕೊಂಡಿದೆಯಂತೆ. ಅದರಂತೆ ಸ್ಟ್ರೀಟ್ ವ್ಯೂ ಅಪ್ಲಿಕೇಶನ್ ಮಾರ್ಚ್ 31, 2023 ರಂದು ಕೊನೆಗೊಳ್ಳುವುದರಿಂದ ಇದರ ಬದಲಾಗಿ ಗೂಗಲ್ ಮ್ಯಾಪ್‌ ಅಥವಾ ಸ್ಟ್ರೀಟ್ ವ್ಯೂ ಸ್ಟುಡಿಯೋ ಬಳಕೆ ಮಾಡಲು ಮುಂದಾಗಿ ಎಂದು ಕಂಪೆನಿಯು ಗ್ರಾಹಕರಿಗೆ ಸಲಹೆ ನೀಡಿದೆ ಎಂದು ಉಲ್ಲೇಖಿಸಿದೆ.

ಗೂಗಲ್‌ ಹೇಳಿದ್ದೇನು?

ಗೂಗಲ್‌ ಹೇಳಿದ್ದೇನು?

'ಸ್ಟ್ರೀಟ್ ವ್ಯೂ ಅಪ್ಲಿಕೇಶನ್ ಸ್ಥಗಿತವಾಗುತ್ತಿದ್ದು, ಈ ಆಪ್‌ ಮಾರ್ಚ್ 21, 2023 ರಂದು ಕೊನೆಗೊಳ್ಳುತ್ತದೆ' ಎಂದು ಕಂಪೆನಿಯು ತನ್ನ ಅಧಿಕೃತ ಹೇಳಿಕೆ ಮೂಲಕ ಮಾಹಿತಿ ನೀಡಿದೆ. ಹಾಗೆಯೇ ನಿಮ್ಮ ಸ್ವಂತ 360 ಡಿಗ್ರಿ ವಿಡಿಯೋಗಳನ್ನು ಪ್ರಕಟಿಸಲು, ಸ್ಟ್ರೀಟ್ ವ್ಯೂ ಸ್ಟುಡಿಯೋಗೆ ಭೇಟಿ ನೀಡಿ ಹಾಗೆಯೇ ಫೋಟೋಗಳನ್ನು ಲಗತ್ತಿಸಲು ಗೂಗಲ್‌ ಮ್ಯಾಪ್‌ ಗೆ ಭೇಟಿ ನೀಡಿ ಎಂದು ಸಲಹೆ ನೀಡಿದೆ.

ಭಾರತದಲ್ಲಿ ಈ ಹಿಂದೆಯೂ ಸ್ಥಗಿತವಾಗಿತ್ತು

ಭಾರತದಲ್ಲಿ ಈ ಹಿಂದೆಯೂ ಸ್ಥಗಿತವಾಗಿತ್ತು

ಸ್ಟ್ರೀಟ್ ವ್ಯೂ ಯಾವುದೇ ರಸ್ತೆಯ 360 ಡಿಗ್ರಿ ವೀಕ್ಷಣೆಯನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಸಂಭಾವ್ಯ ಪ್ರವಾಸದ ಸ್ಥಳಗಳನ್ನು ಪತ್ತೆ ಮಾಡಲು ಅಥವಾ ಮನೆಯಿಂದ ಪ್ರಪಂಚದ ಯಾವುದೇ ಭಾಗಕ್ಕೆ ಸಾಮಾನ್ಯ ಪ್ರವಾಸವನ್ನು ಕೈಗೊಳ್ಳಲು ಇದು ಸೂಕ್ತವಾಗಿದೆ. ಇನ್ನು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಕಾರಣಕ್ಕೆ ಗೂಗಲ್ ಮ್ಯಾಪ್ ಮೂಲಕ ಸ್ಟ್ರೀಟ್ ವ್ಯೂ ಅನ್ನು ಗೂಗಲ್‌ ಪರಿಚಯಿಸಲಾಗಿತ್ತು. ಇದರಲ್ಲಿ ಗಮನಿಸುವ ಪ್ರಮುಖ ವಿಷಯ ಎಂದರೆ ಭಾರತದಲ್ಲಿ ಈ ಸ್ಟ್ರೀಟ್ ವ್ಯೂ ಅನ್ನು ಒಂದು ದಶಕದ ಹಿಂದೆ ಭಾರತ ಸರ್ಕಾರ ಸ್ಥಗಿತಗೊಳಿಸಿತ್ತು. ಇದಕ್ಕೆ ಕಾರಣ ಅಗತ್ಯ ಇರುವ ಭದ್ರತಾ ಅನುಮತಿಗಳನ್ನು ಗೂಗಲ್ ನೀಡಿರಲಿಲ್ಲ. ಕಾಲ ನಂತರ ಮತ್ತೆ ಈ ಸೇವೆಯನ್ನು ಭಾರತದಲ್ಲಿ ಮರು ಸ್ಥಾಪಿಸಲಾಗಿತ್ತು. ಈಗ ಮತ್ತೆ ಈ ಸೇವೆ ಸ್ಥಗಿತವಾಗಲಿದೆ.

ಗೂಗಲ್‌

ಕೆಲವು ವಾರಗಳ ಹಿಂದೆ ಗೂಗಲ್‌ ತನ್ನ ಗೂಗಲ್‌ ಮ್ಯಾಪ್‌ ಆಪ್‌ನಲ್ಲಿ ತಲ್ಲೀನಗೊಳಿಸುವ ಫೀಚರ್ಸ್‌ವೊಂದನ್ನು ಪರಿಚಯಿಸಿತ್ತು. 'ಇಮ್ಮರ್ಸಿವ್ ವ್ಯೂ' ಫೀಚರ್ಸ್‌ ಮೂಲಕ ಹವಾಮಾನ, ಸಂಚಾರ ದಟ್ಟಣೆಯಂತಹ ವಿವರ, ನಿರ್ದಿಷ್ಟ ಸ್ಥಳದ 3D ವೈಮಾನಿಕ ವೀಕ್ಷಣೆಯನ್ನು ಬಳಕೆದಾರರಿಗೆ ನೀಡುತ್ತಿತ್ತು. ಇದರ ಜೊತೆಗೆ ಭಾರತೀಯ ಡೆವಲಪರ್‌ಗಳ ಮೇಲೆ ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವ ತನ್ನ ಯೋಜನೆಗಳನ್ನು ಅಕ್ಟೋಬರ್ 31 ರಿಂದ ಕೈಬಿಟ್ಟಿದೆ. ಭಾರತದಲ್ಲಿ ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ಗೂಗಲ್‌ ಮೇಲೆ ಸರಣಿಯಾಗಿ ಎರಡು ಬಾರಿ ದಂಡ ವಿಧಿಸಿದೆ. ಇದಾದ ನಂತರ ಈ ಎಲ್ಲಾ ರೀತಿಯ ಬೆಳೆವಣಿಗೆಗಳು ಗೂಗಲ್‌ ನಲ್ಲಿ ಕಂಡುಬರುತ್ತಿದೆ.

Best Mobiles in India

English summary
Google company is helpful for smart device users in many ways. Meanwhile, Google is planning to discontinue Street View App from next year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X