ಗೂಗಲ್‌ ಪ್ಲೇ ಸ್ಟೋರ್‌ನಿಂದ 17 ಆಂಡ್ರಾಯ್ಡ್‌ ಆಪ್‌ಗಳಿಗೆ ಗೇಟ್‌ಪಾಸ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪ್ಲೇ ಸ್ಟೋರ್‌ನಿಂದ 17 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಈ 17 ಅಪ್ಲಿಕೇಶನ್‌ಗಳು ಜೋಕರ್ ಮಾಲ್‌ವೇರ್ ಸೋಂಕಿಗೆ ಒಳಗಾಗಿದ್ದು, ಇದನ್ನು ಬ್ರೆಡ್ ಮಾಲ್‌ವೇರ್ ಎಂದೂ ಹೆಸರಿಸಲಾಗಿದೆ. ಕ್ಯಾಲಿಫೋರ್ನಿಯಾ ಮೂಲದ ಐಟಿ ಭದ್ರತಾ ಕಂಪನಿಯಾದ Zscalerನ ಭದ್ರತಾ ಸಂಶೋಧಕರು ಈ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಗುರುತಿಸಿದ್ದು, ಗೂಗಲ್‌ ಈ ಆಪ್‌ಗಳಿಗೆ ಗೇಟ್‌ಪಾಸ್‌ ನೀಡಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದ 17 ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳನ್ನ ಡಿಲೀಟ್‌ ಮಾಡಿದೆ. ಈ ಆಪ್‌ಗಳು ಬಳಕೆದಾರರ ಎಸ್‌ಎಂಎಸ್‌ ಸಂದೇಶಗಳು, ಕಂಟ್ಯಾಕ್ಟ್‌ ಲಿಸ್ಟ್‌ಗಳನ್ನ ಮಾಹಿತಿಯನ್ನು ಕದಿಯಲಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ ಈ ಆಪ್‌ಗಳನ್ನ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಅಡಕವಾಗಿರುವ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲಾಗಿತ್ತು ಅನ್ನೊದು ಸಹ ಬಹಿರಂಗವಾಗಿದೆ. ಇದೇ ಕಾರಣಕ್ಕೆ ಭದ್ರತೆಯ ಹಿತದೃಷ್ಟಿಯಿಂದ ಈ ಆಪ್‌ಗಳನ್ನ ಗೂಗಲ್‌‌ ತೆಗೆದುಹಾಕಿದೆ. ಹಾಗಾದ್ರೆ ಯಾವೆಲ್ಲಾ ಆಪ್‌ಗಳು ಸ್ಪೈವೇರ್‌ ಆಗಿದ್ದವು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಗೂಗಲ್‌

ಸದ್ಯ ಗೂಗಲ್‌ ಗೇಟ್‌ಪಾಸ್‌ ನೀಡಿರುವ 17 ಅಪ್ಲಿಕೇಶನ್‌ಗಳು ಸ್ಪೈವೇರ್ ಆಗಿದ್ದು, ಎಸ್‌ಎಂಎಸ್ ಸಂದೇಶಗಳು,ಕಂಟ್ಯಾಕ್ಟ್‌ ಲಿಸ್ಟ್‌ ಕದಿಯಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಪ್ರೀಮಿಯಂ ವಾಯರ್‌ಲೆಸ್ ಅಪ್ಲಿಕೇಷನ್ ಪ್ರೊಟೊಕಾಲ್ ಸೇವೆಗಳಿಗಾಗಿ ಸೈನ್ ಅಪ್ ಮಾಡುತ್ತದೆ ಅನ್ನೊದು ಬಹಿರಂಗವಾಗಿದೆ. ಅಲ್ಲದೆ ಬಳಕೆದಾರರ ಡೇಟಾಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಉದ್ದೇಶಿಸಿರುವ ಈ 17 ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಬಗ್ಗೆ ಗೂಗಲ್‌ಗೆ ಮಾಹಿತಿ ತಿಳಿದ ತಕ್ಷಣ, ಕಂಪನಿಯ ಆಂಡ್ರಾಯ್ಡ್ ಸೆಕ್ಯುರಿಟಿ ತಂಡವು ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ತ್ವರಿತ ಕ್ರಮ ಕೈಗೊಂಡಿದೆ.

ಗೂಗಲ್‌

ಇನ್ನು ಗೂಗಲ್‌ ಈಗ ಗೇಟ್‌ಪಾಸ್‌ ನೀಡಿರುವ 17 ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಇಲ್ಲಿಯವರೆಗೆ 120,000 ಡೌನ್‌ಲೋಡ್‌ ಅನ್ನು ಹೊಂದಿವೆ. ಅಲ್ಲದೆ ಈ ಎಲ್ಲಾ ಆಪ್‌ಗಳು ಬಳಕೆದಾರರ ಮಾಹಿತಿಗೆ ಭಾರಿ ದಕ್ಕೆ ತಂದಿವೆ ಅನ್ನೊದನ್ನ ಇಲ್ಲಿ ಗಮನಿಸಲೇಬೇಕು. ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಎಲ್ಲಾ ಆಪ್‌ಗಳಿಗೆ ಗೇಟ್‌ಪಾಸ್‌ ನಿಡಲಾಗಿದೆ. ನಿಮ್ಮ ಡಿವೈಸ್‌ನಲ್ಲಿ ಏನಾದರೂ ಈ ಆಪ್‌ಗಳಿದ್ದರೆ ಈ ಕೂಡಲೇ ಡಿಲೀಟ್‌ ಮಾಡುವುದು ಉತ್ತಮವಾಗಿದೆ.

Google ಪ್ಲೇ ಸ್ಟೋರ್‌ನಿಂದ ಗೇಟ್‌ಪಾಸ್‌ ಪಡೆದ 17 ಅಪ್ಲಿಕೇಶನ್‌ಗಳ ವಿವರ.

Google ಪ್ಲೇ ಸ್ಟೋರ್‌ನಿಂದ ಗೇಟ್‌ಪಾಸ್‌ ಪಡೆದ 17 ಅಪ್ಲಿಕೇಶನ್‌ಗಳ ವಿವರ.

All Good PDF Scanner
Mint Leaf Message-Your Private Message
Unique Keyboard - Fancy Fonts & Free Emoticons
Tangram App Lock
Direct Messenger
Private SMS
One Sentence Translator - Multifunctional Translator
Style Photo Collage
Meticulous Scanner
Desire Translate
Talent Photo Editor - Blur focus
Care Message
Part Message
Paper Doc Scanner
Blue Scanner
Hummingbird PDF Converter - Photo to PDF
Safety AppLock

Best Mobiles in India

Read more about:
English summary
Google has removed 17 applications from its Play Store which intended to gain unauthorized access of the users' data.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X