ಗೂಗಲ್‌ ಚಾಟ್‌ ಅನ್ನು ಜಿಮೇಲ್‌ಗೆ ಸಂಯೋಜಿಸಲು ಗೂಗಲ್‌ ಪ್ಲ್ಯಾನ್‌!

|

ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೊದೇ ಗೂಗಲ್. ಅಷ್ಟರ ಮಟ್ಟಿಗೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಇಂದು ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಆಗಿದೆ. ಸದ್ಯ ಗೂಗಲ್‌ ಈಗಾಗಲೇ ಹಲವಾರು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಇದೀಗ ಗೂಗಲ್‌ ಚಾಟ್‌ ಮತ್ತು ಗೂಗಲ್‌ ಮೀಟ್ ಸೇರಿದಂತೆ ವೀಡಿಯೊ ಕರೆಗಾಗಿ ಜಿಮೇಲ್‌ ಅಪ್ಲಿಕೇಶನ್ ಎಲ್ಲಾ ಸೇವೆಗಳಿಗೆ ಒಂದೇ ಅಪ್ಲಿಕೇಶನ್‌ ಲಬ್ಯವಾಗಬಹುದು ಎಂದು ಹೇಳಲಾಗ್ತಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ Google ಚಾಟ್ ಅನ್ನು ಶೀಘ್ರದಲ್ಲೇ Android ಗಾಗಿ Gmail ಮೊಬೈಲ್ ಅಪ್ಲಿಕೇಶನ್‌ಗಳೊಂದಿಗೆ ಸಂಯೋಜಿಸಬಹುದು ಎಂದು ಹೇಳಲಾಗ್ತಿದೆ. ಗೂಗಲ್ ಪ್ಲೇಸ್ಟೋರ್‌ಗೆ ಅಪ್‌ಲೋಡ್ ಮಾಡಿದ ಅಪ್ಲಿಕೇಶನ್‌ನ ಆವೃತ್ತಿಯನ್ನು ಇದು ವಿಶ್ಲೇಷಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಪಿಕೆಗಳು ಎಂದೂ ಕರೆಯಲ್ಪಡುವ ಈ ಡಿಕಾಂಪ್ಲೈಡ್‌ ಫೈಲ್‌ಗಳು ಹೊಸ ಏಕೀಕರಣದ ಭಾಗವಾಗಿ ಚಾಟ್ ಬರಬಹುದು ಎಂದು ಸೂಚಿಸುವ ಕೋಡ್‌ನ ಸ್ಟ್ರಿಂಗ್ಸ್‌ ಬಗ್ಗೆ ವರದಿಯಾಗಿದೆ. ಅಷ್ಟಕ್ಕೂ ಏನಿದು ಅನ್ನೊದರ ವಿವರಣೆಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಇನ್ನು ಈ ಹೊಸ ಏಕೀಕರಣವು ಕಾರ್ಯರೂಪಕ್ಕೆ ಬರಬಹುದು ಅಥವಾ ಇಲ್ಲದಿರಬಹುದು ಎಂದು ವರದಿಯಲ್ಲಿ ಹೇಳಲಾಗ್ತಿದೆ. ಅಲ್ಲದೆ 2020.06 ಆವೃತ್ತಿಯು ಗೂಗಲ್ ಮೀಟ್ ಜೊತೆಗೆ "ಚಾಟ್" ಮತ್ತು "ರೂಮ್‌ಗಳು" ಗಾಗಿ ಆನ್‌ಬೋರ್ಡಿಂಗ್ ಸ್ಟ್ರಿಂಗ್ಸ್‌ಗಳನ್ನು ಹೊಂದಿದೆ. ಒಂದರಿಂದ ಒಂದು ಸಭೆಗಳಿಗೆ ಚಾಟ್ ಸೂಕ್ತವಾಗಿದ್ದರೆ, ಕೊಠಡಿಗಳು ಸಹಯೋಗವನ್ನು ಹೊಂದಿಕೊಳ್ಳುತ್ತವೆ. ಅಲ್ಲದೆ ಬಳಕೆದಾರರು ಗ್ರಾಹಕ ಖಾತೆಯನ್ನು ಅಥವಾ ಉದ್ಯಮ ಖಾತೆಯನ್ನು ಬಳಸಲು ಬಯಸುತ್ತೀರಾ ಎಂದು ಕೇಳುವ ಪರಿಚಯಾತ್ಮಕ ಅಪೇಕ್ಷೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಪ್ಲಿಕೇಶನ್‌

