ಎಂಟು ವರ್ಷಗಳ ಬಳಿಕ ಹೊಸ ಲೋಗೋ ಪರಿಚಯಿಸಿದ ಗೂಗಲ್‌ ಕ್ರೋಮ್‌!

|

ಪ್ರಸ್ತುತ ದಿನಗಳಲ್ಲಿ ವ್ಯಾಪಕವಾಗಿ ಬಳಸುವ ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಕೂಡ ಒಂದಾಗಿದೆ. ಗೂಗಲ್‌ ಒಡೆತನದ ಗೂಗಲ್‌ ಕ್ರೋಮ್‌ ಬಳಕೆದಾರರ ನೆಚ್ಚಿನ ವೆಬ್‌ ಬ್ರೌಸರ್‌ ಆಗಿದೆ. ಗೂಗಲ್‌ ಕ್ರೋಮ್‌ ಮೂಲಕ ಬ್ರೌಸಿಂಗ್‌ ಮಾಡುವುದು ಸಾಕಷ್ಟು ಸುಲಭವಾಗಿರುವುದರಿಂದ ಎಲ್ಲರ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಇದಕ್ಕೆ ತಕ್ಕಂತೆ ಗೂಗಲ್‌ ಕ್ರೋಮ್‌ ಕೂಡ ತನ್ನ ಬಳಕೆದಾರರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ಕಾಲಕಾಲಕ್ಕೆ ಅಪ್ಡೇಟ್‌ ಕೂಡ ಆಗುತ್ತಿದೆ. ಇದೀಗ ಎಂಟು ವರ್ಷಗಳ ನಂತರ ತನ್ನ ಲೋಗೋವನ್ನು ಬದಲಾಯಿಸಿದೆ.

ಗೂಗಲ್‌ ಕ್ರೋಮ್‌

ಹೌದು, ಗೂಗಲ್‌ ಕ್ರೋಮ್‌ ತನ್ನ ಹೊಸ ಲೋಗೋವನ್ನು ಪರಿಚಯಿಸಲು ಮುಂದಾಗಿದೆ. 2014ರ ನಂತರ ಅಂದರೆ ಎಂಟು ವರ್ಷಗಳ ನಂತರ ತನ್ನ ಹೊಸ ಲೋಗೋ ಪರಿಚಯಿಸುತ್ತಿದೆ. ಲೋಗೋ ಬದಲಾವಣೆಯ ರೂಪ ಸಾಕಷ್ಟು ಸೂಕ್ಷ್ಮವಾಗಿದೆ. ಹೊಸ ಲೋಗೋ ನೋಡುವುದಕ್ಕೆ ಥೇಟ್‌ ಹಳೆಯ ಲೋಗೋದಂತೆ ಕಂಡರೂ ಕೂಡ ಪ್ರತಿ ಬಣ್ಣದ ನಡುವಿನ ಗಡಿಗಳಲ್ಲಿ ಶ್ಯಾಡೋ ಸೇರಿಸುವ ಬದಲು, ಅವುಗಳನ್ನು ಸ್ಕ್ರೀನ್‌ನಿಂದ "ರೈಸಿಂಗ್‌" ಮಾಡಲಾಗಿದೆ. ಹಾಗಾದ್ರೆ ಗೂಗಲ್‌ ಕ್ರೋಮ್‌ನ ಹೊಸ ಲೋಗೋದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಕ್ರೋಮ್‌

