2021 ರಲ್ಲಿ ಗೂಗಲ್‌ನಿಂದ 1.2 ಮಿಲಿಯನ್ ಅಪ್ಲಿಕೇಶನ್‌ ಬ್ಲ್ಯಾಕ್‌! ಕಾರಣ ಏನು?

|

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚುವ ಮೂಲಕ ಬಳಕೆದಾರರ ರಕ್ಷಣೆಯನ್ನು ಮಾಡುತ್ತಲೇ ಬಂದಿದೆ. ಬಳಕೆದಾರರ ಸುರಕ್ಷತೆಗಾಗಿ ದುರುದ್ದೇಶಪೂರಿತ ಎನಿಸುವ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ನಿಂದ ಗೇಟ್‌ಪಾಸ್‌ ನೀಡುತ್ತಿದೆ. ಅದರಂತೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕಳೆದ ವರ್ಷ 1.2 ಮಿಲಿಯನ್ ಅಪ್ಲಿಕೇಶನ್‌ಗಳನ್ನು ಬ್ಲಾಕ್‌ ಮಾಡಿದೆ ಎನ್ನಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌

ಹೌದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಳಕೆದಾರರ ಸುರಕ್ಷತೆಗಾಗಿ ಕಳೆದ ವರ್ಷ 1.2 ಮಿಲಿಯನ್ ಅಪ್ಲಿಕೇಶನ್‌ಗಳನ್ನು ಬ್ಲಾಕ್‌ ಮಾಡಲಾಗಿದೆ. ದುರುದ್ದೇಶಪೂರಿತ ಮತ್ತು ಸ್ಪ್ಯಾಮ್‌ ಡೆವಲಪರ್‌ಗಳನ್ನು ತೆಗೆದುಹಾಕುವುದಕ್ಕಾಗಿ ಗೂಗಲ್‌ ಈ ರೀತಿಯ ಕ್ರಮಗಳನ್ನು ಕೈ ಗೊಂಡಿದೆ ಎನ್ನಲಾಗಿದೆ. ಜೊತೆಗೆ ಕಂಪನಿಯು ನಿಷ್ಕ್ರಿಯವಾಗಿರುವ ಅಥವಾ ಕೈಬಿಡಲಾದ ಸುಮಾರು 500k ಡೆವಲಪರ್ ಅಕೌಂಟ್‌ಗಳನ್ನು ಕ್ಲೋಸ್‌ ಮಾಡಿದೆ. ಇನ್ನುಳಿದಂತೆ ಗೂಗಲ್‌ ಪ್ಲೇ ಸ್ಟೋರ್‌ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಕಳೆದ ವರ್ಷ ಅನೇಕ ಪ್ರೈವೆಸಿ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ಸುರಕ್ಷತೆಗೆ ದಕ್ಕೆ ತರುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಿದೆ. ಅದರಂತೆ ಕಳೆದ ವರ್ಷ 1.2 ಮಿಲಿಯನ್ ಅಪ್ಲಿಕೇಶನ್‌ಗಳನ್ನು ಬ್ಲಾಕ್‌ ಮಾಡಿದೆ. ಇದಲ್ಲದೆ ಇದೀಗ ಹೊಸ ಡೇಟಾ ಸುರಕ್ಷತಾ ವಿಭಾಗವನ್ನು ಕೂಡ ಪರಿಚಯಿಸಲು ಮುಂದಾಗಿದೆ. ಇದರಿಂದ ಇನ್ಮುಂದೆ ಅಪ್ಲಿಕೇಶನ್‌ ಡೆವಲಪರ್‌ಗಳು ಬಳಕೆದಾರರು ಡೌನ್‌ಲೋಡ್ ಮಾಡುವ ಅಪ್ಲಿಕೇಶನ್‌ಗಳ ಗೌಪ್ಯತೆ ಮತ್ತು ಸುರಕ್ಷತಾ ಅಭ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಬೇಕಾಗುತ್ತದೆ.

ಅಪ್ಲಿಕೇಶನ್

ಇನ್ನು ಅಪ್ಲಿಕೇಶನ್ ಸುರಕ್ಷತೆಯನ್ನು ಸುಧಾರಿಸಲು, ಡೇಟಾವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬುದನ್ನು ಮಿತಿಗೊಳಿಸಲು ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಸೂಚಿಸಿದೆ. ಅಲ್ಲದೆ ಅಪ್ಲಿಕೇಶನ್ ಡೆವಲಪರ್‌ಗಳೊಂದಿಗೆ ಸಂವಹನದ ಮಾರ್ಗಗಳನ್ನು ಸುಧಾರಿಸಲು ಗೂಗಲ್‌ SDK ಡೆವಲಪರ್‌ಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಹೆಚ್ಚುವರಿಯಾಗಿ, ಕಂಪನಿಯು ಹೊಸ ಪ್ಲಾಟ್‌ಫಾರ್ಮ್ ರಕ್ಷಣೆಗಳು ಮತ್ತು ನೀತಿಗಳನ್ನು ಪರಿಚಯಿಸಿದೆ.

