ಏರ್‌ಟೆಲ್‌ನಲ್ಲಿ ಹೂಡಿಕೆ ಮಾಡಿದ ಗೂಗಲ್‌! ಜಿಯೋ ಟೆಲಿಕಾಂಗೆ ಬಿಗ್‌ ಶಾಕ್‌?

|

ಇತ್ತೀಚಿನ ದಿನಗಳಲ್ಲಿ ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಪ್ರಮುಖ ಕಂಪೆನಿಗಳು ಕೂಡ ಕೈಗೆಟಕುವ ಸ್ಮಾರ್ಟ್‌ಫೋನ್‌ ಪರಿಚಯಿಸಲು ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಗೂಗಲ್‌ ಸಂಸ್ಥೆ ಇದೀಗ ಏರ್‌ಟೆಲ್‌ನಲ್ಲಿ 7,500 ಕೋಟಿ ರೂ.ಗಿಂತ ಹೆಚ್ಚಿನ $1 ಶತಕೋಟಿಯಷ್ಟು ಹೂಡಿಕೆಯನ್ನು ಮಾಡಿದೆ ಎಂದು ವರದಿಯಾಗಿದೆ. ಈ ಹೂಡಿಕೆ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ನ ಒಂದು ಭಾಗವಾಗಿದೆ ಎಂದು ಹೇಳಲಾಗಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ನಲ್ಲಿ ಗೂಗಲ್ ಕಂಪೆನಿ ಹೂಡಿಕೆ ಮಾಡಿದೆ. ಗೂಗಲ್‌ 1.28% ಮಾಲೀಕತ್ವಕ್ಕೆ ಬದಲಾಗಿ $700 ಮಿಲಿಯನ್ ಹೂಡಿಕೆ ಮಾಡಲಿದೆ. ಆದರೆ $300 ಮಿಲಿಯನ್ ವರೆಗೆ ಗೂಗಲ್ ಮತ್ತು ಏರ್‌ಟೆಲ್ ನಡುವಿನ ಒಪ್ಪಂದ ಬಹು-ವರ್ಷದ ವಾಣಿಜ್ಯ ಒಪ್ಪಂದಗಳ ಭಾಗವಾಗಿರುತ್ತದೆ ಎನ್ನಲಾಗಿದೆ. ಇನ್ನು ಈ ಹೂಡಿಕೆ ಏರ್‌ಟೆಲ್‌ ಕಂಪನಿಯು ಕೈಗೆಟುಕುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಹಾಯ ಮಾಡಲಿದೆ. ಇದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚು ಸುಲಭವಾಗಿ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಏರ್‌ಟೆಲ್‌ ಮತ್ತು ಗೂಗಲ್‌ ನಡುವಿನ ಒಪ್ಪಂದದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಏರ್‌ಟೆಲ್‌ನಲ್ಲಿ ಹೂಡಿಕೆ ಮಾಡಿರುವುದರಿಂದ ಏರ್‌ಟೆಲ್‌ ಜಿಯೋಗೆ ಸೆಡ್ಡು ಹೊಡೆಯಲು ಸಾಧ್ಯವಾಗಲಿದೆ. ಈ ಒಪ್ಪಂದವು ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸಬಹುದಾಗಿದೆ. ಇದರಲ್ಲಿ ತನ್ನ ಮೊದಲ ವಾಣಿಜ್ಯ ಒಪ್ಪಂದದ ಭಾಗವಾಗಿ, ಏರ್‌ಟೆಲ್‌ನ ವ್ಯಾಪಕ ಕೊಡುಗೆಗಳನ್ನು ನಿರ್ಮಿಸಲು ಏರ್‌ಟೆಲ್ ಮತ್ತು ಗೂಗಲ್ ಒಟ್ಟಾಗಿ ಕೆಲಸ ಮಾಡಲಿದೆ. ಇದು ನವೀನ ಕೈಗೆಟುಕುವ ಕಾರ್ಯಕ್ರಮಗಳ ಮೂಲಕ ಗ್ರಾಹಕರಿಗೆ ಆಂಡ್ರಾಯ್ಡ್-ಸಕ್ರಿಯಗೊಳಿಸಿದ ಸಾಧನಗಳ ಶ್ರೇಣಿಯನ್ನು ಒಳಗೊಂಡಿದೆ ಎಂದು ಭಾರ್ತಿ ಏರ್‌ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಏರ್‌ಟೆಲ್

