ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಜಾಹಿರಾತು ಸಮಸ್ಯೆ ಬಗೆಹರಿಸಲು ಮುಂದಾದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭಾರತದಲ್ಲಿ ತನ್ನ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಜಾಹಿರಾತು ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ. ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಆಗಾಗ ಹಾವಳಿ ಮಾಡುವ ಜಾಹಿರಾತು ಸಮಸ್ಯೆಯ ಬಗ್ಗೆ ಗೂಗಲ್‌ ಒಪ್ಪಿಕೊಂಡಿದ್ದು, ಅದನ್ನು ಬಗೆಹರಿಸುವುದಾಗಿ ಹೇಳಿಕೊಂಡಿದೆ. ಇದಕ್ಕಾಗಿ ಗೂಗಲ್‌ ದೇಶದಲ್ಲಿ ಜಾಹಿರಾತು ಫೀಚರ್ಸ್‌ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತಿದೆ. ಅಲ್ಲದೆ ಈ ರೀತಿಯ ಸಮಸ್ಯೆಗಳು ದೇಶದಲ್ಲಿ ಮತ್ತೆಂದೂ ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುವುದಿಲ್ಲ ಎಂದು ಗೂಗಲ್‌ ಹೇಳಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಮೆಸೇಜ್‌ ಅಪ್ಲಿಕೇಶನ್‌ನಲ್ಲಿನ ಜಾಹಿರಾತು ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದೆ. ಮೆಸೇಜ್‌ ಅಪ್ಲಿಕೇಶನ್‌ ಬಳಸುವಾಗ ಆಗಾಗ ಬರುವ ಜಾಹಿರಾತುಗಳು ಸಾಕಷ್ಟು ಕಿರಿಕಿರಿ ಎನಿಸಿಬಿಡುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡುವುದಕ್ಕೆ ಗೂಗಲ್‌ ಮುಂದಾಗಿದೆ. ವಿಶೇಷವಾಗಿ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರಿಗೆ ಪ್ರಮೋಷನಲ್‌ ಸಂದೇಶಗಳನ್ನು ಕಳುಹಿಸುವಲ್ಲಿ ಹೊಸ ಪರಿಹಾರಕ್ಕೆ ಮುಂದಾಗಿದೆ. ಹಾಗಾದ್ರೆ ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಜಾಹಿರಾತು ಸಮಸ್ಯೆಯನ್ನು ಹೇಗೆ ಪರಿಹರಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮೆಸೇಜ್‌ ಅಪ್ಲಿಕೇಶನ್ ಕೆಲವು ವರ್ಷಗಳ ಹಿಂದೆ ರಿಚ್ ಕಮ್ಯುನಿಕೇಷನ್ ಸರ್ವಿಸಸ್ (RCS) ಸೇವೆಯನ್ನು ಪಡೆದುಕೊಂಡಿದೆ. ಇದು ಇತರ ಬಳಕೆದಾರರಿಗೆ SMS ಮೂಲಕ ಚಿತ್ರಗಳು ಮತ್ತು ಎಮೋಜಿಗಳನ್ನು ಸೆಂಡ್‌ ಮಾಡಲು ನಿಮಗೆ ಅನುಮತಿಸುತ್ತದೆ. ಇದನ್ನು ನೀವು ಮೆಸೇಜ್‌ ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಂದ ಸಕ್ರಿಯಗೊಳಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಶೀಲಿಸಿದ ವ್ಯಾಪಾರ ಖಾತೆಗಳಿಂದ ಸ್ಪ್ಯಾಮ್ ಸಂದೇಶಗಳು ಜಾಸ್ತಿಯಾಗುತ್ತಿವೆ. ಈ ಜಾಹೀರಾತುಗಳಲ್ಲಿ ಹೆಚ್ಚಿನವು ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಪೂರ್ವ-ಅನುಮೋದಿತ ಸಾಲಗಳ ಬಗ್ಗೆಗಿನ ಹೆಚ್ಚಿನ ಸಂದೇಶಗಳು ತುಂಬಿ ಹೋಗುತ್ತಿವೆ.

