ಸರ್ಕಾರಿ ಕಚೇರಿಯಲ್ಲಿ ಫೇಸ್‌ಬುಕ್‌, ಗೂಗಲ್‌ ಡ್ರೈವ್‌, ಯುಎಸ್‌ಬಿ ನಿಷೇಧ..!

By Gizbot Bureau
|

ಸರ್ಕಾರಿ ನೌಕರರ ಇಂಟರ್‌ನೆಟ್‌ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ಕಾನೂನನ್ನು ಕೇಂದ್ರ ಗೃಹ ಸಚಿವಾಲಯ ತಂದಿದೆ. ಸರ್ಕಾರದ ಮಾಹಿತಿ ಸೋರಿಕೆ ಮತ್ತು ಹ್ಯಾಕಿಂಗ್‌ನಂತಹ ಹಲವು ಪ್ರಕರಣಗಳಿಂದಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಸರ್ಕಾರಿ ಕಚೇರಿಯಲ್ಲಿ ಫೇಸ್‌ಬುಕ್‌, ಗೂಗಲ್‌ ಡ್ರೈವ್‌, ಯುಎಸ್‌ಬಿ ನಿಷೇಧ..!

ಹೊಸ ನಿಯಮಗಳು ರಾಷ್ಟ್ರೀಯ ಮಾಹಿತಿ ಭದ್ರತಾ ನೀತಿ ಹಾಗೂ ಮಾರ್ಗಸೂಚಿಯಿಂದ ಹೇರಿಕೆಯಾಗುತ್ತಿದ್ದು, ಎನ್‌ಐಎಸ್‌ಪಿಜಿ ಹೇಳುವಂತೆ ಪ್ರಮುಖ ಮಾಹಿತಿಯಲ್ಲಿ ಯಾವುದೇ ಹೊಂದಾಣಿಕೆಯಿಲ್ಲ ಮತ್ತು ಗೌಪ್ಯ ಮಾಹಿತಿಯನ್ನು ಸರ್ಕಾರಿ ನೌಕರರು ಕ್ಲೌಡ್‌ ಸರ್ವಿಸ್‌ಗಳಲ್ಲಿ ಸ್ಟೋರ್‌ ಮಾಡುವ ಪ್ರವೃತ್ತಿಯನ್ನು ಕಡಿಮೆ ಮಾಡಲು ಈ ನಿಯಮಗಳನ್ನು ತರಲಾಗಿದೆ, 24 ಪುಟಗಳ ಗೃಹ ಸಚಿವಾಲಯದ ಆದೇಶದಲ್ಲಿ ಸಾಮಾಜಿಕ ಮಾಧ್ಯಮ, ಕಚೇರಿಯ ಕಂಪ್ಯೂಟರ್, ಫೋನ್‌ಗಳ ಬಳಕೆಯ ಮೇಲೆ ನಿರ್ಬಂಧಗಳನ್ನು ಹೇರಿದೆ, ಅದೇನು ಅಂತಾ ಮುಂದೆ ನೋಡಿ..

ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯ

ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯ

ಹೊಸ ನಿಯಮ ಸರ್ಕಾರದಲ್ಲಿ ಭಾಗಿಯಾಗುವ ಎಲ್ಲಾ ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಸರ್ಕಾರಿ ನೌಕರರು, ಗುತ್ತಿಗೆ ಸಿಬ್ಬಂದಿ, ಪಾಲುದಾರರು, ಕನ್ಸಲ್ಟಂಟ್ಸ್ ಮತ್ತು ಥರ್ಡ್‌ ಪಾರ್ಟಿ ಸ್ಟಾಪ್‌ಗಳು ಹೊಸ ನಿಯಮಕ್ಕೆ ಒಳಗೊಳ್ಳುತ್ತಾರೆ. ಮಾಹಿತಿ ವ್ಯವಸ್ಥೆ, ಸೌಲಭ್ಯ, ಸಂವಹನ ನೆಟ್‌ವರ್ಕ್‌ ಮತ್ತು ಮಾಹಿತಿಯನ್ನು ಸೃಷ್ಟಿಸಿ, ಅದನ್ನು ಬಳಸಿ, ಸ್ಟೋರ್‌ ಮಾಡುವ ಹಾಗೂ ನಿರ್ವಹಿಸುವವರಿಗೆ ಈ ನಿಯಮಗಳು ಅನ್ವಯವಾಗುತ್ತವೆ.

ಯುಎಸ್‌ಬಿ ಡಿವೈಸ್‌ಗೆ ನಿಷೇಧ

ಯುಎಸ್‌ಬಿ ಡಿವೈಸ್‌ಗೆ ನಿಷೇಧ

ಹೊಸ ನಿಯಮದಂತೆ ಸರ್ಕಾರರಿ ನೌಕರರು ಕಚೇರಿಗೆ ಯುಎಸ್‌ಬಿ ಸಾಧನವನ್ನು ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಸಮರ್ಪಕ ಕಾರಣ ನೀಡಿ ಯುಎಸ್‌ಬಿ ಸಾಧನವನ್ನು ತೆಗೆದುಕೊಂಡು ಹೋಗಬಹುದೆಂದು ಸರ್ಕಾರ ಹೇಳಿದೆ.

