ಸರ್ಕಾರದ ಈ ಯೋಜನೆ ನಿಮಗೆ ಎಷ್ಟು ಅನುಕೂಲವಾಗಲಿದೆ ಗೊತ್ತಾ!

|

ಇಂದಿನ ದಿನಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ನೀಡುವ ಕಿರಿಕಿರಿ ಅಷ್ಟಿಷ್ಟಲ್ಲ. ಆದರೆ ಇನ್ಮುಂದೆ ನೀವು ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ ಭಾರತ ಸರ್ಕಾರದ ಟೆಲಿಕಾಂ ಸಂಸ್ಥೆ ಟ್ರಾಯ್‌ ಟ್ರೂ ಕಾಲರ್‌ ಮಾದರಿಯ ಹೊಸ ಕಾಲರ್‌ ಐಡಿ ಪರಿಚಯಿಸುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಈ ಕಾಲರ್‌ ಐಡಿ ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ. ಇದರಿಂದ ನಿಮ್ಮ ಮೊಬೈಲ್‌ಗೆ ಕರೆ ಬಂದ ತಕ್ಷಣವೇ ನಿಮಗೆ ಕರೆ ಮಾಡಿದವರ ವಿವರಗಳನ್ನು ಡಿಸ್ಪ್ಲೇ ಮಾಡಲಿದೆ ಎಂದು ಹೇಳಲಾಗಿದೆ.

ನಿಮಗೆ

ಹೌದು, ನಿಮಗೆ ಯಾವುದೇ ಕರೆ ಬಂದರೂ ಅವರ ವಿವರಗಳನ್ನು ನಿಮ್ಮ ಮೊಬೈಲ್‌ನಲ್ಲಿ ಡಿಸ್‌ಪ್ಲೇ ಮಾಡುವ ಹೊಸ ಕಾಲರ್‌ ಐಡಿ ಶೀಘ್ರದಲ್ಲೇ ಬರಲಿದೆ. ಇದರಿಂದ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಟ್ರೂ ಕಾಲರ್‌ ಅನ್ನು ಬಳಸಬೇಕಾದ ಅನಿವಾರ್ಯತೆ ಇರುವುದಿಲ್ಲ ಎನ್ನಲಾಗಿದೆ. ಇದರಲ್ಲಿ ಕರೆ ಮಾಡುವವರ ಗುರುತನ್ನು ನಿಖರವಾಗಿ ಖಚಿತಪಡಿಸಲು ಕೆವೈಸಿ ಪರಿಶೀಲನೆಯನ್ನು ಬಳಸುತ್ತದೆ ಎನ್ನಲಾಗಿದೆ. ಹಾಗಾದ್ರೆ ಟ್ರಾಯ್‌ ಜಾರಿಗೆ ತರಲಿರುವ ಹೊಸ ಕಾಲರ್‌ ಐಡಿ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಕಾಂ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ಮೊದಲಿನಿಂದಲೂ ಮೊಬೈಲ್‌ ಗ್ರಾಹಕರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಗ್ರಾಹಕರ ಹಿತ ಕಾಪಡುವ ಕೆಲಸ ಮಾಡುತ್ತಿದೆ. ಇದಕ್ಕೆ ಲೇಟೆಸ್ಟ್‌ ಸೇರ್ಪಡೆ ಹೊಸ ಕಾಲರ್‌ ಐಡಿ ಪರಿಚಯ. ಹೊಸ ಕಾಲರ್‌ ಐಡಿ ಮೂಲಕ ಗ್ರಾಹಕರಿಗೆ ಬರುವ ಅಪರಿಚಿತ ಕರೆಗಳನ್ನು ತಡೆಗಟ್ಟಲು ಅವಕಾಶ ನೀಡಲಿದೆ. ಇದರಿಂದ ನಿಮಗೆ ಬರುವ ಕರೆಗಳಲ್ಲಿ ಯಾವುದು ಸ್ಪ್ಯಾಮ್‌, ರೊಬೋ ಕಾಲ್‌ ಎಂಬ ಮಾಹಿತಿ ತಿಳಿಯಲು ಸಹಾಯಕಾರಿ.

ಟ್ರೂ ಕಾಲರ್‌ಗೆ ಅಘಾತ!

ಟ್ರೂ ಕಾಲರ್‌ಗೆ ಅಘಾತ!