ಗೂಗಲ್‌ ಕ್ರೋಮ್‌ನ ಹೊಸ ಲೋಗೋದಲ್ಲಿ ಪ್ರತಿ ಬಣ್ಣದ ನಡುವಿನ ಗಡಿಯನ್ನು ರೈಸಿಂಗ್‌ ಮಾಡಲಾಗಿದೆ. ಇದರಿಂದ ಲೋಗೋದಲ್ಲಿರುವ ಕೆಂಪು, ಹಳದಿ ಮತ್ತು ಹಸಿರು ಬಣ್ಣ ಈಗ ಸರಳವಾಗಿ ಸಮತಟ್ಟಾಗಿದೆ. ಇನ್ನು ಈ ಹೊಸ ಬದಲಾವಣೆಯಿಂದಾಗಿ ಇದೀಗ ಲೋಗೋದಲ್ಲಿರುವ ಬ್ಲೂ ಕಲರ್‌ ಸರ್ಕಲ್‌ ದೊಡ್ಡದಾಗಿ ಕಾಣಲಿದೆ. ಇದರಿಂದ ಲೋಗೋದಲ್ಲಿನ ಬಣ್ಣಗಳು ಹೆಚ್ಚು ಆಕರ್ಷಕವಾಗಿ ಕಾಣತ್ತವೆ. ಹಾಗಂತ ಗೂಗಲ್‌ ಕ್ರೋಮ್‌ನ ಮೇನ್‌ ಲೋಗೋ ಎಲ್ಲಾ ಸಿಸ್ಟಂಗಳಲ್ಲಿಯೂ ಒಂದೇ ರೀತಿ ಕಾಣಿಸುವುದಿಲ್ಲ ಬದಲಿಗೆ ಬಿನ್ನ ಮಾದರಿಯಲ್ಲಿ ಕಾಣಲಿದೆ.

ಕ್ರೋಮ್‌

ಕ್ರೋಮ್‌ ಒಎಸ್‌ನಲ್ಲಿ, ಇತರ ಸಿಸ್ಟಂ ಐಕಾನ್‌ಗಳಿಗೆ ಪೂರಕವಾಗಿ ಲೋಗೋ ಹೆಚ್ಚು ವರ್ಣರಂಜಿತವಾಗಿ ಕಾಣುತ್ತದೆ. ಆದರೆ MacOS ನಲ್ಲಿ, ಲೋಗೋ ಸಣ್ಣ ನೆರಳನ್ನು ಹೊಂದಿರುತ್ತದೆ. ಇದು ಡಾಕ್‌ನಿಂದ "ಪಾಪಿಂಗ್ ಔಟ್" ಆಗುತ್ತಿರುವಂತೆ ಗೋಚರಿಸುತ್ತದೆ. ಇನ್ನು ವಿಂಡೋಸ್‌ 10 ಮತ್ತು 11 ಆವೃತ್ತಿಯು ಹೆಚ್ಚು ಡ್ರಾಮಾಟಿಕ್ ಗ್ರೇಡಿಯಂಟ್ ಅನ್ನು ಹೊಂದಿದೆ. ಇದರಿಂದ ಇತರ ವಿಂಡೋಸ್ ಐಕಾನ್‌ಗಳ ಶೈಲಿಯೊಂದಿಗೆ ಹೊಂದಿಕೊಳ್ಳುತ್ತದೆ. ಇದಲ್ಲದೆ ನೀವು ಕ್ರೋಮ್ ಕ್ಯಾನರಿ ಅನ್ನು ಬಳಸಿದರೆ ಹೊಸ ಐಕಾನ್ ಅನ್ನು ಕಾಣಬಹುದು. ಸದ್ಯ ಈ ಹೊಸ ಲೋಗೋ ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

ಗೂಗಲ್‌

ಇನ್ನು ಗೂಗಲ್‌ ಕ್ರೋಮ್‌ ಲೋಗೋದ ಬೀಟಾ ಮತ್ತು ಡೆವಲಪರ್ ಆವೃತ್ತಿಗಳಿಗೆ ಕೆಲವು ಹೊಸ ಐಕಾನ್‌ಗಳು ಸಹ ಲಭ್ಯವಾಗಲಿವೆ. ಇವು iOS ನಲ್ಲಿ ಬೀಟಾ ಅಪ್ಲಿಕೇಶನ್‌ಗಾಗಿ ಬ್ಲೂಪ್ರಿಂಟ್-ಶೈಲಿಯ ಐಕಾನ್ ಆಗಿರುವ ಅತ್ಯಂತ ಡ್ರಾಮಾಟಿಕ್ ಬದಲಾವಣೆಯಾಗಿದೆ. ಇನ್ನು 2008 ರಿಂದ ಇಲ್ಲಿಯವರೆಗೆ, ಕ್ರೋಮ್‌ ಲೋಗೋ ಸಾಕಷ್ಟು ಸರಳವಾಗುತ್ತಿದೆ. ಸಾಕಷ್ಟು ಹೊಳೆಯುವ ತ್ರಿಡಿ ಆಯಾಮದ ಲಾಂಛನವಾಗಿ ಪ್ರಾರಂಭವಾದುದನ್ನು 2D ಚಿಹ್ನೆಯಾಗಿ ಸ್ಕ್ವ್ಯಾಷ್‌ ಮಾಡಲಾಗಿದೆ.