ಸಾಮಾಜಿಕ ಜಾಲತಾಣಗಳು ಬ್ಯಾನ್‌

ಸಾಮಾಜಿಕ ಜಾಲತಾಣಗಳು ಬ್ಯಾನ್‌

ಸರ್ಕಾರದ ಅಧಿಕೃತ ಮೊಬೈಲ್, ಪಿಸಿ, ಲ್ಯಾಪ್‌ಟಾಪ್‌ಗಳಲ್ಲಿ ಸರ್ಕಾರಿ ನೌಕರರು ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿ ಇತರ ಸಾಮಾಜಿಕ ಜಾಲತಾಣಗಳನ್ನು ಬಳಸಲು ನಿರ್ಬಂಧ ಹೇರಿದೆ.

ಕ್ಲೌಡ್‌ ಸೇವೆಗಳ ಮೇಲೂ ನಿಷೇಧ

ಕ್ಲೌಡ್‌ ಸೇವೆಗಳ ಮೇಲೂ ನಿಷೇಧ

ಮಾಹಿತಿ ಸೋರಿಕೆಯನ್ನು ತಡೆಯಲು ಸರ್ಕಾರ ಕ್ಲೌಡ್‌ ಸೇವೆಗಳನ್ನು ಕೂಡ ನಿಷೇಧಿಸಿದೆ. ಅಧಿಕೃತ ಹಾಗೂ ಗೌಪ್ಯ ಮಾಹಿತಿಯನ್ನು ಗೂಗಲ್‌ ಡ್ರೈವ್‌, ಡ್ರಾಪ್‌ ಬಾಕ್ಸ್‌, ಐಕ್ಲೌಡ್‌ನಂತಹ ಖಾಸಗಿ ಕ್ಲೌಡ್‌ ಸೇವೆಗಳಲ್ಲಿ ಸ್ಟೋರ್ ಮಾಡುವಂತಿಲ್ಲ ಎಂದಿದ್ದು, ಗೌಪ್ಯವಲ್ಲದ ಮಾಹಿತಿಯನ್ನು ಶೇಖರಿಸಬಹುದು. ಒಂದು ವೇಳೆ ಮಾಹಿತಿ ಸೋರಿಕೆಯಾದರೆ ನೌಕರ ಕ್ರಮವನ್ನು ಎದುರಿಸಬೇಕಾಗುತ್ತದೆ.

ಇಮೇಲ್‌ ಮೂಲಕ ವ್ಯವಹಾರ ಬೇಡ

ಇಮೇಲ್‌ ಮೂಲಕ ವ್ಯವಹಾರ ಬೇಡ

ಗೃಹ ಸಚಿವಾಲಯದ ಹೊಸ ನಿಯಮದಂತೆ ಅಧಿಕೃತ ಹಾಗೂ ಗೌಪ್ಯ ಮಾಹಿತಿಯನ್ನು ಇಮೇಲ್‌ ಮೂಲಕ ಕಳುಹಿಸಬಾರದು. ಹಾಗೂ ಇಂಥ ಸಂದರ್ಭದಲ್ಲಿ ಇಮೇಲ್‌ ಸಂವಹನ ಬೇಡ ಎಂದಿದೆ.

ಅಧಿಕೃತ ಇಮೇಲ್‌

ಅಧಿಕೃತ ಇಮೇಲ್‌ನ್ನು ಸಾರ್ವಜನಿಕ ವೈಫೈ ಸಂಪರ್ಕದಲ್ಲಿ ಬಳಸುವಂತಿಲ್ಲ..

ಸಂಸ್ಥೆ ನೀಡಿದ ಡಿವೈಸ್‌ಗಳಲ್ಲಿ ಮಾತ್ರ ಸ್ಟೋರೆಜ್‌

ಇನ್ನು, ಗೌಪ್ಯ ಹಾಗೂ ಸೂಕ್ಷ್ಮ ಮಾಹಿತಿಯನ್ನು ಸರ್ಕಾರದ ಸಂಸ್ಥೆ ನೀಡಿದ ರಿಮೂವೇಬಲ್‌ ಸ್ಟೋರೆಜ್‌ ಸಾಧನಗಳಲ್ಲಿ ಮಾತ್ರ ಶೇಖರಿಸಿಕೊಳ್ಳಬಹುದಾಗಿದ್ದು, ಆ ಡಿವೈಸ್‌ನ್ನು ಕೇವಲ ಕಚೇರಿ ಕಾರ್ಯಕ್ಕೆ ಮಾತ್ರ ಬಳಸಬೇಕು ಎಂಬ ಆದೇಶ ನೀಡಿದೆ.

ಹೋಮ್‌ ವೈಫೈ ಬಳಕೆ

ಹೋಮ್‌ ವೈಫೈ ಬಳಕೆ

ಹೋಮ್‌ ವೈಫೈ ಬಳಸುವಾಗ ಆ ರೂಟರ್‌ಗಳಲ್ಲಿ ಮಿಡಿಯಾ ಅಕ್ಸೆಸ್‌ ಕಂಟ್ರೋಲ್‌ನ್ನು ಸರ್ಕಾರಿ ನೌಕರರು ನಿಯೋಜಿಸಬೇಕಾಗುತ್ತದೆ. ಇಷ್ಟೇ ಅಲ್ಲದೇ, ಕೆಲಸಕ್ಕಾಗಿ ಹೋಮ್‌ ವೈಫೈ ಬಳಸಲು ಅನೇಕ ನಿಯಮಗಳನ್ನು ಸರ್ಕಾರ ಹೇರಿದೆ.

Best Mobiles in India

English summary
Govt Employees Banned From Using Facebook, Google Drive, And USB Devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X