ಭಾರತದಲ್ಲಿ 75,000 ಕೋಟಿ ಹೂಡಿಕೆ ಮಾಡಲು ಗೂಗಲ್‌ ಪ್ಲ್ಯಾನ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ಭಾರತದಲ್ಲಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ 75,000 ಕೋಟಿ ರೂ ($10 billion) ಹೂಡಿಕೆ ಮಾಡಲಿದೆ ಎಂದು ಗೂಗಲ್‌ ಕಂಪೆನಿ ಘೊಷಣೆ ಮಾಡಿದೆ. ಸದ್ಯ ನವದೆಹಲಿಯಲ್ಲಿ ನಡೆಯುತ್ತಿರುವ ಗೂಗಲ್‌ ಕಂಪನಿಯ ಆರನೇ ಆವೃತ್ತಿಯ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಈ ಬಗ್ಗೆ ಅದಿಕೃತ ಘೋಷಣೆ ಮಾಡಿದ್ದಾರೆ. ಇನ್ನು ಇದಕ್ಕಾಗಿ 'ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್' ಅನ್ನು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ.

ಗೂಗಲ್‌ ಫಾರ್‌ ಇಂಡಿಯಾ

ಹೌದು, ಭಾರತದಲ್ಲಿ ನಡೆಯುತ್ತಿರುವ ಗೂಗಲ್‌ ಫಾರ್‌ ಇಂಡಿಯಾ ಕಾರ್ಯಕ್ರಮದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತದ ಡಿಜಿಟಲ್‌ ಕನಸಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಡಿಜಿಟಲ್‌ ಭವಿಷ್ಯದ ಬಗ್ಗೆ ಹೊಸ ಅದ್ಯಾಯವನ್ನ ಶುರುಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಗೂಗಲ್‌ ಭಾರತದಲ್ಲಿ ಕೈ ಗೊಳ್ಳಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಗೂಗಲ್‌ ಭಾರತದಲ್ಲಿ ಡಿಜಿಟಯಸೇಶನ್‌ ಭವಿಷ್ಯದ ಕನಸ್ಸಿಗೆ ಬೆಂಬಲ ನೀಡಿದ್ದು, ತನ್ನ ಈಕ್ವಿಟಿ ಹೂಡಿಕೆಗಳು (ಕ್ಯಾಪಿಟಲ್ ಜಿ.), ಪಾಲುದಾರಿಕೆಗಳು, operational ಮತ್ತು ಮೂಲಸೌಕರ್ಯ ಪರಿಸರ ವ್ಯವಸ್ಥೆಯ ಹೂಡಿಕೆಗಳ ಮೂಲಕ ಭಾರತದಲ್ಲಿ 75,000 ಕೋಟಿ ಹೂಡಿಕೆಯನ್ನ ಮಾಡಲಿದ್ದೆವೆ ಎಂದು ಗೂಗಲ್‌ ಕಂಪೆನಿ ಹೇಳಿದೆ.

ಗೂಗಲ್

ಇನ್ನು ಈ ಹೂಡಿಕೆಗಳು ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರವಾಗಿರಿಸಿಕೊಂಡಿದೆ. ಅದರಲ್ಲಿ ಮೊದಲಿಗೆ ಇದು ಹಿಂದಿ, ಪಂಜಾಬಿ, ತಮಿಳು ಅಥವಾ ಕನ್ನಡ ಇನ್ನಾವುದೇ ಭಾರತೀಯರಿಗೆ ತಮ್ಮದೇ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸುವುದನ್ನು ಒಳಗೊಂಡಿದೆ. ಎರಡನೆಯದಾಗಿ, ಭಾರತದ ವಿಶಿಷ್ಟ ಅಗತ್ಯಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ನಿರ್ಮಿಸಲು ಗೂಗಲ್ ಗಮನ ಹರಿಸಲಿದೆ ಎಂದು ಹೇಳಲಾಗಿದೆ. ಮೂರನೆಯದಾಗಿ, ಇದು ತಮ್ಮ ಡಿಜಿಟಲ್ ರೂಪಾಂತರಕ್ಕಾಗಿ ವ್ಯವಹಾರಗಳನ್ನು ಸಶಕ್ತಗೊಳಿಸಲು ಸಹಾಯ ಮಾಡತ್ತದೆ. ನಾಲ್ಕನೆಯದಾಗಿ, ಸಾಮಾಜಿಕ ಹಿತದೃಷ್ಟಿಯಿಂದ ತಂತ್ರಜ್ಞಾನ ಮತ್ತು ಎಐ ಅನ್ನು ಸದುಪಯೋಗಪಡಿಸಿಕೊಳ್ಳಲು ಗೂಗಲ್‌ ಮುಂದಾಗಿದೆ. ಇದರಲ್ಲಿ ಆರೋಗ್ಯ, ಶಿಕ್ಷಣ, ಮತ್ತು ಕೃಷಿ ಮುಂತಾದ ಕ್ಷೇತ್ರಗಳು ಸಹ ಸೇರಿಕೊಂಡಿವೆ.