ಗೂಗಲ್‌ ಕ್ರೋಮ್‌ ಸರ್ಚ್‌

ಇದಲ್ಲದೆ ಗೂಗಲ್‌ ಕ್ರೋಮ್‌ ಸರ್ಚ್‌ ಬ್ರೌಸಿಂಗ್‌ನಲ್ಲಿ ಹೆಚ್ಚು ಪ್ರೈವೆಸಿ ಸೆಟ್‌ ಮಾಡುವುದಕ್ಕಾಗಿ ಹೊಸ ಎಪಿಐ ಅನ್ನು ಪರೀಕ್ಷಿಸುತ್ತಿದೆ. ಈ ಹೊಸ ವಿಧಾನ ಪಬ್ಲಿಷರ್ಸ್‌, ಕ್ರಿಯೆಟರ್ಸ್‌ ಮತ್ತು ಇತರ ಡೆವಲಪರ್‌ಗಳಿಗೆ ಜಾಹೀರಾತು ವ್ಯವಹಾರದ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ಸಹಾಯ ಮಾಡಲಿದೆ. ನೀವು ಸರ್ಚ್‌ ಮಾಡುವ ವಿಚಾರದ ಆಧಾರದ ಮೇಲೆ ಬರುವ ಜಾಹಿರಾತುಗಳು ಋಣಾತ್ಮಕ ಪರಿಣಾಂ ಬೀರದಂತೆ ಉತ್ತಮ ಜಾಹಿರಾತು ನೀಡಲಿದೆ. ಇದಕ್ಕಾಗಿ ಗೂಗಲ್ ಕ್ರೋಮ್ ಬ್ರೌಸರ್ ಶೀಘ್ರದಲ್ಲೇ ಥರ್ಡ್-ಪಾರ್ಟಿ ಕುಕೀಗಳನ್ನು ತೆಗೆದುಹಾಕಲಿದೆ ಎನ್ನಲಾಗಿದೆ.

ಗೂಗಲ್‌

ಗೂಗಲ್‌ ಕ್ರೋಮ್‌ನಲ್ಲಿ ಬಳಕೆದಾರರ ನಿಯಂತ್ರಣಗಳನ್ನು ಒಳಗೊಂಡಿರುವ ವಿಷಯಗಳ ಡೆವಲಪರ್ ಪ್ರಯೋಗವನ್ನು ಪ್ರಾರಂಭಿಸಲು ಪ್ಲಾನ್‌ ಮಾಡಿದೆ. ಇದರಿಂದ ವೆಬ್‌ಸೈಟ್ ಡೆವಲಪರ್‌ಗಳು ಮತ್ತು ಜಾಹೀರಾತು ಉದ್ಯಮವನ್ನು ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ ಎಂದು ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದೆ. ಇದು ಬಳಕೆದಾರರ ಕಂಟ್ರೋಲ್‌‌ ಮತ್ತು ಇತರ ತಾಂತ್ರಿಕ ಅಂಶಗಳ ಅಂತಿಮ ವಿನ್ಯಾಸ ಬಳಕೆದಾರರ ಪ್ರತಿಕ್ರಿಯೆ ಮತ್ತು ಪ್ರಯೋಗ ಹಂತದಲ್ಲಿ ಗೂಗಲ್‌ ಏನು ಮಾಡಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
Chrome is changing its logo for the first time since 2014 though the changes are quite subtle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X