ರೀತಿಯ

ಈ ರೀತಿಯ ಫೀಚರ್ಸ್‌ಗಳನ್ನು ಹಸ್ತಚಾಲಿತವಾಗಿ ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಕೂಡ ಗೂಗಲ್‌ ನೀಡಿದೆ. ಆದರೆ ಜಾಹಿರಾತು ಸಂದೇಶಗಳ ಹಾವಳಿ ಜಾಸ್ತಿಯಾಗಿರುವುದರಿಂದ ಗೂಗಲ್‌ ಹೊಸ ಅಪ್ಡೇಟ್‌ನಲ್ಲಿ ಈ ಫೀಚರ್ಸ್‌ ಅನ್ನು ಸಂಪೂರ್ಣವಾಗಿ ನಿಲ್ಲಿಸಲು ಮುಂದಾಗಿದೆ. ಸದ್ಯ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಅಪ್ಡೇಟ್‌ ಅನ್ನು ಪಡೆಯಬಹುದಾಗಿದೆ. ಈ ಹೊಸ ಅಪ್ಡೇಟ್‌ ಮೂಲಕ RCS ಮಾರುಕಟ್ಟೆಯಲ್ಲಿ ಆಪಲ್‌ ಐಮೆಸೇಜ್‌ ನೊಂದಿಗೆ ಸ್ಪರ್ಧಿಸಲು ಗೂಗಲ್‌ ಮುಂದಾಗಿದೆ. ಸದ್ಯ ಜಾಹೀರಾತುಗಳು ಭಾರತದಲ್ಲಿನ ಬಳಕೆದಾರರಿಗೆ ಮಾತ್ರ ಗೋಚರಿಸುತ್ತವೆ ಮತ್ತು ಇತರ ಮಾರುಕಟ್ಟೆಗಳಲ್ಲಿ ಈ ರೀತಿಯ ಸಮಸ್ಯೆಯ ಬಗ್ಗೆ ವರದಿಯಾಗಿಲ್ಲ.

ಗೂಗಲ್‌

ಇದಲ್ಲದೆ ಗೂಗಲ್‌ ಇತ್ತೀಚಿಗೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮೂಲಕ ಬಳಕೆದಾರರ ಕೆಮ್ಮು ಮತ್ತು ಗೊರಕೆಗಳನ್ನು ಟ್ರ್ಯಾಕ್‌ ಮಾಡುವ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಗೂಗಲ್ ಹೆಲ್ತ್ ಸ್ಟಡೀಸ್ ಅಪ್ಲಿಕೇಶನ್‌ನ ಇತ್ತೀಚಿನ ಅಪ್‌ಡೇಟ್‌ನ ಎಪಿಕೆ ಟಿಯರ್‌ಡೌನ್‌ನಲ್ಲಿ ಈ ಫೀಚರ್ಸ್‌ಗಳನ್ನು ಅಭಿವೃದ್ಧಿ ಪಡಿಸುತ್ತಿರುವುದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇನ್ನು ಈ ಹೊಸ ಫೀಚರ್ಸ್‌ಗಳು 'ಸ್ಲೀಪ್ ಆಡಿಯೋ ಕಲೆಕ್ಷನ್' ಅಧ್ಯಯನದ ಒಂದು ಭಾಗವಾಗಿದ್ದು, ಸದ್ಯಕ್ಕೆ ಗೂಗಲ್‌ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದೆ. ಇನ್ನು ಗೂಗಲ್‌ನ ಹೆಲ್ತ್‌ ಸೆನ್ಸಾರ್‌ ಟೀಂ ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಅಪ್ಡೇಟ್‌ ಸೆನ್ಸಾರ್‌ ಕ್ಯಾಪಬ್ಲಿಟಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದೆ. ಇದು ಬಳಕೆದಾರರಿಗೆ ಅವರ ನಿದ್ರೆಯ ಮಾದರಿಯ ಅರ್ಥಪೂರ್ಣ ಒಳನೋಟವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಂದರೆ, ಗೊರಕೆ ಪತ್ತೆ ಮತ್ತು ನಿದ್ರೆ ಪತ್ತೆಹಚ್ಚುವಿಕೆ ಬೆಂಬಲಿತ ಆಂಡ್ರಾಯ್ಡ್‌ ಮತ್ತು ಪಿಕ್ಸೆಲ್‌ ಫೋನ್‌ಗಳಲ್ಲಿ 'ಬೆಡ್‌ಸೈಡ್ ಮಾನಿಟರಿಂಗ್' ಫೀಚರ್ಸ್‌ಗಳು ಲಭ್ಯವಾಗಲಿದೆ. ಇದರಿಂದ ನಿಮ್ಮ ಗೊರಕೆ ಹಾಗೂ ಕೆಮ್ಮಿನ ಪ್ರಮಾಣವನ್ನು ನೀವು ತಿಳಿಯಲು ಸಾದ್ಯವಾಗಲಿದೆ. ಈ ಹೊಸ ಫೀಚರ್ಸ್‌ಗಳು 'ಗೌಪ್ಯತೆ ಕಾಪಾಡುವ' ರೀತಿಯಲ್ಲಿ ನಿಮ್ಮ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ

Best Mobiles in India

English summary
Google has admitted to the issues of ads plaguing its Messages app in India:report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X