ಬಳಕೆದಾರರ ಅನುಕೂಲಕ್ಕಾಗಿ 93,067 ಬ್ಯಾಡ್‌ ಕಂಟೆಂಟ್‌ ತೆಗೆದುಹಾಕಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಫೆಬ್ರವರಿ ತಿಂಗಳ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಐಟಿ ನಿಯಮ 2021ರ ಪ್ರಕಾರ ಮಾಸಿಕ ವರದಿ ನೀಡುವುದು ಕಡ್ಡಾಯವಾಗಿದೆ. ಅದರಂತೆ ಫೆಬ್ರವರಿ ತಿಂಗಳಿನಲ್ಲಿ ಗೂಗಲ್‌ ಬಳಕೆದಾರರು ನೀಡಿರುವ ದೂರುಗಳು ತಾನು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಸದ್ಯ ಗೂಗಲ್‌ ಫೆಬ್ರವರಿಯಲ್ಲಿ ಬಳಕೆದಾರರ ದೂರುಗಳ ಆಧಾರದ ಮೇಲೆ 93,067 ಕೆಟ್ಟ ವಿಷಯವನ್ನು ತೆಗೆದುಹಾಕಲಾಗಿದೆ ಎಂದು ಘೋಷಿಸಿದೆ. ಅಲ್ಲದೆ ಫೆಬ್ರವರಿಯಲ್ಲಿ ಭಾರತದ ಬಳಕೆದಾರರಿಂದ ಒಟ್ಟು 30,065 ದೂರುಗಳನ್ನು ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದೆ.

ಗೂಗಲ್‌

ಹೌದು, ಗೂಗಲ್‌ ಫೆಬ್ರವರಿ ತಿಂಗಳಿನಲ್ಲಿ 93,067 ಬ್ಯಾಡ್‌ ಕಂಟೆಂಟ್‌ ಅನ್ನು ತೆಗೆದು ಹಾಕಿರುವುದಾಗಿ ಹೇಳಿದೆ. ಬಳಕೆದಾರರು ನೀಡಿದ ದೂರಿನ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬಳಕೆದಾರರ ದೂರುಗಳು ಥರ್ಡ್‌ ಪಾರ್ಟಿ ಕಂಟೆಂಟ್‌ಗೆ ಸಂಬಂಧಿಸಿವೆ. ಇದು ಸ್ಥಳೀಯ ಕಾನೂನುಗಳು ಅಥವಾ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಈ ದೂರುಗಳು ವಿವಿಧ ವರ್ಗಗಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ. ಇನ್ನುಳಿದಂತೆ ಗೂಗಲ್‌ ತೆಗೆದುಕೊಂಡಿರುವ ಕ್ರಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಫೆಬ್ರವರಿ ತಿಂಗಳಿನಲ್ಲಿ 30,065 ದೂರುಗಳನ್ನು ಸ್ವಿಕರಿಸಿರುವುದಾಗಿ ಹೇಳಿದೆ. ಈ ದೂರುಗಳ ಆಧಾರದ ಮೇಲೆ, ಹಕ್ಕುಸ್ವಾಮ್ಯ, ಟ್ರೇಡ್‌ಮಾರ್ಕ್, ಕೋರ್ಟ್ ಆರ್ಡರ್, ಗ್ರಾಫಿಕ್ ಲೈಂಗಿಕ ವಿಷಯ ಮತ್ತು ಹೆಚ್ಚಿನ ವಿಷಯಗಳನ್ನು ಒಳಗೊಂಡಂತೆ ಹಲವಾರು ವಿಭಾಗಗಳ ಅಡಿಯಲ್ಲಿ ಒಟ್ಟು 93,067 ವಿಷಯಗಳನ್ನು ತೆಗೆದುಹಾಕಿದೆ. ಇದಲ್ಲದೇ, ಫೆಬ್ರವರಿಯಲ್ಲಿ ಸ್ವಯಂಚಾಲಿತ ಪತ್ತೆಯ ಭಾಗವಾಗಿ 3,38,938 ಕಂಟೆಂಟ್‌ಗಳನ್ನು ತೆಗೆದುಹಾಕಿರುವುದಾಗಿ ಗೂಗಲ್‌ ಹೇಳಿಕೊಂಡಿದೆ. ಆದರೆ ಜನವರಿ ತಿಂಗಳಿನಲ್ಲಿ ತೆಗೆದುಹಾಕಿರುವ ಕಂಟೆಂಟ್‌ ಸಂಖ್ಯೆಯನ್ನು ಗಮನಿಸಿದರೆ ಈ ವರ್ಷ ಕಡಿಮೆ ತೆಗೆದುಹಾಕಿರುವುದು ಕಂಡು ಬಂದಿದೆ.

