ನಾಳೆ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಆಗುತ್ತದೆ..! ಏಕೆ ಗೊತ್ತಾ..?

|

ಇತ್ತೀಚೆಗೆ ತಾನೇ ಪೊಲೀಸ್‌ ಎನ್‌ಕೌಂಟರ್‌ನ್ನು ಲೈವ್‌ ಆಗಿ ನೋಡಿದ್ದ ಜನಕ್ಕೆ ಮತ್ತೊಂದು ಲೈವ್‌ ನೋಡುವ ಅವಕಾಶ ಸಿಕ್ಕಿದೆ. ಆತ್ಮಹತ್ಯೆಗಳು, ಹೊಡೆದಾಟಗಳು, ಹಬ್ಬಗಳು ಹೀಗೆ ಎಲ್ಲಾ ಲೈವ್‌ ಆಗಿರುವಾಗ ಹ್ಯಾಕಿಂಗ್‌ ಕೂಡ ಲೈವ್‌ ಆಗುವ ಹಂತಕ್ಕೆ ಬಂದಿದೆ. ಇಷ್ಟು ದಿನ ಕೇವಲ ಸಿನಿಮಾಗಳಲ್ಲಿ ಹ್ಯಾಕಿಂಗ್‌ ನೋಡಿದ್ದ ಜನರಿಗೆ ಲೈವ್‌ ಆಗಿ ಹ್ಯಾಕಿಂಗ್‌ ನೋಡುವ ಅವಕಾಶ ನಾಳೆ ಸಿಕ್ಕಿದೆ.

ನಾಳೆ ನಿಮ್ಮ ಫೇಸ್‌ಬುಕ್‌ ಅಕೌಂಟ್‌ ಡಿಲೀಟ್‌ ಆಗುತ್ತದೆ..! ಏಕೆ ಗೊತ್ತಾ..?

ಹೌದು, ಈ ಹ್ಯಾಕಿಂಗ್‌ ಲೈವ್‌ ಪ್ರಯೋಗಕ್ಕೆ ಒಳಗಾಗುವ ಸೈಟ್‌ ಹೆಸರು ಕೇಳಿದರೆ ನೀವು ದಂಗಾಗುತ್ತಿರಿ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಲೈವ್‌ ಹ್ಯಾಕಿಂಗ್‌ಗೆ ಒಳಪಡಲಿದೆ. ತನ್ನ ಬಳಕೆದಾರರ ಭದ್ರತೆ ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಲೈವ್‌ ಹ್ಯಾಕಿಂಗ್‌ ಸುದ್ದಿ ಫೇಸ್‌ಬುಕ್‌ನ್ನು ತಲೆಕೆಡಿಸಿದೆ. ಈ ಭಾನುವಾರ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್‌ ಪೇಜ್‌ನ್ನು ಹ್ಯಾಕ್‌ ಮಾಡಿ ಅಳಿಸುವ ಪ್ರಯತ್ನವನ್ನು ನೇರ ಪ್ರಸಾರ ಮಾಡುತ್ತೇನೆ ಎಂದು ಇಂಡೀ ತೈವಾನಿಸ್‌ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ.

ಕೋಟಿ, ಕೋಟಿ ಅಕೌಂಟ್‌ಗಳು ಡಿಲೇಟ್‌..?

ಕೋಟಿ, ಕೋಟಿ ಅಕೌಂಟ್‌ಗಳು ಡಿಲೇಟ್‌..?

ಸಾಫ್ಟ್‌ವೇರ್‌ ನ್ಯೂನತೆಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾಗಿರುವ ಸ್ವಯಂ ಬಗ್‌ ಬಂಟ್ರೀ ಹಂಟರ್‌ ಚಾಂಗ್‌ ಚಿಯಾನ್‌ ತನ್ನ ಫೇಸ್‌ಬುಕ್‌ ಪೇಜ್‌ನಿಂದ ಕೋಟಿ ಕೋಟಿ ಫೇಸ್‌ಬುಕ್‌ ಅಕೌಂಟ್‌ಗಳನ್ನು ಅಳಿಸಿ ಅದನ್ನು ಫೇಸ್‌ಬುಕ್‌ ಲೈವ್‌ ಮಾಡುತ್ತೇನೆ ಎಂದಿದ್ದಾನೆ.

ಪ್ರತಿಕ್ರಿಯೆ ಇಲ್ಲ

ಪ್ರತಿಕ್ರಿಯೆ ಇಲ್ಲ

ನಾಳೆ ಸಂಜೆ 6 ಗಂಟೆಗೆ ಲೈವ್‌ ಹ್ಯಾಕಿಂಗ್‌ ಮಾಡುವುದಾಗಿ ಪ್ರಕಟಿಸಿದ ನಂತರ ಅನೇಕರು ಆನ್‌ಲೈನ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ ಮತ್ತು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ಯಾವುದೇ ವಿಚಾರಣೆ ಮತ್ತು ಪ್ರಶ್ನೆಗೆ ಪ್ರತಿಕ್ರಿಯೆಗಳನ್ನು ಚಾಂಗ್‌ ಚಿಯಾನ್‌ ನೀಡಿಲ್ಲ.

