ಭಾರತದ ಹಲವು ಭಾಷೆಗಳಲ್ಲಿ ಸರ್ಚ್‌ ಮಾಡುವ ಅವಕಾಶ ನೀಡಿದ ಗೂಗಲ್‌!

|

ಪ್ರಸ್ತುತ ದಿನಗಳಲ್ಲಿ ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಾಪಾಗೋದೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಅಷ್ಟರ ಮಟ್ಟಿಗೆ ಗೂಗಲ್‌ ಜನರ ಚಟುವಟಿಕೆಗಳಲ್ಲಿ ಬೆರೆತು ಹೋಗಿದೆ. ಇನ್ನು ಬಳಕೆದಾರರ ಸ್ನೇಹಿ ಆಗಿರುವ ಗೂಗಲ್‌ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಬಳಕೆದಾರರಿಗೆ ಇಂಟರ್‌ನೆಟ್‌ ಬಳಸುವಾಗ ಸಹಾಯವಾಗಲು ಭಾರತದಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ಬಳಕೆದಾರರಿಗೆ ಇಂಟರ್‌ನೆಟ್‌ ಬಳಸುವಾಗ ಸಹಾಯಮಾಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ಜನರು ತಮ್ಮ ಫೀಚರ್ಸ್‌ಗಳನ್ನು ಅವರಿಗೆ ಸೂಕ್ತವಾದ ಭಾಷೆಯಲ್ಲಿ ಬಳಸಬಹುದು. ಅಲ್ಲದೆ ಗೂಗಲ್ ಮಾನವ ಭಾಷೆಗಳನ್ನು, ನಿರ್ದಿಷ್ಟವಾಗಿ ಭಾರತೀಯ ಭಾಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು MuRIL (ಭಾರತೀಯ ಭಾಷೆಗಳಿಗೆ ಬಹುಭಾಷಾ ಪ್ರತಿನಿಧಿಗಳು) ಎಂಬ ಹೊಸ ಎಐ ಮಾದರಿಯನ್ನು ಪರಿಚಯಿಸಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

MuRIL

ಮೊದಲನೆಯದಾಗಿ, ಭಾರತದಲ್ಲಿ ಗೂಗಲ್‌ನ ಸಂಶೋಧನಾ ತಂಡವು ಎಐ ರಂಗದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಸದ್ಯ ಗೂಗಲ್ ಮಾನವ ಭಾಷೆಗಳನ್ನು, ನಿರ್ದಿಷ್ಟವಾಗಿ ಭಾರತೀಯ ಭಾಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು MuRIL ಎಂಬ ಹೊಸ ಎಐ ಮಾದರಿಯನ್ನು ಪರಿಚಯಿಸಿದೆ. ಇದು ಮಾದರಿ ಓಪನ್ ಸೋರ್ಸ್ ಆಗಿದೆ ಮತ್ತು ಟೆನ್ಸರ್ ಫ್ಲೋ ಹಬ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಇದರಿಂದ ಗೂಗಲ್ ಸರ್ಚ್‌ ಈಗ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿಯಂತಹ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ.

ಗೂಗಲ್‌

ಇದಲ್ಲದೆ, ಬಳಕೆದಾರರು ಗೂಗಲ್‌ನಲ್ಲಿ ಸರ್ಚಿಂಗ್‌ ರಿಸಲ್ಟ್‌ ಅನ್ನು ಭಾರತೀಯ ಭಾಷೆಗಳಲ್ಲಿ ತೋರಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದಾಗಲೂ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ವಿಷಯವನ್ನು ನೋಡುವುದು ಸುಲಭವಾಗುತ್ತದೆ. ಈ ಫೀಚರ್ಸ್‌ ಹಿಂದಿ, ಬಾಂಗ್ಲಾ, ಮರಾಠಿ, ತಮಿಳು ಮತ್ತು ತೆಲುಗು ಸೇರಿದಂತೆ ಐದು ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇನ್ನು ಫೋನ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲದೇ ಗೂಗಲ್ ತನ್ನ ಅಪ್ಲಿಕೇಶನ್‌ಗಳಿಗೆ ಆದ್ಯತೆಯ ಭಾಷೆಯನ್ನು ಹೊಂದಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಫೀಚರ್ಸ್‌

ಸದ್ಯ ಈ ಫೀಚರ್ಸ್‌ ಪ್ರಸ್ತುತ ಗೂಗಲ್ ಅಸಿಸ್ಟೆಂಟ್ ಮತ್ತು ಡಿಸ್ಕವರ್‌ಗಾಗಿ ಲಭ್ಯವಿದೆ. ಭಾರತೀಯ ಭಾಷೆಯನ್ನು ಆಯ್ಕೆ ಮಾಡುವ ಸಾಮರ್ಥ್ಯವು ಗೂಗಲ್ ಮ್ಯಾಪ್‌ನಲ್ಲಿಯೂ ಸಹ ಲಭ್ಯವಿದೆ. ಇದರಲ್ಲಿ ಬಳಕೆದಾರರು ಸೆಟ್ಟಿಂಗ್‌ಗಳಲ್ಲಿನ ಅಪ್ಲಿಕೇಶನ್ ಭಾಷಾ ವಿಭಾಗದ ಮೂಲಕ ಒಂಬತ್ತು ಸ್ಥಳೀಯ ಭಾಷೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು. ಇನ್ನು ಹೆಚ್ಚುವರಿಯಾಗಿ, ಗೂಗಲ್ ಲೆನ್ಸ್ ಹೊಸ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಬಳಕೆದಾರರಿಗೆ, ವಿಶೇಷವಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಗೂಗಲ್ ಅಪ್ಲಿಕೇಶನ್‌ನಲ್ಲಿನ ಸರ್ಚ್ ಬಾರ್ ಮೂಲಕ ಗೂಗಲ್ ಲೆನ್ಸ್ ಸಹಾಯದಿಂದ ಸಮಸ್ಯೆಯನ್ನು ಸ್ಕ್ಯಾನ್ ಮಾಡುವ ಮೂಲಕ ಯಾವುದೇ ಗಣಿತ ಪ್ರಶ್ನೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.

Best Mobiles in India

English summary
Google, to make the internet helpful for users, has now introduced new features in India so that people can use the features in the language that suits them.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X