ಗೂಗಲ್‌

ಇನ್ನು ಗೂಗಲ್‌ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ, ನಮ್ಮ ಬಳಕೆದಾರರ ವರದಿಗಳ ಜೊತೆಗೆ, ಆನ್‌ಲೈನ್‌ನಲ್ಲಿ ಹಾನಿಕಾರಕ ವಿಷಯವನ್ನು ತೆಗೆದುಹಾಕಲು ನಾವು ಹೆಚ್ಚು ಹೂಡಿಕೆ ಮಾಡುತ್ತೇವೆ. ನಮ್ಮ ಪ್ಲಾಟ್‌ಫಾರ್ಮ್‌ಗಳಿಂದ ಅದನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ತಂತ್ರಜ್ಞಾನವನ್ನು ಬಳಸುತ್ತೇವೆ ಎಂದು ಹೇಳಿದೆ. ಅಲ್ಲದೆ ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತು ಮತ್ತು ಹಿಂಸಾತ್ಮಕ ವಿಷಯಗಳನ್ನು ಒಳಗೊಂಡ ಕಂಟೆಂಟ್‌ ಪ್ರಸಾರ ಮಾಡುವುದನ್ನು ತಡೆಗಟ್ಟಲು ನಮ್ಮ ಕೆಲವು ಉತ್ಪನ್ನಗಳಿಗೆ ಸ್ವಯಂಚಾಲಿತ ಪತ್ತೆ ಪ್ರಕ್ರಿಯೆಗಳನ್ನು ಬಳಸುತ್ತೇವೆ ಎಂದು ಗೂಗಲ್‌ ಘೋಷಿಸಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಬಳಕೆದಾರರು ಹೆಲ್ತ್‌ಕೇರ್‌ ಪ್ರೊವೈಡರ್‌ ಬಗ್ಗೆ ಸರ್ಚ್‌ ಮಾಡುವಾಗ ಹೊಸ ಅನುಭವ ನೀಡಲ ಮುಂದಾಗಿದೆ. ಅದರಂತೆ ನೀವು ಸರ್ಚ್‌ ಮಾಡುವಾಗಲೇ ನಿಮಗೆ ಯಾವಾಗ ಹೆಲ್ತ್‌ ಕೇರ್‌ಗಳ ಅಪಾಯಿಂಟ್‌ಮೆಂಟ್‌ ಸಿಗಲಿದೆ ಅನ್ನೊ ಮಾಹಿತಿಯನ್ನು ನೀಡಲಿದೆ. ಅಂದರೆ ಬಳಕೆದಾರರು ವೈದ್ಯರು ಅಥವಾ ಆರೋಗ್ಯ ಸೇವೆ ಒದಗಿಸುವವರ ಕಚೇರಿಗಾಗಿ ಹುಡುಕಿದರೆ ಸಾಕು ಅಪಾಯಿಂಟ್‌ಮೆಂಟ್‌ನ ದಿನಾಂಕವನ್ನು ತೋರಿಸುತ್ತದೆ. ನಂತರ ನೀವು "ಬುಕ್‌" ಬಟನ್ ಅನ್ನು ಟ್ಯಾಪ್ ಮಾಡಬಹುದು, ಇದು ಅವರನ್ನು ಥರ್ಡ್‌ ಪಾರ್ಟಿ ಸೈಟ್‌ಗೆ ಕರೆದೊಯ್ಯುತ್ತದೆ, ಇದರಲ್ಲಿ ನೀವು ಅಪಾಯಿಂಟ್‌ಮೆಂಟ್ ಮಾಡಬಹುದು. ಸದ್ಯ ಈ ಫೀಚರ್ಸ್‌ ಇದೀಗ US ನಲ್ಲಿನ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ.

ಗೂಗಲ್‌

ಇನ್ನು ಗೂಗಲ್‌ ಕಂಪನಿಯ ಬ್ಲಾಗ್ ಪ್ರಕಾರ, ನಾವು ಇನ್ನೂ ಈ ವೈಶಿಷ್ಟ್ಯವನ್ನು ಹೊರತರುವ ಆರಂಭಿಕ ಹಂತದಲ್ಲಿದ್ದೇವೆ, ಇದಕ್ಕಾಗಿ ನಾವು CVS ನಲ್ಲಿ MinuteClinic ಮತ್ತು ಇತರ ಶೆಡ್ಯೂಲಿಂಗ್ ಸಲ್ಯೂಶನ್‌ ಪ್ರೊವೈಡರ್‌ ಒಳಗೊಂಡಂತೆ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಫೀಚರ್ಸ್‌ಗಳು ಕ್ರಿಯಾತ್ಮಕತೆ ಮತ್ತು ನಮ್ಮ ಪಾಲುದಾರರ ನೆಟ್‌ವರ್ಕ್ ಅನ್ನು ವಿಸ್ತರಿಸಲು ಅನುಕೂಲವಾಗಲಿವೆ. ಆದ್ದರಿಂದ ಜನರಿಗೆ ಅಗತ್ಯವಿರುವ ಕಾಳಜಿಯನ್ನು ಪಡೆಯುವುದನ್ನು ನಾವು ಸುಲಭಗೊಳಿಸಬಹುದಾಗಿದೆ ಎಂದು ಹೇಳಿಕೊಂಡಿದೆ.

Best Mobiles in India

Read more about:
English summary
Google has announced that it has removed 93,067 pieces of bad content based on user complaints in February.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X