ಕೇಬಲ್ ಟಿವಿ ಮೂಲಕ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕ- ಸರ್ಕಾರದ ಚಿಂತನೆ

|

ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ದೇಶದಾದ್ಯಂತ ನೀಡುವ ಗುರಿಯನ್ನು ಹೊಂದಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಈಗಿರುವ ಕೇಬಲ್ ನೆಟ್ ವರ್ಕ್ ಗಳ ಮೂಲಕ ಬ್ರಾಡ್ ಬ್ಯಾಂಡ್ ಸೇವೆಯನ್ನು ಹಳ್ಳಿಗಾಡು ಪ್ರದೇಶಗಳಿಗೆ ಒದಗಿಸುವುದಕ್ಕೆ ಚಿಂತನೆ ನಡೆಸಿದೆ.

10 ಕೋಟಿ ಜನರ ಮನೆಯಲ್ಲಿ ಅಂತರ್ಜಾಲ:

10 ಕೋಟಿ ಜನರ ಮನೆಯಲ್ಲಿ ಅಂತರ್ಜಾಲ:

ಭಾರತದಲ್ಲಿ 19 ಕೋಟಿ ಮಂದಿಯ ಮನೆಯಲ್ಲಿ ಈಗಾಗಲೇ ಟಿವಿ ಕನೆಕ್ಷನ್ ಇದ್ದು ಅದರಲ್ಲಿ 10 ಕೋಟಿ ಮಂದಿಯ ಬಳಿ ಈಗಾಗಲೇ ಕೇಬಲ್ ಟಿವಿ ಚಂದಾದಾರಿಕೆ ಲಭ್ಯವಿದೆ ಹಾಗಾಗಿ ಇವರುಗಳಿಗೆ ಇನ್ಸೆಂಟ್ ಇಂಟರ್ನೆಟ್ ಕನೆಕ್ಟಿವಿಟಿಯನ್ನು ನೀಡುವುದಕ್ಕೆ ಸಾಧ್ಯವಾಗುತ್ತದೆ.

ಸರಾಸರಿ ಅಂತರ್ಜಾಲ ಸೇವೆಯಲ್ಲಿ ಏರಿಕೆ:

ಸರಾಸರಿ ಅಂತರ್ಜಾಲ ಸೇವೆಯಲ್ಲಿ ಏರಿಕೆ:

ಇತ್ತೀಚೆಗೆ ಕೇಬಲ್ ಆಪರೇಟರ್ ಗಳ ಜೊತೆಗೆ ನಡೆದ ಚರ್ಚೆಯಲ್ಲಿ ಇಂತಹ ಒಂದು ಸಂಪರ್ಕವನ್ನು ಸಾಧಿಸಿದ್ದೇ ಆದಲ್ಲಿ ವಿಶ್ವದಾದ್ಯಂತ ಇರುವ ಸರಾಸರಿ 46% ಸ್ಥಿರ ಸಂಪರ್ಕ ಜಾಲಗಳ ಮೂಲಕ ಮಟ್ಟವನ್ನು 7% ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ.

ಗ್ರಾಹಕರಿಗೆ ಏನು ಮಾಡಬೇಕು?

ಗ್ರಾಹಕರಿಗೆ ಏನು ಮಾಡಬೇಕು?

ಗ್ರಾಹಕರ ದೃಷ್ಟಿಕೋನದಲ್ಲಿ ಹೇಳುವುದಾದರೆ ಒಂದು ಸೆಟ್ ಅಪ್ ಬಾಕ್ಸ್ ಮೂಲಕ ಬ್ರಾಡ್ ಬ್ಯಾಂಡ್ ಮತ್ತು ಕೇಬಲ್ ಟಿವಿ ಸೇವೆಗಳೆರಡು ಲಭ್ಯವಾಗಲು ಆರಂಭವಾಗುತ್ತದೆ.

ಸರ್ವೀಸ್ ಪ್ರೊವೈಡರ್ ಏನು ಮಾಡಬೇಕು?

ಸರ್ವೀಸ್ ಪ್ರೊವೈಡರ್ ಏನು ಮಾಡಬೇಕು?

ಸರ್ವೀಸ್ ಪ್ರೊವೈಡರ್ ದೃಷ್ಟಿಕೋನದಲ್ಲಿ ಹೇಳುವುದಾದರೆ ,ಕೇಬಲ್ ಮತ್ತು ಬ್ರಾಡ್ ಬ್ಯಾಂಡ್ ಎರಡಕ್ಕೂ ತಂತ್ರಜ್ಞಾನ ಏಕೀಕರಣವನ್ನು ಇಂಜಿನಿಯರಿಂಗ್ ಸಚಿವಾಲಯ ಆರ್ಮ್ -BECIL ಮೂಲಕ ಸರಳಗೊಳಿಸಲಾಗುತ್ತದೆ.

ಆದಾಯದ ಲೆಕ್ಕಾಚಾರ:

ಆದಾಯದ ಲೆಕ್ಕಾಚಾರ:

ವಾರ್ಷಿಕ ಸಾಮಾನ್ಯ ಆದಾಯ (AGR) ಅಥವಾ ಸದ್ಯ ಕೇಬಲ್ ಆಪರೇಟರ್ ಗಳು ತಮ್ಮ ಆದಾಯವನ್ನು ಟೆಲಿಕಾಂ ಡಿಪಾರ್ಟ್ ಮೆಂಟ್ ಗೆ ಪಾವತಿಸುತ್ತಾರೆ. ಆದರೆ ಒಂದು ವೇಳೆ ಈ ಬದಲಾವಣೆಯನ್ನು ಸಾಧಿಸಿದ ನಂತರ ಕೇವಲ ಬ್ರಾಡ್ ಬ್ಯಾಂಡ್ ಸೇವೆಗೆ ಮಾತ್ರವೇ ಪಾವತಿ ಅಥವಾ ಎರಡೂ ಬ್ಯುಸಿನೆಸ್ ನಿಂದ ಬಂದಿರುವ ಒಟ್ಟು ಹಣದ ಪಾವತಿ ನಡೆಯಬಹುದು.