ಇನ್ನು ಏರ್‌ಟೆಲ್ ಮತ್ತು ಗೂಗಲ್ ನಡುವಿನ ಈ ನವೀಕೃತ ಪಾಲುದಾರಿಕೆಯು ರಿಲಯನ್ಸ್ ಜಿಯೋಗೆ ದೊಡ್ಡ ಹೊಡೆತ ಎಂದು ಹೇಳಲಾಗಿದೆ. ಕಳೆದ ವರ್ಷ, ಗೂಗಲ್‌ನ ವಿಶೇಷ ಪಾಲುದಾರಿಕೆಯಲ್ಲಿ ಜಿಯೋ ಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡಿತ್ತು. ಇದು ಭಾರತದ ಕಡಿಮೆ-ಮಟ್ಟದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನಿರ್ಣಾಯಕವಾಗಿದೆ. ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಏರ್‌ಟೆಲ್‌ ಡೀಪ್‌ ಆಗಿ ತಲುಪಲು ಗೂಗಲ್ ಯಾವ ಮಾರ್ಗಗಳಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ಏರ್‌ಟೆಲ್ ನಿರ್ದಿಷ್ಟಪಡಿಸದಿದ್ದರೂ, ಏರ್‌ಟೆಲ್ ಜಿಯೋ ಟೆಲಿಕಾಂ ಅನ್ನು ಸಮರ್ಥವಾಗಿ ಎದುರಸಿಲು ಈ ಒಪ್ಪಂದ ಸಹಾಯಕವಾಗಲಿದೆ.

ಗೂಗಲ್‌

ಇದಲ್ಲದೆ ಗೂಗಲ್‌ನ ಹೂಡಿಕೆಯು 5G ಮತ್ತು ಇತರ ಮಾನದಂಡಗಳಿಗಾಗಿ ಏರ್‌ಟೆಲ್‌ಗೆ ಸಹಾಯ ಮಾಡಲಿದೆ. ಏರ್‌ಟೆಲ್ ಈಗಾಗಲೇ ಗೂಗಲ್‌ನ 5G-ಸಿದ್ಧ ವಿಕಸನಗೊಂಡ ಪ್ಯಾಕೆಟ್ ಕೋರ್ ಮತ್ತು ಸಾಫ್ಟ್‌ವೇರ್ ಡಿಫೈನ್ಡ್ ನೆಟ್‌ವರ್ಕ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದೆ. ಇದು ತಮ್ಮ ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್ ಅನುಭವವನ್ನು ನೀಡಲು ಗೂಗಲ್‌ನ ನೆಟ್‌ವರ್ಕ್ ವರ್ಚುವಲೈಸೇಶನ್ ಪರಿಹಾರಗಳ ನಿಯೋಜನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಪಾಲುದಾರಿಕೆಯು ಭಾರತದಲ್ಲಿ ತನ್ನ ಕ್ಲೌಡ್ ಎಕೋ ಸಿಸ್ಟಂ ಅನ್ನು ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಏರ್‌ಟೆಲ್‌ಗೆ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಗೂಗಲ್

ಏರ್‌ಟೆಲ್ ಮತ್ತು ಗೂಗಲ್ ಹೊಸ ಪ್ರಾಡಕ್ಟ್‌ಗಳ ಮೂಲಕ ಭಾರತದ ಡಿಜಿಟಲ್ ಲಾಭಾಂಶವನ್ನು ಹೆಚ್ಚಿಸುವ ಗುರಿಯನ್ನು ಒಳಗೊಂಡಿದೆ. ಭವಿಷ್ಯದ ಸಿದ್ಧ ನೆಟ್‌ವರ್ಕ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಕೊನೆಯ ಮೈಲಿ ವಿತರಣೆ ಮತ್ತು ಪಾವತಿಗಳ ಪರಿಸರ ವ್ಯವಸ್ಥೆಯೊಂದಿಗೆ, ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಆಳ ಮತ್ತು ಅಗಲವನ್ನು ಹೆಚ್ಚಿಸಲು ನಾವು ಗೂಗಲ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಭಾರ್ತಿ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಹಾಗೆಯೇ ಏರ್‌ಟೆಲ್ ಭಾರತದ ಡಿಜಿಟಲ್ ಭವಿಷ್ಯವನ್ನು ರೂಪಿಸುವ ಪ್ರಮುಖ ಪ್ರವರ್ತಕವಾಗಿದೆ ಮತ್ತು ಸಂಪರ್ಕವನ್ನು ವಿಸ್ತರಿಸುವ, ಹೆಚ್ಚಿನ ಭಾರತೀಯರಿಗೆ ಇಂಟರ್ನೆಟ್‌ಗೆ ಸಮಾನವಾದ ಪ್ರವೇಶವನ್ನು ಖಾತ್ರಿಪಡಿಸುವ ಹಂಚಿಕೆಯ ದೃಷ್ಟಿಯಲ್ಲಿ ಏರ್‌ಟೆಲ್‌ ಜೊತೆಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದು ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಹೇಳಿಕೆ ನೀಡಿದ್ದಾರೆ.

Best Mobiles in India

English summary
Airtel has announced that the investment from Google will be used to focus on access to affordable smartphones across price ranges.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X