ಇದಲ್ಲದೆ, ಅಪ್ಲಿಕೇಶನ್‌ಗಳನ್ನು ಬದಲಾಯಿಸದೆ ಸಂಪರ್ಕಿಸಲು ಮತ್ತು ಸಹಕರಿಸಲು ಜಿಮೇಲ್‌ನಲ್ಲಿ ವಾಟ್ಸಾನ್ಯೂ ಎಂದು ನೇರವಾಗಿ ಜಾಹೀರಾತು ನಿಡಲಾಗ್ತಿದೆ. ಜೊತೆಗೆ ಬಳಕೆದಾರರು ಒಂದು ಪ್ಲಾಟ್‌ಫಾರ್ಮ್‌ನಿಂದ ಅನೇಕ ಜಿಮೇಲ್ ಪ್ರಾಡಕ್ಟ್‌ಗಳನ್ನ ನಿರ್ವಹಿಸಬಹುದಾಗಿದೆ. ಅಲ್ಲದೆ ಅಂತಿಮವಾಗಿ ಬಳಕೆದಾರರು ಸೇವೆಗಳು / ಟ್ಯಾಬ್‌ಗಳನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ ಎಂದು ವರದಿ ಹೇಳುತ್ತದೆ. ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿನ ಜಿಮೇಲ್ ಅಪ್ಲಿಕೇಶನ್‌ಗೆ ಗೂಗಲ್ ಮೀಟ್ ಅನ್ನು ಶೀಘ್ರದಲ್ಲೇ ಸಂಯೋಜಿಸುವುದಾಗಿ ಗೂಗಲ್ ಹೇಳಿಕೊಂಡಿದೆ. ಇದರಿಂದಾಗಿ ನೀವು ಪ್ರತ್ಯೇಕ ಮೀಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದೆಯೇ ಬಳಕೆದಾರರು ಜಿಮೇಲ್‌ ಮೂಲಕವೇ ವೀಡಿಯೊ ಕರೆಗಳನ್ನು ಮಾಡಬಹುದಾಗಿದೆ.

ಗೂಗಲ್

ಇನ್ನು ಮೀಟ್ ಅಪ್ಲಿಕೇಶನ್ ಹೊಂದಿರುವ ಬಳಕೆದಾರರು ಅದನ್ನು ಸಹ ಬಳಸಬಹುದು. ಬಳಕೆದಾರರು ಅಪ್ಲಿಕೇಶನ್ ಬಳಸಿ ಕರೆಗಳನ್ನು ಮಾಡಿದಾಗಲೆಲ್ಲಾ, ಅದನ್ನು Gmail ಗೆ ಮರುನಿರ್ದೇಶಿಸುವುದಿಲ್ಲ. ಜೊತೆಗೆ ಗೂಗಲ್ ಮೀಟ್ ಅನ್ನು ಮೊದಲು ಡೆಸ್ಕ್‌ಟಾಪ್‌ನಲ್ಲಿ ಅದರ ಬಳಕೆದಾರರಿಗಾಗಿ ಸಂಯೋಜಿಸಲಾಗಿದೆ. ಈ ಆಯ್ಕೆಯು ಪ್ರಸ್ತುತ Gmail ಹೊಂದಿರುವ ಎಲ್ಲಾ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ. Gmail ಖಾತೆಯನ್ನು ಹೊಂದಿರದ ಬಳಕೆದಾರರಿಗಾಗಿ Google ಮೀಟ್ ಸಹ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆ ಮೀಟ್‌, ಇಲ್ಲವೇ ಚಾಟ್‌ ಆಗಲಿ ಎಲ್ಲವೂ ಸಹ ಗೂಗಲ್‌ ಜಿಮೇಲ್‌ ಮೂಲಕವೇ ನಡೆಯುವಂತೆ ಮಾಡಲು ಗೂಗಲ್‌ ಮುಂದಾಗಿದೆ.

Most Read Articles
Best Mobiles in India

English summary
Google may integrate Chat with the Gmail app, a report suggests. The 'denoiser' or the noise cancellation feature will be rolled out soon for Google Meet.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X