ಅವಿಶ್ವಾಸದ ಭಯ:

ಅವಿಶ್ವಾಸದ ಭಯ:

ಪರವಾನಗಿ ನೀಡುವಿಕೆಗೆ ಸಂಬಂಧಿಸಿದಂತೆ ಏರಡೂ ವ್ಯವಹಾರಗಳಿಂದ ಉತ್ಪತ್ತಿಯಾಗುವ ಒಟ್ಟು ಮೊತ್ತದ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಅವಿಶ್ವಾಸ ಏರ್ಪಡುವ ಸಾಧ್ಯತೆ ಇದೆ. ಅದರಲ್ಲೂ ಕೆಳಮಟ್ಟದ ಕೇಬಲ್ ಆಪರೇಟರ್ ಗಳಿಂದ ಇದಕ್ಕೆ ವಿರೋಧ ಬಂದರೂ ಬರಬಹುದು.

 ಸೌತ್ ಕೊರಿಯಾದಲ್ಲಿ ಜಾರಿಯಾದ ವ್ಯವಸ್ಥೆ:

ಸೌತ್ ಕೊರಿಯಾದಲ್ಲಿ ಜಾರಿಯಾದ ವ್ಯವಸ್ಥೆ:

ಸೌತ್ ಕೊರಿಯಾದಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು ಇದೀಗ ಇಡೀ ಸೌತ್ ಕೊರಿಯಾದ 93% ಭಾಗದಲ್ಲಿ ಅಂತರ್ಜಾಲ ವ್ಯವಸ್ಥೆ ಲಭ್ಯವಾಗುತ್ತಿದೆ ಎಂದು ಡಿಸೆಂಬರ್ ನಲ್ಲಿ ನಡೆದ ಮೀಟಿಂಗ್ ವೊಂದರಲ್ಲಿ ಶರ್ಮಾ ತಿಳಿಸಿದ್ದಾರೆ.

ಸರ್ಕಾರದ ವಿಶ್ವಾಸ:

ಸರ್ಕಾರದ ವಿಶ್ವಾಸ:

ಈ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಕೇಬಲ್ ಆಪರೇಟರ್ ಮತ್ತು ಸಚಿವಾಲಯ ಎರಡೂ ಕೂಡ ಆಸಕ್ತಿ ತೋರಿದೆ. ಕೇಬಲ್ ನೆಟ್ ವರ್ಕ್ ಮೂಲಕ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸುವುದಕ್ಕೆ ಕೇಬಲ್ ಆಪರೇಟರ್ ಗಳಿಗೆ ನಿರ್ಧಿಷ್ಟ ತಂತ್ರಜ್ಞಾನವನ್ನು ಹೇರುವುದಿಲ್ಲ ಎಂಬ ಬಗ್ಗೆ ಸರ್ಕಾರವೂ ಕೂಡ ವಿಶ್ವಾಸ ನೀಡಿದೆ.

ಬ್ರಾಡ್ ಬ್ಯಾಂಡ್ ಸೇವೆಗೆ ತೆರಿಗೆ:

ಕೇಬಲ್ ಟಿವಿ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಎರಡನ್ನೂ ಕೂಡ ಬೇರೆಬೇರೆಯಾಗಿಯೇ ಪರಿಗಣಿಸಬೇಕು ಮತ್ತು ಬ್ರಾಡ್ ಬ್ಯಾಂಡ್ ಸೇವೆಗಳಿಂದ ಲಭ್ಯವಾಗುವ ಆದಾಯಕ್ಕೆ ತೆರಿಗೆ ಇರಬೇಕು ಎಂಬುದಾಗಿ ಐ&ಬಿ ಯ ಸೆಕ್ರೆಟರಿ ಆಗಿರುವ ಅಮಿತ್ ಖಾರೆ ಅವರು ತಿಳಿಸಿದ್ದಾರೆ .

ಭವಿಷ್ಯದ ಕನಸು:

ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹಣಕಾಸು ವ್ಯವಸ್ಥೆಯಲ್ಲಿನ ಬದಲಾವಣೆಯ ಬಗ್ಗೆ ವಿಮರ್ಷಿಸಲಾಗುತ್ತದೆ ಮತ್ತು ಪ್ರಸ್ತಾವನೆಯನ್ನು ಚರ್ಚೆಗೆ ಒಳಪಡಿಸಲಾಗುತ್ತದೆ.ಆದರೆ ಇದೊಂದು ಸರ್ಕಾರ ಭವಿಷ್ಯದ ಕನಸು ಎಂದರೆ ಅತಿಶಯೋಕ್ತಿ ಆಗಲಾರದು. ಒಟ್ಟಾರೆ ಭಾರತೀಯರೆಲ್ಲರಿಗೂ ಅಂತರ್ಜಾಲ ಸೇವೆ ಲಭ್ಯವಾಗಬೇಕು ಎಂಬುದು ಸರ್ಕಾರ ಆಶಯ.

Best Mobiles in India

English summary
Government plans to provide internet in remote areas through cable TV networks

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X