ಗೂಗಲ್‌ ಫಾರ್‌ ಇ0ಡಿಯಾ

ಗೂಗಲ್‌ ಫಾರ್‌ ಇ0ಡಿಯಾ ಈವೆಂಟ್‌ನಲ್ಲಿ ಮಾತನಾಡುತ್ತ ಗೂಗಲ್ ಸಿಇಒ ಸುಂದರ್ ಪಿಚೈ ಭಾರತ ಮತ್ತು ಪ್ರಪಂಚದಾದ್ಯಂತ ನಾವು ಇಂದು ಕೊರೋನದಂತಹ ಕಠಿಣ ಕ್ಷಣವನ್ನು ಎದುರಿಸುತ್ತಿದ್ದೇವೆ. ಇದು ನಮ್ಮ ಆರೋಗ್ಯಕ್ಕೆ ಮತ್ತು ನಮ್ಮ ಆರ್ಥಿಕತೆಗೆ ಸವಾಲು ಆಗಿದೆ. ಇದರಿಂದ ನಾವು ಹೇಗೆ ಕೆಲಸ ಮಾಡುತ್ತೇವೆ ಮತ್ತು ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಪುನರ್ವಿಮರ್ಶಿಸಲು ಅವಕಾಶ ನೀಡಿದಂತೆ ಆಗಿದೆ. ಇದೆಲ್ಲವೂ ಕೆಲವು ಸಮಯಗಳವರೆಗ ಮಾತ್ರವಾಗಿದ್ದು ಮುಂದಿನ ಆವಿಷ್ಕಾರದ ವೆವ್‌ನಿಂದ ಭಾರತಕ್ಕೆ ಲಾಭವಾಗುವುದನ್ನು ಖಾತ್ರಿಪಡಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಡಿಜಿಟೈಸೇಶನ್ ಫಂಡ್

ಇನ್ನು ಡಿಜಿಟೈಸೇಶನ್ ಫಂಡ್ ನಿಧಿಯ ಹೊರತಾಗಿ, ಶಿಕ್ಷಣ, ವ್ಯವಹಾರಗಳು ಮತ್ತು ಪಾವತಿಗಳಿಗಾಗಿ ಭಾರತವು ಡಿಜಿಟಲ್ ಪರಿಕರಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿರುವ ಪಿಚೈ ಭಾರತದ ಡಿಜಿಟಲ್‌ ಭವಿಷ್ಯ ಉತ್ತಮ ಗುರಿಯತ್ತ ಸಾಗಿದೆ ಎಂದಿದ್ದಾರೆ. ಅಲ್ಲದೆ ಗೂಗಲ್ ಪೇನಲ್ಲಿ, ಭಾರತದ ಭೀಮ್ ಯುಪಿಐ ಪಾವತಿಗಳನ್ನು ಡಿಜಿಟಲೀಕರಣಗೊಳಿಸುವುದು ಹೇಗೆ ಎಂಬುದರ ಕುರಿತು ಜಾಗತಿಕ ಮಾನದಂಡವನ್ನು ನಿಗದಿಪಡಿಸಿದೆ ಮತ್ತು ಈಗ ಅದು ಜಾಗತಿಕ ಉತ್ಪನ್ನವನ್ನು ನಿರ್ಮಿಸಲು ಕಂಪನಿಗೆ ಸಹಾಯ ಮಾಡುತ್ತಿದೆ ಅನ್ನುವುದರ ಬಗ್ಗೆ ವಿಸ್ತೃತ ಮಾಹಿತಿ ಹಂಚಿಕೊಂಡಿದ್ದಾರೆ.

ಗೂಗಲ್‌ ಫಾರ್‌ ಇಂಡಿಯಾ

ಇನ್ನು ಗೂಗಲ್‌ ಫಾರ್‌ ಇಂಡಿಯಾ 2020 ಈವೆಮಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಡ ಸಸುಂದರ್‌ ಪಿಚೈ ಅವರ ಜೊತೆಗೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಗೂಗಲ್‌ನಿಂದ ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ಟಿಕ್ನಾಲಜಿ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ರು. ಇದಕ್ಕೆ ಪ್ರತಿಯಾಗಿ ಸುಂದರ್‌ ಪಿಚೈ ಡಿಜಿಟಲ್ ಇಂಡಿಯಾಕ್ಕಾಗಿ ಮೋದಿ ಅವರ ದೃಷ್ಟಿಯ ಬಗ್ಗೆ ನಮಗೆ ಬಹಳ ಆಶಾವಾದವಿದ್ದು, ಅದನ್ನು ಇನ್ನಷ್ಟು ಉತ್ತಮ ಪಡಿಸುವತ್ತ ನಮ್ಮ ಹೆಜ್ಜೆ ಇರಲಿದೆ ಎಂದು ಹೇಳಿದ್ದಾರೆ.

Best Mobiles in India

English summary
Pichai addressed the sixth annual edition of "Google for India" virtual event and announced a digitisation fund.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X