ಟ್ರಾಯ್‌ ಜಾರಿಗೆ ತರಲಿರುವ ಹೊಸ ಕಾಲರ್‌ ಐಡಿ ಟ್ರೂ ಕಾಲರ್‌ ಅಪ್ಲಿಕೇಶನ್‌ಗೆ ಅಘಾತವನ್ನು ಉಂಟು ಮಾಡಿದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರು ಹೊಂದಿರುವ ಟ್ರೂ ಕಾಲರ್‌ ಅಪ್ಲಿಕೇಶನ್‌ಗೆ ಮುಂದಿನ ದಿನಗಳಲ್ಲಿ ನಷ್ಟವಾಗಲಿದೆ. ಸರ್ಕಾರದ ಕಾಲರ್‌ ಐಡಿಯ ಮುಂದೆ ಟ್ರೂ ಕಾಲರ್‌ ಯಶಸ್ವಿಯಾಗುವುದಿಲ್ಲ ಎನ್ನಲಾಗಿದೆ. ಅಲ್ಲದೆ ಟ್ರೂ ಕಾಲರ್‌ನಲ್ಲಿ ಕೂಡ ಕೆಲವು ಡೇಟಾ ಸೋರಿಕೆಯಂತಹ ದೋಷಗಳಿರುವುದರಿಂದ ಜನರು ಕೂಡ ಟ್ರಾಯ್‌ನ ಕಾಲರ್‌ ಐಡಿಯನ್ನು ಬಳಸಲು ಮುಂದಾಗಬಹುದು.

ವಿಷಯ

ಇನ್ನು ಹೊಸ ಕಾಲರ್ ಐಡೆಂಟಿಟಿ ಸಿಸ್ಟಮ್ "ಬಹು ಪರದೆಯ ಸನ್ನಿವೇಶ, ಒಂದೇ ವಿಷಯ" ವನ್ನು ಗೌರವಿಸುವ ಹೊಸ ನಿಯಂತ್ರಣವನ್ನು ಅನ್ವೇಷಿಸುತ್ತದೆ ಎಂದು ಹೇಳಲಾಗಿದೆ.ಏಕೆಂದರೆ ಹೊಸ ತಂತ್ರಜ್ಞಾನಗಳ ಸುಗಮ ಅಳವಡಿಕೆ ಮತ್ತು ಗ್ರಾಹಕರ ಹಿತಾಸಕ್ತಿಗಳ ರಕ್ಷಣೆಗಾಗಿ ನಿಯಂತ್ರಣ ಮತ್ತು ಕಾನೂನು ಚೌಕಟ್ಟುಗಳು ಹೊಸ ಬೆಳವಣಿಗೆಗೆ ಹೊಂದಿಕೆಯಾಗಬೇಕು ಎಂದು ಟ್ರಾಯ್‌ ಹೇಳಿದೆ. ಕ್ರೌಡ್‌ಸೋರ್ಸ್ಡ್ ಡೇಟಾವನ್ನು ಬಳಸುವ ಇತರ ಕೆಲವು ಕಾಲರ್ ಐಡೆಂಟಿಫಿಕೇಶನ್ ಅಪ್ಲಿಕೇಶನ್‌ಗಳು ನೀಡುವುದಕ್ಕಿಂತ ಉತ್ತಮ ನಿಖರತೆ ಮತ್ತು ಪಾರದರ್ಶಕತೆಯನ್ನು ಇದರಲ್ಲಿ ಕಾಣಬಹುದಾಗಿದೆ.

ಕಾಲರ್‌

ಸರ್ಕಾರದ ಹೊಸ ಕಾಲರ್‌ ಐಡಿ ನಿಖರ ಪಲಿತಾಂಶಕ್ಕಾಗಿ KYC ನೋಂದಣಿಯನ್ನು ಗುರುತಿಸಲಿದೆ. ಬಳಕೆದಾರರು ಒದಗಿಸಿದ ಡೇಟಾದ ಆಧಾರದ ಮೇಲೆ ಕರೆ ಮಾಡುವವರ ಡೇಟಾಬೇಸ್ ಅನ್ನು ನಿರ್ವಹಿಸುವ ಟ್ರೂ ಕಾಲರ್‌ನಲ್ಲಿ ಇದು ಅಸ್ಪಷ್ಟವಾಗಿತ್ತು. ಆದರೆ ಹೊಸ ಕಾಲರ್‌ ಐಡಿ KYC-ಕಂಪ್ಲೈಂಟ್ ರೆಪೊಸಿಟರಿಯು ವಂಚನೆ ಮತ್ತು ಪ್ರಾಕ್ಸಿ ಕರೆಗಳನ್ನು ಕಡಿಮೆ ಮಾಡುತ್ತದೆ. ಟೆಲಿಕಾಂ ಕಂಪನಿಗಳು ಮಾಡಿದ KYC ಗೆ ಅನುಗುಣವಾಗಿ, ಫೋನ್ ಪರದೆಯಲ್ಲಿ ಹೆಸರು ಕಾಣಿಸಿಕೊಳ್ಳಲಿದೆ. ಇದರಿಂದ ನಿಮಗೆ ಬರುವ ಸ್ಪ್ಯಾಮ್‌ ಕರೆಗಳನ್ನು ನೀವು ಸುಲಭವಾಗಿ ತಡೆಗಟ್ಟಬಹುದು.

Best Mobiles in India

Read more about:
English summary
Government will launch caller identity system within three weeks

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X