ಗೂಗಲ್‌ ಕ್ರೋಮ್ ಸೇರಿದ ಹೊಸ ಪ್ರಾಡಕ್ಟಿವಿಟಿ ಫೀಚರ್ಸ್‌!

|

ಪ್ರಸ್ತುತ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಗೂಗಲ್‌ ಈಗಾಗಲೇ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಪ್ರಾಡಕ್ಟಿವಿಟಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ರೋಮ್‌ಗಾಗಿ ಗೂಗಲ್ ಹೊಸ ಫೀಚರ್ಸ್‌ಗಳನ್ನು ಹೊರತಂದಿದೆ. ಈ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಕ್ರೋಮ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಲಭ್ಯವಿದೆ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ನ ಪ್ರಾಡಕ್ಟಿವಿಟಿಯನ್ನು ಹೆಚ್ಚಿಸುವುದಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಕ್ರೋಮ್‌ನಲ್ಲಿ ಹೈಲೈಟ್‌ ಮಾಡಲು ಲಿಂಕ್‌ ಫಿಚರ್ಸ್‌ ಅನ್ನು ಸಹ ಪರಿಚಯಿಸಿದೆ. ಅಲ್ಲದೆ ಕ್ರೋಮ್‌ನಲ್ಲಿ ಪಿಡಿಎಫ್‌ಗಳಿಗೆ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇನ್ನುಳಿದಂತೆ ಗೂಗಲ್‌ ಹೊಸದಾಗಿ ಪರಿಚಯಿಸಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಕ್ರೋಮ್ ಈಗ "ಲಿಂಕ್‌ ಟು ಹೈಲೈಟ್ " ಫೀಚರ್ಸ್‌ ಅನ್ನು ಹೊಂದಿದೆ. ಇದು ನೀವು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸುವ ಲೇಖನದ ಲಿಂಕ್‌ನಿಂದ ಪಠ್ಯವನ್ನು ಹಂಚಿಕೊಳ್ಳಲು ಸುಲಭಗೊಳಿಸುತ್ತದೆ. ರೈಟ್‌ ಕ್ಲಿಕ್ ಮಾಡುವ ಮೂಲಕ ಮತ್ತು "ಕಾಪಿ ಲಿಂಕ್‌ ಟು ಹೈಲೈಟ್" ಆಯ್ಕೆ ಮಾಡುವ ಮೂಲಕ ನೀವು ಪಠ್ಯವನ್ನು ಹೈಲೈಟ್ ಮಾಡಬಹುದು. ನಂತರ ಲಿಂಕ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಅವರು ಅದನ್ನು ತೆರೆದಾಗ ಹೈಲೈಟ್ ಮಾಡಿದ ಪಠ್ಯವನ್ನು ನೋಡಬಹುದಾಗಿದೆ. ಈ ಫೀಚರ್ಸ್‌ ಆಂಡ್ರಾಯ್ಡ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ಕ್ರೋಮ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಐಒಎಸ್‌ನಲ್ಲಿ ಲಭ್ಯವಿರುತ್ತದೆ.

ಕ್ರೋಮ್‌

ಇನ್ನು ಕ್ರೋಮ್‌ನಲ್ಲಿ ಪಿಡಿಎಫ್‌ಗಳಿಗೆ ಗೂಗಲ್ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಥಂಬ್‌ನೇಲ್‌ಗಳನ್ನು ಬ್ರೌಸ್ ಮಾಡಲು ಮತ್ತು ನಿರ್ದಿಷ್ಟ ಪುಟಕ್ಕೆ ತ್ವರಿತವಾಗಿ ಹೋಗಲು ನೀವು ಈಗ ಹೊಸ ಸೈಡ್‌ಬಾರ್ ಅನ್ನು ಬಳಸಬಹುದು. ಟೂಲ್‌ಬಾರ್‌ಗಳು, ವಿಳಾಸ ಪಟ್ಟಿ ಮತ್ತು ಟ್ಯಾಬ್‌ಗಳಿಲ್ಲದೆ ಪ್ರಸ್ತುತಿಯನ್ನು ಪ್ರೇಕ್ಷಕರಾಗಿ ವೀಕ್ಷಿಸಲು ನಿಮಗೆ ಅನುಮತಿಸುವ ಹೊಸ ಪ್ರಸ್ತುತಿ ಮೋಡ್ ಸಹ ಇದೆ. ಡಾಕ್ಯುಮೆಂಟ್ ಗುಣಲಕ್ಷಣಗಳು, ಎರಡು ಪುಟಗಳ ವೀಕ್ಷಣೆ ಮತ್ತು ಪಿಡಿಎಫ್‌ಗಳಿಗಾಗಿ ನವೀಕರಿಸಿದ ಉನ್ನತ ಟೂಲ್‌ಬಾರ್ ಅನ್ನು ಗೂಗಲ್ ಸೇರಿಸಿದೆ. ಈ ಫೀಚರ್ಸ್‌ಗಳು ಎಲ್ಲಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಕ್ರೋಮ್‌ನಲ್ಲಿ ಲಭ್ಯವಾಗಲಿದೆ.

ಗೂಗಲ್‌

ಇದಲ್ಲದೆ ನೀವು ಕ್ರೋಮ್‌ ವಿಂಡೋಗಳನ್ನು ಪ್ರಸ್ತುತಪಡಿಸುವಾಗ ಅಥವಾ ಹಂಚಿಕೊಳ್ಳುವಾಗ ಗೂಗಲ್‌ ಕ್ರೋಮ್‌ ಎಲ್ಲಾ ಅಧಿಸೂಚನೆಗಳನ್ನು ಆಟೋಮ್ಯಾಟಿಕ್‌ ಮ್ಯೂಟ್ ಮಾಡುತ್ತದೆ. ಕ್ರೋಮ್‌ನ ಮತ್ತೊಂದು ಪ್ರಮುಖ ಅಪ್ಡೇಟ್‌ ಅಂದರೆ ಅದು ಪವರ್‌ ಸೇವ್‌, ಇದು ಕಂಪನಿಯು ಸರಿಪಡಿಸಲು ಪ್ರಯತ್ನಿಸುತ್ತಿರುವ ಒಂದು ಸಮಸ್ಯೆ. "ಕ್ರೋಮ್ ಈಗ ಪ್ರತಿ ಟ್ಯಾಬ್‌ಗೆ 100MB ವರೆಗೆ ರಿರೈಟ್ಸ್‌ ಪಡೆಯುತ್ತದೆ, ಇದು ಕೆಲವು ಜನಪ್ರಿಯ ಸೈಟ್‌ಗಳಲ್ಲಿ 20% ಕ್ಕಿಂತ ಹೆಚ್ಚು" ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಮ್ಯಾಕ್‌ನಲ್ಲಿನ ಗೂಗಲ್ ಕ್ರೋಮ್ ಸಿಪಿಯು ಬಳಕೆಯಲ್ಲಿ 35% ರಷ್ಟು ಕಡಿತ ಮತ್ತು 1.25 ಹೆಚ್ಚಿನ ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Google rolled out new features for Chrome.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X