ನಿಮ್ಮ ಆನ್ಲೈನ್ ಪ್ರಖ್ಯಾತಿಯನ್ನು ಹೆಚ್ಚಿಸಲು ಇಲ್ಲಿದೆ ಉತ್ತಮ ಟಿಪ್ಸ್

By Tejaswini P G
|

ಹೊಸಬರನ್ನು ಭೇಟಿಯಾದಾಗಲೆಲ್ಲ ಅವರನ್ನು ನಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ಗಳಿಗೆ ತಪ್ಪದೇ ಸೇರಿಸುತ್ತೇವೆ. ನೀವ್ಯಾರು, ನಿಮ್ಮ ಅಭಿರುಚಿಗಳೇನು ಇದೆಲ್ಲವನ್ನೂ ಅರಿಯಲು ಅವರು ಕೂಡ ನಿಮ್ಮ ಪ್ರೊಫೈಲ್ ಅನ್ನು ಖಂಡಿತ ನೋಡುತ್ತಾರೆ. ಈ ದಿನಗಳಲ್ಲಿ ನಿಮ್ಮ ಸ್ನೇಹಿತರು, ಸಂಬಂಧಿಕರು ಎಲ್ಲರೂ ಕೂಡ ನಿಮ್ಮ ಕುರಿತು ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದರೆ ಅವಲಂಬಿಸುವುದು ಗೂಗಲ್, ಫೇಸ್ಬುಕ್, ಟ್ವಿಟ್ಟರ್, ಲಿಂಕ್ಡ್ಇನ್ ಇತ್ಯಾದಿಗಳನ್ನೇ.

ನಿಮ್ಮ ಆನ್ಲೈನ್ ಪ್ರಖ್ಯಾತಿಯನ್ನು ಹೆಚ್ಚಿಸಲು ಇಲ್ಲಿದೆ ಉತ್ತಮ ಟಿಪ್ಸ್

ಆದರೆ ಉದ್ಯೋಗದಾತರು ಅಥವಾ ಬಿಸ್ನೆಸ್ ಪಾರ್ಟ್ನರ್ಗಳು ಈ ಮೂಲಕ ನಿಮ್ಮ ಮಾಹಿತಿ ಸಂಗ್ರಹಿಸುತ್ತಿದ್ದರೆ ಅಲ್ಲಿರುವ ಮಾಹಿತಿ ನಿಮ್ಮನ್ನು ಸರಿಯಾಗಿ ಪ್ರತಿಬಿಂಬಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾತ್ತದೆ.ಈ ಕಾರಣಕ್ಕಾಗಿ ಉತ್ತಮ ಪ್ರೊಫೈಲ್ ಹೊಂದಿರಲು ಮತ್ತು ಇತರರಿಗೆ ನಿಮ್ಮ ಬಗ್ಗೆ ಉಂಟಾಗುವ ಮೊದಲ ಅನಿಸಿಕೆ ಉತ್ತಮವಾಗಿರಬೇಕಾದರೆ ಈ ಕೆಳಗಿನ ಸೂತ್ರಗಳನ್ನು ಅನುಸರಿಸಿ..

ನಿಮ್ಮನ್ನು ನೀವೇ ಗೂಗಲ್ ಮಾಡಿ

ನಿಮ್ಮನ್ನು ನೀವೇ ಗೂಗಲ್ ಮಾಡಿ

ನೀವು ಒಂದು ಸಂದರ್ಶನಕ್ಕೆ ಹೋಗುತ್ತಿದ್ದರೆ,ನಿಮ್ಮ ಸಂದರ್ಶಕರು ನಿಮ್ಮನ್ನು ಒಳ ಕರೆಯುವ ಮುನ್ನ ನಿಮ್ಮ ಕುರಿತು ಗೂಗಲ್ ನಲ್ಲಿ ಹುಡುಕಾಟ ನಡೆಸುವ ಸಾಧ್ಯತೆ ಅಧಿಕ. ಹೀಗಾಗಿ ನಿಮ್ಮ ಕುರಿತು ಗೂಗಲ್ ಮಾಡುವಾಗ ನಿಮ್ಮ ಕುರಿತು ನೀವು ಮುಜುಗರ ಪಡುವಂಥ ವಿಷಯಗಳೇನೂ ಬರದಂತೆ ನೋಡಿಕೊಳ್ಳುವುದು ಉತ್ತಮ.

ಅಂಥದ್ದೇನಾದರೂ ಇದ್ದರೆ, ಅಥವಾ ಯಾರಾದರೂ ನಿಮ್ಮ ವೈಯುಕ್ತಿಕ ವಿಷಯಗಳನ್ನು ನಿಮ್ಮ ಸಮ್ಮತಿಯಿಲ್ಲದೆ ಹಂಚಿಕೊಂಡಿದ್ದರೆ ಅದನ್ನು ತೆಗೆಯುವಂತೆ ಗೂಗಲ್ ಅನ್ನು ವಿನಂತಿಸಿಕೊಳ್ಳಬಹುದು.

ನಿಮ್ಮ ಫೋಟೋ, ಪ್ರೊಫೈಲ್ ಲಿಂಕ್, ಅಥವಾ ವೆಬ್ ಪೇಜ್ ಅನ್ನು ಗೂಗಲ್ ಸರ್ಚ್ ಫಲಿತಾಂಶದಿಂದ ತೆಗೆಯಬೇಕಿದ್ದರೆ, ನೀವು ವೆಬ್ಸೈಟ್ ಓನರ್(ವೆಬ್ ಮಾಸ್ಟರ್) ಅವರನ್ನು ಆ ಮಾಹಿತಿ ತೆಗೆದುಹಾಕುವಂತೆ ವಿನಂತಿಸಿಕೊಳ್ಳಬೇಕು.

ನಿಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ಮತ್ತು ಸೆಟ್ಟಿಂಗ್ ಗಳನ್ನು ನಿರ್ವಹಿಸಿ

ನಿಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ಮತ್ತು ಸೆಟ್ಟಿಂಗ್ ಗಳನ್ನು ನಿರ್ವಹಿಸಿ

ನೀವು ನಿಮ್ಮ ಹೆಸರನ್ನೇ ಅಕೌಂಟ್ ಐಡಿಯಾಗಿ ಬಳಸುತ್ತಿದ್ದರೆ, ನಿಮ್ಮ ಹೆಸರನ್ನು ಸರ್ಚ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ಅನ್ನು ಹುಡುಕಬಹುದು. ಈ ಮೂಲಕ ನಿಮ್ ಪ್ರೊಫೈಲ್ ಇತರರಿಗೆ ಹೇಗೆ ಕಾಣಿಸುತ್ತದೆ ಎಂದು ನೀವು ತಿಳಿಯಬಹುದು. ನಿಮ್ಮ ಯಾವುದಾದರೂ ಮಾಹಿತಿ ಇತರರಿಗೆ ಕಾಣುವುದು ಸೂಕ್ತವಲ್ಲವೆನಿಸಿದರೆ ಅದನ್ನು ಡಿಲೀಟ್ ಮಾಡಿ.

ಪೇಸ್ಬುಕ್ ನಲ್ಲಿ ನಿಮ್ಮ ವೈಯುಕ್ತಿಕ ಮಾಹಿತಿ ಯಾರಿಗೂ ಕಾಣದಂತೆ ಮಾಡಲು ಹೀಗೆ ಮಾಡಿ. ಪ್ರೈವೆಸಿ ಸೆಟ್ಟಿಂಗ್ಸ್-> ಲಿಮಿಟ್ ಪಾಸ್ಟ್ ಪೋಸ್ಟ್ ವಿಸಿಬಿಲಿಟಿ ಆಯ್ಕೆಯ ಮೂಲಕ ಈವರೆಗಿನ ನಿಮ್ಮ ಎಲ್ಲಾ ಪೋಸ್ಟ್ಗಳನ್ನು ಒಂದೇ ಹೆಜ್ಜೆಯಲ್ಲಿ ಹೈಡ್ ಮಾಡಬಹುದು. ಇಷ್ಟೆಲ್ಲಾ ಮಾಡುವಷ್ಟು ಸಮಯ ನಿಮ್ಮ ಬಳಿ ಇಲ್ಲವಾದಲ್ಲಿ BrandYourself ಅಥವಾ Reputation.com ಮೊದಲಾದ ಸೇವೆಗಳ ಸಹಾಯಪಡೆಯಿರಿ.

ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಗಳಿಗೂ ಬಂತು ಕುತ್ತು.!!ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಗಳಿಗೂ ಬಂತು ಕುತ್ತು.!!

ಸಕಾರಾತ್ಮಕ ಅಂಶಗಳನ್ನು ಸೃಷ್ಟಿಸಿ

ಸಕಾರಾತ್ಮಕ ಅಂಶಗಳನ್ನು ಸೃಷ್ಟಿಸಿ

ಈ ಮೇಲಿನ ಸೂತ್ರವನ್ನು ತಪ್ಪಾಗಿ ಅರ್ಥೈಸದಿರಿ. ಸಕಾರಾತ್ಮಕ ಅಂಶಗಳನ್ನು ಸೃಷ್ಟಿಸುವುದೆಂದರೆ ನಿಮ್ಮ ಕುರಿತು ನಕಲಿ ವ್ಯಕ್ತಿತ್ವ ಅಥವ ಬಿಂಬವನ್ನು ಸೃಷ್ಟಿಸಿ ಎಂದಲ್ಲ. ನೀವು ನಿಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳದಿರಿ ಮತ್ತು ನಿಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ಗಳು ನಿಮ್ಮ ನಿಜವಾದ ವ್ಯಕ್ತಿತ್ವವನ್ನೇ ಬಿಂಬಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಪ್ರೊಫೈಲ್ನಲ್ಲಿ ನಿಮ್ಮ ಪ್ರತಿಭೆಗಳು, ಆಸಕ್ತಿಗಳು, ನೀವು ಸ್ವಂತ ಇಚ್ಛೆಯಿಂದ ಮಾಡಿರುವ ಸೇವೆಗಳು, ಸಾಧನೆಗಳು ಇತ್ಯಾದಿಗಳ ವಿವರಗಳನ್ನು ಹಂಚಿಕೊಳ್ಳಿ. ನಿಮ್ಮದೇ ಬ್ಲಾಗ್ ಹೊಂದಿದ್ದರೆ ಅದರಲ್ಲಿ ಆಗಾಗ ಪೋಸ್ಟಗಳನ್ನು ಪ್ರಕಟಿಸುತ್ತಿರಿ. ಹೆಚ್ಚಾಗಿ ಸಕಾರಾತ್ಮಕ ಪೋಸ್ಟ್ಗಳನ್ನೇ ಪ್ರಕಟಿಸುವ ಮೂಲಕ ಏನೇ ಋಣಾತ್ಮಕ ಅಂಶಗಳಿದ್ದಲ್ಲಿ ಅದನ್ನು ದೂರ ಮಾಡಿ

Best Mobiles in India

Read more about:
English summary
When we meet a new person, we make sure that they get added up to our social media accounts. So in this case, follow the below guide to clean up your online profile and make a good first impression.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X