ಆಂಡ್ರಾಯ್ಡ್‌

ಇದರಿಂದ ಆಂಡ್ರಾಯ್ಡ್‌ 11 ನಿಂದ ಬೇರೆಕಡೆಗೆ ವಲಸೆ ಹೋಗುವ 98% ಅಪ್ಲಿಕೇಶನ್‌ಗಳಿಗೆ ಸೂಕ್ಷ್ಮ API ಗಳು ಮತ್ತು ಬಳಕೆದಾರರ ಡೇಟಾಗೆ ಪ್ರವೇಶವನ್ನು ಕಡಿಮೆ ಮಾಡಲು ಮುಂದಾಗಿದೆ. ಜೊತೆಗೆ ಗೂಗಲ್‌ ಹೆಚ್ಚುವರಿಯಾಗಿ, ಗೂಗಲ್‌ ಪ್ಲೇ ಪ್ರೊಟೆಕ್ಟ್‌ನಲ್ಲಿ ಮಾಲ್‌ವೇರ್ ಪತ್ತೆಹಚ್ಚುವಿಕೆ ಸುಧಾರಿಸುವ ಹೊಸ ಮೆಷಿನ್‌ ಲರ್ನಿಂಗ್‌ ಮಾದರಿಯನ್ನು ಪಿಕ್ಸೆಲ್‌ ಫೋನ್‌ನಲ್ಲಿ ಬಳಸುತ್ತಿದೆ. ಇದು ಕೆಟ್ಟ ಅಪ್ಲಿಕೇಶನ್‌ಗಳನ್ನು ಅನ್ವೇಷಿಸಲು ಸಹಾಯ ಮಾಡಲಿದೆ. ಇದ್ಕಾಗಿ ಫೆಡರೇಟೆಡ್ ಅನಾಲಿಟಿಕ್ಸ್ ಎಂಬ ಗೌಪ್ಯತೆಯನ್ನು ಸಂರಕ್ಷಿಸುವ ತಂತ್ರಜ್ಞಾನವನ್ನು ಬಳಸುತ್ತದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಸುರಕ್ಷತೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಆಂಡ್ರಾಯ್ಡ್‌ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡುವುದಕ್ಕೆ ಗೂಗಲ್‌ ಮುಂದಾಗಿದೆ. ಈಗಾಗಿ ಗೂಗಲ್‌ ಪ್ಲೇ ಸ್ಟೋರ್‌ನ ನೀತಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದೆ. ಆಂಡ್ರಾಯ್ಡ್‌ನ ಆಕ್ಸೆಸಿಬಿಲಿಟಿ ನೀತಿಯನ್ನು ಅಪ್ಡೇಟ್‌ ಮಾಡಲಿದೆ. ಅದರಂತೆ ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ ಅನುಮತಿಸುವ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. ಇನ್ನು ರೆಕಾರ್ಡಿಂಗ್ ಅಪ್ಲಿಕೇಶನ್‌ಗೆ ಪ್ರವೇಶವಿಲ್ಲದೆ, ಲೋಕಲ್‌ ಕಾಲ್‌ ರೆಕಾರ್ಡಿಂಗ್ ಮಾಡುವುದಕ್ಕೆ ಇನ್ಮುಂದೆ ಸಾಧ್ಯವಾಗುವುದಿಲ್ಲ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೇ 11 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಗೂಗಲ್‌ ವಿವರಿಸಿದೆ.

ಡೇಟಾ ಸುರಕ್ಷತೆ ವಿಭಾಗದ ಉದ್ದೇಶ ಏನು?

ಡೇಟಾ ಸುರಕ್ಷತೆ ವಿಭಾಗದ ಉದ್ದೇಶ ಏನು?

* ಡೆವಲಪರ್ ಡೇಟಾವನ್ನು ಯಾವ ಉದ್ದೇಶಕ್ಕಾಗಿ ಸ್ಟೋರೇಜ್‌ ಮಾಡುತ್ತಿದ್ದಾರೆ ಎಂದು ತಿಳಿಯಬಹುದು.
* ಡೆವಲಪರ್ ಥರ್ಡ್‌ ಪಾರ್ಟಿಗಳೊಂದಿಗೆ ಡೇಟಾವನ್ನು ಶೇರ್‌ ಮಾಡುತ್ತಿದ್ದಾರೆಯೇ ಎಂದು ತಿಳಿಯಲು ಸಾಧ್ಯವಾಗಲಿದೆ.
* ಅಪ್ಲಿಕೇಶನ್‌ನ ಸೆಕ್ಯುರಿಟಿ ಪ್ರಾಕ್ಟಿಸ್‌ ಬಗ್ಗೆ ಗೊತ್ತಾಗಲಿದೆ.
* ಪ್ಲೇ ಸ್ಟೋರ್‌ನಲ್ಲಿ ಮಕ್ಕಳಿಗಾಗಿ ಗೂಗಲ್‌ಪ್ಲೇ ನ ಫ್ಯಾಮಿಲಿಸ್‌ ಪಾಲಿಸಿ ನೀತಿಯನ್ನು ಅನುಸರಿಸಲಿದೆಯಾ ಎಂದು ತಿಳಿಯಬಹುದು.

Best Mobiles in India

English summary
Google removed a whopping 1.2 million apps that violated playstore policies

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X