ಗೋ ಲೈವ್‌

ಗೋ ಲೈವ್‌

ಹಿಂದಿನ ಸಂದರ್ಶನಗಳಲ್ಲಿ ಹ್ಯಾಕರ್‌ ಹೇಳಿಕೊಂಡಿರುವಂತೆ 24 ವರ್ಷದ ಯುವಕ ತನ್ನ ಪೇಜ್‌ನಲ್ಲಿ Broadcasting the deletion of FB founder Zuck's account ಎಂಬ ಪೋಸ್ಟ್‌ನ್ನು ಪ್ರಕಟಿಸಿದ್ದು, 26 ಸಾವಿರಕ್ಕಿಂತ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾನೆ. ಹ್ಯಾಕಿಂಗ್‌ ಲೈವ್‌ನ್ನು ವಿಶ್ವ ಕಾತುರದಿಂದ ಕಾಯುತ್ತಿದ್ದಾರೆ.

ಸೋ ಕಾಲ್ಡ್‌ ವೈಟ್‌ ಹ್ಯಾಟ್‌ ಹ್ಯಾಕರ್‌

ಸೋ ಕಾಲ್ಡ್‌ ವೈಟ್‌ ಹ್ಯಾಟ್‌ ಹ್ಯಾಕರ್‌

ಭಾರತದಿಂದಿಡಿದು ಅಮೇರಿಕಾದವರೆಗೂ ಸೈಬರ್‌ ಪರಿಣಿತರು ಕಾರ್ಪೋರೆಟ್‌ ವೆಬ್‌ಸೈಟ್‌ಗಳು ಮತ್ತು ಸಾಫ್ಟ್‌ವೇರ್‌ಗಳಲ್ಲಿನ ನ್ಯೂನತೆಗಳನ್ನು ಹುಡುಕಿ ಸಣ್ಣ ಮೊತ್ತದ ಹಣಕಾಸಿನ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ಆದರೆ, ವೈಟ್‌ ಹ್ಯಾಟ್‌ ಹ್ಯಾಕರ್‌ ಎಂದು ಕರೆಸಿಕೊಳ್ಳುವ ಹ್ಯಾಕರ್‌ಗಳು ಈ ರೀತಿ ಹ್ಯಾಕ್‌ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಸೆಲೆಬ್ರಿಟಿಯಾದ ಚಾಂಗ್‌

ಸೆಲೆಬ್ರಿಟಿಯಾದ ಚಾಂಗ್‌

ಹೀಗಾಗಲೇ ಚಾಂಗ್‌ ಸೆಲೆಬ್ರಿಟಯಾಗಿದ್ದು, ಟಾಕ್‌ ಶೋಗಳಲ್ಲಿ ಭಾಗವಹಿಸುತ್ತಿದ್ದಾನೆ. ಟಾಕ್‌ ಶೋಗಳಲ್ಲಿ ತನ್ನ ಹ್ಯಾಕಿಂಗ್‌ ಕುರಿತು ಮಾತನಾಡುತ್ತಿದ್ದು, ಸ್ಥಳಿಯ ಬಸ್‌ ಆಪರೇಟರ್‌ಗಳ ಕಂಪ್ಯೂಟರ್‌ ಸಿಸ್ಟಮ್‌ ಹ್ಯಾಕ್‌ ಮಾಡಿ ಬಸ್‌ ಟಿಕೇಟ್‌ನ್ನು ಕೇವಲ 3 ಸೆಂಟ್‌ಗೆ ಖರೀದಿಸಿದ್ದನಂತೆ.

ಆಪಲ್‌, ಟೆಸ್ಲಾದಲ್ಲೂ ಹ್ಯಾಕ್‌ ಅಂತೆ

ಆಪಲ್‌, ಟೆಸ್ಲಾದಲ್ಲೂ ಹ್ಯಾಕ್‌ ಅಂತೆ

ಚಾನ್‌ ಹೇಳಿದಂತೆ ಆಪಲ್ ಮತ್ತು ಟೆಸ್ಲಾದಲ್ಲೂ ಹ್ಯಾಕಿಂಗ್ ಸಂಘಟಿಸಿದ್ದಾರಂತೆ. ಆದರೆ, ಎಲ್ಲಿಯೂ ಇದನ್ನು ಉಲ್ಲೇಖಿಸಲಾಗಿಲ್ಲ. ಆದರೆ, ಇವರ ಫೇಸ್‌ಬುಕ್‌ ಖಾತೆಯಲ್ಲಿ ಲೈನ್‌ ಕಾರ್ಪ್‌ 2016ರ ಬಗ್‌ ಹಂಟರ್ಸ್‌ಗಳಲ್ಲಿ ಸ್ಪೇಷಲ್‌ ಕಾಂಟ್ರಿಬ್ಯೂಟರ್ಸ್‌ನ ಹಾಲ್‌ ಆಫ್‌ ಫೇಮ್‌ನಲ್ಲಿ ಚಾನ್‌ ಹೆಸರಿದೆ.

Best Mobiles in India

English summary
Hacker to live-stream attack on Mark Zuckerberg’s Facebook page. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X